ಕಾರ್ಪೆಟ್ ಪ್ರದೇಶ, ನಿರ್ಮಿಸಿದ ಪ್ರದೇಶ ಮತ್ತು ಮೀರಿದ ನಿರ್ಮಿಸಿದ ಪ್ರದೇಶ ಎಂದರೇನು?


ಇದನ್ನು ಒಪ್ಪಿಕೊಳ್ಳೋಣ – ಏಜೆಂಟ್ಸ್ ಮತ್ತು ರಿಯಾಲ್ಟರ್ಗಳಿಂದ ನಮಗೆ ಹೇಳಿದ ಪದಗಳು ಮತ್ತು ಪರಿಭಾಷೆಗಳು ಹೆಚ್ಚಿನ ಸಮಯ ನಮಗೆ ತಿಳಿಯುವುದಿಲ್ಲ. ಮನೆ ಖರೀದಿಸುವಾಗ, ಕಾರ್ಪೆಟ್ ಪ್ರದೇಶ, ನಿರ್ಮಿಸಿದ ಪ್ರದೇಶ ಮತ್ತು ಮೀರಿದ ನಿರ್ಮಿಸಿದ ಪ್ರದೇಶದಂತಹ ಪದಗಳು ಹೆಚ್ಚಾಗಿ ನಮಗೆ ಅರ್ಥವಾಗುವುದಿಲ್ಲ, ಅಥವಾ ಅವು ಒಂದು ತರಹದ ಗೊಂದಲವನ್ನುಂಟು ಮಾಡುತ್ತವೆ. ಪ್ರತಿಯೊಂದು ವಸತಿ ಸಂಕೀರ್ಣದಲ್ಲಿ, ಪ್ರದೇಶ ಅಥವಾ ಚದರ ತುಣುಕನ್ನು ಲೆಕ್ಕಹಾಕಲು ಮೂರು ವಿಧಗಳಿವೆ. ಅವೆಲ್ಲ ತುಂಬಾ ವಿಭಿನ್ನ ಎನಿಸದಿದ್ದರೂ, ವಾಸ್ತವದಲ್ಲಿ ಕಾರ್ಪೆಟ್ ಪ್ರದೇಶ ಮತ್ತು ನಿರ್ಮಿಸಿದ ಪ್ರದೇಶದಲ್ಲಿ ತುಂಬಾ ವ್ಯತ್ಯಾಸವಿದೆ!

ನಿಮಗೆ ಪ್ರತಿಯೊಂದರ ಅರ್ಥ ಏನೆಂದು ತಿಳಿಯದ ಸಂಗತಿಯು ಡೆವೆಲಪರ್ ರಿಗೆ ನಿಮಗೆ ಮೋಸಮಾಡುವ ಅವಕಾಶ ಕೊಡುತ್ತದೆ. ಅಂತೆಯೇ, ಅದು ತಿಳಿದುಕೊಳ್ಳಲಾಗದಂತಹ ಸಂಗತಿ ಏನಲ್ಲ. ಸ್ವಲ್ಪ ಓದಿದರೆ ನೀವು ಪದಗಳನ್ನು ಸಾಕಷ್ಟು ಸಂಪೂರ್ಣವಾಗಿ ತಿಳಿಯಬಹುದು. ರಿಯಲ್ ಎಸ್ಟೇಟ್ ಬಗ್ಗೆ ನೀವು ತಿಳಿದಿರಬೇಕಾದಂತಹ ಕೆಲವು ಮೂಲಭೂತ ಸಂಗತಿಗಳು ಇಲ್ಲಿವೆ.

 

ಕಾರ್ಪೆಟ್ ಪ್ರದೇಶ

ಕಾರ್ಪೆಟ್ ಪ್ರದೇಶ ಎಂದರೆ ಕಾರ್ಪೆಟ್ ನಿಂದ ವಾಸ್ತವವಾಗಿ ಆವರಿಸಬಹುದಾದ ಪ್ರದೇಶ, ಅಥವಾ ಆಂತರಿಕ ಗೋಡೆಗಳ ದಪ್ಪವನ್ನು ಹೊರತುಪಡಿಸಿ ಅಪಾರ್ಟ್ಮೆಂಟ್ ನ ಪ್ರದೇಶ. ಕಾರ್ಪೆಟ್ ಪ್ರದೇಶ ಪ್ರವೇಶಾಂಗಣ, ಲಿಫ್ಟ್, ಮೆಟ್ಟಿಲು, ಆಟವಾಡುವ ಪ್ರದೇಶ, ಮುಂತಾದ ಜಾಗಗಳನ್ನು ಒಳಗೊಳ್ಳುವುದಿಲ್ಲ. ಕಾರ್ಪೆಟ್ ಪ್ರದೇಶ ಎಂದರೆ ಒಂದು ವಸತಿ ಘಟಕದಲ್ಲಿ ನಿಮಗೆ ಉಪಯೋಗಕ್ಕೆ ಬರುವ ವಾಸ್ತವಿಕ ಪ್ರದೇಶ. ನೀವು ಮನೆಯನ್ನು ಹುಡುಕುವಾಗ, ಕಾರ್ಪೆಟ್ ಪ್ರದೇಶವನ್ನು ತಿಳಿದ ನಂತರ ನಿರ್ಧಾರ ಮಾಡಿ, ಏಕೆಂದರೆ ಆ ಸಂಖ್ಯೆಯು ನಿಮಗೆ ನಿಜವಾಗಿಯೂ ಉಪಯೋಗಕ್ಕೆ ಬರುವಂತಹ ಜಾಗದ ಬಗ್ಗೆ ಕಲ್ಪನೆ ನೀಡುತ್ತದೆ. ಕಾರ್ಪೆಟ್ ಪ್ರದೇಶದ ಮೇಲೆ ಕೇಂದ್ರೀಕರಿಸುವುದರಿಂದ ನಿಮಗೆ ಅಡಿಗೆ ಮನೆ, ಬೆಡ್ರೂಮ್(ಮಲಗುವ ಕೋಣೆ, ನಡುಮನೆ(ಲಿವಿಂಗ್ ರೂಮ್), ಮುಂತಾದವುಗಳಲ್ಲಿ ಉಪಯೋಗಕ್ಕೆ ಬರುವ ಜಾಗದ ಬಗ್ಗೆ ತಿಳಿಯುತ್ತದೆ. ಇತ್ತೀಚಿನ ದಿನಗಳಲ್ಲಿ, ತುಂಬಾ ಬಿಲ್ಡರ್ ಗಳು ಮೊದಲು ಕಾರ್ಪೆಟ್ ಪ್ರದೇಶವನ್ನು ಹೇಳುವುದೂ ಇಲ್ಲ, ಮತ್ತು ನಿರ್ಮಿಸಿದ ಪ್ರದೇಶ ಮತ್ತು ಮೀರಿದ ನಿರ್ಮಿಸಿದ ಪ್ರದೇಶದ ಪ್ರಕಾರ ಶುಲ್ಕ ಹಾಕುತ್ತಾರೆ. ಕಾರ್ಪೆಟ್ ಪ್ರದೇಶವು ನಿರ್ಮಿಸಿದ ಪ್ರದೇಶದ ಸುಮಾರು 70% ಇರುತ್ತದೆ.

rp_basic1-467x260.png

ನಿರ್ಮಿಸಿದ ಪ್ರದೇಶ

ಕಾರ್ಪೆಟ್ ಪ್ರದೇಶ ಮತ್ತು ಗೋಡೆಯ ಪ್ರದೇಶವನ್ನು ಕೂಡಿಸಿದಾಗ ಸಿಗುವುದು ನಿರ್ಮಿಸಿದ ಪ್ರದೇಶ. ಈಗ, ಗೋಡೆ ಎಂದರೆ ಅದರ ಮೇಲ್ಮೈ ಪ್ರದೇಶವಲ್ಲ, ಆದರೆ ಒಂದು ಘಟಕದ ಒಳ ಗೋಡೆಗಳ ದಪ್ಪ. ಗೋಡೆಗಳನ್ನು ಒಳಗೊಂಡಿರುವ ಪ್ರದೇಶ, ನಿರ್ಮಿಸಿದ ಪ್ರದೇಶದ 20% ಇರುತ್ತದೆ ಮತ್ತು ಮುನ್ನೋಟ ಸಂಪೂರ್ಣವಾಗಿ ಬದಲಿಸುತ್ತದೆ. ಅಧಿಕಾರಿಗಳು ಕಡ್ಡಾಯವಾಗಿಸಿದಂತೆ ನಿರ್ಮಿಸಿದ ಪ್ರದೇಶವು ಒಣ ಬಾಲ್ಕನಿ, ಹೂವಿನ ಹಾಸಿಗೆಗಳು, ಮುಂತಾದವುಗಳನ್ನು ಒಳಗೊಂಡಿರುತ್ತದೆ, ಅದು ನಿರ್ಮಿಸಿದ ಪ್ರದೇಶದ 10% ಕ್ಕೆ ಸೇರುತ್ತದೆ. ಹಾಗೆ ನೀವು ಅದರ ಬಗ್ಗೆ ಯೋಚಿಸಿದರೆ, ಉಪಯೋಗಿಸ ತಕ್ಕ ಪ್ರದೇಶವು ನಿರ್ಮಿಸಿದ ಪ್ರದೇಶದ 70% ಮಾತ್ರ ಇರುತ್ತದೆ. ಅದಕ್ಕೆ, ನಿರ್ಮಿಸಿದ ಪ್ರದೇಶದ ವಿಸ್ತೀರ್ಣ 1200 ಸ್ಕ್ವೇರ್ ಫೀಟ್ ಎಂದಿದ್ದರೆ, ಅದರಲ್ಲಿ ಸುಮಾರು 30% (360 ಸ್ಕ್ವೇರ್ ಫೀಟ್) ಪ್ರದೇಶವು ಉಪಯೋಗಕ್ಕೆ ಬರುವುದಿಲ್ಲ, ಮತ್ತು ನೀವು ಉಳಿದಿರುವ 840 ಸ್ಕ್ವೇರ್ ಫೀಟ್ ಮಾತ್ರ ಉಪಯೋಗಿಸಬಹುದು.

 

ಮೀರಿದ ನಿರ್ಮಿಸಿದ ಪ್ರದೇಶ

ಮೀರಿದ ನಿರ್ಮಿಸಿದ ಪ್ರದೇಶ ಒಬ್ಬ ಬಿಲ್ಡರ್ ನ ಅತ್ಯುತ್ತಮ ಗೆಳೆಯನಂತಿದೆ! ನಿರ್ಮಿಸಿದ ಪ್ರದೇಶ ಮತ್ತು ಮೊಗಸಾಲೆ, ಲಿಫ್ಟ್ ಪಡಸಾಲೆ, ಲಿಫ್ಟ್ ಮುಂತಾದವುಗಳನ್ನೊಳಗೊಂಡ ಸಾಮಾನ್ಯ ಪ್ರದೇಶವನ್ನು ಕೂಡಿಸಿ ಈ ಪ್ರದೇಶವನ್ನು ಲೆಕ್ಕಹಾಕಲಾಗುತ್ತದೆ. ಕೆಲವು ಸಂದರ್ಭಗಳಲ್ಲಿ,  ಬಿಲ್ಡರ್ ಗಳು ಈಜುಕೊಳ, ಉದ್ಯಾನ ಮತ್ತು ಕ್ಲಬ್ ಹೌಸ್ ನಂತಹ ಸೌಲಭ್ಯಗಳನ್ನು ಸಾಮಾನ್ಯ ಪ್ರದೇಶದಲ್ಲೇ ಸೇರಿಸುತ್ತಾರೆ. ಒಬ್ಬ ಡೆವೆಲಪರ್/ ಬಿಲ್ಡರ್ ಮೀರಿದ ನಿರ್ಮಿಸಿದ ಪ್ರದೇಶದ ಮೇಲೆ ನಿಮಗೆ ಶುಲ್ಕ ವಿಧಿಸುತ್ತಾರೆ, ಅದಕ್ಕಾಗಿಯೇ ಅದನ್ನು ‘ಸೇಲೇಬಲ್’ ಪ್ರದೇಶ ಎಂದು ಕೂಡ ಕರೆಯುತ್ತಾರೆ.

Real Estate Basics Part 1 – Carpet Area, Built-Up Area & Super Built-Up Area

ಈಗ ನಾವು ಈ ಪ್ರಕರಣವನ್ನು ಪರಿಗಣಿಸೋಣ – ಬೆಲೆಯು ರೂ. 2,000 ಪ್ರತಿ ಸ್ಕ್ವೇರ್ ಫುಟ್ ಮತ್ತು ಮೀರಿದ ನಿರ್ಮಿಸಿದ ಪ್ರದೇಶದ ವಿಸ್ತೀರ್ಣ 1,200 ಸ್ಕ್ವೇರ್ ಫೀಟ್ ಇದೆ, ನಂತರ ಮೂಲ ವೆಚ್ಚವು 24 ಲಕ್ಷಕ್ಕೆ ಬರುತ್ತದೆ.

ಒಂದು ಮಹಡಿಯಲ್ಲಿ ಒಂದಕ್ಕಿಂತ ಹೆಚ್ಚು ಅಪಾರ್ಟ್ಮೆಂಟ್ ಇದ್ದಾಗ, ಮೀರಿದ ನಿರ್ಮಿಸಿದ ಪ್ರದೇಶವನ್ನು ಬೇರೆ ರೀತಿಯಲ್ಲಿ ಲೆಕ್ಕ ಹಾಕಲಾಗುತ್ತದೆ. ಇದನ್ನು ಇದೇ ರೀತಿ ಊಹಿಸೋಣ.

— ಅಪಾರ್ಟ್ಮೆಂಟ್ 1 ರ ವಿಸ್ತೀರ್ಣ 1000 ಸ್ಕ್ವೇರ್ ಫೀಟ್ ಇದೆ

— ಅಪಾರ್ಟ್ಮೆಂಟ್ 2 ರ ವಿಸ್ತೀರ್ಣ 2000 ಸ್ಕ್ವೇರ್ ಫೀಟ್ ಇದೆ

— ಒಟ್ಟು ಸಾಮಾನ್ಯ ಪ್ರದೇಶದ ವಿಸ್ತೀರ್ಣ 1500 ಸ್ಕ್ವೇರ್ ಫೀಟ್ ಇದೆ, ಅದರಲ್ಲಿ ಅಪಾರ್ಟ್ಮೆಂಟ್ 1 ರ ಸಾಮಾನ್ಯ ಪ್ರದೇಶದ ವಿಸ್ತೀರ್ಣ 500 ಸ್ಕ್. ಫೀಟ್ ಇದೆ ಹಾಗೆಯೇ ಅಪಾರ್ಟ್ಮೆಂಟ್ 2 ರ ಸಾಮಾನ್ಯ ಪ್ರದೇಶದ ವಿಸ್ತೀರ್ಣ 1,000 ಸ್ಕ್. ಫೀಟ್ ಇದೆ.

ಆಗ ಅಪಾರ್ಟ್ಮೆಂಟ್ 1 ರ ಮೀರಿದ ನಿರ್ಮಿಸಿದ ಪ್ರದೇಶದ ವಿಸ್ತೀರ್ಣ 1,500 ಸ್ಕ್ವೇರ್ ಫೀಟ್ ಮತ್ತು ಅಪಾರ್ಟ್ಮೆಂಟ್ 2 ರ ಮೀರಿದ ನಿರ್ಮಿಸಿದ ಪ್ರದೇಶದ ವಿಸ್ತೀರ್ಣ 1,000 ಸ್ಕ್ವೇರ್ ಫೀಟ್ ಇರುತ್ತದೆ. ಈ ಉದಾಹರಣೆಯಲ್ಲಿ ನೋಡಿದಂತೆ, ಮೀರಿದ ನಿರ್ಮಿಸಿದ ಪ್ರದೇಶವನ್ನು ಅಪಾರ್ಟ್ಮೆಂಟ್ ನ  ನಿರ್ಮಿತ ಪ್ರದೇಶಗಳ ಅನುಪಾತದಲ್ಲಿ ವಿಭಾಗಿಸಲಾಗಿದೆ (ಈ ಸಂದರ್ಭದಲ್ಲಿ 1: 2).

Real Estate Basics Part 1 – Carpet Area, Built-Up Area & Super Built-Up Area

ಬಿಲ್ಡರ್ಸ್ ಮತ್ತು ಡೆವಲಪರ್ಸ್ ಹೆಚ್ಚಾಗಿ ತಮ್ಮ ಅಪಾರ್ಟ್ಮೆಂಟ್ ಗಳನ್ನು ಮೀರಿದ ನಿರ್ಮಿಸಿದ ಪ್ರದೇಶ ಅಥವಾ ‘ಸೇಲೇಬಲ್’ ಪ್ರದೇಶದ ಆಧಾರಾದ ಮೇಲೆ ಬೆಲೆ ಕಟ್ಟುತ್ತಾರೆ ಎಂಬ ಸತ್ಯವನ್ನು ಪರಿಗಣಿಸಿದಾಗ, ಕಾರ್ಪೆಟ್ ಪ್ರದೇಶ ಮತ್ತು ನಿರ್ಮಿಸಿದ ಪ್ರದೇಶದ ಮೂಲಭೂತ ವ್ಯತ್ಯಾಸ ಮತ್ತು ಬೇರೆ ಪದಗಳ ಅರ್ಥಗಳ ಅರಿವಿಲ್ಲದವರಿಗೆ ಕುರುಡಾದಂತೆ ಭಾಸವಾಗುತ್ತದೆ. ಹೆಚ್ಚಾಗಿ ನಿಜವಾದ ಉಪಯೋಗಿಸಬಹುದಾದ ಪ್ರದೇಶ, ಮೀರಿದ ನಿರ್ಮಿಸಿದ ಪ್ರದೇಶಕ್ಕಿಂತ ತುಂಬಾ ಕಡಿಮೆ ಇರುತ್ತದೆ. ಕೆಲವು ಬಿಲ್ಡರ್ಸ್ ನಿಮಗೆ ಶುಲ್ಕ ವಿಧಿಸುವಾಗ ಕಾರ್ಪೆಟ್ ಪ್ರದೇಶವನ್ನು ಲೆಕ್ಕಕ್ಕೆ ತೆಗೆದುಕೊಳ್ಳುತ್ತಾರೆ, ಆದರೆ ಇದು ಅತಿ ವಿರಳವಾದ ಪ್ರಕರಣಗಳಲ್ಲಿ ಮಾತ್ರ. 90% ಡೆವಲಪರ್ಸ್ ಮೂಲ ವೆಚ್ಚವನ್ನು ಮೀರಿದ ನಿರ್ಮಿಸಿದ ಪ್ರದೇಶದ ಮೇಲೆ ಲೆಕ್ಕಹಾಕುತ್ತಾರೆ; ಸೌಕರ್ಯಗಳು ಹೆಚ್ಚಾದಂತೆ ಮೀರಿದ ನಿರ್ಮಿಸಿದ ಪ್ರದೇಶವೂ ಹೆಚ್ಚಾಗುತ್ತದೆ.

ರಿಯಲ್ ಎಸ್ಟೇಟ್ ಜಟಿಲವಾಗಿರಬಹುದು, ಮತ್ತು ನೀವು ನಿಯಮಗಳು ಮತ್ತು ಆಚರಣೆಗಳನ್ನು ಬದಲಾಯಿಸಲಾಗುವುದಿಲ್ಲ, ಆದರೆ ಚದರ ತುಣುಕನ್ನು ಕಂಡುಹಿಡಿಯುವ ವಿವಿಧ ರೀತಿಯ ಲೆಕ್ಕಾಚಾರಗಳ ಬಗ್ಗೆ ತಿಳಿದುಕೊಂಡಾಗ ನೀವು ಖಚಿತವಾಗಿ ಮಾಹಿತಿಯುಕ್ತ ನಿರ್ಧಾರವನ್ನು ಮಾಡಬಹುದು, ಒಂದು ಪ್ರಮುಖ ಆದರೆ ವಾಸ್ತವವಾಗಿ ಸರಳ ಕೆಲಸ!

ನಿರ್ಣಯಗಳನ್ನು ಮಾಡಲು ನಿಮಗೆ ಸುಲಭವಾಗುವಂತೆ ಮಾಡಲು, ನೆಲದ ವಿಸ್ತೀರ್ಣಗಳು ಮತ್ತು ಬೆಲೆಗಳನ್ನು ಹೇಗೆ ಲೆಕ್ಕಾಚಾರ ಮಾಡಲಾಗುತ್ತದೆ ಎಂದು ನಿಮ್ಮ ಗೊಂದಲವನ್ನು ಇದು ದೂರ ಮಾಡುತ್ತದೆ, ಎಂದು ಭಾವಿಸುತ್ತೇವೆ. ಇನ್ನೂ ಹೆಚ್ಚು ಪ್ರಶ್ನೆಗಳಿವೆಯೇ? ಕೆಳಗೆ ನಮಗೆ ಕೇಳಿ!

ಇಲ್ಲಿದೆ ರಿಯಲ್ ಎಸ್ಟೇಟ್ ಬೇಸಿಕ್ಸ್ ಭಾಗ ೨, ಎಲ್ಲಿ ನಾವು ಓಎಸ್ಆರ್, ಎಫ್ ಎಸ್ ಆಯ್, ಲೋಡ್ ಮತ್ತು ನಿರ್ಮಾಣ ಹಂತಗಳ ಬಗ್ಗೆ ಮಾತನಾಡುತ್ತೇವೆ. 

 

Was this article useful?
  • 😃 (0)
  • 😐 (0)
  • 😔 (0)

[fbcomments]