ವೇತನ ಆಯೋಗ ಎಂದರೇನು?
ವೇತನ ಆಯೋಗ ಎಂಬುದು ಕೇಂದ್ರ ಸರ್ಕಾರ ನೇಮಿಸಿದ ಆಡಳಿತಾತ್ಮಕ ವ್ಯವಸ್ಥೆಯಾಗಿದ್ದು, ಇದು ಸರ್ಕಾರಿ ಉದ್ಯೋಗಿಗಳಿಗೆ ಅನ್ವಯಿಸುವ ವೇತನ ರಚನೆ ಮತ್ತು ಇತರ ಪ್ರಯೋಜನಗಳನ್ನು ಅಧ್ಯಯನ ನಡೆಸುತ್ತದೆ ಮತ್ತು ಬದಲಾವಣೆಗಳನ್ನು ಶಿಫಾರಸು ಮಾಡುತ್ತದೆ.
ದೆಹಲಿಯಲ್ಲಿ ಕೇಂದ್ರ ಕಚೇರಿ ಹೊಂದಿರುವ ವೇತನ ಆಯೋಗದಕ್ಕೆ ಚೇರ್ಮನ್ ಮುಖ್ಯಸ್ಥರಾಗಿರುತ್ತಾರೆ. ಅವರಿಗೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಹಿರಿಯ ಅಧಿಕಾರಿಗಳು ಸಹಾಯಕರಾಗಿರುತ್ತಾರೆ. ವೇತನ ಆಯೋಗದ ಶಿಫಾರಸುಗಳನ್ನು ಕೇಂದ್ರ ಸರ್ಕಾರ ಸಮ್ಮತಿಸಬಹುದು ಅಥವಾ ತಿರಸ್ಕರಿಸಬಹುದು. ರಾಜ್ಯ ಸರ್ಕಾರಗಳು ಸಾಮಾನ್ಯವಾಗಿ ವೇತನ ಆಯೋಗದ ಶಿಫಾರಸುಗಳನ್ನು ಕೆಲವು ಬದಲಾವಣೆಗಳ ಜೊತೆಗೆ ಅಳವಡಿಸಿಕೊಳ್ಳುತ್ತವೆ. ಭಾರತಕ್ಕೆ ಸ್ವಾತಂತ್ರ್ಯ ಬಂದಾಗಿನಿಂದ ಏಳು ವೇತನ ಆಯೋಗಗಳನ್ನು ಸ್ಥಾಪಿಸಲಾಗಿದೆ.
7ನೇ ವೇತನ ಆಯೋಗ
7ನೇ ವೇತನ ಆಯೋಗವನ್ನು ಯುಪಿಎ ಸರ್ಕಾರದ ಅವಧಿಯಲ್ಲಿ 2014 ಫೆಬ್ರವರಿ 28 ರಂದು ಸ್ಥಾಪಿಸಲಾಗಿತ್ತು. ಇದು ತನ್ನ ವರದಿಯನ್ನು 2015 ನವೆಂಬರ್ 19 ರಂದು ಸಲ್ಲಿಸಿತು.
ಇದನ್ನೂ ನೋಡಿ: ಎನ್‌ಪಿಎಸ್ ಕ್ಯಾಲಕ್ಯುಲೇಟರ್: ನಿಮ್ಮ ರಾಷ್ಟ್ರೀಯ ಪಿಂಚಣಿ ಸ್ಕೀಮ್ ಹಣವನ್ನು ಲೆಕ್ಕ ಮಾಡುವುದು ಹೇಗೆ ಎಂದು ತಿಳಿಯಿರಿ
7ನೇ ವೇತನ ಆಯೋಗ: ಶಿಫಾರಸುಗಳ ಸಾರಾಂಶ
- ಕನಿಷ್ಠ ವೇತನವು ಮಾಸಿಕ ರೂ. 18,000 ಇಂದ ಆರಂಭವಾಗುತ್ತದೆ.
- ಗರಿಷ್ಠ ಪ್ರಸ್ತಾವಿತ ಪರಿಹಾರವನ್ನು ರೂ. 22,50,000 ಗೆ ನಿಗದಿಸಬೇಕು.
- ಸಂಪುಟ ಕಾರ್ಯದರ್ಶಿ ಮತ್ತು ಇತರ ತತ್ಸಮಾನ ಹುದ್ದೆಗಳ ಆರಂಭಿಕ ಸಂಬಳ ರೂ. 2,50,000 ಇರಬೇಕು.
- ಹೊಸ ಪಾವತಿ ಮ್ಯಾಟ್ರಿಕ್ಸ್ ವ್ಯವಸ್ಥೆಯು ಪ್ರಸ್ತುತ ಪಾವತಿ ಬ್ಯಾಂಡ್ ಮತ್ತು ಗ್ರೇಡ್ ಪಾವತಿ ವ್ಯವಸ್ಥೆಗಳ ಬದಲಿಗೆ ಜಾರಿಗೆ ಬರುತ್ತದೆ.
- ಪ್ರಸ್ತುತ ವೇತನ ಸ್ಕೇಲ್‌ಗಳನ್ನು ನಿರ್ಧರಿಸುವಾಗ, ಹೊಸ ವೇತನ ಸ್ಕೇಲ್‌ಗಳನ್ನು ಪಡೆಯಲು ಎಲ್ಲ ಕೆಲಸಗಾರರಿಗೂ 2.57 ಗುಣಕದಲ್ಲಿ ಅನ್ವಯಿಸಬೇಕು.
- ವಾರ್ಷಿಕ ಏರಿಕೆ ದರವು ಆರನೇ ವೇತನ ಆಯೋಗ ನಿಗದಿಸಿದ 3% ರಷ್ಟೇ ಆಗಿರುತ್ತದೆ.
7ನೇ ವೇತನ ಮ್ಯಾಟ್ರಿಕ್ಸ್ ಮುಖ್ಯಾಂಶಗಳು
ಕಾರ್ಯಕ್ಷಮತೆ ಆಧರಿತ ವಿಧಾನ | ಸೇನಾ ಸೇವೆಗೆ ವೇತನ | ಅಲ್ಪಾವಧಿ ಸೇವೆ ಅಧಿಕಾರಿಗಳು | ವೇತನ ವ್ಯತ್ಯಾಸ | ವಿಶ್ಲೇಷಣೆ |
|
|
|
|
|
ಸಂಭಾವನೆ | ಮುಂಗಡಗಳು | ಆರೋಗ್ಯ ಸೇವೆ ಸೌಲಭ್ಯಗಳು |
|
|
|
ಇದನ್ನೂ ನೋಡಿ: ಇಪಿಎಫ್ ಸ್ಕೀಮ್ ಬಗ್ಗೆ ತಿಳಿಯಬೇಕಿರುವ ಎಲ್ಲ ವಿವರಗಳು
7ನೇ ವೇತನ ಆಯೋಗ: ವಿಮೆ ರಕ್ಷಣೆ
ಕೆಲಸಗಾರರ ಹಂತ | ಮಾಸಿಕ ಹಿಡಿದಿಟ್ಟುಕೊಳ್ಳುವಿಕೆ (ರೂ.) | ಗ್ಯಾರಂಟಿ ಮೊತ್ತ (ರೂ.) |
10 ಹಾಗೂ ಹೆಚ್ಚು | 5,000 | 50,00,000 |
6 ರಿಂದ 9 | 2,500 | 25,00,000 |
1 ರಿಂದ 5 | 1,500 | 15,00,000 |
7ನೇ ವೇತನ ಮ್ಯಾಟ್ರಿಕ್ಸ್ ಪಿಂಚಣಿ
- ನಾಗರಿಕ ಮತ್ತು ಸಿಎಪಿಎಫ್ ಸೇರಿದಂತೆ ಸೇನಾ ಸಿಬ್ಬಂದಿಗೆ ಪಿಂಚಣಿಗಳನ್ನು ಸಮಾನತೆ ಸಾಧಿಸುವುದಕ್ಕಾಗಿ ಪರಿಷ್ಕರಿಸಬೇಕು.
- ಹೊಂದಿಸಿದ ಪಿಂಚಣಿ ಲೆಕ್ಕ ಮಾಡುವ ವಿಧಾನವನ್ನು ಸಲಹೆ ಮಾಡಲಾಗಿದೆ.
- ಸ್ಲ್ಯಾಬ್ ಆಧರಿತ ಅಂಗವೈಕಲ್ಯ ಅಂಶವನ್ನು ಅಂಗವಿಕಲರ ಪಿಂಚಣಿ ಲೆಕ್ಕ ಮಾಡಲು ಸೂಚಿಸಲಾಗಿದೆ.
- ಕರ್ತವ್ಯದಲ್ಲಿದ್ದಾಗ ಸಾವನ್ನಪ್ಪಿದರೆ, ಉತ್ತರಾಧಿಕಾರಿಗಳಿಗೆ ಪರಿಹಾರದ ದರವನ್ನು ಪರಿಷ್ಕರಿಸಲಾಗುತ್ತದೆ.
- ಪರಿಹಾರ ತಾಂತ್ರಿಕತೆ ಅಭಿವೃದ್ಧಿಗೆ ಎನ್‌ಪಿಎಸ್ ಸುಧಾರಣೆಗೆ ಶಿಫಾರಸುಗಳನ್ನು ಮಾಡಲಾಗಿದೆ.
7ನೇ ವೇತನ ಮ್ಯಾಟ್ರಿಕ್ಸ್ ಗ್ರಾಚ್ಯುಟಿ
- ಗ್ರಾಚ್ಯುಟಿಯನ್ನು ರೂ. 20 ಲಕ್ಷಕ್ಕೆ ಏರಿಕೆ ಮಾಡಲಾಗಿದೆ.
- ತುಟ್ಟಿ ಭತ್ಯೆಯು 50% ಕ್ಕೆ ಏರಿಕೆಯಾದರೆ, ಗರಿಷ್ಠ ಗ್ರಾಚ್ಯುಟಿಯು 25% ಏರಿಕೆಯಾಗುತ್ತದೆ.
ಇದನ್ನೂ ನೋಡಿ: ಗ್ರಾಚ್ಯುಟಿ ಲೆಕ್ಕ ಮಾಡುವ ಎಲ್ಲ ವಿವರಗಳು
ಸೇನಾ ಸಿಬ್ಬಂದಿಗೆ 7ನೇ ವೇತನ ಆಯೋಗದ ವೇತನ ಸ್ಕೇಲ್
7ನೇ ವೇತನ ಆಯೋಗದ ಶಿಫಾರಸುಗಳ ಪ್ರಕಾರ, ಸೇವೆಯಲ್ಲಿರುವವರ ಪಾವತಿ ವಿಧಾನವು ರ್‍ಯಾಂಕ್, ಸ್ಥಳ, ಶಾಖೆ ಮತ್ತು ಅಧಿಕಾರಿಯ ಹುದ್ದೆಯನ್ನು ಅವಲಂಬಿಸಿರುತ್ತದೆ. ವಿವರವಾದ ವೇತನ ರಚನೆಯನ್ನು ಈ ಕೆಳಗಿನ ಕೋಷ್ಟಕದಲ್ಲಿ ತೋರಿಸಲಾಗಿದೆ:
ರೂಪುರೇಷೆ | ಮೊತ್ತ |
ಸೇನೆ ಸಿಬ್ಬಂದಿಗೆ ಕನಿಷ್ಠ ವೇತನ ಗ್ರೇಡ್ | ರೂ. 5,400 |
ವೇತನ ಗ್ರೇಡ್ | ರೂ. 15,600 |
ಸೇನೆ ಸೇವೆ ಪರಿಹಾರ | ರೂ. 6,000 |
ಮುನ್ನೆಚ್ಚರಿಕೆಯ ನಿರ್ವಹಣೆ | ರೂ. 500 |
7ನೇ ವೇತನ ಆಯೋಗ: ಕೇಂದ್ರ ಸರ್ಕಾರಿ ಸಿಬ್ಬಂದಿಗೆ ವೇತನ ಸ್ಕೇಲ್
ರೂಪುರೇಷೆ | ಮೊತ್ತ (ಪ್ರತಿ ತಿಂಗಳು) |
ವೇತನ ಸ್ಕೇಲ್ | ರೂ. 29,900 ಇಂದ 1,04,400 |
ಗ್ರೇಡ್ ವೇತನ | ರೂ. 5,400 ಇಂದ ರೂ. 16,200 |
ಸಂಭಾವನೆ | ಅರ್ಹತೆ | ಮೊತ್ತ |
ಕಡಿದಾದ ಪರ್ವತ ಪ್ರದೇಶದ ಭತ್ಯೆ | ಕಷ್ಟದ ಪ್ರದೇಶಗಳಲ್ಲಿ ನಿಯೋಜಿಸಿದ ಸಿಬ್ಬಂದಿಗೆ ಅನ್ವಯಿಸುತ್ತದೆ | ಒಟ್ಟು ಮಾಸಿಕ ಮೂಲ ವೇತನದ 25% ಅಥವಾ ರೂ. 6,750 |
ಸಲಕರಣೆ ಸರ್ವೀಸ್ ಭತ್ಯೆ | ಎಲ್ಲ ಅಧಿಕಾರಿಗಳಿಗೆ ಅನ್ವಯಿಸುತ್ತದೆ | ಪ್ರತಿ ತಿಂಗಳು ರೂ. 400 |
ಎತ್ತರ ಪ್ರದೇಶದಲ್ಲಿನ ಹವಾಮಾನ ಭತ್ಯೆ | ಎತ್ತರದ ಪ್ರದೇಶದಲ್ಲಿ ನಿಯೋಜಿತ ಅಧಿಕಾರಿಗಳಿಗೆ ಅನ್ವಯಿಸುತ್ತದೆ | ಮಾಸಿಕ ರೂ. 11,200 ಇಂದ ರೂ. 14,000 |
ಮನೆ ಬಾಡಿಗೆ ಭತ್ಯೆ | ಸರ್ಕಾರ ಒದಗಿಸಿದ ಮನೆಯನ್ನು ಬಳಸದ ಅಧಿಕಾರಿಗಳಿಗೆ ಅನ್ವಯಿಸುತ್ತದೆ | ಅಧಿಕಾರಿಯ ಮೂಲ ಸಂಬಳದ 10% ಇಂದ 30% |
ಸಿಯಾಚಿನ್ ಭತ್ಯೆ | ಸಿಯಾಚಿನ್ ಪ್ರದೇಶದಲ್ಲಿ ನಿಯೋಜಿಸಿದ ಸಿಬ್ಬಂದಿಗೆ ಅನ್ವಯಿಸುತ್ತದೆ | ಮಾಸಿಕ ರೂ. 11,200 ಇಂದ ರೂ. 14,000 |
ಸಾರಿಗೆ ಭತ್ಯೆ | ಎಲ್ಲ ಅಧಿಕಾರಿಗಳಿಗೆ ಅನ್ವಯಿಸುತ್ತದೆ | ಎ1 ನಗರಗಳು ಮತ್ತು ಪಟ್ಟಣಗಳಿಗೆ ರೂ. 3,200 ಮತ್ತು ಎಲ್ಲ ಇತರ ನಗರಗಳು ಮತ್ತು ಪಟ್ಟಣಗಳಿಗೆ ರೂ. 1,600 |
ಅತ್ಯಂತ ಸಕ್ರಿಯ ಕ್ಷೇತ್ರ ಭತ್ಯೆ | ತೀವ್ರ ಕ್ಷೇತ್ರದ ಚಟುವಟಿಕೆಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಅನ್ವಯಿಸುತ್ತದೆ | ಮಾಸಿಕ ರೂ, 6,780 ಇಂದ ರೂ. 4,200 |
ವಿಶೇಷ ಪಡೆಗಳ ಭತ್ಯೆ | ವಿಶೇಷ ಪಡೆಗಳ ಅಧಿಕಾರಿಗಳಿಗೆ ಅನ್ವಯಿಸುತ್ತದೆ | ಮಾಸಿಕ ರೂ, 9,000 |
ಪರಿವರ್ತಿಸಿದ ಕ್ಷೇತ್ರದ ಭತ್ಯೆ | ಪರಿವರ್ತಿಸಿದ ಕ್ಷೇತ್ರಗಳಲ್ಲಿ ನಿಯೋಜಿಸಿದ ಅಧಿಕಾರಿಗಳಿಗೆ ಅನ್ವಯಿಸುತ್ತದೆ | ಮಾಸಿಕ ರೂ, 1,600 |
ತುಟ್ಟಿ ಭತ್ಯೆ | ಸಾಮಾನ್ಯವಾಗಿ ಒಟ್ಟು ಪಾವತಿಯ 80% | |
ಹಾರಾಟ ಭತ್ಯೆ | ವೈಮಾನಿಕ ವಿಭಾಗದಲ್ಲಿನ ಅಧಿಕಾರಿಗಳಿಗಾಗಿ ವೆಚ್ಚ | |
ತಾಂತ್ರಿಕ ಭತ್ಯೆ | ತಾಂತ್ರಿಕ ವಿಭಾಗದ ಅಧಿಕಾರಿಗಳಿಗೆ ಪಾವತಿ ಮಾಡಲಾಗುತ್ತದೆ | ರೂ. 2,500 |
ಇದನ್ನೂ ನೋಡಿ: ಹಿರಿಯ ನಾಗರಿಕರ ಉಳಿತಾಯ ಸ್ಕೀಮ್ ಬಡ್ಡಿ ದರ ಮತ್ತು ಪ್ರಯೋಜನಗಳ ಬಗ್ಗೆ ಸಮಗ್ರ ವಿವರ
7ನೇ ವೇತನ ಆಯೋಗದ ವೇತನ ಮ್ಯಾಟ್ರಿಕ್ಸ್
ಪ್ರಸ್ತುತ ವೇತನ ಬ್ಯಾಂಡ್‌ಗಳು | ಪ್ರಸ್ತುತ ಗ್ರೇಡ್ ಪೇ ಮಟ್ಟ | ಇವರಿಗೆ ಅನ್ವಯಿಸುತ್ತದೆ | ಹೊಸ ಮಟ್ಟ |
ಪಿಬಿ-1 | 1800 | ಸಿವಿಲ್ | 1 |
1900 | ಸಿವಿಲ್ | 2 | |
2000 | ಸಿವಿಲ್, ರಕ್ಷಣೆ | 3 | |
2400 | ಸಿವಿಲ್ | 4 | |
2800 | ಸಿವಿಲ್, ರಕ್ಷಣೆ | 5 | |
PB-2 | 3400 | ರಕ್ಷಣೆ | 5A |
4200 | ಸಿವಿಲ್, ರಕ್ಷಣೆ | 6 | |
4600 | ಸಿವಿಲ್, ರಕ್ಷಣೆ | 7 | |
4800 | ಸಿವಿಲ್, ರಕ್ಷಣೆ | 8 | |
5400 | ಸಿವಿಲ್ | 9 | |
PB-3 | 5400 | ಸಿವಿಲ್, ರಕ್ಷಣೆ, ಸೇನೆ ನರ್ಸಿಂಗ್ ಸೇವೆ | 10 |
5700 | ಸೇನೆ ನರ್ಸಿಂಗ್ ಸೇವೆ | 10A | |
6100 | ರಕ್ಷಣೆ | 10B | |
6100 | ಸೇನೆ ನರ್ಸಿಂಗ್ ಸೇವೆ | 10B | |
6600 | ಸಿವಿಲ್, ರಕ್ಷಣೆ, ಸೇನೆ ನರ್ಸಿಂಗ್ ಸೇವೆ | 11 | |
7600 | ಸಿವಿಲ್ | 12 | |
PB-4 | 7600 | ಸೇನೆ ನರ್ಸಿಂಗ್ ಸೇವೆ | 12 |
8000 | ರಕ್ಷಣೆ | 12A | |
8400 | ಸೇನೆ ನರ್ಸಿಂಗ್ ಸೇವೆ | 12B | |
8700 | ಸಿವಿಲ್ | 13 | |
8700 | ರಕ್ಷಣೆ | 13 | |
8900 | ಸಿವಿಲ್ | 13A | |
8900 | ರಕ್ಷಣೆ | 13A | |
9000 | ಸೇನೆ ನರ್ಸಿಂಗ್ ಸೇವೆ | 13B | |
10000 | 14 | ||
ಎಚ್‌ಎಜಿ | 15 | ||
ಎಚ್‌ಎಜಿ+ | 16 | ||
ಅಪೆಕ್ಸ್ | 17 | ||
ಸಂಪುಟ ಕಾರ್ಯದರ್ಶಿ, ರಕ್ಷಣೆ ಮುಖ್ಯಸ್ಥರು | 18 |
ಈ ಮೇಲೆ ಪಟ್ಟಿ ಮಾಡಿದ ಬಹುತೇಕ ಎಲ್ಲ ಮಾನದಂಡವನ್ನು ಇತ್ತೀಚಿನ 7ನೇ ವೇತನ ಆಯೋಗದ ಪಾವತಿ ಮಾನದಂಡದಲ್ಲಿ ಸೇರಿಸಲಾಗಿದೆ. ವೇತನ ಸ್ಕೇಲ್‌ಗಳನ್ನು ಪ್ರಮಾಣೀಕರಿಸಲಾಗಿದೆ ಮತ್ತು ಹಂತಗಳನ್ನು ಕಡಿಮೆ ಮಾಡಲಾಗಿದೆ. ಅವರ ವೃತ್ತಿ ಜೀವನದಲ್ಲಿ ಪ್ರಸ್ತುತ ಸ್ಥಿತಿಗತಿ ಮತ್ತು ಪ್ರಗತಿ ಸಾಧ್ಯತೆಗಳನ್ನು ವಿಶ್ಲೇಷಿಸಲು, ಸರ್ಕಾರಿ ವೆಬ್‌ಸೈಟ್‌ನಲ್ಲಿ ತಮ್ಮ ಪ್ರಸ್ತುತ ವೇತನದ ಮಟ್ಟವನ್ನು ಸರ್ಕಾರಿ ಸಿಬ್ಬಂದಿ ಪರಿಶೀಲಿಸಿಕೊಳ್ಳಬಹುದು. ಇದರ ಜೊತೆಗೆ, ಪಿಂಚಣಿ ಲೆಕ್ಕ ಮಾಡುವ ಕ್ರಮಗಳನ್ನೂ ಸರಳಗೊಳಿಸಲಾಗಿದೆ.
ಏಳನೇ ವೇತನ ಆಯೋಗದ ಇತ್ತೀಚಿನ ಅಪ್‌ಡೇಟ್‌ಗಳು
ಕೇಂದ್ರ ಸರ್ಕಾರ ಮಾರ್ಚ್ 2022 ರಲ್ಲಿ ತನ್ನ ಉದ್ಯೋಗಿಗಳ ತುಟ್ಟಿ ಭತ್ಯೆಯನ್ನು (ಡಿಎ) 3% ಏರಿಕೆ ಮಾಡಿದ್ದು, 2022 ಜನವರಿ 1 ರಿಂದ ಜಾರಿಗೆ ಬರುವಂತೆ 31% ಇಂದ 34% ಕ್ಕೆ ಏರಿಕೆಯಾಗಿದೆ. ಡಿಎ ಏರಿಕೆಯನ್ನು ಮೂಲ ವೇತನದ ಶೇಕಡಾವಾರು ಆಗಿ ಲೆಕ್ಕ ಮಾಡಲಾಗಿದ್ದು, ಇದರಿಂದ 68.62 ಲಕ್ಷ ಪಿಂಚಣಿದಾರರು ಮತ್ತು 47.68 ಲಕ್ಷ ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಪ್ರಯೋಜನ ನೀಡಲಿದೆ.