Site icon Housing News

ಆರ್ ಈ ಆರ್ ಎ(ರೆರಾ) ದಲ್ಲಿ ಕಾರ್ಪೆಟ್ ಪ್ರದೇಶದ ವ್ಯಾಖ್ಯಾನ ಹೇಗೆ ಬದಲಾಗುತ್ತದೆ

How carpet area definition changes in RERA

ಆಸ್ತಿಯ ಪ್ರದೇಶವು ಮೂರು ವಿಭಿನ್ನ ರೀತಿಗಳಲ್ಲಿ ಸಾಮಾನ್ಯವಾಗಿ ಲೆಕ್ಕಹಾಕಲ್ಪಡುತ್ತದೆ – ಕಾರ್ಪೆಟ್ ಪ್ರದೇಶ, ನಿರ್ಮಿಸಿದ ಪ್ರದೇಶ ಮತ್ತು ಮೀರಿದ ನಿರ್ಮಿಸಿದ ಪ್ರದೇಶ. ಅದಕ್ಕಾಗಿ, ಆಸ್ತಿ ಖರೀದಿಸಲು ಬಂದಾಗ, ನೀವು ಏನು ಪಾವತಿಸುತ್ತೀರಿ ಮತ್ತು ಏನು ಪಡೆಯುತ್ತೀರಿ ಇದರ ಮಧ್ಯೆ ಬಹಳಷ್ಟು ಸಂಪರ್ಕ ಕಡಿತಕ್ಕೆ ಕಾರಣವಾಗುತ್ತದೆ. ಆಶ್ಚರ್ಯಕರವಲ್ಲದೆ, ಗ್ರಾಹಕ ನ್ಯಾಯಾಲಯಗಳಲ್ಲಿ ದಾಖಲಾದ ಗರಿಷ್ಠ ಪ್ರಕರಣಗಳು, ಡೆವೆಲಪರ್ ಗಳ ವಿರುದ್ಧ ವಂಚನೆಯ ವಿವಾದಕ್ಕೆ ಹೋಲಿಸಿದರೆ,  ಫ್ಲಾಟ್ ನ ಗಾತ್ರದ ಬಗ್ಗೆ ಇರುತ್ತವೆ. ರಿಯಲ್ ಎಸ್ಟೇಟ್(ನಿಯಂತ್ರಣ ಮತ್ತು ಅಭಿವೃದ್ಧಿ) ಆಕ್ಟ್, 2016 (ಆರ್ ಈ ಆರ್ ಎ(ರೆರಾ)) ರ ಉಪಬಂಧಗಳ ಪ್ರಕಾರ, ಖರೀದಿದಾರರಿಗೆ ಕಾರ್ಪೆಟ್ ಪ್ರದೇಶದ ಬಗ್ಗೆ ಹೇಳುವುದು ಮತ್ತು ಇದರ ಆಧಾರದ ಮೇಲೆ ಉಲ್ಲೇಖ ಬೆಲೆಗಳು, ಮತ್ತು ಮೀರಿದ ನಿರ್ಮಿಸಿದ ಪ್ರದೇಶದ ಮೇಲಲ್ಲ ಎಂದು ತಿಳಿಸುವುದು, ಈಗ ಡೆವಲಪರ್ ನ ಕರ್ತವ್ಯವಾಗಿದೆ.

ಗೌತಮ್ ಚಾಟರ್ಜೀ, ಮಹಾರಾಷ್ಟ್ರ ಆರ್ ಈ ಆರ್ ಎ(ರೆರಾ) ದ ಅಧ್ಯಕ್ಷರು, ವಿವರಿಸುತ್ತಾರೆ “ಈಗ ನಡೆಯುತ್ತಿರುವ ಎಲ್ಲಾ ಯೋಜನೆಗಳ ಡೆವೆಲಪರ್ ಗಳು, ಕಾರ್ಪೆಟ್ ಪ್ರದೇಶದ ಮೇಲೆ ಆಧಾರಿತವಾಗಿ(i .e ನಾಲ್ಕು ಗೋಡೆಗಳ ಮಧ್ಯದ ಪ್ರದೇಶ) ತಮ್ಮ ಅಪಾರ್ಟ್ಮೆಂಟ್ ಗಳ ಗಾತ್ರವನ್ನು  ಬಹಿರಂಗಪಡಿಸಬೇಕು ಎಂದು ಈಗ ಕಡ್ಡಾಯವಾಗಿದೆ. ಇದು ಉಪಯೋಗಿಸಬಹುದಾದ ಜಾಗಗಳಾದ, ಅಡಿಗೆ ಮನೆ ಮತ್ತು ಶೌಚಾಲಯಗಳನ್ನು ಒಳಗೊಂಡಿದೆ. ಇದು ಮೊದಲಿರದ ಸ್ಪಷ್ಟತೆಯನ್ನು ನೀಡುತ್ತದೆ.”

 

ಆರ್ ಈ ಆರ್ ಎ(ರೆರಾ) ದಡಿ ಕಾರ್ಪೆಟ್ ಪ್ರದೇಶ: ಇದು ಏನನ್ನು ಒಳಗೊಂಡಿದೆ?

ಕಾರ್ಪೆಟ್ ಪ್ರದೇಶ, ಅಥವಾ ನಿವ್ವಳ ಬಳಕೆಯಾಗುವ ಪ್ರದೇಶ, ಒಂದು ಕಾರ್ಪೆಟ್ ಅನ್ನು ಹರಡಬಹುದಾದ ಜಾಗವಾಗಿದೆ. ನಿರ್ಮಿಸಿದ ಪ್ರದೇಶವು ಕಾರ್ಪೆಟ್ ಪ್ರದೇಶ, ಅಧಿಕಾರಿಗಳು ಪ್ರಮಾಣೀಕರಿಸಿದ ಹೆಚ್ಚುವರಿ ಪ್ರದೇಶಗಳಾದ, ಹೊರಗಿನ ಮತ್ತು ಒಳಗಿನ ಗೋಡೆಗಳು, ಒಣ ಬಾಲ್ಕನಿ ಪ್ರದೇಶ, ಮುಂತಾದವುಗಳಂತಹವನ್ನು ಒಳಗೊಂಡಿದೆ. ಮೀರಿದ ನಿರ್ಮಿಸಿದ ಪ್ರದೇಶವು ಕಾರ್ಪೆಟ್ ಪ್ರದೇಶ, ನಿರ್ಮಿಸಿದ ಪ್ರದೇಶ, ಮತ್ತು ಉಳಿದ ಜಾಗಗಳಾದ ಮೆಟ್ಟಿಲುಗಳು, ಪಡಸಾಲೆಗಳು ಮತ್ತು ಗ್ಯಾಲರಿಗಳು, ಸಂಪೂರ್ಣ ಕಟ್ಟಡ ಬಳಸಬಹುದಾದವುಗಳನ್ನು ಒಳಗೊಂಡಿದೆ.

ಆರ್ ಈ ಆರ್ ಎ(ರೆರಾ) ಪ್ರಕಾರ, ಕಾರ್ಪೆಟ್ ಪ್ರದೇಶ ಎಂದರೆ “ಅಪಾರ್ಟ್ಮೆಂಟ್ ನ ನಿವ್ವಳ ಬಳಕೆಯಾಗುವ ನೆಲದ ವಿಸ್ತೀರ್ಣ, ಬಾಹ್ಯ ಗೋಡೆಗಳಿಂದ ಆವರಿಸಿರುವ ಪ್ರದೇಶವನ್ನು ಹೊರತುಪಡಿಸಿ, ತೋಡುದಾರಿಗಳ ಪ್ರದೇಶಗಳು, ವಿಶೇಷ ಬಾಲ್ಕನಿ ಅಥವಾ ವರಾಂಡಾ ಪ್ರದೇಶ ಮತ್ತು ವಿಶೇಷ ತೆರೆದ ಟೆರೇಸ್ ಪ್ರದೇಶ, ಆದರೆ ಅಪಾರ್ಟ್ಮೆಂಟ್ ನ ಆಂತರಿಕ ವಿಭಾಗದ ಗೋಡೆಗಳಿಂದ ಆವರಿಸಿರುವ ಪ್ರದೇಶ”.

ಒಂದು ಸರಳವಾದ ವಿವರಣೆ ಇದಾಗಬಹುದು: ಅಪಾರ್ಟ್ಮೆಂಟ್ ನ ಹೊರ ಗೋಡೆಗಳ ಒಳಗಿನ ಏನೂ, ಆದರೆ ಬಾಲ್ಕನಿಗಳು, ವರಾಂಡಾ ಅಥವಾ ತೆರೆದ ಟೆರೇಸ್ ಮತ್ತು ಶಾಫ್ಟ್ ಗಳನ್ನು ಹೊರತುಪಡಿಸಿ, ಎಂದು ಡಿಗ್ಬಿಜೋಯ್ ಭೌಮಿಕ್, ನೀತಿಯ ಮುಖ್ಯಸ್ಥ, ಆರ್ ಐ ಸಿ ಎಸ್, ದಕ್ಷಿಣ ಏಷ್ಯಾ, ಹೇಳುತ್ತಾರೆ. “ಬಾಲ್ಕನಿಯು ಫ್ಲಾಟ್ ಗೆ ಪ್ರತ್ಯೇಕವಾಗಿದ್ದರೂ,  ಬಾಲ್ಕನಿಯ ಪ್ರದೇಶವನ್ನು ಸೇರಿಸಲಾಗುವುದಿಲ್ಲ. ಲಿಫ್ಟ್ ಪಡಸಾಲೆ, ಮೆಟ್ಟಿಲುಗಳ  ಪಡಸಾಲೆ ಅಥವಾ ನೀವು ಮುಖ್ಯ ಬಾಗಿಲಿನ ಮೂಲಕ ಮನೆಯನ್ನು ಪ್ರವೇಶಿಸುವ ಮೊದಲು, ನೀವು ಇರಬಹುದಾದಂತಹ ಯಾವುದೇ ಜಾಗ, ಸೇರಿಸಲಾಗುವುದಿಲ್ಲ. ಅಡಿಗೆ ಮನೆ / ಶೌಚಾಲಯದಿಂದ ಗಾಳಿಯನ್ನು ಹೊರತೆಗೆಯಲು ಬಳಸಲಾಗುವ ಸಾಮಾನ್ಯ / ವಿಶೇಷ ಶಾಫ್ಟ್ ಕೂಡಾ, ಹೊರತುಪಡಿಸಲಾಗಿದೆ. ಆದಾಗ್ಯೂ, ವಾಕ್-ಇನ್  ಉಡುಪು ಕಪಾಟನ್ನು ಸೇರಿಸಲಾಗುತ್ತದೆ,” ಎಂದು ಅವರು ವಿವರಿಸುತ್ತಾರೆ.

ಧವಲ್ ಅಜಮೇರಾ, ಅಜಮೇರಾ ರಿಯಲ್ಟಿಯ ವ್ಯವಸ್ಥಾಪಕರು, ಸೂಚಿಸುತ್ತಾರೆ “ಅನೇಕ ಪ್ರೊಮೋಟರ್ ಗಳು ನಿರ್ಮಿಸಿದ ಪ್ರದೇಶಕ್ಕಿಂತ ಕಡಿಮೆಯಾದ ಕಾರ್ಪೆಟ್ ಪ್ರದೇಶಕ್ಕಿಂತ ಹೆಚ್ಚಾಗಿ ನಿರ್ಮಿಸಿದ ಪ್ರದೇಶದ ಮಾಹಿತಿಯನ್ನು ಒದಗಿಸುತ್ತಾರೆ.” ಈಗ, ಒಂದು ಸರಿಯಾದ ವ್ಯಾಖ್ಯಾನವು, ಫ್ಲಾಟ್ ನ ನಿಜವಾದ ಮಾಪನಗಳೊಂದಿಗೆ ಗ್ರಾಹಕರ ನಿರೀಕ್ಷೆಗಳನ್ನು ಒಗ್ಗೂಡಿಸುತ್ತದೆ.

 

ಕಾರ್ಪೆಟ್ ಪ್ರದೇಶವನ್ನು ಕಡ್ಡಾಯವಾಗಿ ಬಹಿರಂಗಪಡಿಸುವುದು ಮತ್ತು ಅದರ ಪ್ರಭಾವ

ಬ್ರಿಕ್ ಈಗಲ್ ನ ಒಂದು ಕಂಪನಿಯಾದ ಶೆಲ್ಟ್ರೆಕ್ಸ್ ನ ಸಿಈಓ, ಸಂದೀಪ್ ಸಿಂಗ್ ಹೇಳುತ್ತಾರೆ, “ಖರೀದಿದಾರರು ಈಗ ತಾವು ಡೆವಲಪರ್ ನಿಂದ ಪಡೆದುಕೊಳ್ಳುವ ಫ್ಲಾಟ್ ನ ಸರಿಯಾದ  ಮಾಪನವನ್ನು ಅರ್ಥಮಾಡಿಕೊಳ್ಳುತ್ತಾರೆ. ಇನ್ನೂ ಹೆಚ್ಚಾಗಿ, ಅವರು ಫ್ಲಾಟ್ ನ ಯಾವ ಭಾಗ ಕಾರ್ಪೆಟ್ ಪ್ರದೇಶದಲ್ಲಿ ಬರುತ್ತದೆ ಮತ್ತು ಯಾವ ಭಾಗ ವೆರಾಂಡಗಳು ಮತ್ತು ಟೆರೇಸುಗಳಲ್ಲಿ ಬರುತ್ತದೆ ಎಂದು ನಿಖರವಾಗಿ ತಿಳಿದುಕೊಳ್ಳುತ್ತಾರೆ. ಅಧಿಕವಾಗಿ, ನಿಜವಾದ ಕಾರ್ಪೆಟ್ ಪ್ರದೇಶದ ಮೇರೆಗೆ ಯೋಜನೆಗಳ ನಿಖರ ಚಿತ್ರಣವನ್ನು ಖಚಿತಪಡಿಸಿಕೊಳ್ಳಲು ಡೆವೆಲಪರ್ ಗಳು ತಮ್ಮ ಯೋಜನೆಗಳನ್ನು ಯೋಜಿಸುವಲ್ಲಿ ಹೆಚ್ಚು ಕಟ್ಟುನಿಟ್ಟಾಗಿರಬೇಕು.”

ಮನೆ ಖರೀದಿದಾರರಾದ ನಿಧಿ ಶರ್ಮಾ, ಸೂಚಿಸುತ್ತಾರೆ, ಚದರ ಅಡಿ ಪ್ರತಿ ಆಸ್ತಿ ದರಗಳು, ನಿಸ್ಸಂಶಯವಾಗಿ ಇರುತ್ತವೆ, ಏಕೆಂದರೆ ಒಟ್ಟು ಬೆಲೆ ಕಡಿಮೆ ಛೇದ ಮೂಲಕ ವಿಂಗಡಿಸಬಹುದು (ಕಾರ್ಪೆಟ್ ಪ್ರದೇಶ, ಮೀರಿದ ನಿರ್ಮಿಸಿದ ಪ್ರದೇಶದ ವಿರುದ್ಧ). “ಏನೇ ಇರಲಿ, ಈಗ, ನಾವು ಏನು ಪಡೆಯುತ್ತೇವೆ ಎಂದಾದರೂ ನಮಗೆ ತಿಳಿದಿರುತ್ತದೆ. 700 ಚದರ ಅಡಿ ಅಪಾರ್ಟ್ಮೆಂಟ್ ಅನ್ನು ನಾವು ಖರೀದಿಸಿದ್ದೇವೆ ಎಂದು ಯೋಚಿಸಿ 500 ಚದರ ಅಡಿ ಅಪಾರ್ಟ್ಮೆಂಟ್ ಅನ್ನು ಪಡೆಯುವುದಿಲ್ಲ,” ಎಂದು ಅವರು ಹೇಳುತ್ತಾರೆ.

 

ಕಾರ್ಪೆಟ್ ಪ್ರದೇಶದ ಮಾಹಿತಿಯು ಮನೆ ಖರೀದಿದಾರರಿಗೆ ಹೇಗೆ ಸಹಾಯ ಮಾಡಬಹುದು?

ಹಲವು ಯೋಜನೆಗಳಲ್ಲಿ, ಲೋಡಿಂಗ್ ಹೆಚ್ಚುಕಡಿಮೆ ಸಂಪೂರ್ಣ ಪ್ರದೇಶದ 30%-35% ಇರುತ್ತದೆ. ಒಂದು ಯೋಜನೆಯ ಜಾಗ, ರೂಪರೇಖೆ ಮತ್ತು ಜಮೀನಿನ ಬಗ್ಗೆ ನಿಖರವಾದ ಮಾಹಿತಿಯು, ತಿಳುವಳಿಕೆಯುಳ್ಳ ನಿರ್ಧಾರ ತೆಗೆದುಕೊಳ್ಳಲು ಖರೀದಿದಾರರಿಗೆ ಬಲ ನೀಡುತ್ತದೆ, ” ಎಂದು ಇಸ್ಪ್ರವದ ಸಂಸ್ಥಾಪಕ ಮತ್ತು ಸಿಈಓ, ನೀಭ್ರಾನ್ತ ಶಾಹ್ ವಿವರಿಸುತ್ತಾರೆ. ಆಸ್ತಿಯು ಒಂದು ದೊಡ್ಡ ಸಾಮಾನ್ಯ ರಚನೆ ಅಥವಾ ಕಟ್ಟಡದ ಭಾಗವಾಗಿದ್ದಾಗ, ಮಾಲೀಕರು ತಮ್ಮ ತೆರಿಗೆ ಹೊಣೆಗಾರಿಕೆಯ ಅಂಶಗಳು ಮತ್ತು ಆಸ್ತಿಗೆ ಸಂಬಂಧಿಸಿದ ಹಕ್ಕುಗಳು ಮತ್ತು ಇಳಿಕೆಯ ಮೇಲಿನ ಅಂಶಗಳನ್ನು ಅರ್ಥಮಾಡಿಕೊಳ್ಳಲು ಸುಲಭವಾಗಬಹುದು.

ಸುಮೇರ್ ಗ್ರೂಪ್ ನ ಸಿಈಓ, ರಾಹುಲ್ ಶಾಹ್ ಪ್ರಕಾರ, “ಆರ್ ಈ ಆರ್ ಎ(ರೆರಾ) ಸಲಹಾಸೂತ್ರಗಳ ಅನುಸಾರ, ಗ್ರಾಹಕನು ತಾನು ಯಾವುದಕ್ಕೆ ಪಾವತಿಸುತ್ತಿದ್ದೇನೆ ಎಂದು ತಿಳಿದಿರಲು, ಒಬ್ಬ ಬಿಲ್ಡರ್ ನಿಖರ ಕಾರ್ಪೆಟ್ ಪ್ರದೇಶವನ್ನು ಬಹಿರಂಗಪಡಿಸಬೇಕು. ಆದರೆ, ಕಾರ್ಪೆಟ್ ಪ್ರದೇಶದ ಆಧಾರದ ಮೇಲೆ ಒಂದು ಫ್ಲಾಟ್ ಅನ್ನು ಮಾರಾಟಮಾಡಲು ಈ ಆಕ್ಟ್  ನಿರ್ಮಾಪಕರಿಗೆ ಕಡ್ಡಾಯ ಮಾಡುವುದಿಲ್ಲ.” ಸಾಯಿ ಎಸ್ಟೇಟ್ ಕನ್ಸಲ್ಟೆಂಟ್ಸ್ ನ ವ್ಯವಸ್ಥಾಪಕರಾದ, ಅಮಿತ್ ವಾಧ್ವಾನಿ, ಅರಿವು ಮೂಡಿಸಲು ಬಹಳಷ್ಟು ಪ್ರಯತ್ನಗಳನ್ನು ಮಾಡಬೇಕಾಗಿದೆ ಎಂದು ಹೇಳುತ್ತಾರೆ. “ಬ್ಯಾಂಕರ್ ಗಳು, ಹೂಡಿಕೆದಾರರು, ಡೆವೆಲಪರ್ ಗಳು ಮತ್ತು ದಳ್ಳಾಳಿಗಳು, ಆರ್ ಈ ಆರ್ ಎ(ರೆರಾ) ಅನ್ನು ಅಭ್ಯಾಸ ಮಾಡುವುದನ್ನು ಪ್ರಾರಂಭಿಸಬೇಕು ಮತ್ತು ಮಾಹಿತಿಯನ್ನು ಪ್ರಸಾರ ಮಾಡಬೇಕು. ಎಲ್ಲಾ ಬದಲಾದ ವ್ಯಾಖ್ಯಾನಗಳನ್ನು ರಿಯಲ್ ಎಸ್ಟೇಟ್ ಭ್ರಾತೃತ್ವದಿಂದ ನೆಲದ ಮೇಲೆ ಅಭ್ಯಾಸ ಮಾಡಿ ಮತ್ತು ಕಾರ್ಯಗತಗೊಳಿಸಬೇಕಾಗಿದೆ, ಅದರಿಂದ ಅಂತಿಮ ಬಳಕೆದಾರರಿಗೆ ಸ್ಪಷ್ಟತೆ ಮತ್ತು ಪ್ರಯೋಜನವಾಗುತ್ತದೆ, “ಎಂದು ಅವರು ಮುಕ್ತಾಯ ಮಾಡುತ್ತಾರೆ.

 

Was this article useful?
  • 😃 (0)
  • 😐 (0)
  • 😔 (0)
Exit mobile version