ಗ್ರಾಮೀಣ ಪ್ರದೇಶಗಳ ಭೂ ಮಾಲೀಕತ್ವ ದಾಖಲೆಗಳನ್ನು ಆನ್‌ಲೈನ್‌ನಲ್ಲಿ ಲಭ್ಯವಾಗಿಸಲು, ಕರ್ನಾಟಕ ಸರ್ಕಾರವು ಇ-ಸ್ವತ್ತು ಪ್ಲಾಟ್‌ಫಾರಂ ಅನ್ನು ರೂಪಿಸಿದೆ. ಇದು ಭೂಮಿ ಮತ್ತು ಪ್ರಾಪರ್ಟಿಗಳಿಗೆ ಸಂಬಂಧಿಸಿದ ಮೋಸ ಮತ್ತು ಫೋರ್ಜರಿಗಳನ್ನು ಕಡಿಮೆ ಮಾಡುವ ಉದ್ದೇಶದಿಂದ ಪ್ರಾಪರ್ಟಿ ವಿವರಗಳು ಮತ್ತು ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸುತ್ತದೆ. ಅನಧಿಕೃತ ಲೇಔಟ್‌ಗಳ ನೋಂದಣಿಗಳನ್ನೂ ಈ ಪೋರ್ಟಲ್ ನಿಯಂತ್ರಿಸುತ್ತದೆ.
ಇ–ಸ್ವತ್ತು ಪಾತ್ರ
ಪ್ರತಿ ಗ್ರಾಮ ಪಂಚಾಯಿತ ವ್ಯಾಪ್ತಿಯಲ್ಲಿನ ಪ್ರಾಪರ್ಟಿಗಳ ಭೌತಿಕ ವಿವರಗಳು ಮತ್ತು ಮಾಲೀಕತ್ವ ದಾಖಲೆಗಳನ್ನು ನಿರ್ವಹಿಸುವುದು ಇ ಸ್ವತ್ತು ಕರ್ನಾಟಕದ ಮುಖ್ಯ ಉದ್ದೇಶವಾಗಿದೆ. ಆನುವಂಶೀಯತೆ, ಮಾಲೀಕತ್ವ ವರ್ಗಾವಣೆ ಅಥವಾ ಪ್ರಾಪರ್ಟಿ ಉಡುಗೊರೆ, ಸರ್ಕಾರಿ ಪ್ರಾಜೆಕ್ಟ್‌ಗಳಿಗೆ ಭೂಮಿ ಸ್ವಾಧೀನ, ಕೋರ್ಟ್ ಪ್ರಕರಣಗಳು, ನಿರ್ಬಂಧಗಳು, ಬಾಧ್ಯತೆಗಳು ಇದ್ದಲ್ಲಿ ವಿವರಗಳನ್ನು ಅಪ್‌ಡೇಟ್ ಮಾಡುವುದನ್ನೂ ಕೂಡ ಇ-ಸ್ವತ್ತು ಪ್ಲಾಟ್‌ಫಾರಂನಲ್ಲಿ ಮಾಡಬಹುದು. ಈ ಪೋರ್ಟಲ್ ಮೂಲಕ, ಮೋಸವನ್ನು ತಡೆಯಲು ಮತ್ತು ದಾಖಲೆಗಳನ್ನು ನಿರ್ವಹಿಸಲು ಗ್ರಾಮ ಪಂಚಾಯಿತಿ, ಕೋರ್ಟ್‌ಗಳು ಮತ್ತು ಪಟ್ಟಣ ಪ್ಲಾನಿಂಗ್ ಕಚೇರಿಗಳು ಮತ್ತು ಇತರ ಸಂಬಂಧಿಸಿದ ಸರ್ಕಾರಿ ವಿಭಾಗಗಳ ಜೊತೆಗೆ ಪ್ರಾಪರ್ಟಿ ವಿವರಗಳನ್ನು ಪ್ರಾಪರ್ಟಿ ಮಾಲೀಕರು ಹಂಚಿಕೊಳ್ಳಬಹುದು.
ಇದನ್ನೂ ಓದಿ: ಖಸ್ರಾ ಖತೌನಿ ಅನ್ನು ಆನ್‌ಲೈನ್‌ನಲ್ಲಿ ಚೆಕ್ ಮಾಡುವುದು ಹೇಗೆ ಎಂಬ ಬಗ್ಗೆ ವಿವರಗಳು
ಇ–ಸ್ವತ್ತಿನಲ್ಲಿ ಲಭ್ಯವಿರುವ ದಾಖಲೆಗಳು
ಇ-ಸ್ವತ್ತಿನಲ್ಲಿ ಎರಡು ದಾಖಲೆಗಳು ಸಿಗುತ್ತವೆ:
- ಫಾರ್ಮ್ 9
- ಫಾರ್ಮ್ 11
ಇ–ಸ್ವತ್ತು: ಫಾರ್ಮ್ 9 ಎಂದರೇನು?
ಫಾರ್ಮ್ 9 ಅನ್ನು ಎ ಖಾತಾ ದಾಖಲೆ ಎಂದೂ ಹೇಳಲಾಗುತ್ತದೆ. ಇದನ್ನು ಗ್ರಾಮ ಪಂಚಾಯಿತಿ ರಚಿಸುತ್ತದೆ. ಅದರಲ್ಲೂ ವಿಶೇಷವಾಗಿ ತಮ್ಮ ವ್ಯಾಪ್ತಿಯಲ್ಲಿನ ಕೃಷಿಯೇತರ ಪ್ರಾಪರ್ಟಿಗಳನ್ನು ಇದರ ಅಡಿಯಲ್ಲಿ ದಾಖಲಿಸಲಾಗುತ್ತದೆ. ಗ್ರಾಮ ಪಂಚಾಯಿತಿಯು ಫಾರ್ಮ್ 9 ನೀಡಲು, ಪ್ರಾಪರ್ಟಿ ಈ ಕೆಳಗಿನ ಅಂಶಗಳನ್ನು ಹೊಂದಿರಬೇಕು:
- ಕರ್ನಾಟಕ ಭೂ ಕಂದಾಯ ಕಾಯ್ದೆ 1964 ರ ಪ್ರಕಾರ ಸಂಬಂಧಿಸಿದ ಕಂದಾಯ ಇಲಾಖೆ ಕಚೇರಿಯಿಂದ ಕೃಷಿಯೇತರ ಸ್ವತ್ತು ಎಂದು ಕಾನೂನಾತ್ಮಕವಾಗಿ ವರ್ಗಾವಣೆ ಮಾಡಿರಬೇಕು
- ಸಂಬಂಧಿಸಿದ ಸರ್ಕಾರಿ ಇಲಾಖೆಯಿಂದ ಪಟ್ಟಣ ಮತ್ತು ನಗರ ಯೋಜನೆ ಕಾಯ್ದೆ ಅಡಿಯಲ್ಲಿ ಯೋಜನೆಗಳಿಗೆ ಮಂಜೂರಾತಿ ಮತ್ತು ಅನುಮೋದನೆಗಳನ್ನು ಇದು ಹೊಂದಿರಬೇಕು.
- ಇದನ್ನು ತಹಸೀಲ್ದಾರರು ಪರಿಶೀಲಿಸಿರಬೇಕು ಮತ್ತು ಅದರ ಸ್ಥಳವನ್ನು ಸ್ಕೆಚ್ ಮೂಲಕ ಗ್ರಾಮದ ಗ್ರಾಮಠಾಣಾ ವ್ಯಾಪ್ತಿಯಲ್ಲಿದೆ ಎಂಬುದನ್ನು ಖಚಿತಪಡಿಸಬೇಕು.
- ಬಸವ, ಅಂಬೇಡ್ಕರ್ ಮತ್ತು ಇಂದಿರಾ ಆವಾಸ್ ಯೋಜನೆಯಂತಹ ಸರ್ಕಾರಿ ವಸತಿ ಯೋಜನೆಗಳ ಫಲಾನುಭವಿಗಳಿಗೆ ಇದನ್ನು ನೀಡಿರಬೇಕು.
ಇದನ್ನೂ ಓದಿ: ಬಸವ ಜಯಂತಿ ಯೋಜನೆ ಬಗ್ಗೆ ನೀವು ತಿಳಿದಿರಬೇಕಾದ ಎಲ್ಲ ಮಾಹಿತಿ
ಇ–ಸ್ವತ್ತು: ಫಾರ್ಮ್ 9 ಗೆ ಅಗತ್ಯವಿರುವ ದಾಖಲೆಗಳು
ಸನ್ನಿವೇಶ | ಅಗತ್ಯ ದಾಖಲೆಗಳು |
ಪ್ರಾಪರ್ಟಿಯು ಗ್ರಾಮಠಾಣಾ ವ್ಯಾಪ್ತಿಯಲ್ಲಿದ್ದರೆ | ಸಮೀಕ್ಷೆ ಮಾಡಿದ ಪ್ರಾಪರ್ಟಿ ಸರ್ಟಿಫಿಕೇಟ್ ಹಾಗೂ ತಹಸೀಲ್ದಾರರಿಂದ ಪ್ರಮಾಣೀಕರಿಸಿದ ಗ್ರಾಮಠಾಣಾ ನಕಾಶೆ |
ಪ್ರಾಪರ್ಟಿಯು ಪರಿವರ್ತಿಸಿದ ಸ್ವತ್ತಾಗಿದ್ದರೆ |
|
ಸರ್ಕಾರಿ ವಸತಿ ಸ್ಕೀಮ್ ಅಡಿಯಲ್ಲಿ ಪ್ರಾಪರ್ಟಿಯನ್ನು ಮಂಜೂರು ಮಾಡಿದ್ದರೆ | ಸಂಬಂಧಿಸಿದ ಪ್ರಾಧಿಕಾರವು ನೀಡಿದ ಹಕ್ಕು ಪತ್ರ ಮತ್ತು ಮಂಜೂರಾತಿ ಆದೇಶ |
ಈ ಮೂರೂ ವಿಭಾಗಗಳಿಗೆ ಕಡ್ಡಾಯ ದಾಖಲೆಗಳು | ಅರ್ಜಿದಾರರ ಫೋಟೋ ಮತ್ತು ಗುರುತು ಮತ್ತು ವಿಳಾಸ ದಾಖಲೆ. ಉದಾ., ರೇಶನ್ ಕಾರ್ಡ್, ಪ್ಯಾನ್ ಕಾರ್ಡ್, ಪಾಸ್‌ಪೋರ್ಟ್ ಅಥವಾ ಆಧಾರ್ ಕಾರ್ಡ್ |
ಫಾರ್ಮ್ 9 ಪಡೆಯಲು ಪ್ರಾಪರ್ಟಿ ಮಾಲೀಕರು ಗ್ರಾಮ ಪಂಚಾಯಿತಿಗೆ ಒಂದು ಅರ್ಜಿ ಹಾಕಬೇಕು. ಇದಕ್ಕಾಗಿ ಈ ಮೇಲೆ ಅಗತ್ಯವಿರುವ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ.
ಇ–ಸ್ವತ್ತು: ಫಾರ್ಮ್ 11 ಎಂದರೇನು
ಗ್ರಾಮ ಪಂಚಾಯಿತಿಗಳು ತಮ್ಮ ವ್ಯಾಪ್ತಿಗೆ ಒಳಪಡುವ ಕೃಷಿಯೇತರ ಪ್ರಾಪರ್ಟಿಗಳಿಗೆ ಫಾರ್ಮ್ 11 ಅನ್ನು ನೀಡುತ್ತವೆ. ಇದನ್ನು ಕರ್ನಾಟಕ ಪಂಚಾಯಿತಿ ರಾಜ್ (ಗ್ರಾಮ ಪಂಚಾಯಿತಿ ಆಯವ್ಯಯ ಮತ್ತು ಖಾತೆ) ನಿಯಮಗಳು 2006 (ನಿಯಮ 30, ತಿದ್ದುಪಡಿ ನಿಯಮಗಳು 2013) ಅಡಿಯಲ್ಲಿ ವಿತರಿಸಲಾಗುತ್ತದೆ. ಭೂಮಿ ಮತ್ತು ಕಟ್ಟಡದ ಬೇಡಿಕೆ, ಸಂಗ್ರಹ ಮತ್ತು ಬಾಕಿ ನೋಂದಣಿಯ ಸಾರಾಂಶವೇ ಫಾರ್ಮ್ 11 ಆಗಿರುತ್ತದೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಸ್ಟಾಂಪ್ ಡ್ಯೂಟಿ ಮತ್ತು ರಿಜಿಸ್ಟ್ರೇಶನ್ ಶುಲ್ಕಗಳು
ಇ–ಸ್ವತ್ತು: ಫಾರ್ಮ್ 9 ಮತ್ತು ಫಾರ್ಮ್ 11 ರ ಬಳಕೆಗಳು
ಸಾಮಾನ್ಯವಾಗಿ, ಫಾರ್ಮ್ 9 ಮತ್ತು ಫಾರ್ಮ್ 11 ಅನ್ನು ಪ್ರಾಪರ್ಟಿ ತೆರಿಗೆ ಸಂಗ್ರಹಕ್ಕೆ ಬಳಸಲಾಗುತ್ತದೆ. ಗ್ರಾಮ ಪಂಚಾಯಿತಿಗಳು ಪ್ರಾಪರ್ಟಿ ತೆರಿಗೆಗಳನ್ನು ಸಂಗ್ರಹಿಸಲು ಅಧಿಕಾರ ಹೊಂದಿರುವುದರಿಂದ, ತೆರಿಗೆ ಪಾವತಿ ಮಾಡಲು ಪ್ರಾಪರ್ಟಿ ಮಾಲೀಕರಿಗೆ ಈ ದಾಖಲೆಗಳು ಅಗತ್ಯವಿರುತ್ತವೆ. ಇದರ ಹೊರತಾಗಿ, ಪ್ರಾಪರ್ಟಿ ನೋಂದಣಿ ಮಾಡುವುದಕ್ಕೆ ಕೃಷಿಯೇತರ ಪ್ರಾಪರ್ಟಿಗಳಿಗೆ ಕಡ್ಡಾಯ ದಾಖಲೆಗಳು ಇವಾಗಿವೆ. ಈ ಪ್ರಮುಖ ಪ್ರಾಪರ್ಟಿ ದಾಖಲೆಗಳು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರಾಪರ್ಟಿ ಮಾರಾಟ ಮಾಡಲು ಅಗತ್ಯವಿರುತ್ತವೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಬಿಬಿಎಂಪಿ ಪ್ರಾಪರ್ಟಿ ತೆರಿಗೆ ಪಾವತಿ ಮಾಡುವುದು ಹೇಗೆ
ಇ–ಸ್ವತ್ತು: ಡಿಜಿಟಲ್ ಆಗಿ ಸಹಿ ಮಾಡಿದ ಫಾರ್ಮ್ 9, ಫಾರ್ಮ್ 11
ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಅರ್ಜಿಗಳನ್ನು ಆಫ್‌ಲೈನ್ ಆಗಿ ಸಲ್ಲಿಸಿದರೂ, ಇ-ಸ್ವತ್ತು ಪೋರ್ಟಲ್‌ನಲ್ಲಿ ಎಲ್ಲ ಫಾರ್ಮ್‌ಗಳು ಮತ್ತು ಎಕ್ಸ್‌ಟ್ರಾಕ್ಟ್‌ಗಳನ್ನು ಆನ್‌ಲೈನ್‌ನಲ್ಲಿ ನೀಡಲಾಗುತ್ತದೆ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಡಿಜಿಟಲ್ ಆಗಿ ಈ ಫಾರ್ಮ್‌ಗಳಿಗೆ ಸಹಿ ಮಾಡುತ್ತಾರೆ ಮತ್ತು ಯಾವುದೇ ಅಧಿಕಾರಿ ಶಾಯಿಯಿಂದ ಸಹಿ ಮಾಡುವ ಅಗತ್ಯವಿಲ್ಲ. ಇ-ಸ್ವತ್ತು ಮೂಲಕ ವಿತರಿಸಿದ ಪ್ರತಿ ಪ್ರಮಾಣಪತ್ರವೂ ವಿಶಿಷ್ಟ ಪ್ರಮಾಣಪತ್ರ ಸಂಖ್ಯೆಯನ್ನು ಹೊಂದಿರುತ್ತದೆ. ಇದನ್ನು ದಾಖಲೆಯ ಅಸಲಿಯತ್ತನ್ನು ಪರಿಶೀಲಿಸುವುದಕ್ಕೆ ಬಳಸಲಾಗುತ್ತದೆ.
ಇದನ್ನೂ ಓದಿ: ಐಜಿಆರ್‌ಎಸ್ ಎಪಿ ಡೀಡ್ ವಿವರಗಳ ನೋಂದಣಿ ಮಾಡುವುದು ಹೇಗೆ
ಇ-ಸ್ವತ್ತು: ಫಾರ್ಮ್ 9 ಮತ್ತು ಫಾರ್ಮ್ 11 ಅನ್ನು ಆನ್‌ಲೈನ್‌ನಲ್ಲಿ ನೋಡುವುದು ಹೇಗೆ?
ಇ-ಸ್ವತ್ತು ಪೋರ್ಟಲ್‌ನಲ್ಲಿ ನಿಮ್ಮ ಪ್ರಾಪರ್ಟಿಯ ಫಾರ್ಮ್ 9 ಮತ್ತು ಫಾರ್ಮ್ 11 ಅನ್ನು ಆನ್‌ಲೈನ್‌ನಲ್ಲಿ ನೋಡಬಹುದು. ಅದಕ್ಕಾಗಿ ಈ ಮುಂದಿನ ಕ್ರಮವನ್ನು ಅನುಸರಿಸಿ:
ಹಂತ 1: ಇ-ಸ್ವತ್ತು ಆನ್‌ಲೈನ್ ಪ್ಲಾಟ್‌ಫಾರಂಗೆ ಬೇಟಿ ನೀಡಿ ಮತ್ತು ‘ಪ್ರಾಪರ್ಟಿ ಹುಡುಕಿ’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ಹಂತ 2: ನೀವು ಹುಡುಕಲು ಬಯಸುವ ಫಾರ್ಮ್ ಆಯ್ಕೆ ಮಾಡಿ ಮತ್ತು ಡ್ರಾಪ್ ಡೌನ್ ಮೆನುವಿನಿಂದ ಜಿಲ್ಲೆ, ಬ್ಲಾಕ್, ಗ್ರಾಮ ಪಂಚಾಯಿತಿ ಹಾಗೂ ಗ್ರಾಮವನ್ನು ಆಯ್ಕೆ ಮಾಡಿ. ಪ್ರಾಪರ್ಟಿ ಐಡಿ ಬಳಸಿ ನೀವು ಫಾರ್ಮ್ ಹುಡುಕಬಹುದು.
ಹಂತ 3: ಇ-ಸ್ವತ್ತು ಫಾರ್ಮ್ 9 ಪಿಡಿಎಫ್ ಅನ್ನು (ಅಥವಾ ಫಾರ್ಮ್ 11) ನಿಮ್ಮ ಸಿಸ್ಟಮ್‌ನಲ್ಲಿ ಡೌನ್‌ಲೋಡ್ ಮಾಡಿ ಸೇವ್ ಮಾಡಿಕೊಳ್ಳಬಹುದು. ಇ-ಸ್ವತ್ತು ಡಾಕ್ಯುಮೆಂಟ್‌ನ ಪಾಸ್‌ವರ್ಡ್ ನಿಮ್ಮ ಪ್ರಾಪರ್ಟಿ ಐಡಿಯೇ ಆಗಿರುತ್ತದೆ.
ಇದನ್ನೂ ಓದಿ: ಗ್ರಾಮ ಪಂಚಾಯಿತಿ ಭೂಮಿಯನ್ನು ಖರೀದಿ ಮಾಡಲು ಸಲಹೆಗಳು
ಇ-ಸ್ವತ್ತು: ಫಾರ್ಮ್ 9 ಮತ್ತು ಫಾರ್ಮ್ 11 ರಲ್ಲಿ ಪ್ರಮಾಣಪತ್ರದ ಕ್ರಮ ಸಂಖ್ಯೆಯ ಪ್ರಾಮುಖ್ಯತೆ
ಪ್ರತಿ ಫಾರ್ಮ್ 9 ಮತ್ತು ಫಾರ್ಮ್ 11 ಕ್ಕೆ ವಿಶಿಷ್ಟ ಪ್ರಮಾಣಪತ್ರದ ಸಂಖ್ಯೆ ಇರುತ್ತದೆ. ಅದನ್ನು ಪ್ರಮಾಣಪತ್ರದ ಕ್ರಮ ಸಂಖ್ಯೆ ಎಂಬ ಶೀರ್ಷಿಕೆಯ ಕೆಳಭಾಗದಲ್ಲಿ ಪ್ರಿಂಟ್ ಮಾಡಲಾಗಿರುತ್ತದೆ. ಈ ಪ್ರಮಾಣಪತ್ರದ ಸಂಖ್ಯೆಯನ್ನು ಬಳಸಿಕೊಂಡು ಫಾರ್ಮ್‌ನ ಅಸಲೀಯತ್ತನ್ನು ಪರೀಕ್ಷಿಸಬಹುದು. ಹಾಗೆಯೇ, ಪ್ರತಿ ಫಾರ್ಮ್ 9 ಮತ್ತು ಫಾರ್ಮ್ 11 ಅನ್ನು ಹಾಲೋಗ್ರಾಮ್ ಸಹಿತ ಸುರಕ್ಷಿತ ಹಾಳೆಯ ಮೇಲೆ ಮುದ್ರಿಸಿ ವಿತರಿಸಲಾಗುತ್ತದೆ. ವಾಟರ್ ಮಾರ್ಕ್ ಜೊತೆಗೆ ಪ್ರತಿ ಪೇಪರ್‌ಗೂ ಒಂದು ಸಂಖ್ಯೆ ಇರುತ್ತದೆ. ಇದು ಬಲ ಭಾಗದ ಮೇಲಿನ ಮೂಲೆಯಲ್ಲಿ ಪ್ರಿಂಟ್ ಮಾಡಲಾಗಿರುತ್ತದೆ.
ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಗಿಫ್ಟ್ ಡೀಡ್ ಸ್ಟಾಂಪ್ ಡ್ಯೂಟಿ ಬಗ್ಗೆ
ಡಿಜಿಟಲ್ ಆಗಿ ಸಹಿ ಮಾಡಿದ ಫಾರ್ಮ್ 9 ಮತ್ತು ಫಾರ್ಮ್ 11 ಅನ್ನು ಪರಿಶೀಲಿಸುವುದು ಹೇಗೆ?
ಡೌನ್‌ಲೋಡ್ ಮಾಡಿದ ಫಾರ್ಮ್‌ನ ಅಸಲಿಯತ್ತನ್ನು ಪರಿಶೀಲಿಸಲು, ಈ ಮುಂದಿನ ವಿಧಾನವನ್ನು ಅನುಸರಿಸಿ ಇ-ಸ್ವತ್ತು ಪೋರ್ಟಲ್‌ನಿಂದ ದಾಖಲೆಯನ್ನು ಪರಿಶೀಲಿಸಬಹುದು:
ಹಂತ 1: ಇ-ಸ್ವತ್ತು ಪ್ಲಾಟ್‌ಫಾರಂಗೆ ಭೇಟಿ ನೀಡಿ. “ದಾಖಲೆ ಪರಿಶೀಲಿಸಿ” ಆಯ್ಕೆಯನ್ನು ಕ್ಲಿಕ್ ಮಾಡಿ.
ಹಂತ 2: ಪ್ರಮಾಣಪತ್ರ ಅಥವಾ ದಾಖಲೆ ಸಂಖ್ಯೆಯನ್ನು ನಮೂದಿಸಿ.
ಹಂತ 3: ಸ್ಕ್ರೀನ್ ಮೇಲೆ ಫಲಿತಾಂಶಗಳನ್ನು ಪ್ರದರ್ಶಿಸಲಾಗುತ್ತದೆ.
ಇದನ್ನೂ ಓದಿ: ಆನ್‌ಲೈನ್‌ನಲ್ಲಿ ತೆಲಂಗಾಣ ಭೂಮಿ ನೋಂದಣಿ ದಾಖಲೆಗಳ ಬಗ್ಗೆ ಎಲ್ಲ ಮಾಹಿತಿ
ಇ-ಸ್ವತ್ತು ಸುದ್ದಿ ಅಪ್‌ಡೇಟ್‌ಗಳು
ಸೆಪ್ಟೆಂಬರ್ 8, 2021: ದಿ ಹಿಂದು ವರದಿ ಮಾಡಿದ ಅತಿದೊಡ್ಡ ಭೂಮಿ ನೋಂದಣಿ ಹಗರಣಗಳ ಪೈಕಿ ಎರಡು ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಅಕ್ರಮವಾಗಿ 700 ಕ್ಕೂ ಹೆಚ್ಚು ಗ್ರಾಮ ಠಾಣಾ ಸೈಟ್‌ಗಳನ್ನು ನೋಂದಣಿ ಮಾಡಿರುವುದು ಪತ್ತೆಯಾಗಿದೆ. ಬೆಂಗಳೂರು ನಗರ ಜಿಲ್ಲೆಯ ಯೆಲಹಂಕದಲ್ಲಿ ಹೆಸರಘಟ್ಟ ಮತ್ತು ಯೆಲಹಂಕ ಹೋಬಳಿಯಲ್ಲಿನ ಭೂಮಿಯನ್ನು ಕಂಪ್ಯೂಟರೀಕೃತ ಇ-ಸ್ವತ್ತು ಫಾರ್ಮ್ 9 ಮತ್ತು ಫಾರ್ಮ್ 11 ಎ ಅಥವಾ 11 ಬಿ ಪಡೆಯದೇ ಅಕ್ರಮವಾಗಿ ನೋಂದಣಿ ಮಾಡಿರುವುದು ಕಂಡುಬಂದಿದೆ. 2021 ಜೂನ್ 28 ರಿಂದ ಜುಲೈ 5 ರ ಮಧ್ಯೆ ಕಾಚರಕನಹಳ್ಳಿ ಎಸ್‌ಆರ್‌ಒದಲ್ಲಿ ಸುಮಾರು 731 ಸೈಟ್‌ಗಳನ್ನು ಅಕ್ರಮವಾಗಿ ನೋಂದಣಿ ಮಾಡಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ. ಆದರೆ, ಈ ಅಕ್ರಮವು ಕೇವಲ ಕಾಚರಕನಹಳ್ಳಿ ಎಸ್‌ಆರ್‌ಒಗೆ ಮಾತ್ರ ಸೀಮಿತವಾಗಿಲ್ಲ, ಬೆಂಗಳೂರಿನ ಇತರ ಭಾಗಗಳಲ್ಲೂ ವ್ಯಾಪಕವಾಗಿದೆ.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯ ಡಿಜಿಟಲ್ ಸಹಿಯನ್ನು ಹೊಂದಿರುವ ಕಂಪ್ಯೂಟರೀಕರಿಸಿದ ಫಾರ್ಮ್ 9 ಮತ್ತು ಫಾರ್ಮ್ 11ಎ ಅಥವಾ 11ಬಿ ನೀಡುವುದು ಕಡ್ಡಾಯ ಎಂಬುದನ್ನು ಎಸ್‌ಆರ್‌ಒಗಳು ಮರೆತಿವೆ. ಉದ್ದೇಶಪೂರ್ವಕವಾಗಿ ಇವು ಇ-ಸ್ವತ್ತು ಪೋರ್ಟಲ್‌ನಿಂದ ಆನ್‌ಲೈನ್ ಪ್ರಾಪರ್ಟಿ ಮಾಹಿತಿಯನ್ನು ಪರಿಶೀಲಿಸಿಲ್ಲ ಎಂಬುದು ಕಂಡುಬಂದಿದೆ. ಈ ಮೂಲಕ ಅವರು 2013 ಮತ್ತು 2014 ರಲ್ಲಿ ಸರ್ಕಾರ ಹೊರಡಿಸಿದ ಆದೇಶಗಳನ್ನು ಉಲ್ಲಂಘಿಸಿದ್ದಾರೆ. ಹಾಗೆಯೇ, ಕಾವೇರಿ ಇ-ಸ್ವತ್ತು ಅಡಿಯಲ್ಲಿ ಅತ್ಯಂತ ಅಗತ್ಯವಾಗಿರುವ ಸೇಲ್ ಡೀಡ್ ಇಲ್ಲದೇ ಈ ಗ್ರಾಮ ಪಂಚಾಯಿತಿಯು ಸೈಟ್‌ಗಳನ್ನು ನೋಂದಣಿ ಮಾಡಿಕೊಂಡಿವೆ. ಅಷ್ಟೇ ಅಲ್ಲ, ಹಲವು ದಾಖಲೆಗಳನ್ನು ಭೂಮಿ/ಕೃಷಿ ಭೂಮಿ ಎಂದು ನೋಂದಣಿ ಮಾಡಲಾಗಿದೆ. ಹೀಗಾಗಿ ಇವು ಇ ಸ್ವತ್ತು ಡೇಟಾದಲ್ಲಿ ಕಾಣಿಸಿಕೊಳ್ಳುವುದಿಲ್ಲ.
ಇ-ಸ್ವತ್ತು ತಾಂತ್ರಿಕ ಸಮಸ್ಯೆಗಳು
ಸೆಪ್ಟೆಂಬರ್ 1, 2021: ಇ-ಸ್ವತ್ತು ಪೋರ್ಟಲ್ ಅನ್ನು ಹೊಸ ಸುರಕ್ಷಿತವಾದ ಪ್ಲಾಟ್‌ಫಾರಂಗೆ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯಿತಿ ರಾಜ್ (ಆರ್‌ಡಿಪಿಆರ್) ಇಲಾಖೆಯು ಬದಲಿಸುತ್ತಿರುವುದರಿಂದ 2021 ಆಗಸ್ಟ್‌ನಲ್ಲಿ ಕರ್ನಾಟಕದಾದ್ಯಂತ ಗ್ರಾಮ ಪಂಚಾಯಿತಿಗಳಲ್ಲಿ ಪ್ರಾಪರ್ಟಿ ನೋಂದಣಿಗೆ ಅಡ್ಡಿ ಉಂಟಾಗಿತ್ತು. ಕಂದಾಯ ಇಲಾಖೆಯ ಪ್ರಕಾರ, ಸ್ಟಾಂಪ್ ಮತ್ತು ನೋಂದಣಿ ಇಲಾಖೆಯ ಅರಿವಿಗೆ ಬರದೇ ಈ ಬದಲಾವಣೆ ಮಾಡಲಾಗಿದ್ದು, ಇದರಿಂದಾಗಿ ಅನಾನುಕೂಲ ಉಂಟಾಗಿತ್ತು. ಇದೇ ವೇಳೆ, ಯುಆರ್‌ಎಲ್ ಅನ್ನು ಎಚ್‌ಟಿಟಿಪಿ ಇಂದ ಹೆಚ್ಚು ಸುರಕ್ಷಿತ ಎಚ್‌ಟಿಟಿಪಿಎಸ್‌ಗೆ ಆರ್‌ಡಿಪಿಆರ್ ಬದಲಾವಣೆ ಮಾಡಿದ್ದು, ಕಂದಾಯ ಇಲಾಖೆ ಮತ್ತು ರಾಷ್ಟ್ರೀಯ ಮಾಹಿತಿ ಕೇಂದ್ರಕ್ಕೆ ಮಾಹಿತಿ ನೀಡಿಲ್ಲ.
ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಆನ್‌ಲೈನ್‌ನಲ್ಲಿ ಭೂಮಿ ಸಮೀಕ್ಷೆ ಮ್ಯಾಪ್‌ಗಳ ಬಗ್ಗೆ ಎಲ್ಲ ಮಾಹಿತಿ
ಸಾಮಾನ್ಯ ಪ್ರಶ್ನೋತ್ತರಗಳು (FAQs)
ಕರ್ನಾಟಕದಲ್ಲಿ ಫಾರ್ಮ್ 11 ಎಂದರೇನು?
ಫಾರ್ಮ್ 11 ಎಂಬುದು ಕಟ್ಟಡ ಹಾಗೂ ಭೂಮಿಯ ಬೇಡಿಕೆ, ಸಂಗ್ರಹ ಮತ್ತು ಬಾಕಿ ನೋಂದಣಿಯ ಎಕ್ಸ್ಟ್ರಾಕ್ಟ್ ಆಗಿದ್ದು, ಇದನ್ನು ಸ್ವತ್ತು ತೆರಿಗೆ ಪಾವತಿಗೆ ಬಳಸಲಾಗುತ್ತದೆ.
ಗ್ರಾಮಠಾಣಾ ಸೈಟ್ಗಳನ್ನು ಖರೀದಿಸುವುದು ಸುರಕ್ಷಿತವೇ?
ಹೌದು. ಇ-ಸ್ವತ್ತು ಪೋರ್ಟಲ್ನಲ್ಲಿ ಗ್ರಾಮ ಪಂಚಾಯಿತಿ ವಲಯದ ಭೂಮಿಯ ಕಾನೂನಾತ್ಮಕತೆಯನ್ನು ನೀವು ಪರಿಶೀಲಿಸಬಹುದು.