Site icon Housing News

ನರೇಗಾ ಜಾಬ್ ಕಾರ್ಡ್‌: ರಾಜ್ಯವಾರು ಎಂಜಿನರೇಗಾ ಜಾಬ್ ಕಾರ್ಡ್‌ ಪಟ್ಟಿ 2022 ಪರಿಶೀಲಿಸಿ ಮತ್ತು ಡೌನ್‌ಲೋಡ್ ಮಾಡಿ

NREGA jobcard: How to check and download MGNREGA job card list 2022

ಕೇಂದ್ರೀಯ ಪ್ರಾಯೋಜಿತ ನರೇಗಾ ಯೋಜನೆಯಡಿಯಲ್ಲಿ, ಭಾರತದಲ್ಲಿನ ಅರ್ಹ ಗ್ರಾಮೀಣ ಕುಟುಂಬಗಳಿಗೆ ನರೇಗಾ ಜಾಬ್ ಕಾರ್ಡ್ ಒದಗಿಸಲಾಗಿದೆ. ಎಂಜಿನರೇಗಾ ಎಂದು ಮರುನಾಮಕರಣ ಮಾಡಲಾದ ಯೋಜನೆಯ ವ್ಯಾಪ್ತಿಯನ್ನು ಅರ್ಥಮಾಡಿಕೊಳ್ಳಲು ಮತ್ತು ನಿಮ್ಮ ಎಂಜಿನರೇಗಾ ಜಾಬ್ಕಾರ್ಡ್ ಅನ್ನು ಹೇಗೆ ಡೌನ್ಲೋಡ್ ಮಾಡಬಹುದು ಎಂಬುದನ್ನು ತಿಳಿಯಲು ಈ ಮಾರ್ಗದರ್ಶಿ ನಿಮಗೆ ಸಹಾಯ ಮಾಡುತ್ತದೆ.

Table of Contents

Toggle

 

ನರೇಗಾ ಜಾಬ್ ಕಾರ್ಡ್

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯಿದೆ 2005 ಪ್ರಕಾರ ಆಯಾ ಗ್ರಾಮ ಪಂಚಾಯಿತಿಯ ಸಕ್ಷಮ ಪ್ರಾಧಿಕಾರದಿಂದ ನೀಡಲಾದ ಜಾಬ್ ಕಾರ್ಡ್ ಅನ್ನು ಯೋಜನೆಯ ಫಲಾನುಭವಿಗಳು ಹೊಂದಿರುವುದು ಕಡ್ಡಾಯವಾಗಿದೆ. ಎಂಜಿನರೇಗಾ ಅಡಿಯಲ್ಲಿ, ಸ್ಕೀಮ್ ಅಡಿಯಲ್ಲಿ ಉದ್ಯೋಗವನ್ನು ಬಯಸಿದ ವಯಸ್ಕ ಸದಸ್ಯರ ಪ್ರತಿ ಕುಟುಂಬಕ್ಕೆ ನರೇಗಾ ಜಾಬ್ ಕಾರ್ಡ್ ನೀಡಲಾಗುತ್ತದೆ. ಎಂಜಿನರೇಗಾ ಜಾಬ್ ಕಾರ್ಡ್ ಹೊಂದಿರುವವರು 100 ದಿನಗಳ ಕೆಲಸಕ್ಕೆ ಅರ್ಹರಾಗಿರುತ್ತಾರೆ.

ಪ್ರತಿ ವರ್ಷ, ಪ್ರತಿ ಫಲಾನುಭವಿಗೆ ಹೊಸ ನರೇಗಾ ಜಾಬ್ ಕಾರ್ಡ್ ನೀಡಲಾಗುತ್ತದೆ. ಎಂಜಿನರೇಗಾ ಜಾಬ್‌ಕಾರ್ಡ್ ಅನ್ನು nrega.nic.in ನಲ್ಲಿ ಎಂಜಿನರೇಗಾದ ಅಧಿಕೃತ ವೆಬ್‌ಸೈಟ್‌ನಿಂದ ಸುಲಭವಾಗಿ ಡೌನ್‌ಲೋಡ್ ಮಾಡಬಹುದು.

ಕೇಂದ್ರ ಸರ್ಕಾರವು 2010-11 ರಿಂದ ದೇಶಾದ್ಯಂತ 35 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಎಂಜಿನರೇಗಾ ಜಾಬ್ ಕಾರ್ಡ್ ಪಟ್ಟಿಯನ್ನು ನೀಡುತ್ತಿದೆ. ಅರ್ಹತಾ ಮಾನದಂಡಗಳ ಆಧಾರದ ಮೇಲೆ, ಹೊಸ ಫಲಾನುಭವಿಗಳನ್ನು ನರೇಗಾ ಜಾಬ್‌ಕಾರ್ಡ್ ಪಟ್ಟಿಗೆ ಸೇರಿಸಲಾಗುತ್ತದೆ ಮತ್ತು ಕೆಲವು ಹಳೆಯ ಫಲಾನುಭವಿಗಳನ್ನು ತೆಗೆದುಹಾಕಲಾಗುತ್ತದೆ.

ನರೇಗಾ ಜಾಬ್ ಕಾರ್ಡ್ ಪ್ರತಿಯೊಬ್ಬ ಅರ್ಹ ವ್ಯಕ್ತಿಗೆ ಕೆಲಸ ಮಾಡುವ ಹಕ್ಕನ್ನು ಒದಗಿಸುತ್ತದೆ ಮತ್ತು ಅವನ/ಅವಳ ಗುರುತಿನ ಪುರಾವೆಯಾಗಿಯೂ ಕಾರ್ಯನಿರ್ವಹಿಸುತ್ತದೆ.

 

ನರೇಗಾ ಜಾಬ್ ಕಾರ್ಡ್ ಸಂಖ್ಯೆ ಮಾದರಿ

16-ಅಂಕಿಯ ಸಂಖ್ಯೆ ಮತ್ತು ಅಕ್ಷರಗಳನ್ನು ಒಳಗೊಂಡ ನರೇಗಾ ಜಾಬ್ ಕಾರ್ಡ್ ಸಂಖ್ಯೆ ರೀತಿ ಕಾಣುತ್ತದೆ: WB-08-012-002-002/270

 

ನರೇಗಾ ಜಾಬ್ ಕಾರ್ಡ್‌ನಲ್ಲಿನ ವಿವರಗಳು

ನರೇಗಾ ಜಾಬ್ ಕಾರ್ಡ್ ಕೆಳಗಿನ ವಿವರಗಳನ್ನು ಹೊಂದಿರುತ್ತದೆ:

  1. ಜಾಬ್ ಕಾರ್ಡ್‌ ಸಂಖ್ಯೆ
  2. ಕುಟುಂಬದ ಮುಖ್ಯಸ್ಥರ ಹೆಸರು
  3. ತಂದೆ/ಗಂಡನ ಹೆಸರು
  4. ವಿಭಾಗ
  5. ನೋಂದಣಿ ದಿನಾಂಕ
  6. ವಿಳಾಸ: ಗ್ರಾಮ, ಪಂಚಾಯಿತಿ, ಬ್ಲಾಕ್, ಜಿಲ್ಲೆ
  7. ಬಿಪಿಎಲ್‌ ಕುಟುಂಬವೇ
  8. ಕೆಲಸ ಬೇಡಿಕೆ ಇರುವ ದಿನಗಳ ಸಂಖ್ಯೆ
  9. ಕೆಲಸ ನಿಯೋಜಿಸಿದ ದಿನಗಳ ಸಂಖ್ಯೆ
  10. ನಿಯೋಜಿಸಿದ ಕೆಲಸದ ವಿವರಣೆ ಹಾಗೂ ಮಸ್ಟರ್ ರೋಲ್ ನಂಬರ್
  11. ಅಳತೆ ವಿವರಗಳು
  12. ನಿರುದ್ಯೋಗ ಭತ್ಯೆ ಇದ್ದಲ್ಲಿ
  13. ಕೆಲಸ ಮಾಡಿದ ದಿನಗಳ ದಿನಾಂಕಗಳು ಮತ್ತು ಸಂಖ್ಯೆ
  14. ಪಾವತಿ ಮಾಡಿದ ಕೂಲಿಯ ದಿನಾಂಕವಾರು ಮೊತ್ತ
  15. ಪಾವತಿ ಮಾಡಿದ್ದಲ್ಲಿ ವಿಳಂಬ ಸಂಭಾವನೆ

 

ನರೇಗಾ ಜಾಬ್ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಅಗತ್ಯವಿರುವ ವಿವರಗಳು

  1. ಅರ್ಜಿದಾರರ ಹೆಸರು
  2. ಅರ್ಜಿದಾರರ ವಯಸ್ಸು
  3. ಅರ್ಜಿದಾರರ ಲಿಂಗ
  4. ಅರ್ಜಿದಾರರ ಫೋಟೋ
  5. ಅರ್ಜಿದಾರರ ಸಹಿ/ಹೆಬ್ಬೆರಳ ಗುರುತು
  6. ಅರ್ಜಿದಾರರ ಮತ್ತು ಕೆಲಸ ಮಾಡಲು ಸಮ್ಮತಿಸುವ ಕುಟುಂಬದ ಇತರ ಸದಸ್ಯರ ಸಹಿ, ಹೆಬ್ಬೆರಳ ಗುರುತು
  7. ಗ್ರಾಮದ ಹೆಸರು
  8. ಗ್ರಾಮ ಪಂಚಾಯಿತಿ ಹೆಸರು
  9. ಅರ್ಜಿದಾರರು ಎಸ್‌ಸಿ/ಎಸ್‌ಟಿ/ಐಎವೈ/ಎಲ್‌ಆರ್‌ ಫಲಾನುಭವಿಯಾಗಿದ್ದಾರೆಯೇ

 

ನರೇಗಾ ಜಾಬ್ ಕಾರ್ಡ್ ನೋಂದಣಿ

ನರೇಗಾ ಜಾಬ್ ಕಾರ್ಡ್‌ಗೆ ಅರ್ಜಿ ಸಲ್ಲಿಸಲು, ಅರ್ಜಿದಾರರು ಈ ಕೆಳಗಿನ ಹಂತಗಳನ್ನು ಅನುಸರಿಸಬೇಕು:

ಹಂತ 1: ನಿಮ್ಮ ಗ್ರಾಮ ಪಂಚಾಯಿತಿ ಕಚೇರಿಗೆ ಭೇಟಿ ನೀಡಿ.

ಹಂತ 2: ನೀವು ನರೇಗಾ0 ಜಾಬ್ ಕಾರ್ಡ್‌ ಕೇಳಿ ಅಥವಾ ನಿಗದಿತ ಮಾಹಿತಿಯನ್ನು ಭರ್ತಿ ಮಾಡಿ ಮತ್ತು ಅದನ್ನು ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಸಲ್ಲಿಸುವ ಮೂಲಕ ನೋಂದಾಯಿಸಿಕೊಳ್ಳಬಹುದು.

ಹಂತ 3: ನಿಮ್ಮ ವಿವರಗಳ ಪರಿಶೀಲನೆಯ ನಂತರ, ನಿಮಗೆ ಜಾಬ್ ಕಾರ್ಡ್ ನೀಡಲಾಗುತ್ತದೆ.

ಉದ್ಯೋಗ ಯೋಜನೆಯು ಗ್ರಾಮೀಣ ಕುಟುಂಬಗಳಿಗೆ ಉದ್ದೇಶಿಸಿರುವುದರಿಂದ, ನರೇಗಾ ಜಾಬ್ ಕಾರ್ಡ್ ನೋಂದಣಿ ಪ್ರಕ್ರಿಯೆಯು ಸಂಪೂರ್ಣವಾಗಿ ಆಫ್‌ಲೈನ್ ಆಗಿದೆ. ಆದಾಗ್ಯೂ, ನೀವು ನಿಗದಿತ ನಮೂನೆಯನ್ನು ಡೌನ್‌ಲೋಡ್ ಮಾಡಬಹುದು

 

ನರೇಗಾ ಜಾಬ್ ಕಾರ್ಡ್ ಅರ್ಜಿ ನಮೂನೆ

 

ನರೇಗಾ ಜಾಬ್ ಕಾರ್ಡ್ ಅರ್ಜಿ ನಮೂನೆ ಡೌನ್‌ಲೋಡ್ ಮಾಡುವುದು

ನರೇಗಾ ಜಾಬ್ ಕಾರ್ಡ್ ಅರ್ಜಿಯ ಸ್ಯಾಂಪಲ್ ಫಾರ್ಮ್ಯಾಟ್ ಅನ್ನು ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ.

 

ರಾಜ್ಯವಾರು ನರೇಗಾ ಜಾಬ್‌ಕಾರ್ಡ್ ಪಟ್ಟಿ 2022

ನರೇಗಾ ಜಾಬ್ ಕಾರ್ಡ್ ಪಟ್ಟಿ 2022 ರಲ್ಲಿ ಫಲಾನುಭವಿಗಳ ಹೆಸರನ್ನು ಹುಡುಕಲು, ಆಯಾ ರಾಜ್ಯಗಳ ಎದುರು ಇರುವವೀಕ್ಷಿಸಿಆಯ್ಕೆಯನ್ನು ಕ್ಲಿಕ್ ಮಾಡಿ.

ರಾಜ್ಯ ನರೇಗಾ ಜಾಬ್ ಕಾರ್ಡ್ಪಟ್ಟಿ 2022
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ವೀಕ್ಷಿಸಿ
ಆಂಧ್ರಪ್ರದೇಶ ವೀಕ್ಷಿಸಿ
ಅರುಣಾಚಲ ಪ್ರದೇಶ ವೀಕ್ಷಿಸಿ
ಅಸ್ಸಾಂ ವೀಕ್ಷಿಸಿ
ಬಿಹಾರ ವೀಕ್ಷಿಸಿ
ಚಂಡೀಗಢ ವೀಕ್ಷಿಸಿ
ಛತ್ತೀಸ್‌ಗಢ ವೀಕ್ಷಿಸಿ
ದಾದ್ರಾ ಮತ್ತು ನಗರ ಹವೇಲಿ ವೀಕ್ಷಿಸಿ
ದಮನ್ ಮತ್ತು ದಿಯು ವೀಕ್ಷಿಸಿ
ಗೋವಾ ವೀಕ್ಷಿಸಿ
ಗುಜರಾತ್ ವೀಕ್ಷಿಸಿ
ಹರ್ಯಾಣ ವೀಕ್ಷಿಸಿ
ಹಿಮಾಚಲ ಪ್ರದೇಶ ವೀಕ್ಷಿಸಿ
ಜಮ್ಮು ಕಾಶ್ಮೀರ ಮತ್ತು ಲಡಾಖ್‌ ವೀಕ್ಷಿಸಿ
ಜಾರ್ಖಂಡ ವೀಕ್ಷಿಸಿ
ಕರ್ನಾಟಕ ವೀಕ್ಷಿಸಿ
ಕೇರಳ ವೀಕ್ಷಿಸಿ
ಲಕ್ಷದ್ವೀಪ ವೀಕ್ಷಿಸಿ
ಮಧ್ಯಪ್ರದೇಶ ವೀಕ್ಷಿಸಿ
ಮಹಾರಾಷ್ಟ್ರ ವೀಕ್ಷಿಸಿ
ಮಣಿಪುರ ವೀಕ್ಷಿಸಿ
ಮೇಘಾಲಯ ವೀಕ್ಷಿಸಿ
ಮಿಜೋರಾಮ್ ವೀಕ್ಷಿಸಿ
ನಾಗಾಲ್ಯಾಂಡ್ ವೀಕ್ಷಿಸಿ
ಒಡಿಶಾ ವೀಕ್ಷಿಸಿ
ಪುದುಚೇರಿ ವೀಕ್ಷಿಸಿ
ಪಂಜಾಬ್ ವೀಕ್ಷಿಸಿ
ರಾಜಸ್ಥಾನ ವೀಕ್ಷಿಸಿ
ಸಿಕ್ಕಿಮ್ ವೀಕ್ಷಿಸಿ
ತಮಿಳುನಾಡು ವೀಕ್ಷಿಸಿ
ತೆಲಂಗಾಣ ವೀಕ್ಷಿಸಿ
ತ್ರಿಪುರ ವೀಕ್ಷಿಸಿ
ಉತ್ತರ ಪ್ರದೇಶ ವೀಕ್ಷಿಸಿ
ಉತ್ತರಾಖಂಡ    ವೀಕ್ಷಿಸಿ
ಪಶ್ಚಿಮ ಬಂಗಾಳ ವೀಕ್ಷಿಸಿ

ನರೇಗಾ ಜಾಬ್ ಕಾರ್ಡ್‌ಗಳನ್ನು 2022 ಪರಿಶೀಲಿಸಲು ರಾಜ್ಯದ ಸಂಪೂರ್ಣ ಪಟ್ಟಿಯನ್ನು ಕಂಡುಹಿಡಿಯಲು, ಇಲ್ಲಿ ಕ್ಲಿಕ್ ಮಾಡಿ.

 

ನರೇಗಾ ಜಾಬ್ ಕಾರ್ಡ್ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಕಂಡುಹಿಡಿಯುವುದು ಹೇಗೆ?

ನಿಮ್ಮ ರಾಜ್ಯ ಪುಟವನ್ನು ತಲುಪಿದ ನಂತರ ನರೇಗಾ ಜಾಬ್ ಕಾರ್ಡ್ ಅನ್ನು ನೋಡಲು ಕೆಳಗೆ ತಿಳಿಸಲಾದ ಹಂತಗಳನ್ನು ಅನುಸರಿಸಿ.

ಹಂತ 1: ನೀವು https://nrega.nic.in/netnrega/statepage.aspx?check=R&Digest=+qXIRymgwwUBieh6Mf3EUg ಪುಟಕ್ಕೆ ತಲುಪಿದ ನಂತರ, ಪಟ್ಟಿಯಲ್ಲಿ ನಿಮ್ಮ ರಾಜ್ಯದ ಹೆಸರನ್ನು ಹುಡುಕಿ ಮತ್ತು ಅದರ ಮೇಲೆ ಕ್ಲಿಕ್ ಮಾಡಿ. ಉದಾಹರಣೆಯಲ್ಲಿ, ನಾವು ಯುಪಿ ನರೇಗಾ ಜಾಬ್‌ಕಾರ್ಡ್ ಪಟ್ಟಿ 2022 ಅನ್ನು ಬಳಸುತ್ತಿದ್ದೇವೆ.

 

 

ಹಂತ 2: ಮುಂದಿನ ಪುಟದಲ್ಲಿ, ಆರ್ಥಿಕ ವರ್ಷ, ಜಿಲ್ಲೆ, ಬ್ಲಾಕ್ ಮತ್ತು ಪಂಚಾಯತ್ ಅನ್ನು ಆಯ್ಕೆ ಮಾಡಿ, ನಂತರ ಮುಂದುವರೆಯಿರಿ ಕ್ಲಿಕ್ ಮಾಡಿ.

 

  

ಹಂತ 3: ಹೊಸ ಪುಟದಲ್ಲಿ, ಜಾಬ್ ಕಾರ್ಡ್/ ಉದ್ಯೋಗ ನೋಂದಣಿಯ ಮೇಲೆ ಕ್ಲಿಕ್ ಮಾಡಿ.

 

 

ಹಂತ 4: ನರೇಗಾ ಜಾಬ್‌ಕಾರ್ಡ್ ಪಟ್ಟಿ 2022 ಹೆಸರುಗಳನ್ನು ತೋರಿಸುತ್ತದೆ.

 

 

ಇದರ ಬದಲಿಗೆ, ನೀವು ಪೂರ್ಣ ಪಟ್ಟಿಯನ್ನು ವೀಕ್ಷಿಸಲು ಹಂತ 3 ರಲ್ಲಿ ಆಧಾರ್ ಸಂಖ್ಯೆಯೊಂದಿಗೆ ಕೆಲಸಗಾರರ ಪಟ್ಟಿ ಆಯ್ಕೆಯನ್ನು ಕೂಡಾ ಕ್ಲಿಕ್ ಮಾಡಬಹುದು.

 

 

ನೀವು ಈಗ ವಿತ್ತ ವರ್ಷ 2022-23 ಗಾಗಿ ಪೂರ್ಣ ನರೇಗಾ ಜಾಬ್‌ಕಾರ್ಡ್ ಪಟ್ಟಿಯನ್ನು ನೋಡಲು ಸಾಧ್ಯವಾಗುತ್ತದೆ.

 

ಪೂರ್ಣ ಪಟ್ಟಿಯನ್ನು ಪರಿಶೀಲಿಸಲು ಪುಟದ ಕೆಳಗೆ ಸ್ಕ್ರಾಲ್ ಮಾಡಿ.

 

ನರೇಗಾ ಜಾಬ್ ಕಾರ್ಡ್ ಡೌನ್‌ಲೋಡ್

ಹಂತ 1: ಎಂಜಿನರೇಗಾ ಜಾಬ್ ಕಾರ್ಡ್ ಅಧಿಕೃತ ವೆಬ್‌ಸೈಟ್ ಅನ್ನು ನೇರವಾಗಿ ತಲುಪಲು ಇಲ್ಲಿ ಕ್ಲಿಕ್ ಮಾಡಿ. ಈಗ, ವರದಿಗಳನ್ನು ಜನರೇಟ್ ಮಾಡಿ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

 

 

ಹಂತ 2: ಪಟ್ಟಿಯಿಂದ ನಿಮ್ಮ ರಾಜ್ಯವನ್ನು ಆಯ್ಕೆಮಾಡಿ.

 

 

ಹಂತ 3: ಮುಂದಿನ ಪುಟದಲ್ಲಿ ಆರ್ಥಿಕ ವರ್ಷ, ಜಿಲ್ಲೆ, ಬ್ಲಾಕ್ ಮತ್ತು ಪಂಚಾಯತ್ ಅನ್ನು ಆಯ್ಕೆ ಮಾಡಿ ಮತ್ತುಮುಂದುವರಿಸಿಕ್ಲಿಕ್ ಮಾಡಿ.

 

  

ಹಂತ 4: ಮುಂದಿನ ಪುಟದಲ್ಲಿ, ಆರ್‌1 ಜಾಬ್ ಕಾರ್ಡ್/ನೋಂದಣಿ ಟ್ಯಾಬ್ ಅಡಿಯಲ್ಲಿಜಾಬ್ ಕಾರ್ಡ್/ಉದ್ಯೋಗ ನೋಂದಣಿಆಯ್ಕೆಯನ್ನು ಆಯ್ಕೆಮಾಡಿ

 

 

ಹಂತ 5: ನರೇಗಾ ಕಾರ್ಮಿಕರ ಪಟ್ಟಿ ಮತ್ತು ನರೇಗಾ ಜಾಬ್ ಕಾರ್ಡ್‌ಗಳು ಸ್ಕ್ರೀನ್‌ ಮೇಲೆ ಕಾಣಿಸುತ್ತವೆ. ಜಾಬ್ ಕಾರ್ಡ್ ವೀಕ್ಷಿಸಲು ಮತ್ತು ಡೌನ್‌ಲೋಡ್ ಮಾಡಲು ಎಂಜಿನರೇಗಾ ಜಾಬ್ ಕಾರ್ಡ್ ಸಂಖ್ಯೆಯನ್ನು ಕ್ಲಿಕ್ ಮಾಡಿ.

 

 

ಹಂತ 6: ಎಂಜಿನರೇಗಾ ಜಾಬ್ ಕಾರ್ಡ್ ಸ್ಕ್ರೀನ್‌ ಮೇಲೆ ಕಾಣಿಸುತ್ತದೆ. ಪುಟದಲ್ಲಿ ನೀವು ಎಲ್ಲಾ ಕೆಲಸದ ವಿವರಗಳನ್ನು ಕಾಣಬಹುದು.

 

 

ನರೇಗಾ ಕೆಲಸದ ಪಾವತಿಯನ್ನು ಹೇಗೆ ಪರಿಶೀಲಿಸುವುದು?

ಹಂತ 1: ಎಂಜಿನರೇಗಾ ಜಾಬ್ ಕಾರ್ಡ್ ಅಧಿಕೃತ ವೆಬ್‌ಸೈಟ್ ಅನ್ನು ನೇರವಾಗಿ ತಲುಪಲು ಇಲ್ಲಿ ಕ್ಲಿಕ್ ಮಾಡಿ. ಈಗ, ವರದಿಗಳನ್ನು ಜನರೇಟ್ ಮಾಡಿ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

 

ಹಂತ 2: ಭಾರತದ ಎಲ್ಲಾ ರಾಜ್ಯಗಳ ಹೆಸರನ್ನು ಒಳಗೊಂಡಿರುವ ಪಟ್ಟಿಯಿಂದ ನಿಮ್ಮ ರಾಜ್ಯವನ್ನು ಆಯ್ಕೆಮಾಡಿ.

 

  

ಹಂತ 3: ಮುಂದಿನ ಪುಟದಲ್ಲಿ ಆರ್ಥಿಕ ವರ್ಷ, ಜಿಲ್ಲೆ, ಬ್ಲಾಕ್ ಮತ್ತು ಪಂಚಾಯತ್ ಅನ್ನು ಆಯ್ಕೆ ಮಾಡಿ ಮತ್ತುಮುಂದುವರಿಸಿಕ್ಲಿಕ್ ಮಾಡಿ.

 

 

ಹಂತ 4: ಮುಂದಿನ ಪುಟದಲ್ಲಿ, ಆರ್‌1 ಜಾಬ್ ಕಾರ್ಡ್/ನೋಂದಣಿ ಟ್ಯಾಬ್ ಅಡಿಯಲ್ಲಿಜಾಬ್ ಕಾರ್ಡ್/ಉದ್ಯೋಗ ನೋಂದಣಿಆಯ್ಕೆಯನ್ನು ಆರಿಸಿ.

 

  

ಹಂತ 5: ನರೇಗಾ ಕಾರ್ಮಿಕರ ಪಟ್ಟಿ ಮತ್ತು ನರೇಗಾ ಜಾಬ್ ಕಾರ್ಡ್‌ಗಳು ಪರದೆಯ ಮೇಲೆ ಗೋಚರಿಸುತ್ತವೆ. ವೀಕ್ಷಿಸಲು ಎಂಜಿನರೇಗಾ ಜಾಬ್ ಕಾರ್ಡ್ ಸಂಖ್ಯೆಯನ್ನು ಕ್ಲಿಕ್ ಮಾಡಿ.

 

 

ಹಂತ 6: ಎಂಜಿನರೇಗಾ ಜಾಬ್ ಕಾರ್ಡ್ ಪರದೆಯ ಮೇಲೆ ಕಾಣಿಸುತ್ತದೆ. ಪುಟದಲ್ಲಿ ನೀವು ಎಲ್ಲ ಕೆಲಸದ ವಿವರಗಳನ್ನು ಕಾಣಬಹುದು.

 

  

ಹಂತ 7: ಈಗ, ನೀವು ಪಾವತಿ ವಿವರಗಳನ್ನು ಪರಿಶೀಲಿಸಲು ಬಯಸುವ ಕೆಲಸದ ಮೇಲೆ ಕ್ಲಿಕ್ ಮಾಡಿ.

ಹಂತ 8: ಒಂದು ಹೊಸ ಪುಟ ತೆರೆಯುತ್ತದೆ. ಮಸ್ಟರ್ ರೋಲ್ಸ್ ಬಳಸಿದ ಆಯ್ಕೆಯ ವಿರುದ್ಧ ನಮೂದಿಸಲಾದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ

 

 

ಹಂತ 7: ಈಗ, ನೀವು ಪಾವತಿ ವಿವರಗಳನ್ನು ಪರಿಶೀಲಿಸಲು ಬಯಸುವ ಕೆಲಸದ ಮೇಲೆ ಕ್ಲಿಕ್ ಮಾಡಿ.

 

 

ಹಂತ 8: ಪಾವತಿಯ ದಿನಾಂಕ, ಬ್ಯಾಂಕ್ ಹೆಸರು ಇತ್ಯಾದಿಗಳ ಜೊತೆಗೆ ಎಲ್ಲಾ ಪಾವತಿ ವಿವರಗಳು ಈಗ ನಿಮ್ಮ ಸ್ಕ್ರೀನ್‌ ಮೇಲೆ ಕಾಣಿಸುತ್ತವೆ.

 

 

ಬಳಕೆಯಲ್ಲಿಲ್ಲದ ನರೇಗಾ ಜಾಬ್ ಕಾರ್ಡ್‌ಗಳ ಪಟ್ಟಿಯನ್ನು ಪರಿಶೀಲಿಸುವುದು ಹೇಗೆ?

ಹಂತ 1: ಅಧಿಕೃತ ಪುಟಕ್ಕೆ ಭೇಟಿ ನೀಡಿ.

ಹಂತ 2: ಮುಖಪುಟದಲ್ಲಿ, ‘ವರದಿಗಳನ್ನು ರಚಿಸಿಆಯ್ಕೆಯನ್ನು ಕ್ಲಿಕ್ ಮಾಡಿ.

ಹಂತ 3: ರಾಜ್ಯಗಳ ಪಟ್ಟಿಯಿಂದ, ನಿಮ್ಮ ರಾಜ್ಯವನ್ನು ಆಯ್ಕೆಮಾಡಿ.

ಹಂತ 4: ಈಗ ಆರ್ಥಿಕ ವರ್ಷ, ಜಿಲ್ಲೆ, ಬ್ಲಾಕ್ ಮತ್ತು ಪಂಚಾಯತ್ ಅನ್ನು ಆಯ್ಕೆ ಮಾಡಿ ಮತ್ತುಮುಂದುವರಿಸಿಕ್ಲಿಕ್ ಮಾಡಿ.

ಹಂತ 5:ಜಾಬ್ ಕಾರ್ಡ್ ಸಂಬಂಧಿತ ವರದಿಗಳುಆಯ್ಕೆಯ ಅಡಿಯಲ್ಲಿ, ‘ಜಾಬ್ ಕಾರ್ಡ್ ಬಳಕೆಯಲ್ಲಿಲ್ಲಎಂಬ ಆಯ್ಕೆಯನ್ನು ನೀವು ನೋಡಬಹುದು. ಅದರ ಮೇಲೆ ಕ್ಲಿಕ್ ಮಾಡಿ.

ಹಂತ 6: ಬಳಕೆಯಲ್ಲಿಲ್ಲದ NREGA ಜಾಬ್ ಕಾರ್ಡ್‌ಗಳ ಪಟ್ಟಿ ನಿಮ್ಮ ಸ್ಕ್ರೀನ್‌ ಮೇಲೆ ಕಾಣಿಸುತ್ತದೆ.

 

 

 

ನರೇಗಾ ಪೋರ್ಟಲ್‌ನಲ್ಲಿ ದೂರು ಸಲ್ಲಿಸುವುದು ಹೇಗೆ?

ಹಂತ 1: ಅಧಿಕೃತ ನರೇಗಾ ವೆಬ್‌ಸೈಟ್‌ಗೆ ಹೋಗಿ.

 

 

ಹಂತ 2: ಮುಖಪುಟದಲ್ಲಿ, ನೀವು ಪುಟದಲ್ಲಿ ಕೆಳಗೆ ಸ್ಕ್ರಾಲ್ ಮಾಡಿದಾಗ ಸಾರ್ವಜನಿಕ ಕುಂದುಕೊರತೆ ಆಯ್ಕೆಯನ್ನು ನೀವು ಕಾಣಬಹುದು. ಆಯ್ಕೆ ಮೇಲೆ ಕ್ಲಿಕ್ ಮಾಡಿ.

 

  

ಹಂತ 3: ಹೊಸ ಪುಟವು ತೆರೆಯುತ್ತದೆ. ಇದು, ನಿಮ್ಮ ದೂರನ್ನು ಸಲ್ಲಿಸಲು ನಿಮಗೆ ರಾಜ್ಯಗಳ ಪಟ್ಟಿಯನ್ನು ನೀಡುತ್ತದೆ. ನಿಮ್ಮ ರಾಜ್ಯವನ್ನು ಆಯ್ಕೆಮಾಡಿ.

 

 

ಹಂತ 4: ಮತ್ತೊಂದು ಫಾರ್ಮ್ ಈಗ ತೆರೆಯುತ್ತದೆ, ಅಲ್ಲಿ ನಿಮ್ಮ ನರೇಗಾ ಸಂಬಂಧಿತ ದೂರನ್ನು ಸಲ್ಲಿಸಲು ನೀವು ಹಲವಾರು ವಿವರಗಳನ್ನು ಒದಗಿಸುತ್ತೀರಿ.

 

 

 

 

ಹಂತ 5: ಎಲ್ಲಾ ವಿವರಗಳನ್ನು ಭರ್ತಿ ಮಾಡಿ ಮತ್ತು ದೂರು ಉಳಿಸಿ ಆಯ್ಕೆಯನ್ನು ಕ್ಲಿಕ್ ಮಾಡಿ.

 

ನರೇಗಾ ಜಾಬ್ ಕಾರ್ಡ್ ಆ್ಯಪ್‌ ಅನ್ನು ಡೌನ್‌ಲೋಡ್ ಮಾಡುವುದು ಹೇಗೆ?

  1. ನಿಮ್ಮ ಆಂಡ್ರಾಯ್ಡ್‌ ಆಧಾರಿತ ಮೊಬೈಲ್ನಲ್ಲಿ, ಪ್ಲೇ ಸ್ಟೋರ್‌ಗೆ ಭೇಟಿ ನೀಡಿ.
  2. ನರೇಗಾ ಹುಡುಕಿ.
  3. ಎಲ್ಲಾ ನರೇಗಾ ಜಾಬ್ ಕಾರ್ಡ್ ಸಂಬಂಧಿತ ಮಾಹಿತಿಯ ಕುರಿತು ಅಪ್ಡೇಟ್ ಆಗಿರಲು ನರೇಗಾ ಆ್ಯಪ್ ಇನ್‌ಸ್ಟಾಲ್ ಮಾಡಿ.

 

ನರೇಗಾ ಬಗ್ಗೆ ತಿಳಿದುಕೊಳ್ಳಬೇಕಾದ ಸಂಗತಿಗಳು

ನರೇಗಾ ಎಂದರೇನು?

ಕಾರ್ಮಿಕ ಕೇಂದ್ರಿತ ಕಾನೂನಾಗಿರುವ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯಿದೆ (ನರೇಗಾ) ಅನ್ನು ನಂತರ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯಿದೆ (ಎಂಜಿನರೇಗಾ) ಎಂದು ಮರುನಾಮಕರಣ ಮಾಡಲಾಯಿತು. ನರೇಗಾ ಸಾಮಾಜಿಕ ಭದ್ರತಾ ಕ್ರಮವಾಗಿದ್ದು ಅದು ಭಾರತದ ಕೌಶಲ್ಯರಹಿತ ಉದ್ಯೋಗಿಗಳಿಗೆಕೆಲಸ ಮಾಡುವ ಹಕ್ಕನ್ನುಖಾತರಿಪಡಿಸುತ್ತದೆ.

ಸೆಪ್ಟೆಂಬರ್ 2005 ರಲ್ಲಿ ಜಾರಿಗೊಳಿಸಿದ ಮತ್ತು 2006 ರಲ್ಲಿ ಪ್ರಾರಂಭಿಸಿದ ಎಂಜಿನರೇಗಾಗ್ರಾಮೀಣ ಪ್ರದೇಶಗಳಲ್ಲಿ ಕನಿಷ್ಠ 100 ದಿನಗಳ ವೇತನ ಉದ್ಯೋಗವನ್ನು ಒದಗಿಸುವ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಕೌಶಲ್ಯ ಅಗತ್ಯವಿಲ್ಲದ ಕೈಯಿಂದ ಮಾಡುವ ಕೆಲಸ ಮಾಡಬಹುದಾದ ವಯಸ್ಕರ ಸದಸ್ಯರನ್ನು ಒಳಗೊಂಡಿರುವ ಪ್ರತಿ ಕುಟುಂಬಕ್ಕೆ ಜೀವನಾವಶ್ಯಕತೆ ಭದ್ರತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ’.

ಯೋಜನೆಯು ಪ್ರಸ್ತುತ ಭಾರತದಲ್ಲಿ 14.89 ಕೋಟಿ ಗ್ರಾಮೀಣ ಕುಟುಂಬಗಳಿಗೆ ವರ್ಷದಲ್ಲಿ 100 ಕೆಲಸದ ದಿನಗಳನ್ನು ಒದಗಿಸುತ್ತದೆ.

ವಿತ್ತವರ್ಷ 2023 ಕ್ಕೆ 73,000 ಕೋಟಿ ರೂ. ಅನ್ನು ಈ ಸ್ಕೀಮ್‌ಗೆ ಬಜೆಟ್ ನಿಯೋಜಿಸಿದೆ. 2.4 ಕೋಟಿಗೂ ಹೆಚ್ಚು ಹೆಚ್ಚುವರಿ ಕುಟುಂಬಗಳು ಎಂಜಿನರೇಗಾ ಕೆಲಸ ಬಯಸುತ್ತಿವೆ.

ಇದನ್ನೂ ನೋಡಿ: ಇಪಿಎಫ್‌ ಅಥವಾ ಉದ್ಯೋಗಿಗಳ ಭವಿಷ್ಯ ನಿಧಿ ಯೋಜನೆಯ ಬಗ್ಗೆ ಸಮಗ್ರ ಮಾಹಿತಿ. ಮಾರ್ಗದರ್ಶಿಯಲ್ಲಿ ಇಪಿಎಫ್ ಪಾಸ್‌ಬುಕ್ ಬಗ್ಗೆ ಎಲ್ಲವನ್ನೂ ತಿಳಿದುಕೊಳ್ಳಿ.

 

 

ಎಂಜಿನರೇಗಾದ ಮುಖ್ಯ ಉದ್ದೇಶಗಳು

ಇದನ್ನೂ ನೋಡಿ: ಇ ಪಂಚಾಯತ್‌ ಮಿಷನ್‌ ಎಂದರೇನು?

 

ನರೇಗಾ ಜಾಬ್ ಕಾರ್ಡ್ ಹೊಂದಿರುವವರ ಹಕ್ಕುಗಳು

ಇದನ್ನೂ ನೋಡಿ: ಮಹಾಬಿಒಸಿಡಬ್ಲ್ಯೂ ಅಥವಾ ಮಹಾರಾಷ್ಟ್ರ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಬಗ್ಗೆ

 

ಎಂಜಿನರೇಗಾ ಅಡಿಯಲ್ಲಿ ಕೆಲಸಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?

ಕೌಶಲರಹಿತ ಉದ್ಯೋಗವನ್ನು ಬಯಸುವ ವಯಸ್ಕ ಸದಸ್ಯರನ್ನು ಹೊಂದಿರುವ ಕುಟುಂಬಗಳು ಎಂಜಿನರೇಗಾದಲ್ಲಿ ನೋಂದಣಿಗಾಗಿ ಅರ್ಜಿ ಸಲ್ಲಿಸಬಹುದು. ಅರ್ಜಿಯನ್ನು ನಿಗದಿತ ನಮೂನೆಯಲ್ಲಿ ಅಥವಾ ಸರಳ ಕಾಗದದ ಮೇಲೆ ಲಿಖಿತವಾಗಿ ಸ್ಥಳೀಯ ಗ್ರಾಮ ಪಂಚಾಯಿತಿಗೆ ನೀಡಬಹುದು. ವಲಸೆ ಹೋಗಬಹುದಾದ ಕುಟುಂಬಗಳಿಗೆ ಅವಕಾಶಗಳು ಲಭ್ಯವಿರುವುದನ್ನು ಖಚಿತಪಡಿಸಿಕೊಳ್ಳಲು, ಗ್ರಾಮ ಪಂಚಾಯತ್ ಕಛೇರಿಯಲ್ಲಿ ವರ್ಷವಿಡೀ ನರೇಗಾ ನೋಂದಣಿ ತೆರೆದಿರುತ್ತದೆ.

 

ಸಾಮಾನ್ಯ ಪ್ರಶ್ನೆಗಳು ಮತ್ತು ಉತ್ತರಗಳು (FAQs)

ಜಾಬ್ ಕಾರ್ಡ್ ಎಂಬುದು ಪಟ್ಟಿಯೇ?

ಇಲ್ಲ, ನರೇಗಾ ಜಾಬ್ ಕಾರ್ಡ್ ಎಂಬುದು ಎಂಜಿನರೇಗಾ ಅಡಿಯಲ್ಲಿ ನೋಂದಾಯಿಸಲಾದ ವಯಸ್ಕ ಸದಸ್ಯರ ವಿವರಗಳನ್ನು ಹೊಂದಿರುವ ಕಾರ್ಡ್ ಆಗಿದೆ. ನರೇಗಾ ಜಾಬ್ ಕಾರ್ಡ್‌ನಲ್ಲಿ ಕಾರ್ಡ್ ಹೊಂದಿರುವವರ ಫೋಟೋ ಕೂಡ ಇರುತ್ತದೆ.

ಜಾಬ್ ಕಾರ್ಡ್ ಸಂಖ್ಯೆಯನ್ನು ನಾನು ಹೇಗೆ ಪರಿಶೀಲಿಸಬಹುದು?

ನಿಮ್ಮ ಜಾಬ್ ಕಾರ್ಡ್ ಸಂಖ್ಯೆಯನ್ನು ಪರಿಶೀಲಿಸಲು ಅಧಿಕೃತ ಸೈಟ್‌ಗೆ ಭೇಟಿ ನೀಡಬೇಕು ಮತ್ತು ರಾಜ್ಯ, ಜಿಲ್ಲೆ, ಬ್ಲಾಕ್, ಪಂಚಾಯತ್, ಗ್ರಾಮ ಮತ್ತು ಕುಟುಂಬದ ಐಡಿ ಮುಂತಾದ ವಿವಿಧ ವಿವರಗಳನ್ನು ಒದಗಿಸಬೇಕು.

ನನ್ನ ನರೇಗಾ ಖಾತೆಯನ್ನು ನಾನು ಹೇಗೆ ಪರಿಶೀಲಿಸಬಹುದು?

ನಿಮ್ಮ ನರೇಗಾ ಜಾಬ್ ಕಾರ್ಡ್ ವಿವರಗಳನ್ನು ಬಳಸಿಕೊಂಡು ಅಧಿಕೃತ ವೆಬ್‌ಸೈಟ್‌ನಲ್ಲಿ ನಿಮ್ಮ ನರೇಗಾ ಖಾತೆಯನ್ನು ನೀವು ಪರಿಶೀಲಿಸಬಹುದು.

ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ ಅಥವಾ ಎಂಜಿನರೇಗಾ ಉದ್ದೇಶವೇನು?

ಎಂಜಿನರೇಗಾ ಉದ್ದೇಶವು ಕೌಶಲ ರಹಿತ ಕೆಲಸವನ್ನು ಮಾಡಲು ಸ್ವಯಂಪ್ರೇರಿತವಾಗಿ ಮುಂದೆ ಬರುವ ವಯಸ್ಕ ಸದಸ್ಯರನ್ನು ಹೊಂದಿರುವ ಪ್ರತಿ ಗ್ರಾಮೀಣ ಕುಟುಂಬಗಳಿಗೆ ಆರ್ಥಿಕ ವರ್ಷದಲ್ಲಿ ಕನಿಷ್ಠ 100 ದಿನಗಳ ಖಾತರಿಯ ವೇತನ ಸಹಿತ ಉದ್ಯೋಗವನ್ನು ಒದಗಿಸುವುದು.

ನರೇಗಾ ಹೆಸರನ್ನು ಎಂಜಿನರೇಗಾ ಎಂದು ಯಾವಾಗ ಬದಲಾಯಿಸಲಾಯಿತು?

ಅಕ್ಟೋಬರ್ 2, 2009 ರಂದು ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯಿದೆ, 2005 ಕ್ಕೆ ತಿದ್ದುಪಡಿಯನ್ನು ಮಾಡಲಾಗಿದ್ದು, ಕಾಯಿದೆಯ ಹೆಸರನ್ನು ನರೇಗಾದಿಂದ ಎಂಜಿನರೇಗಾ ಎಂದು ಬದಲಾಯಿಸಲಾಯಿತು.

ನರೇಗಾ ಜಾಬ್ ಕಾರ್ಡ್ ಎಂದರೇನು?

ನರೇಗಾ ಜಾಬ್ ಕಾರ್ಡ್ ಎಂಜಿನರೇಗಾ ಅಡಿಯಲ್ಲಿ ಕಾರ್ಮಿಕರ ಅರ್ಹತೆಗಳನ್ನು ದಾಖಲಿಸುವ ಪ್ರಮುಖ ದಾಖಲೆಯಾಗಿದೆ. ಇದು ನೋಂದಾಯಿತ ಕುಟುಂಬಗಳಿಗೆ ಕೆಲಸಕ್ಕೆ ಅರ್ಜಿ ಸಲ್ಲಿಸಲು ಅನುವು ಮಾಡಿಕೊಡುತ್ತದೆ, ಪಾರದರ್ಶಕತೆಯನ್ನು ಖಚಿತಪಡಿಸುತ್ತದೆ ಮತ್ತು ವಂಚನೆಯಿಂದ ಕಾರ್ಮಿಕರನ್ನು ರಕ್ಷಿಸುವ ಗುರಿಯನ್ನು ಹೊಂದಿದೆ.

ಎಂಜಿನರೇಗಾ ಅಡಿಯಲ್ಲಿ 'ಕುಟುಂಬ'ದ ಅರ್ಥವೇನು?

ಮನೆ ಎಂದರೆ ರಕ್ತ ಸಂಬಂಧ, ಮದುವೆ ಅಥವಾ ದತ್ತು ಪಡೆಯುವ ಮೂಲಕ ಪರಸ್ಪರ ಸಂಬಂಧ ಹೊಂದಿರುವ ಕುಟುಂಬದ ಸದಸ್ಯರು ಮತ್ತು ಒಟ್ಟಿಗೆ ವಾಸಿಸುವ ಮತ್ತು ಊಟವನ್ನು ಹಂಚಿಕೊಳ್ಳುವವರು ಅಥವಾ ಸಾಮಾನ್ಯ ಪಡಿತರ ಚೀಟಿ ಹೊಂದಿರುವವರು.

ಎಂಜಿನರೇಗಾ ಜಾಬ್ ಕಾರ್ಡ್ ನೋಂದಣಿಯ ಆವರ್ತನೆ ಎಷ್ಟು?

ಎಂಜಿನರೇಗಾ ಜಾಬ್ ಕಾರ್ಡ್‌ಗಾಗಿ ನೋಂದಣಿ ವರ್ಷಪೂರ್ತಿ ನಡೆಯುತ್ತದೆ.

ಮನೆಯ ಪರವಾಗಿ ಜಾಬ್ ಕಾರ್ಡ್‌ಗೆ ಯಾರು ಅರ್ಜಿ ಸಲ್ಲಿಸಬೇಕು?

ಯಾವುದೇ ವಯಸ್ಕ ಸದಸ್ಯರು (18 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರು) ಮನೆಯ ಪರವಾಗಿ ಅರ್ಜಿ ಸಲ್ಲಿಸಬಹುದು.

ಮನೆಯ ಎಲ್ಲಾ ವಯಸ್ಕ ಸದಸ್ಯರು ಜಾಬ್ ಕಾರ್ಡ್‌ಗಾಗಿ ನೋಂದಾಯಿಸಿಕೊಳ್ಳಬಹುದೇ?

ಹೌದು, ಕೌಶಲ್ಯರಹಿತ ಕೆಲಸ ಮಾಡಲು ಸಿದ್ಧರಿರುವ ಕುಟುಂಬದ ಎಲ್ಲಾ ವಯಸ್ಕ ಸದಸ್ಯರು, ಎಂಜಿನರೇಗಾ ಅಡಿಯಲ್ಲಿ ಜಾಬ್ ಕಾರ್ಡ್ ಪಡೆಯಲು ತಮ್ಮನ್ನು ನೋಂದಾಯಿಸಿಕೊಳ್ಳಬಹುದು.

ಎಂಜಿನರೇಗಾ ಜಾಬ್ ಕಾರ್ಡ್‌ನ ನೋಂದಣಿ ಎಷ್ಟು ವರ್ಷಗಳವರೆಗೆ ಮಾನ್ಯವಾಗಿರುತ್ತದೆ?

ನರೇಗಾ ನೋಂದಣಿ ಐದು ವರ್ಷಗಳವರೆಗೆ ಮಾನ್ಯವಾಗಿರುತ್ತದೆ ಮತ್ತು ನಿಗದಿತ ಪ್ರಕ್ರಿಯೆಯನ್ನು ಅನುಸರಿಸಿ ನವೀಕರಿಸಬಹುದು/ಮರು ಮೌಲ್ಯೀಕರಿಸಬಹುದು.

ನರೇಗಾ ಜಾಬ್ ಕಾರ್ಡ್ ನೀಡಲು ಸಮಯ ಮಿತಿ ಏನು?

ಟುಂಬದ ಅರ್ಹತೆಯ ಬಗ್ಗೆ ಸರಿಯಾದ ಪರಿಶೀಲನೆ ಪೂರ್ಣಗೊಂಡ ನಂತರ ಹದಿನೈದು ದಿನಗಳ ಒಳಗೆ ಎಲ್ಲಾ ಅರ್ಹ ಕುಟುಂಬಗಳಿಗೆ ನರೇಗಾ ಜಾಬ್ ಕಾರ್ಡ್‌ಗಳನ್ನು ನೀಡಬೇಕು.

ಕಳೆದುಹೋದವರಿಗೆ ನಕಲು ನರೇಗಾ ಜಾಬ್ ಕಾರ್ಡ್ ಒದಗಿಸಲು ಯಾವುದೇ ಅವಕಾಶವಿದೆಯೇ?

ನರೇಗಾ ಜಾಬ್ ಕಾರ್ಡ್‌ದಾರರು ಅಸಲು ಕಳೆದುಹೋದರೆ ಅಥವಾ ಹಾನಿಗೊಳಗಾದರೆ ನಕಲಿ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಬಹುದು. ಅರ್ಜಿಯನ್ನು ಗ್ರಾಮ ಪಂಚಾಯಿತಿಗೆ ನೀಡಬೇಕು.

Was this article useful?
  • ? (1)
  • ? (0)
  • ? (0)
Exit mobile version