ಪತ್ನಿ ಹೆಸರಿನಲ್ಲಿ ಮನೆ ಖರೀದಿಸುವ ಪ್ರಯೋಜನಗಳು


ಭಾರತದಲ್ಲಿ ಹಲವಾರು ರಾಜ್ಯಗಳು ಮಹಿಳಾ ಆಸ್ತಿ ಖರೀದಿದಾರರಿಗೆ ತಮ್ಮ ಸಬಲೀಕರಣವನ್ನು ಹೆಚ್ಚಿಸಲು ಪ್ರಯೋಜನವನ್ನು ನೀಡುತ್ತವೆ, ಮಹಿಳೆಯ ಹೆಸರಿನಲ್ಲಿ ಆಸ್ತಿಯನ್ನು ನೋಂದಾಸುವುದು ಆರ್ಥಿಕವಾಗಿ ಅರ್ಥವನ್ನು ಹೇಗೆ ಮಾಡುತ್ತದೆ ಎಂಬುದನ್ನು ನಾವು ಪರೀಕ್ಷಿಸುತ್ತೇವೆ

ಮಹಿಳೆಯ ಹೆಸರಿನಲ್ಲಿ ಒಂದು ಆಸ್ತಿಯನ್ನು ಖರೀದಿಸುವುದರ ಹಲವಾರು ಪ್ರಯೋಜನಗಳಿವೆ, ಏಕಮಾತ್ರ ಮಾಲೀಕರಾಗಿ ಅಥವಾ ಜಂಟಿ ಮಾಲೀಕರಾಗಿ, ಸರ್ಕಾರಗಳು ಮತ್ತು ಬ್ಯಾಂಕುಗಳು ಹಲವಾರು ಸಾಲಗಳನ್ನು ನೀಡುತ್ತವೆ.

“ಮನೆ ಖರೀದಿಸಲು ಬಯಸುವವರು, ಮಹಿಳೆಯ ಹೆಸರಿನಲ್ಲಿ ಮನೆ ಖರೀದಿಸಲ್ಪಟ್ಟರೆ ತೆರಿಗೆ ವಿನಾಯಿತಿ ಸೇರಿದಂತೆ ಕೆಲವು ಪ್ರಯೋಜನಗಳನ್ನು ಪಡೆಯಬಹುದು. ಅಂತಹ ಕೊಡುಗೆಗಳು ಹೆಚ್ಚಿನ ಮಹಿಳಾ ಖರೀದಿದಾರರನ್ನು ರಿಯಲ್ಟಿ ವಲಯಕ್ಕೆ ಸೆಳೆಯಬಲ್ಲವು,”ಎಂದು ಅಶೋಕ್ ಮೋಹನನಿ, ಸಿಎಮ್ಡಿ, ಎಕ್ತಾ ವರ್ಲ್ಡ್ ಹೇಳುತ್ತಾರೆ. ಅಲ್ಲದೆ ಮಹಿಳೆಯರಿಗೆ ತಮ್ಮ ಹೆಸರಿನಲ್ಲಿ ಸ್ವತ್ತುಗಳನ್ನು ನೋಂದಾಯಿಸಲು ಪ್ರೋತ್ಸಾಹಿಸಿದರೆ ಮಹಿಳಾ ಸಬಲೀಕರಣವನ್ನು ಹೆಚ್ಚಿಸಬಹುದು, ಎಂದಿದ್ದಾರೆ.

 

ತೆರಿಗೆ ಪ್ರಯೋಜನಗಳು

ಪತ್ನಿಯ ಹೆಸರಿನಲ್ಲಿ ಮನೆ ಖರೀಧಿಸುವವರಿಗೆ, ಮತ್ತು ಆ ಮನೆಯನ್ನು ಸ್ವಉಪಯೋಗಿಸುವವರಿಗೆ, ಕೆಲವು ತೆರಿಗೆ ಪ್ರಯೋಜನಗಳೆಂದರೆ ಪ್ರತಿ ವರ್ಷವೂ ರೂ .1.5 ಲಕ್ಷದವರೆಗಿನ ಬಡ್ಡಿದರ ಹೆಚ್ಚುವರಿ ಕಡಿತವನ್ನು ಒಳಗೊಂಡಿರುತ್ತದೆ, ಎಂದು ತಜ್ಞರು ವಿವರಿಸುತ್ತಾರೆ. ಒಬ್ಬ ಪತಿ ಮತ್ತು ಪತ್ನಿಯು ಆಸ್ತಿಯ ಜಂಟಿ ಮಾಲೀಕರಾಗಿದ್ದರೆ ಮತ್ತು ಪತ್ನಿಯು ಆದಾಯದ ಪ್ರತ್ಯೇಕ ಮೂಲವನ್ನು ಹೊಂದಿದ್ದರೆ, ಅವರು ಪ್ರತ್ಯೇಕವಾಗಿ ತೆರಿಗೆ ವಿನಾಯಿತಿಗಳನ್ನು ಪಡೆಯಬಹುದು. ತೆರಿಗೆ ಲಾಭವು ಸಹ-ಮಾಲೀಕನ ಮಾಲೀಕತ್ವದ ಪಾಲನ್ನು ಅವಲಂಬಿಸಿರುತ್ತದೆ.

 

ಸ್ಟಾಂಪ್ ಸುಂಕ ಶುಲ್ಕದ ಮೇಲೆ ರಿಯಾಯಿತಿ

ಉತ್ತರ ಭಾರತದ ಹಲವಾರು ರಾಜ್ಯ ಸರ್ಕಾರಗಳು ಈಗ ಮಹಿಳೆಯ ಹೆಸರಿನಲ್ಲಿ ಖರೀದಿದಾರರು ಆಸ್ತಿಯನ್ನು ನೋಂದಾಯಿಸಿಕೊಳ್ಳುವ ಕಾರಣದಿಂದಾಗಿ, ಏಕೈಕ ಮಾಲೀಕರಾಗಿ ಅಥವಾ ಜಂಟಿ ಮಾಲೀಕರಾಗಿ ಸ್ಟಾಂಪ್ ಸುಂಕಕ್ಕೆ ಭಾಗಶಃ ಮನ್ನಾ ನೀಡುತ್ತಿವೆ.

“ಆಸ್ತಿ ಮಹಿಳೆಯ ಹೆಸರಿನಲ್ಲಿದ್ದರೆ ನೀವು ಸ್ಟಾಂಪ್ ಸುಂಕದಲ್ಲಿ 1% -2% ಉಳಿಸಬಹುದು. ದೆಹಲಿಯಲ್ಲಿ, ಸ್ಟಾಂಪ್ ಸುಂಕ ದರವು 4% ರಷ್ಟು ಮಹಿಳೆಯರಿಗಿದ್ದರೆ, 6%ರಷ್ಟು ಪುರುಷರಿಗಿದೆ. ಇದಲ್ಲದೆ, ನೀವು ಕೆಲವು ಹಣಕಾಸಿನ ತೊಂದರೆಯನ್ನು ಎದುರಿಸುತ್ತಿದ್ದರೆ ಮತ್ತು ಮರುಪಾವತಿಗೆ ಕೆಲವು ಸಾಲಗಳನ್ನು ಹೊಂದಿದ್ದರೆ, ನಿಮ್ಮ ಪತ್ನಿಯ ಹೆಸರಿನಲ್ಲಿರುವ ಆಸ್ತಿ ನಿಮ್ಮ ನಷ್ಟದ ಅಡಿಯಲ್ಲಿ ಬರುವುದಿಲ್ಲ,” ಎಂದು ಸುಶೀಲ್ ರಹೀಜಾ, ರಹೇಜಾ ಹೋಮ್ಸ್ ಬಿಲ್ಡರ್ಸ್ ಮತ್ತು  ಡೆವೆಲಪರ್ಸ್ ಸಿಇಒ, ಹೇಳುತ್ತಾರೆ.

 

ಮಹಿಳೆಯರ ಪ್ರತಿಯಾಗಿ  ಪುರುಷರ ಸ್ಟ್ಯಾಂಪ್ ಸುಂಕ ಶುಲ್ಕಗಳು

ರಾಜ್ಯ /ಯು ಟಿ ಮಹಿಳೆಯರಿಗೆ ಪುರುಷರಿಗೆ
ದೆಹಲಿ 4% 6%
ಹರಿಯಾಣ ಗ್ರಾಮೀಣ ಪ್ರದೇಶಗಳಲ್ಲಿ 4% ಮತ್ತು ನಗರ ಪ್ರದೇಶಗಳಲ್ಲಿ 6% ಗ್ರಾಮೀಣ ಪ್ರದೇಶಗಳಲ್ಲಿ 6% ಮತ್ತು ನಗರ ಪ್ರದೇಶಗಳಲ್ಲಿ 8%
ರಾಜಸ್ಥಾನ 4%* 5%

* ಸಾಮಾನ್ಯ ದರಕ್ಕಿಂತ 1% ರಷ್ಟು ರಿಯಾಯಿತಿ

 

ಮನೆ ಸಾಲ ಬಡ್ಡಿದರಗಳ ಮೇಲೆ ರಿಯಾಯಿತಿ

ಎಸ್ ಬಿ ಐ, ಐಸಿಐಸಿಐ ಮತ್ತು ಎಚ್ ಡಿ ಎಫ್ ಸಿ  ಬ್ಯಾಂಕ್ ನಂತಹ ಅನೇಕ ಬ್ಯಾಂಕ್ ಗಳು, ಸಾಲ ಪಡೆಯುವ ​​ಮಹಿಳೆಯರಿಗೆ ಮನೆ ಸಾಲಗಳ ಮೇಲೆ ರಿಯಾಯತಿ ದರವನ್ನು ನೀಡುತ್ತವೆ. ಮಹಿಳಾ ಸಾಲಗಾರರಿಗೆ ಚಾಲ್ತಿಯಲ್ಲಿರುವ ಬಡ್ಡಿದರಗಳು ಕೆಳಕಂಡಂತಿವೆ:

 

ಗೃಹ ಸಾಲ ಬಡ್ಡಿದರ (ತೇಲುವ) – ಮಹಿಳಾ ಸಾಲಗಾರರು Vs ಇತರರು

ಬ್ಯಾಂಕ್ ಮಹಿಳಾ ಸಾಲಗಾರರಿಗೆ ಬಡ್ಡಿ ದರ (ಶೇಕಡಾ, ವರ್ಷಕ್ಕೆ) ಇತರರಿಗೆ ಬಡ್ಡಿಯ ದರ (ಶೇಕಡಾ, ವರ್ಷಕ್ಕೆ)
ಎಸ್ ಬಿ ಐ 8.45-8.95 8.5-9
ಐಸಿಐಸಿಐ ಬ್ಯಾಂಕ್ 8.55-9 8.6-9.05
ಎಚ್ ಡಿ ಎಫ್ ಸಿ ಲಿಮಿಟೆಡ್ 8.5-9.15 8.55-9.2

ಗಮನಿಸಿ: ಜೂನ್ 20, 2018 ರಂತೆ ದರ (ಸಾಲ ಮೊತ್ತಕ್ಕೆ < ರೂ. 1 ಕೋಟಿ)

 

ಪತ್ನಿಯ ಹೆಸರಿನಲ್ಲಿ ಮನೆ ಖರೀದಿಸುವಾಗ ನೆನಪಿನಲ್ಲಿಟ್ಟುಕೊಳ್ಳಬೇಕಾದ ಸಂಗತಿಗಳು

ಪತ್ನಿಯ ಹೆಸರಿನಲ್ಲಿ ಅಥವಾ ಸಹ ಮಾಲೀಕತ್ವದಲ್ಲಿ ಮನೆ ಖರೀದಿಸುವುದು ಒಳ್ಳೆಯದು ಎಂದು ತಜ್ಞರು ನಿರ್ಧರಿಸಿದ್ಧಾರೆ. ಹೇಗಾದರೂ, ಪತ್ನಿಯು ತನ್ನ ತೆರಿಗೆ ಲಾಭವನ್ನು ಆನಂದಿಸಬಹುದು, ಅವಳ ಆದಾಯವು ಪ್ರತ್ಯೇಕ ಮತ್ತು ನಿಜವಾದ ಮೂಲ ಹೊಂದಿದ್ದರೆ ಮಾತ್ರ. ಇದಲ್ಲದೆ, ಆಸ್ತಿಯ ಮೇಲೆ ಯಾವುದೇ ಕಾನೂನು ವಿವಾದದಲ್ಲಿದ್ದಾಗ, ಆಗ ಪತಿ ಮತ್ತು ಪತ್ನಿ ಇಬ್ಬರೂ ಈ ಪ್ರಕರಣದಲ್ಲಿ ಭಾಗಿಯಾಗುತ್ತಾರೆ. ಆದ್ದರಿಂದ, ಮನೆ ಖರೀದಿದಾರರು ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ಎಲ್ಲಾ ಸಾಧ್ಯತೆಗಳನ್ನು ಮೌಲ್ಯಮಾಪನ ಮಾಡಬೇಕು.

 

Was this article useful?
  • 😃 (0)
  • 😐 (0)
  • 😔 (0)

Comments

comments