ಭಾರತದಲ್ಲಿ ಸ್ವತ್ತು ಖರೀದಿ ಮಾಡುವುದು ಅತಿ ದೀರ್ಘ ಮತ್ತು ಕಷ್ಟಕರ ಪ್ರಕ್ರಿಯೆಯಾಗಿದ್ದು, ವಾಸ್ತುವನ್ನೂ ಜನರು ಖರೀದಿ ಮಾಡುವಾಗ ಪರಿಗಣಿಸುತ್ತಾರೆ. ಎಲ್ಲ ದಿಕ್ಕುಗಳೂ ಉತ್ತಮವೇ ಎಂದು ವಾಸ್ತು ಶಾಸ್ತ್ರ ಪರಿಣಿತರು ಹೇಳುತ್ತಾರಾದರೂ, ಈ ವಿಷಯದ ಬಗ್ಗೆ ಹಲವು ಮಿಥ್ಯಗಳು ಇವೆ. ಉದಾಹರಣೆಗೆ, ದಕ್ಷಿಣ ಅಥವಾ ಪಶ್ಚಿಮ ದಿಕ್ಕಿನ ಮನೆ ವಾಸ್ತು ಅಷ್ಟೇನೂ ಉತ್ತಮವಲ್ಲ ಎಂದು ಮಾಲೀಕರು ಭಾವಿಸುತ್ತಾರೆ. ಆದರೆ, ಪೂರ್ವ ಮುಖಕ್ಕೆ ಇರುವ ಸ್ವತ್ತು ಮನೆ ಮಾಲೀಕರಿಗೆ ಅದೃಷ್ಟದ್ದು ಎಂದು ಭಾವಿಸುತ್ತಾರೆ. ವಾಸ್ತುವಿನಲ್ಲಿ ಪೂರ್ವ ಮುಖಕ್ಕೆ ಇರುವ ಮನೆಯನ್ನು ಬಹುತೇಕ ಮನೆ ಮಾಲೀಕರು ಮಂಗಳಕರ ಎಂದು ಭಾವಿಸುತ್ತಾರೆ. ಕೆಲವು ಬಾರಿ, ವಾಸ್ತು ಶಾಸ್ತ್ರಕ್ಕೆ ಅನುಗುಣವಾದ ಮನೆಗಳನ್ನು ಖರೀದಿ ಮಾಡುವಾಗ ಹೆಚ್ಚು ಹಣವನ್ನೂ ಪಾವತಿ ಮಾಡಲು ಜನರು ಸಿದ್ಧವಾಗಿರುತ್ತಾರೆ. ಆದರೆ, ಅದಕ್ಕೆ ಅಷ್ಟು ಅರ್ಹವಾಗಿದೆಯೇ? ಬನ್ನಿ, ಕಂಡುಕೊಳ್ಳೋಣ.
ಪೂರ್ವ ದಿಕ್ಕಿನ ಮನೆ ಎಂದರೇನು?
ನೀವು ಮನೆಯ ಒಳಗೆ ಪ್ರವೇಶ ದ್ವಾರದ ಎದುರು ನಿಂತಿದ್ದರೆ, ಮನೆಯಿಂದ ಹೊರಗೆ ಬರುವ ದಿಕ್ಕೇ ಈ ದಿಕ್ಕು ಆಗಿರುತ್ತದೆ. ಮನೆಯಿಂದ ಹೊರಗೆ ಬರುವಾಗ ನೀವು ಪೂರ್ವಕ್ಕೆ ಮುಖ ಮಾಡಿದರೆ, ಆಗ ಅದು ಪೂರ್ವ ದಿಕ್ಕಿನ ಮನೆಯಾಗುತ್ತದೆ.
ವಾಸ್ತುಶಾಸ್ತ್ರದ ಪ್ರಕಾರ ಪೂರ್ವ ದಿಕ್ಕಿನ ಮನೆ ಅಥವಾ ಅಪಾರ್ಟ್‌ಮೆಂಟ್ ಉತ್ತಮವಾದುದಾಗಿರುತ್ತದೆ. ಇದನ್ನು ವೈಜ್ಞಾನಿಕ ದೃಷ್ಟಿಕೋನದಿಂದ ನೋಡಿದರೆ, ಸೂರ್ಯ ಪೂರ್ವ ದಿಕ್ಕಿನಲ್ಲಿ ಉದಯಿಸುವುದರಿಂದ ಪೂರ್ವ ದಿಕ್ಕಿಗೆ ಬಾಗಿಲು ಇರುವಾಗ ಆ ಕಡೆಯಿಂದ ಬೆಳಗಿನ ಕಿರಣಗಳು ಮನೆಗೆ ಪ್ರವೇಶಿಸುತ್ತವೆ. ಬೆಳಗಿನ ಸೂರ್ಯನ ಕಿರಣಗಳು ಆರೋಗ್ಯಕ್ಕೆ ಉತ್ತಮವಾಗಿರುತ್ತವೆ. ಈ ದಿಕ್ಕು ಗರಿಷ್ಠ ಧನಾತ್ಮಕ ಎನರ್ಜಿಯನ್ನು ಹೊಂದಿರುತ್ತದೆ.
ಪೂರ್ವ ದಿಕ್ಕಿನ ಮನೆ ವಾಸ್ತು ಪ್ಲಾನ್
ನೀವು ಪೂರ್ವ ದಿಕ್ಕಿನ ಮನೆಯನ್ನು ನಿರ್ಮಾಣ ಮಾಡಲು ಯೋಜಿಸುತ್ತಿದ್ದರೆ, ಮನೆಯ ಒಳಗೆ ಧನಾತ್ಮಕ ಪ್ರಭಾವಳಿ ಸಾಗುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ವಾಸ್ತು ಶಾಸ್ತ್ರಕ್ಕೆ ಬದ್ಧವಾದ ಮನೆ ಯೋಜನೆ ಮಾಡುವುದು ಅತ್ಯಂತ ಪ್ರಮುಖವಾಗಿರುತ್ತದೆ. ನೀವು ಆರ್ಕಿಟೆಕ್ಟ್ ಅಥವಾ ಯೋಜನೆ ರೂಪಿಸುವವರ ಸಲಹೆಯನ್ನೂ ನೀವು ಪಡೆಯಬಹುದು. ಅವರು ಕಸ್ಟಮೈಸ್ ಮಾಡಿದ ಪೂರ್ವ ದಿಕ್ಕಿನ ವಾಸ್ತು ಯೋಜನೆಯನ್ನು ನಿಮ್ಮ ಅನುಕೂಲಕ್ಕೆ ತಕ್ಕಂತೆ ರೂಪಿಸುತ್ತಾರೆ. ನೀವು ಪೂರ್ವ ದಿಕ್ಕಿನ ಮನೆಯನ್ನು ಹೊಂದಿದ್ದರೆ ನಿಮ್ಮ ಮನೆ ಯೋಜನೆ ಹೇಗೆ ಕಾಣಿಸುತ್ತದೆ ಎಂಬ ವಿವರ ಇಲ್ಲಿದೆ:
ಪೂರ್ವ ದಿಕ್ಕಿಗೆ ಮುಖ ಮಾಡಿರುವ ಮನೆ ಯೋಜನೆಯನ್ನು ಈ ಮೇಲಿನ ಚಿತ್ರದಲ್ಲಿ ತೋರಿಸಲಾಗಿದೆ. ಉತ್ತರದಿಂದ ದಕ್ಷಿಣಕ್ಕೆ ಇದನ್ನು ಒಂಬತ್ತು ಪಾದಗಳಿಂದ ವಿಭಾಗ ಮಾಡಲಾಗಿದೆ.
ನಿರ್ಮಾಣ ಯೋಜನೆ ಮಾಡುವಾಗ ಗಮನದಲ್ಲಿಟ್ಟುಕೊಳ್ಳಬೇಕಿರುವ ಕೆಲವು ಪೂರ್ವ ದಿಕ್ಕಿನ ಮನೆ ವಾಸ್ತು ಸಲಹೆಗಳು ಈ ಕೆಳಗಿನಂತಿವೆ:
- ಮನೆ ಪೂರ್ವ ದಿಕ್ಕಿಗೆ ಇದ್ದಲ್ಲಿ ಐದನೇ ಪಾದದಲ್ಲಿ ಮುಖ್ಯ ಬಾಗಿಲು ಇರಲಿ. ಇದು ಗೌರವ, ಖ್ಯಾತಿ ಮತ್ತು ಮನ್ನಣೆಯನ್ನು ಆಕರ್ಷಿಸುತ್ತದೆ. ಐದನೇ ಪಾದವು ಸಣ್ಣದಾಗಿದ್ದರೆ, ಮೂರು, ನಾಲ್ಕು, ಆರು ಅಥವಾ ಏಳನೇ ಪಾದಗಳನ್ನೂ ಬಳಸಬಹುದು.
- ಇಲ್ಲಿ ಮುಖ್ಯ ಬಾಗಿಲನ್ನು ಯೋಜಿಸುವಾಗ ಮೊದಲ, ಎರಡನೇ, ಎಂಟನೇ ಮತ್ತು ಒಂಬತ್ತನೇ ಪಾದಗಳನ್ನು ಬಳಸಬೇಡಿ.
- ಪೂರ್ವ ದಿಕ್ಕಿನ ಮನೆಯಲ್ಲಿ ಎಂಟು ಮತ್ತು ಒಂಬತ್ತನೇ ಪಾದಗಳಲ್ಲಿ ಮನೆಗೆ ಅನಾರೋಗ್ಯ ಪ್ರವೇಶ ಮಾಡುವುದರಿಂದ ಈ ಭಾಗದಲ್ಲಿ ಮುಖ್ಯ ದ್ವಾರವನ್ನು ಇಡಬಾರದು. ಇಲ್ಲಿ ಮುಖ್ಯ ದ್ವಾರ ಇದ್ದರೆ, ಅದಕ್ಕೆ ವಾಸ್ತು ಪರಿಗಾರಗಳನ್ನು ಅಳವಡಿಸಬೇಕು.
- ನೀವು ಮೊದಲ ಪಾದದಲ್ಲಿ ಬಾಗಿಲನ್ನು ಇಡುತ್ತಿದ್ದೀರಿ ಎಂದಾದರೆ, ಈಶಾನ್ಯ ಗೋಡೆಯಿಂದ ಕನಿಷ್ಠ ಆರು ಇಂಚುಗಳಷ್ಟು ಸ್ಥಳವನ್ನು ಬಿಡಿ.
ಇದನ್ನೂ ನೋಡಿ: ಅದೃಷ್ಟಕ್ಕೆ ಆನೆಯ ಪ್ರತಿಕೃತಿ
ಪೂರ್ವ ದಿಕ್ಕಿನ ಮನೆ ವಾಸ್ತು ನಿರ್ಧರಿಸುವುದು ಹೇಗೆ?
ಪೂರ್ವ ದಿಕ್ಕಿನ ಮನೆಯ ವಾಸ್ತುವನ್ನು ಅರ್ಥ ಮಾಡಿಕೊಳ್ಳುವಾಗ, ಪೂರ್ವ ದಿಕ್ಕಿನ ಅರ್ಥವೇನು ಎಂದು ತಿಳಿದುಕೊಳ್ಳುವುದು ಮತ್ತು ಪೂರ್ವ ದಿಕ್ಕಿನ ಫ್ಲಾಟ್ ಅನ್ನು ಸರಿಯಾಗಿ ಗುರುತಿಸುವುದು ಅತ್ಯಂತ ಅಗತ್ಯದ್ದಾಗಿದೆ. ಆದಾಗ್ಯೂ, ಉದಯಿಸುತ್ತಿರುವ ಸೂರ್ಯನ ಕಡೆಗೆ ಮುಖ ಮಾಡಿರುವ ಮನೆಗಳು ಪೂರ್ವ ದಿಕ್ಕಿನ ಮನೆ ಎಂದು ಹಲವು ತಪ್ಪು ಭಾವಿಸುತ್ತಾರೆ. ಇದನ್ನು ಅರ್ಥ ಮಾಡಿಕೊಳ್ಳಲು, ಭೂಮಿಯ ತಿರುಗುವಿಕೆಯು 23.5 ಡಿಗ್ರಿ ಬದಲಾಗುತ್ತದೆ ಮತ್ತು ಒಂದು ವರ್ಷದಲ್ಲಿ ಸೂರ್ಯ ಉದಯಿಸುವ ದಿಕ್ಕು ಬದಲಾಗುತ್ತಲೇ ಇರುತ್ತದೆ ಎಂಬುದನ್ನು ನಾವು ತಿಳಿದಿರಬೇಕು. ಅಂದರೆ, ಸೂರ್ಯನ ಸುತ್ತ ಭೂಮಿ ಒಂದು ಸುತ್ತು ಹಾಕಿ ಬಂದಾಗ ಋತುವಿಗೆ ತಕ್ಕಂತೆ ಈ ಸ್ಥಾನದಲ್ಲಿ ಬದಲಾವಣೆಯಾಗುತ್ತದೆ. ವರ್ಷದಲ್ಲಿ ಎರಡು ಬಾರಿ ಅಥವಾ ಮಾರ್ಚ್ 20 ಅಥವಾ ಮಾರ್ಚ್ 21 ರಂದು ಮತ್ತು ಸೆಪ್ಟೆಂಬರ್ 22 ಅಥವಾ ಸೆಪ್ಟೆಂಬರ್ 23 ರಂದು ಸೂರ್ಯ ಸ್ಪಷ್ಟವಾಗಿ ಉತ್ತರ ದಿಕ್ಕಿನಲ್ಲೇ ಉದಯಿಸುತ್ತಾನೆ. ವಾಸ್ತು ಪ್ರಕಾರ ಪೂರ್ವ ದಿಕ್ಕಿನ ಮನೆಯ ದಿಕ್ಕನ್ನು ನಿರ್ಧರಿಸುವುದಕ್ಕಾಗಿ, ಉತ್ತರ ದಿಕ್ಕಿನ ಕಡೆಗೆ ಸರಿಯಾಗಿ ಗುರುತು ತೋರಿಸುವ ಕಂಪಾಸ್ ಅನ್ನು ಬಳಸಬೇಕು. ಈಗ, ಮುಖ್ಯ ದ್ವಾರದ ಮೂಲಕ ಮನೆಯಿಂದ ಹೊರಗಡೆ ಬನ್ನಿ. ನೀವು ಪೂರ್ವ ದಿಕ್ಕಿನ ಕಡೆಗೆ ಮುಖ ಮಾಡಿದ್ದರೆ, ಆಗ ನೀವು ಪೂರ್ವ ದಿಕ್ಕಿನ ಬಾಗಿಲನ್ನು ಹೊಂದಿದ್ದೀರಿ. ಅಂದರೆ, ಅದು ಪೂರ್ವ ದಿಕ್ಕಿನ ಕಡೆಗೆ ಇರುವ ಮನೆಯಾಗಿದೆ.
ಪೂರ್ವ ದಿಕ್ಕಿನ ಮನೆ ಅಥವಾ ಫ್ಲ್ಯಾಟ್‌ಗೆ ವಾಸ್ತು
ವಾಸ್ತು ಶಾಸ್ತ್ರ ಮಾರ್ಗಸೂಚಿಗಳ ಪ್ರಕಾರ, ಕಟ್ಟಡಗಳು ಮತ್ತು ಬಹು ಅಂತಸ್ತಿನ ಅಪಾರ್ಟ್‌ಮೆಂಟ್‌ಗಳಿಗೆ ಪೂರ್ವ ದಿಕ್ಕಿನ ಸ್ವತ್ತುಗಳು ಉತ್ತಮ ಎಂದು ಭಾವಿಸಲಾಗುತ್ತದೆ. ಆದಾಗ್ಯೂ, ಸ್ವತಂತ್ರ ಮನೆಗಳು ಮತ್ತು ಬಂಗಲೆಗಳಿಗೆ, ಈ ದಿಕ್ಕಿನ ಮನೆಯನ್ನು ಉತ್ತಮ ಆಯ್ಕೆಗಳು ಎಂದು ಪರಿಗಣಿಸಲಾಗುವುದಿಲ್ಲ. ಹಾಗೆಯೇ, ಪೂರ್ವ ಮುಖದ ಸ್ವತ್ತಿನ ವಾಸ್ತು ವಿಚಾರದಲ್ಲಿ ಕೆಲವು ವಾಸ್ತು ನಿಯಮಗಳು, ಮಾರ್ಗಸೂಚಿಗಳು ಮತ್ತು ನಿಯಮಗಳನ್ನು ಅನುಸರಿಸಬೇಕು.
ಪೂರ್ವ ದಿಕ್ಕಿನ ಮನೆಗೆ ಅಡುಗೆ ಮನೆ ವಾಸ್ತು
ಪೂರ್ವ ದಿಕ್ಕಿನ ಮನೆಗೆ, ಅಡುಗೆ ಮನೆಯು ಮನೆಯ ಆಗ್ನೇಯ ದಿಕ್ಕಿನಲ್ಲಿ ಇರಬೇಕು ಎಂದು ಅಡುಗೆ ಮನೆ ವಾಸ್ತು ಹೇಳುತ್ತದೆ. ಅದು ಸಾಧ್ಯವಿಲ್ಲದಿದ್ದರೆ, ಆಗ ವಾಯವ್ಯವೂ ಕೂಡಾ ಸೂಕ್ತವಾಗಿರುತ್ತದೆ. ಆದಾಗ್ಯೂ, ಉತ್ತರ, ಈಶಾನ್ಯ ಮತ್ತು ಪಶ್ಚಿಮ ದಿಕ್ಕುಗಳಲ್ಲಿ ಅಡುಗೆ ಮನೆ ಇಡಬೇಡಿ. ಅಡುಗೆಯನ್ನು ಬೇಯಿಸುವ ವ್ಯಕ್ತಿಯು ಆಗ್ನೇಯ ದಿಕ್ಕಿನ ಅಡುಗೆ ಮನೆಯಲ್ಲಿ ಪೂರ್ವ ದಿಕ್ಕಿಗೆ ಮುಖ ಮಾಡಿರಬೇಕು ಮತ್ತು ವಾಯವ್ಯ ದಿಕ್ಕಿನ ಅಡುಗೆ ಮನೆಯಲ್ಲಿ ಪಶ್ಚಿಮ ದಿಕ್ಕಿಗೆ ಮುಖ ಮಾಡಿರಬೇಕು. ಧನಾತ್ಮಕ ಎನರ್ಜಿಗಾಗಿ ಅಡುಗೆ ಸ್ಟೌ, ಓವನ್ ಮತ್ತು ಟೋಸ್ಟರ್‌ಗಳನ್ನು ಆಗ್ನೇಯ ದಿಕ್ಕಿನಲ್ಲಿ ಇಡಿ. ಪೂರ್ವ ದಿಕ್ಕಿನ ವಾಸ್ತು ಯೋಜನೆ ಪ್ರಕಾರ ಸ್ಟೊರೇಜ್ ಮತ್ತು ರೆಫ್ರಿಜರೇಟರ್ ಆಗ್ನೇಯ ದಿಕ್ಕಿನಲ್ಲಿ ಇರಬೇಕು.
ದಕ್ಷಿಣ ದಿಕ್ಕಿನ ಫ್ಲಾಟ್ ವಾಸ್ತು ಸಲಹೆಗಳ ಬಗ್ಗೆ ಎಲ್ಲ ವಿವರಗಳನ್ನೂ ಓದಿ
ಪೂರ್ವ ದಿಕ್ಕಿನ ಮನೆಗೆ ಮುಖ್ಯದ್ವಾರದ ವಾಸ್ತು
ಪೂರ್ವ ದಿಕ್ಕಿನ ಮನೆಯಲ್ಲಿ ಮುಖ್ಯ ದ್ವಾರವನ್ನು ಎಲ್ಲಿಡಬೇಕು ಎಂದು ನಿರ್ಧಾರ ಮಾಡುವಾಗ, ಈಶಾನ್ಯದಿಂದ (ಮೊದಲ ಪಾದ) ಆಗ್ನೇಯ ಮೂಲೆಯವರೆಗೆ (ಒಂಬತ್ತನೇ ಪಾದ) ಒಂಬತ್ತು ಸಮಾನ ಭಾಗಗಳಲ್ಲಿ ಮನೆಯ ಪೂರ್ವದ ಉದ್ದವನ್ನು ಕಲ್ಪಿಸಿಕೊಂಡು ವಿಭಾಗ ಮಾಡಿ. ಪೂರ್ವ ದಿಕ್ಕಿನ ಮನೆಗೆ ಮುಖ್ಯದ್ವಾರದ ವಾಸ್ತು ನಿಯಮಗಳ ಪ್ರಕಾರ, ಪ್ರತಿ ಭಾಗವನ್ನೂ ಪಾದ ಎಂದು ಗುರುತಿಸಲಾಗುತ್ತದೆ. ಐದನೇ ಪಾದವು ಸೂರ್ಯನ ಸ್ಥಳ ಮತ್ತು ಖ್ಯಾತಿಗೆ ಉತ್ತಮವಾದುದರಿಂದ ಮಂಗಳಕರ ಎಂದು ಪರಿಗಣಿಸಲಾಗಿದೆ. ಇದು ನಿವಾಸಿಗಳಿಗೆ ಹೆಸರು, ಖ್ಯಾತಿ ಮತ್ತು ಗೌರವವನ್ನು ಆಹ್ವಾನಿಸುತ್ತದೆ.
ವಾಸ್ತು ಪರಿಣಿತರ ಪ್ರಕಾರ, ಪೂರ್ವ ಮೂಲೆಯು ಎಂಟು ಪಾದಗಳನ್ನು ಹೊಂದಿದೆ. ಅವುಗಳೆಂದರೆ ಅಗ್ನಿ, ಜಯಂತ, ಇಂದ್ರ, ಸೂರ್ಯ, ಸತ್ಯ, ಭೃಷ, ಅಂತರಿಕ್ಷ ಮತ್ತು ಅನಿಲ. ಮೇಲಿನಿಂದ ಕೆಳಗಿನ ಅನುಕ್ರಮದಲ್ಲಿ ಈ ಹೆಸರುಗಳು ಇವೆ. ಪೂರ್ವ ದಿಕ್ಕಿನ ಮನೆಯಲ್ಲಿ, ಜಯಂತ ಅಥವಾ ಇಂದ್ರ ಪಾದವನ್ನು ಪ್ರವೇಶ ದ್ವಾರಕ್ಕೆ ಅತ್ಯಂತ ಮಂಗಳಕರ ಎಂದು ಪರಿಗಣಿಸಲಾಗಿದೆ. ಈ ಆಯೋಜನೆಯನ್ನು ಕುಟುಂಬ ಸದಸ್ಯರಿಗೆ ಅತ್ಯಂತ ಸಂಪದ್ಭರಿತ ಮತ್ತು ಸಂತೋಷಕರ ಎಂದು ನಂಬಲಾಗಿದೆ.
ನೀವು ಪೂರ್ವ ದಿಕ್ಕಿನ ಮನೆಯನ್ನು ಹೊಂದಿದ್ದರೆ, ಮುಖ್ಯ ದ್ವಾರವನ್ನು ಇಡುವ ಸ್ಥಳದ ಬಗ್ಗೆ ಎಚ್ಚರಿಕೆ ವಹಿಸಿ. ನಿಮ್ಮ ಪ್ರವೇಶ ದ್ವಾರವು ಮಧ್ಯದಲ್ಲಿ ಇರಬೇಕು. ಈಶಾನ್ಯ ಅಥವಾ ಆಗ್ನೇಯದಲ್ಲಿ ಇರಬಾರದು. ವಾಸ್ತು ಪ್ರಕಾರ ಪೂರ್ವ ದಿಕ್ಕಿನ ಸ್ವತ್ತಿನಲ್ಲಿ ಮುಖ್ಯ ದ್ವಾರವನ್ನು ಇಡುವುದಕ್ಕೆ ಈ ಎರಡು ಮೂಲೆಗಳು ಅದೃಷ್ಟವಾದದ್ದಲ್ಲ.
ನಿಮ್ಮ ಪ್ರವೇಶದ್ವಾರವು ಈಶಾನ್ಯ ಮೂಲೆಯಲ್ಲಿದ್ದರೆ, ಮುಖ್ಯ ದ್ವಾರವು ಈಶಾನ್ಯ ಮೂಲೆಯನ್ನು ಸ್ಪರ್ಶಿಸುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ. ಇದಕ್ಕಾಗಿ, ನೀವು ಗೋಡೆ ಮತ್ತು ಮುಖ್ಯ ಬಾಗಿಲಿನ ಮಧ್ಯೆ ಆರು ಇಂಚುಗಳು (ಅರ್ಧ ಅಡಿ) ಬಿಡಬಹುದು.
ನೀವು ಆಗ್ನೇಯ ದಿಕ್ಕಿಗೆ ಮುಖ ಮಾಡಿರುವ ಪ್ರವೇಶ ದ್ವಾರವನ್ನು ಹೊಂದಿದ್ದರೆ, ವಾಸ್ತು ದೋಷವನ್ನು ನಿವಾರಣೆ ಮಾಡಿಕೊಳ್ಳಲು ಈ ಪರಿಹಾರಗಳನ್ನು ಅನುಸರಿಸಿ.
- ಬಾಗಿಲಿನ ಪ್ರದಿ ಬದಿಯಲ್ಲೂ ಒಂದರಂತೆ ಮೂರು ವಾಸ್ತು ಪಿರಾಮಿಡ್‌ಗಳನ್ನು ಇಡಿ ಮತ್ತು ಮೂರನೆಯದನ್ನು ಮುಖ್ಯ ದ್ವಾರದ ಮೇಲೆ, ಮಧ್ಯದಲ್ಲಿ ಇಡಿ.
- ಓಮ್, ಸ್ವಸ್ತಿಕ್ ಮತ್ತು ತ್ರಿಶೂಲದ ಚಿಹ್ನೆಯನ್ನು ಬಾಗಿಲಿನ ಎರಡೂ ಕಡೆಗಳಲ್ಲಿ ಇಡಬಹುದು.
- ಮನೆಯಿಂದ ಋಣಾತ್ಮಕ ಶಕ್ತಿಯನ್ನು ನಿವಾರಣೆ ಮಾಡುವುದಕ್ಕೆ ಸಿದ್ಧ ಶುಕ್ರ ಯಂತ್ರವನ್ನು ಸ್ಥಾಪಿಸಿ.
- ಪರ್ಯಾಯವಾಗಿ, ಸಿದ್ಧ ವಾಸ್ತು ಕಳವನ್ನೂ ನೀವು ಬಳಸಿಕೊಂಡು, ಈ ಮೂಲೆಯಲ್ಲಿ ಉತ್ಪಾದನೆಯಾಗುವ ಧನಾತ್ಮಕ ಶಕ್ತಿಯನ್ನು ವರ್ಧಿಸಬಹುದು.
ಮುಖ್ಯ ಬಾಗಿಲಿನ ಮನೆಯ ಪ್ರವೇಶ ವಾಸ್ತು ಬಗ್ಗೆ ಇನ್ನಷ್ಟು ತಿಳಿದುಕೊಳ್ಳಿ
ಪೂರ್ವ ದಿಕ್ಕಿನ ಮನೆಗೆ ಮುಖ್ಯ ಮಲಗುವ ಕೋಣೆಯ ವಾಸ್ತು
ಮನೆಯ ವಾಸ್ತು ಯೋಜನೆ ಪ್ರಕಾರ ಪೂರ್ವ ದಿಕ್ಕಿನ ಮನೆಗಳಿಗೆ ಆಗ್ನೇಯ ದಿಕ್ಇನಲ್ಲಿ ಮುಖ್ಯ ಮಲಗುವ ಕೋಣೆ ಇರಬೇಕು. ಮನೆಯಲ್ಲಿ ಇತರ ಕೋಣೆಗಳಿಗಿಂತ ಮುಖ್ಯ ಮಲಗುವ ಕೋಣೆಯು ದೊಡ್ಡದಾಗಿರಬೇಕು. ವಾಸ್ತು ಪ್ರಕಾರ, ಹಾಸಿಗೆಯನ್ನು ಇಡುವ ಸರಿಯಾದ ಸ್ಥಳ ಎಂದರೆ ಕೋಣೆಯ ದಕ್ಷಿಣ ಅಥವಾ ಪಶ್ಚಿಮದ ಗೋಡೆಯಾಗಿರುತ್ತದೆ. ಇದರಿಂದ ತಲೆ ದಕ್ಷಿಣ ಅಥವಾ ಪಶ್ಚಿಮ ದಿಕ್ಕಿಗೆ ಇರುತ್ತದೆ ಮತ್ತು ಕಾಲುಗಳು ಉತ್ತರ ಅಥವಾ ಪೂರ್ವ ದಿಕ್ಕಿಗೆ ಇರುತ್ತದೆ. ಮಾಸ್ಟರ್ ಬೆಡ್‌ರೂಮ್‌ನಲ್ಲಿ ಚೇಂಜಿಂಗ್ ರೂಮ್ ಇಡುವ ಉತ್ತಮ ಸ್ಥಳವೆಂದರೆ ಕೋಣೆಯ ಪಶ್ಚಿಮ ಅಥವಾ ಉತ್ತರ ದಿಕ್ಕು ಆಗಿದೆ. ಹಾಗೆಯೇ, ಶೌಚಾಲಯವು ಹಾಸಿಗೆಯ ದಿಕ್ಕಿಗೆ ಇರಬಾರದು ಮತ್ತು ಶೌಚಾಲಯದ ಬಾಗಿಲನ್ನು ಯಾವಾಗಲೂ ಮುಚ್ಚಿಯೇ ಇರಬೇಕು.
ಇದನ್ನೂ ನೋಡಿ: ವಾಸ್ತು ಪ್ರಕಾರ ಮಲಗಲು ಸರಿಯಾದ ದಿಕ್ಕು
ಪೂರ್ವ ದಿಕ್ಕಿನ ಮನೆಗೆ ವಾಸದ ಕೋಣೆ ವಾಸ್ತು
ಪೂರ್ವ ದಿಕ್ಕಿನ ಮನೆಗೆ ವಾಸದ ಕೋಣೆಯು ಈಶಾನ್ಯ ದಿಕ್ಕಿಗೆ ಇರಬೇಕು. ವಾಸ್ತು ಯೋಜನೆ ಪ್ರಕಾರ ಇದನ್ನು ಮಂಗಳಕರ ಎಂದು ಪರಿಗಣಿಸಲಾಗಿದೆ. ಹಾಗೆಯೇ, ಉತ್ತರ ಮತ್ತು ಪೂರ್ವ ಬದಿಯ ಗೋಡೆಗಳು ದಕ್ಷಿಣ ಮತ್ತು ಪಶ್ಚಿಮಕ್ಕಿಂತ ಸ್ವಲ್ಪ ಸಣ್ಣದಾಗಿರುತ್ತವೆ ಮತ್ತು ತೆಳ್ಳಗಾಗಿರುತ್ತವೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಇದು ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಸಂಪತ್ತು ಮತ್ತು ಯಶಸ್ಸನ್ನು ಆಕರ್ಷಿಸುತ್ತದೆ.
ಪೂರ್ವ ದಿಕ್ಕಿನ ಮನೆಗೆ ಊಟದ ಕೋಣೆ ವಾಸ್ತು
ಪೂರ್ವ ದಿಕ್ಕಿನ ಮನೆಗೆ, ಊಟದ ಕೋಣೆಯು ಪೂರ್ವ, ಪಶ್ಚಿಮ ಅಥವಾ ದಕ್ಷಿಣ ದಿಕ್ಕಿನಲ್ಲಿ ಅಡುಗೆಮನೆಯ ಮುಂದುವರಿಕೆಯಾಗಿ ಇರಬೇಕು. ಹಾಗೆಯೇ, ಅಡುಗೆ ಮನೆಯ ಬಾಗಿಲು ಪ್ರವೇಶ ದ್ವಾರದ ಕಡೆಗೆ ಮುಖವಾಗಿ ಇರಬಾರದು. ವಾಸ್ತು ಯೋಜನೆ ಪ್ರಕಾರ ಕುಳಿತುಕೊಳ್ಳುವ ವ್ಯವಸ್ಥೆಯು ಪೂರ್ವ, ಉತ್ತರ ಅಥವಾ ಪಶ್ಚಿಮ ದಿಕ್ಕಿಗೆ ಮುಖವಾಗಿ ಕುಳಿತುಕೊಳ್ಳುವಂತೆ ಇರಬೇಕು. ಕುಟುಂಬದ ಮುಖ್ಯಸ್ಥರು ಪೂರ್ವ ದಿಕ್ಕಿಗೆ ಮುಖ ಮಾಡಿ ಕುಳಿತುಕೊಳ್ಳಬೇಕು ಮತ್ತು ಕುಟುಂಬದ ಇತರರು ಪೂರ್ವ, ಉತ್ತರ ಅಥವಾ ಪಶ್ಚಿಮ ದಿಕ್ಕಿಗೆ ಮುಖ ಮಾಡಿ ಕುಳಿತುಕೊಳ್ಳಬೇಕು.
ಪೂರ್ವ ದಿಕ್ಕಿನ ಮನೆಯಲ್ಲಿ ಪೂಜೆ ಕೋಣೆಯ ವಾಸ್ತು
ಪೂರ್ವ ದಿಕ್ಕಿನ ಮನೆಯಲ್ಲಿ ಪೂಜೆ ಕೋಣೆಯ ವಾಸ್ತು ಯೋಜನೆ ಮಾಡುವಾಗ ವಾಸ್ತು ನಿಯಮಗಳನ್ನು ಅನುಸರಿಸುವುದು ಅತ್ಯಂತ ಅಗತ್ಯ. ಏಕೆಂದರೆ, ಪೂಜೆ ಕೋಣೆಯಲ್ಲಿ ದೇವರ ಮೂರ್ತಿಗಳನ್ನು ನಾವು ಇಡುವುದರಿಂದ, ಅದು ಅತ್ಯಂತ ಪವಿತ್ರ ಸ್ಥಳವಾಗಿರುತ್ತದೆ.
ಪೂಜೆ ಕೋಣೆಗೆ ವಾಸ್ತು ಮಾರ್ಗಸೂಚಿಗಳು ಪ್ರಕಾರ, ಪೂರ್ವ ದಿಕ್ಕಿನ ಮನೆಗೆ ಪೂಜೆ ಕೋನೆಯು ಆಗ್ನೇಯ ದಿಕ್ಕಿನಲ್ಲಿ ಇರಬೇಕು. ಆದಾಗ್ಯೂ, ಪೂರ್ವ ದಿಕ್ಕಿನ ಮನೆಯಲ್ಲಿ ಪೂಜೆ ಕೋಣೆಗೆ ಈ ಸ್ಥಳ ಲಭ್ಯವಿಲ್ಲದಿದ್ದರೆ, ಉತ್ತರ ಅಥವಾ ಪೂರ್ವ ದಿಕ್ಕಿನಂತಹ ಪರ್ಯಾಯ ದಿಕ್ಕುಗಳನ್ನೂ ವಾಸ್ತು ಪ್ಲಾನ್ ನೀಡುತ್ತದೆ. ಕೋಣೆಯಲ್ಲಿ ದೇವರಿಗೆ ನಮಸ್ಕಾರ ಮಾಡುವ ವ್ಯಕ್ತಿಯು ಈ ದಿಕ್ಕಿಗೆ ಮುಖ ಮಾಡಿರುತ್ತಾರೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಪೂಜೆ ಕೋಣೆಯ ಛಾವಣಿಯು ಇತರ ಕೋಣೆಗಿಂತ ಕಡಿಮೆ ಎತ್ತರದಲ್ಲಿ ಇರಬೇಕು.
ಬಾತ್‌ರೂಮ್‌ನಂತಹ ಪ್ರದೇಶಗಳಿಂದ ಪೂಜೆ ಕೋಣೆಯನ್ನು ದೂರದಲ್ಲಿ ಇಟ್ಟು, ಪೂರ್ವ ದಿಕ್ಕಿನ ಮನೆಯ ವಾಸ್ತು ಯೋಜನೆಯನ್ನು ಮಾಡುವುದು ಉತ್ತಮವಾಗಿದೆ. ಪೂಜೆ ಕೋಣೆಯು ಶೌಚಾಲಯದ ಪಕ್ಕದಲ್ಲಿ ಇರಬಾರದು.
ಪೂರ್ವ ದಿಕ್ಕಿನ ಮನೆಗೆ ಅಧ್ಯಯನದ ಕೋಣೆ ವಾಸ್ತು
ಪೂರ್ವ ದಿಕ್ಕಿನ ಫ್ಲಾಟ್‌ನಲ್ಲಿ ವಾಸ್ತು ಪ್ರಕಾರ ಅಧ್ಯಯನದ ಕೋಣೆಯು ಮನೆಯ ಪೂರ್ವ ಅಥವಾ ಪಶ್ಚಿಮ ದಿಕ್ಕಿಗೆ ಇರಬೇಕು. ಇನ್ನು ಉತ್ತರವು ಎರಡನೇ ಉತ್ತಮ ದಿಕ್ಕು ಆಗಿರುತ್ತದೆ. ಆದರೆ, ಅಧ್ಯಯನದ ಕೋಣೆಯ ಹಿಂಬದಿಯಲ್ಲೇ ಬಾಗಿಲು ಇರದಂತೆ ನೋಡಿಕೊಳ್ಳಿ. ಹಾಗೆಯೇ, ಅಧ್ಯಯನದ ಟೇಬಲ್ ಮುಂಭಾಗದಲ್ಲಿ ಮುಕ್ತ ಸ್ಥಳ ಇರಬೇಕು. ಒಂದು ವೇಳೆ ಗೋಡೆಯ ಬಳಿಯೇ ನೀವು ಟೇಬಲ್ ಹಾಕಿಕೊಳ್ಳಬೇಕು ಎಂದಾದಲ್ಲಿ, ಅಧ್ಯಯನದ ಟೇಬಲ್ ಮತ್ತು ಅದಕ್ಕೆ ಹೊಂದಿಕೊಂಡಿರುವ ಗೋಡೆಯ ಮಧ್ಯೆ ಸ್ವಲ್ಪ ಅಂತರವನ್ನು ಬಿಡಬಹುದು. ಇದರಿಂದ ಶಕ್ತಿ ಸಂಚಯನ ನಡೆಯುತ್ತದೆ.
ಪೂರ್ವ ದಿಕ್ಕಿನ ಮನೆಗೆ ಮೆಟ್ಟಿಲಿನ ವಾಸ್ತು
ವಾಸ್ತು ಪ್ರಕಾರ ಪೂರ್ವ ದಿಕ್ಕಿನ ಮನೆಗೆ ಮನೆಯ ಈಶಾನ್ಯ ಮೂಲೆಯಲ್ಲಿ ಮೆಟ್ಟಿಲನ್ನು ಇಡಬೇಡಿ. ಪೂರ್ವ ದಿಕ್ಕಿನ ಮನೆಯಲ್ಲಿ ಮೆಟ್ಟಿಲು ಇಡುವುದಕ್ಕೆ ಉತ್ತಮವಾದ ಸ್ಥಳವೆಂದರೆ, ಮನೆಯ ಆಗ್ನೇಯ ಮೂಲೆ ಅಥವಾ ವಾಯವ್ಯ ಮೂಲೆ. ಮಟ್ಟಿಲು ಮನೆಯ ಮಧ್ಯದ ಆಯತದಲ್ಲಿ ಇರಬಾರದು. ಮೆಟ್ಟಿಲು ಎಂದಿಗೂ ಪ್ರದಕ್ಷಿಣಾಕಾರದಲ್ಲಿ ತಿರುಗುವಂತೆಯೇ ಇರಬೇಕು. ಮೆಟ್ಟಿಲಿನ ಕೆಳಗೆ ಯಾವುದೇ ಕೋಣೆಯನ್ನು ನಿರ್ಮಾಣ ಮಾಡಬಾರದು. ಆದರೆ, ಈ ಸ್ಥಳವನ್ನು ಸ್ಟೊರೇಜ್ ಆಗಿ ಬಳಕೆ ಮಾಡಬಹುದು.
ಪೂರ್ವ ದಿಕ್ಕಿನ ಮನೆ ಶೌಚಾಲಯದ ವ್ಯವಸ್ಥೆ
ಪೂರ್ವ ದಿಕ್ಕಿನ ಮನೆ ವಾ ಯೋಜನೆ ಪ್ರಕಾರ ನಿಮ್ಮ ಮನೆಯನ್ನು ವಿನ್ಯಾಸ ಮಾಡುವಾಗ, ಶೌಚಾಲಯವು ಆಗ್ನೇಯ ಅಥವಾ ವಾಯವ್ಯ ಬದಿಯಲ್ಲಿ ಇರಬೇಕು. ಈಶಾನ್ಯ ದಿಕ್ಕಿನಲ್ಲಿ ಶೌಚಾಲಯಗಳು ಮತ್ತು ಟಾಯ್ಲೆಟ್‌ಗಳನ್ನು ನಿರ್ಮಾಣ ಮಾಡಬೇಡಿ.
ಪೂರ್ವ ದಿಕ್ಕಿನ ಮನೆ ವಾಸ್ತು ಪ್ಲಾನ್: ದೂರವಿಡಬೇಕಾದ ಸಂಗತಿ
- ಈಶಾನ್ಯ ಮೂಲೆಯಲ್ಲಿ ಅಡುಗೆ ಮನೆ ಇರಬಾರದು.
- ಮನೆಯ ಉತ್ತರ ಮತ್ತು ಪೂರ್ವ ದಿಕ್ಕಿನಲ್ಲಿ ಯಾವುದೇ ದೊಡ್ಡ ಮರಗಳು ಇರಬಾರದು.
- ಉತ್ತರ ಮತ್ತು ಈಶಾನ್ಯ ಮೂಲೆಯಲ್ಲಿ ಕಸ, ಕೊಳೆ, ಕಸದತೊಟ್ಟಿಗಳು ಇತ್ಯಾದಿ ಇರಬಾರದು.
- ಮೆಟ್ಟಿಲುಗಳು ಈಶಾನ್ಯ ದಿಕ್ಕಿನಲ್ಲಿ ಇರಬಾರದು.
- ಗ್ಯಾರೇಜ್ ಅನ್ನು ಈಶಾನ್ಯ ದಿಕ್ಕಿನಲ್ಲಿ ಆಯೋಜನೆ ಮಾಡಿರಬಾರದು.
ಪೂರ್ವ ದಿಕ್ಕಿನ ಮನೆ ವಾಸ್ತು: ಗೋಡೆ ಬಣ್ಣಗಳು
ವಾಸ್ತು ಪ್ರಕಾರ ಪೂರ್ವ ದಿಕ್ಕಿನ ಅಪಾರ್ಟ್‌ಮೆಂಟ್‌ನ ಗೋಡೆ ಬಣ್ಣಗಳ ಆಯ್ಕೆಯು ಮನೆ ಪ್ರಕಾಶಮಾನವಾಗಿ ಮತ್ತು ಆಹ್ವಾನ ನೀಡುವಂತಿರುವ ಹಾಗೆ ಇರಬೇಕು. ಹೀಗಾಗಿ, ಸಾಕಷ್ಟು ಸೂರ್ಯನ ಬೆಳಕು ಇಲ್ಲಿ ಬೀಳುವುದು ಅತ್ಯಂತ ಮುಖ್ಯವಾಗಿದೆ. ಮುಂದುವರಿದು, ಪ್ರಕಾಶವನ್ನು ವೃದ್ಧಿಸಲು, ಗೋಡೆಗೆ ಸರಿಯಾದ ಪೇಂಟ್ ಬಣ್ಣವನ್ನು ಆಯ್ಕೆ ಮಾಡುತ್ತೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ. ಪೂರ್ವ ದಿಕ್ಕಿನ ಅಪಾರ್ಟ್‌ಮೆಂಟ್‌ಗೆ ಹಸಿರು ಮತ್ತು ನೀಲಿ ಬಣ್ಣಗಳು ಉತ್ತಮ ಆಯ್ಕೆಗಳಾಗಿವೆ. ಶಾಂತ ಭಾವವನ್ನು ನೀಡುವುದರ ಜೊತೆಗೆ, ಇವು ಕೋಣೆಯನ್ನು ಹೆಚ್ಚು ಆಹ್ಲಾದಕರ ಮತ್ತು ಸುಂದರವನ್ನಾಗಿಸುತ್ತವೆ, ಕನಿಷ್ಠ ಥೀಮ್‌ಗಾಗಿ, ಬಿಳಿ ಮತ್ತು ಮೃದು ಶೇಡ್‌ಗಳ ಕಲರ್ ಕಾಂಬಿನೇಶನ್ ಅನ್ನು ಬಳಸಿ.
ಪೂರ್ವ ದಿಕ್ಕಿನ ಮನೆ ವಾಸ್ತು: ಕಲಾಕೃತಿಗಳನ್ನು ಇಡುವುದಕ್ಕೆ ಸಲಹೆಗಳು
ಪೂರ್ವ ದಿಕ್ಕಿನ ಕಡೆಗೆ ಮುಖ ಮಾಡಿರುವ ಅಪಾರ್ಟ್‌ಮೆಂಟ್‌ಗಳ ವಾಸ್ತು ಪ್ರಕಾರ, ಕುಟುಂಬದ ಸದಸ್ಯರು ಮತ್ತು ಸ್ನೇಹಿತರ ಜೊತೆಗಿನ ಸಂಬಂಧಗಳನ್ನು ಸುಧಾರಿಸಲು ಮತ್ತು ಖ್ಯಾತಿಯನ್ನು ಆಕರ್ಷಿಸಲು ಉದಯಿಸುತ್ತಿರುವ ಸೂರ್ಯನ ಪೇಂಟಿಂಗ್‌ಗಳನ್ನು ಪೂರ್ವದಲ್ಲಿ ಇಡಬಹುದು. ಏಳು ಕುದುರೆಗಳು ನೀರಿನಲ್ಲಿ ಜಿಗಿಯುತ್ತಿರುವ ಪೇಂಟಿಂಗ್ ಅನ್ನು ವಾಸದ ಕೋಣೆಯಲ್ಲಿ ಪೂರ್ವ ದಿಕ್ಕಿನ ಗೋಡೆಗೆ ಹಾಕಬಹುದು. ಇದು ಸಂಪತ್ತು ಆಕರ್ಷಿಸಲು ಸಹಾಯವಾಗುತ್ತದೆ. ಹಸಿರು ಬಣ್ಣವು ವಾಯುವನ್ನು ಸೂಚಿಸುತ್ತದೆ ಮತ್ತು ಇದು ಪೂರ್ವ ದಿಕ್ಕಿಗೆ ಸೂಚ್ಯವಾಗಿದೆ. ಹಚ್ಚ ಹಸಿರು ಮರಗಳು, ಭೂಮಿ, ಅರಣ್ಯ ಇತ್ಯಾದಿಯು ವಾಸ್ತು ಶಾಸ್ತ್ರದ ಪ್ರಕಾರ ಪ್ರಗತಿಯನ್ನು ಪ್ರತಿನಿಧಿಸುತ್ತವೆ. ಇಂತಹ ಪೇಂಟಿಂಗ್‌ಗಳನ್ನು ಪೂರ್ವದ ಗೋಡೆಯಲ್ಲಿ ಪ್ರದರ್ಶಿಸಬಹುದು. ಹಾಗೆಯೇ, ಕುಟುಂಬದ ಸೌಹಾರ್ದ ಮತ್ತು ಖುಷಿ ನೆಲೆಸಲು, ಪೂರ್ವ ದಿಕ್ಕಿನಲ್ಲಿ ನಗುವ ಬುದ್ಧನ ಪ್ರತಿಮೆಯನ್ನು ಇಡಬಹುದು.
ಪೂರ್ವ ದಿಕ್ಕಿನ ಮನೆಗೆ ನೀರಿನ ಟ್ಯಾಂಕ್‌ನ ವಾಸ್ತು
ನೆಲದಡಿಯಲ್ಲಿ ನೀರಿನ ಟ್ಯಾಂಕ್‌ಗೆ ಸೂಕ್ತ ಸ್ಥಳವೆಂದರೆ ಈಶಾನ್ಯವಾಗಿದೆ. ನೆಲದಡಿಯಲ್ಲಿ ವಾಟರ್ ಟ್ಯಾಂಕ್ ಅನ್ನು ನಿರ್ಮಿಸಲು ಪೂರ್ವ, ಈಶಾನ್ಯ ದಿಕ್ಕನ್ನೂ ಬಳಸಿಕೊಳ್ಳಬಹುದು. ಓವರ್‌ಹೆಡ್ ವಾಟರ್ ಟ್ಯಾಂಕ್‌ಗಳಿಗೆ ಸೂಕ್ತ ದಿಕ್ಕು ಎಂದರೆ ನೈಋತ್ಯ ಅಥವಾ ಪಶ್ಚಿಮ ಆಗಿರುತ್ತದೆ. ವಾಸ್ತು ಪ್ರಕಾರ, ಮಧ್ಯದಲ್ಲಿ ಎಂದಿಗೂ ವಾಟರ್ ಟ್ಯಾಂಕ್ ಇಡಬೇಡಿ.
ಪೂರ್ವ ದಿಕ್ಕಿನ ಮನೆಯಲ್ಲಿ ಬಾಲ್ಕನಿ ಅಥವಾ ತೆರೆದ ಸ್ಥಳ
ಪೂರ್ವ ದಿಕ್ಕಿನ ಮನೆಯಲ್ಲಿ ವಾಸ್ತು ಪ್ರಕಾರ ಪೂರ್ವ ದಿಕ್ಕಿಗೆ ಸಾಮಾನ್ಯವಾಗಿ ತೆರೆದ ಸ್ಥಳವನ್ನು ಬಿಡಲಾಗುತ್ತದೆ. ಯಾವುದೇ ಅಡ್ಡಿ ಇಲ್ಲದೇ ಮನೆಗೆ ಸೂರ್ಯನ ಬೆಳಕು ಬರಲಿ ಎಂಬ ಉದ್ದೇಶದಿಂದ ಹೀಗೆ ಮಾಡಲಾಗುತ್ತದೆ. ಇದು ಋಣಾತ್ಮಕ ಶಕ್ತಿಯನ್ನು ನಿವಾರಿಸುತ್ತದೆ ಮತ್ತು ಧನಾತ್ಮಕ ಶಕ್ತಿಯನ್ನು ಪ್ರೋತ್ಸಾಹಿಸುತ್ತದೆ. ಹೀಗಾಗಿ, ಈ ರೀತಿಯ ಪೂರ್ವ ದಿಕ್ಕಿನ ಮನೆಯ ವಾಸ್ತು ಯೋಜನೆಯು ನಿವಾಸಿಗಳಿಗೆ ಉತ್ತಮ ಆರೋಗ್ಯವನ್ನು ತರುತ್ತದೆ. ಪೂರ್ವ ದಿಕ್ಕಿನ ಮೂಲೆಯನ್ನು ತಡೆಯುವುದರಿಂದ ಮಗು ಜನನದಲ್ಲಿ ತೊಂದರೆ ಸೇರಿದಂತೆ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.
ಪೂರ್ವ ದಿಕ್ಕಿನ ಮನೆ ವಿಚಾರದಲ್ಲಿ ಬೇಕು ಮತ್ತು ಬೇಡಗಳು
ನಿಮ್ಮ ಪೂರ್ವ ದಿಕ್ಕಿನ ಮನೆಗೆ ಮಾಡಬೇಕಿರುವುದು
- ಮ್ಯಾಗ್ನೆಟಿಕ್ ಕಂಪಾಸ್ ಬಳಸಿಕೊಂಡು ನಿಜವಾದ ಪೂರ್ವ ದಿಕ್ಕನ್ನು ಗುರುತಿಸಿಕೊಳ್ಳಿ.
- ಮುಖ್ಯ ದ್ವಾರವು ಈ ಮೇಲೆ ನಮೂದಿಸಿದ ಎರಡು ಪಾದಗಳಲ್ಲಿ ಅಂದರೆ ಜಯಂತ ಅಥವಾ ಇಂದ್ರದಲ್ಲಿ ಇಡಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ.
- ದಕ್ಷಿಣ ಮತ್ತು ಪಶ್ಚಿಮ ದಿಕ್ಕಿಗೆ ಹೋಲಿಸಿದರೆ ಉತ್ತರ ಮತ್ತು ಪೂರ್ವ ದಿಕ್ಕುಗಳಲ್ಲಿ ಗೋಡೆಗಳು ಸ್ವಲ್ಪ ಸಣ್ಣದಾಗಿ ಮತ್ತು ತೆಳ್ಳಗಾಗಿರಬೇಕು.
- ಅಡುಗೆಮನೆ ಅನ್ನು ಆಗ್ನೇಯ ಅಥವಾ ಈಶಾನ್ಯ ದಿಕ್ಕಿನಲ್ಲಿ ಯೋಜಿಸಬೇಕು.
- ಅಡುಗೆ ಮಾಡುವಾಗ ನಿಮ್ಮ ಅಡುಗೆ ಮನೆಯನ್ನು ಪೂರ್ವ (ಆಗ್ನೇಯ ದಿಕ್ಕಿನ ಅಡುಗೆ ಮನೆಯಲ್ಲಿ) ಅಥವಾ ಪಶ್ಚಿಮ (ಈಶಾನ್ಯ ದಿಕ್ಕಿನ ಅಡುಗೆ ಮನೆಯಲ್ಲಿ) ದಿಕ್ಕಿಗೆ ಇಡಿ.
- ಪೂಜೆ ಕೋಣೆ ಮತ್ತು ವಾಸದ ಕೋಣೆಯು ಈಶಾನ್ಯ ದಿಕ್ಕಿನಲ್ಲಿ ಇದ್ದರೆ, ಅದು ಮಂಗಳಕರ ಎಂದು ಪರಿಗಣಿಸಲಾಗುತ್ತದೆ.
- ಈಶಾನ್ಯ ದಿಕ್ಕಿನಲ್ಲಿ ಅತಿಥಿ ಕೋಣೆಯನ್ನು ನೀವು ಯೋಜಿಸಬಹುದು.
- ದಕ್ಷಿಣದಿಂದ ಉತ್ತರಕ್ಕೆ ಇಳಿಜಾರಾಗಿರುವ ಸ್ಥಳವನ್ನು ಉತ್ತಮ ಎಂದು ಪರಿಗಣಿಸಲಾಗುತ್ತದೆ.
- ನೈಋತ್ಯ ದಿಕ್ಕಿನಲ್ಲಿ ಮುಖ್ಯ ಬೆಡ್‌ರೂಮ್ ಇದ್ದರೆ ಅದು ಉತ್ತಮ ಎಂದು ಪರಿಗಣಿಸಲಾಗಿದೆ.
- ಮನೆಯ ಪೂರ್ವ ಮತ್ತು ಉತ್ತರ ಬದಿಯಲ್ಲಿ ಹೆಚ್ಚು ತೆರೆದ ಸ್ಥಳವನ್ನು ಬಿಡಿ.
- ಬಾಗಿಲು ಪೂರ್ವ ದಿಕ್ಕಿಗೆ ಇದ್ದಲ್ಲಿ ಮರದ ಹೆಸರಿನ ಪಟ್ಟಿ ಹೆಚ್ಚು ಸೂಕ್ತವಾಗಿರುತ್ತದೆ.
- ಸ್ಥಳದ ದಕ್ಷಿಣ ಮತ್ತು ಪಶ್ಚಿಮದ ದಿಕ್ಕಿನಲ್ಲಿ ಗಡಿಯ ಗೋಡೆಯು ಎತ್ತರದಲ್ಲಿ ಇರಬೇಕು.
- ಪೂರ್ವ ದಿಕ್ಕಿನ ಮನೆಯನ್ನು ವಿನ್ಯಾಸ ಮಾಡುವಾಗ, ಛಾವಣಿಯ ಇಳಿಜಾರು ಪೂರ್ವಕ್ಕೆ ಇರುತ್ತದೆ ಎಂದು ಖಚಿತಪಡಿಸಿಕೊಳ್ಳಿ. ಛಾವಣಿ ಅಥವಾ ಶೀಟ್‌ಗಳು ಪೂರ್ವದ ಕಡೆಗೆ ತಿರುಗಿರಬೇಕು. ಇದು ಮಂಗಳಕರವಾಗಿರುತ್ತದೆ.
- ಉತ್ತರ ದಿಕ್ಕಿನಲ್ಲಿ ಭೂಮಿಗೆ ತಾಗಿಕೊಂಡಿರುವ ಸ್ಥಳವನ್ನೇ ಆಯ್ದುಕೊಳ್ಳಿ. ಇದು ಅದೃಷ್ಟಯುತವಾಗಿದೆ ಮತ್ತು ಸಂಪತ್ತು ಮತ್ತು ಸಂಪನ್ಮೂಲವನ್ನು ತರುತ್ತದೆ ಎಂದು ನಂಬಲಾಗಿದೆ.
- ಮನೆಯಲ್ಲಿ ಯಾರಾದರೂ ವಿದ್ಯಾರ್ಥಿ ಇದ್ದರೆ, ಈಶಾನ್ಯ ವಲಯದಲ್ಲಿ ಕ್ರಿಸ್ಟಲ್ ಗ್ಲೋಬ್ ಇಡಿ.
- ಪ್ರಭಾವಳಿಯನ್ನು ಹೆಚ್ಚಿಸಲು ವಾರದಲ್ಲಿ ಎರಡು ಬಾರಿ ಮೌಂಟನ್ ಸಾಲ್ಟ್ ಬಳಸಿ ಮನೆಯನ್ನು ಶುದ್ಧೀಕರಿಸಿ.
ನಿಮ್ಮ ಪೂರ್ವಾಭಿಮುಖವಾದ ಮನೆಗೆ ಇದನ್ನು ಮಾಡಬೇಡಿ
- ಸೂರ್ಯೋದಯಕ್ಕೆ ಅನುಗುಣವಾಗಿ ಪೂರ್ವ ದಿಕ್ಕನ್ನು ನಿರ್ಧರಿಸುವುದನ್ನು ತಪ್ಪಿಸಿ
- ಪೂರ್ವದಲ್ಲಿ ಎತ್ತರದ ಮರಗಳನ್ನು ನೆಡಬೇಡಿ, ಇದು ಅಮೂಲ್ಯವಾದ ಮತ್ತು ಸಕಾರಾತ್ಮಕ ಬೆಳಗಿನ ಸೂರ್ಯನ ಬೆಳಕನ್ನು ನಿರ್ಬಂಧಿಸುತ್ತದೆ.
- ಮುಖ್ಯ ದ್ವಾರದ ಹೊರಭಾಗದಲ್ಲಿ ಕಾರಂಜಿ ಇಡಬೇಡಿ ಅಥವಾ ಯಾವುದೇ ಅಲಂಕಾರಿಕ ವಸ್ತುಗಳನ್ನು ಇಡಬೇಡಿ.
- ಯಾವುದೇ ಕಡೆಯಿಂದ ‘ಟಿ’ ಜಂಕ್ಷನ್ ಇರುವ ಪ್ಲಾಟ್‌ಗಳನ್ನು ಇಡಬೇಡಿ. ಪ್ಲಾಟ್‌ನ ಆಗ್ನೇಯ ಮೂಲೆಗೆ ಚಾಚಿಕೊಂಡಿರುವ ಸ್ಟ್ರೀಟ್ ಫೋಕಸ್ ತಪ್ಪಿಸಿ.
- ಶೂ ರ್ಯಾಕ್ ಅನ್ನು ಎಂದಿಗೂ ಆಗ್ನೇಯ ಅಥವಾ ಪೂರ್ವ ದಿಕ್ಕಿನಲ್ಲಿ ಇಡಬೇಡಿ.
- ದಕ್ಷಿಣ ಅಥವಾ ಪಶ್ಚಿಮ ದಿಕ್ಕಿನ ಭೂಮಿಗೆ ಲಗತ್ತಿಸಲಾದ ಆಸ್ತಿಯನ್ನು ಖರೀದಿಸಬೇಡಿ
- ಈಶಾನ್ಯ ಮೂಲೆಯಲ್ಲಿ ಬೆಡ್‌ರೂಮ್, ಟಾಯ್ಲೆಟ್‌ಗಳು ಮತ್ತು ಸೆಪ್ಟಿಕ್ ಟ್ಯಾಂಕ್‌ಗಳು ಇರಬಾರದು
- ಈಶಾನ್ಯ ಮೂಲೆಯಲ್ಲಿ ಅಡುಗೆ ಮನೆ ಇರಬಾರದು
- ಮನೆಯ ಉತ್ತರ ಮತ್ತು ಪೂರ್ವ ದಿಕ್ಕಿನಲ್ಲಿ ದೊಡ್ಡ ಮರಗಳು ಇರಬಾರದು
- ಕಸ, ಕೊಳೆ, ಕಸದತೊಟ್ಟಿಗಳು ಇತ್ಯಾದಿ ಉತ್ತರ ಮತ್ತು ಈಶಾನ್ಯ ಮೂಲೆಯಲ್ಲಿ ಇರಬಾರದು.
- ಈಶಾನ್ಯ ದಿಕ್ಕಿನಲ್ಲಿ ಗ್ಯಾರೇಜ್ ಮತ್ತು ಮೆಟ್ಟಿಲುಗಳನ್ನು ಇಡಬೇಡಿ.
- ಈಶಾನ್ಯ ಮೂಲೆಯಲ್ಲಿ ಅಂಚುಗಳು ಅಥವಾ ಕತ್ತರಿಸಿರುವ ಭಾಗ ಇರಬಾರದು.
- ಪೂರ್ವ ದಿಕ್ಕನ್ನು ಸಂಪೂರ್ಣ ಬ್ಲಾಕ್ ಮಾಡಬೇಡಿ. ಇದರಿಂದ ಮನೆಯ ಒಳಗೆ ಋಣಾತ್ಮಕ ಶಕ್ತಿಯು ಸೇರಿಕೊಳ್ಳುತ್ತದೆ.
ಪೂರ್ವ ದಿಕ್ಕಿನ ಮನೆ ಚೆನ್ನಾಗಿರುತ್ತದೆಯೇ?
ಪೂರ್ವದಲ್ಲಿ ಹೆಚ್ಚು ವಿಶಾಲವಾಗಿರುವ ಮನೆಗಳು ಹೆಚ್ಚಿನ ಅದೃಷ್ಟ ನೀಡುತ್ತವೆ ಎಂದು ಸಾಮಾನ್ಯವಾಗಿ ನಂಬಲಾಗಿದೆ. ಇತರ ದಿಕ್ಕುಗಳಿಗಿಂತ ಪೂರ್ವದಲ್ಲಿ ವಿಶಾಲವಾದ ಮತ್ತು ತಗ್ಗು ಪ್ರದೇಶದಲ್ಲಿರುವ ಮನೆಗಳನ್ನು ಅದೃಷ್ಟವೆಂದು ಪರಿಗಣಿಸಲಾಗುತ್ತದೆ. ಪೂರ್ವಾಭಿಮುಖವಾಗಿರುವ ಮನೆಯು ಅಪಾರ ಪ್ರಮಾಣದ ಸಂಪತ್ತು ಗಳಿಕೆಗೆ ಸಹಾಯ ಮಾಡುತ್ತದೆ ಎಂದು ಕೆಲವರು ನಂಬುತ್ತಾರೆ. ಆದಾಗ್ಯೂ, ಅಂತಹ ಆಸ್ತಿಯನ್ನು ಖರೀದಿಸುವುದು ಕೆಲವರಿಗೆ ಒಳ್ಳೆಯದಲ್ಲ.
ವಾಸ್ತು ತಜ್ಞರ ಪ್ರಕಾರ, ಆಸ್ತಿಯ ದಿಕ್ಕು ಒಟ್ಟಾರೆ ವಾಸ್ತುವನ್ನು ನಿರ್ಧರಿಸಲು ಸಾಧ್ಯವಿಲ್ಲ. ವಾಸದ ಕೋಣೆ, ಮಲಗುವ ಕೋಣೆ, ಅಡುಗೆಮನೆ, ಶೌಚಾಲಯಗಳು ಮತ್ತು ಪೂಜಾ ಕೋಣೆ ಸೇರಿದಂತೆ ಮನೆಯ ವಿವಿಧ ಕೋಣೆಗಳ ಸ್ಥಾನವು ಪಾತ್ರವನ್ನು ವಹಿಸುತ್ತದೆ. ವಾಸ್ತು ಪ್ರಕಾರ ಈ ಕೋಣೆಗಳ ಸರಿಯಾದ ನಿಯೋಜನೆಯು ಮನೆ ಏಳಿಗೆಯನ್ನು ಖಚಿತಪಡಿಸುತ್ತದೆ.
ಪೂರ್ವ ದಿಕ್ಕಿನ ಮನೆಗಳು ಯಾರಿಗೆ ಸೂಕ್ತ?
ವಾಸ್ತು ತಜ್ಞರ ಪ್ರಕಾರ, ಪ್ರತಿ ಮನೆಯೂ ವ್ಯಕ್ತಿಯ ಹಾಗೆಯೇ ವಿಶಿಷ್ಟವಾಗಿರುತ್ತದೆ. ಪ್ರತಿ ಮನೆಯೂ ಎಲ್ಲರಿಗೂ ಹೊಂದಿಕೆಯಾಗುವುದಿಲ್ಲ. ಪೂರ್ವ ದಿಕ್ಕಿನ ಮನೆಯಲ್ಲಿ, ಸೂರ್ಯ ಪ್ರಮುಖ ವಸ್ತುವಾಗಿರುತ್ತಾನೆ ಮತ್ತು ಅಧಿಕಾರ, ಶಕ್ತಿ ಮತ್ತು ಸೌಂದರ್ಯಕ್ಕೆ ಪ್ರತೀಕವಾದ ಉದ್ಯೋಗವನ್ನು ಆತ ಪ್ರತಿನಿಧಿಸುತ್ತಾನೆ. ಪೂರ್ವ ದಿಕ್ಕು ಗಾಳಿ, ಕ್ರಿಯಾಶೀಲತೆ, ಗಮನ ಕೇಂದ್ರೀಕರಣ ಮತ್ತು ರಕ್ಷಣೆಯನ್ನೂ ಪ್ರತಿನಿಧಿಸುತ್ತದೆ.
- ಸರ್ಕಾರಿ ಕಚೇರಿಗಳಲ್ಲಿ ಉದ್ಯೋಗಿಯಾಗಿರುವವರು ಅಥವಾ ವ್ಯಾಪಾರ ಹೊಂದಿರುವ ವ್ಯಕ್ತಿಗಳಿಗೆ ಪೂರ್ವ ದಿಕ್ಕಿನ ಮನೆಗಳು ಸೂಕ್ತವಾಗಿರುತ್ತವೆ.
- ಇದನ್ನು ಹೊರತುಪಡಿಸಿ, ಪೂರ್ವ ದಿಕ್ಕಿನ ಮನೆಗಳು ಕ್ರಿಯಾಶೀಲ ವೃತ್ತಿಪರರಾದ ಕಲಾಕಾರರ, ಸಂಗೀತಗಾರರು ಮತ್ತು ನೃತ್ಯಗಾರರಿಗೂ ಸೂಕ್ತವಾಗಿವೆ.
- ಪೂರ್ವಾಭಿಮುಖವಾಗಿರುವ ಮನೆಗಳು ವಾಣಿಜ್ಯೋದ್ಯಮಿಗಳಿಗೆ ಮತ್ತು ಪ್ರವಾಸ ಉದ್ಯಮ, ಈವೆಂಟ್ ಮ್ಯಾನೇಜ್‌ಮೆಂಟ್ ಮತ್ತು ಶಿಕ್ಷಣತಜ್ಞರಿಗೆ ಸೂಕ್ತವಾಗಿದೆ.
ವಾಸ್ತುವಿನಲ್ಲಿ ಪೂರ್ವ ದಿಕ್ಕಿನಲ್ಲಿ ಪ್ರವೇಶವು ವ್ಯಕ್ತಿಗೆ ಹೊಂದುತ್ತದೆಯೇ ಎಂಬುದನ್ನು ತಿಳಿಯುವುದರ ಜೊತೆಗೆ, ವ್ಯಕ್ತಿ ಜಾತಕವನ್ನೂ ನೋಡುವುದು ಅತ್ಯಂತ ಅಗತ್ಯ. ವಿಶಿಷ್ಟ ಜಾತಕವನ್ನು ಹೊಂದಿರುವ ಹಲವು ಸದಸ್ಯರು ಕುಟುಂಬದಲ್ಲಿ ವಾಸಿಸುತ್ತಿರುವಾಗ, ಕುಟುಂಬದ ಮುಖ್ಯಸ್ಥ ಜಾತಕವನ್ನು ಪರಿಗಣಿಸಬೇಕು. ಇದೇ ರೀತಿ, ವಾಣಿಜ್ಯಿಕ ಸ್ವತ್ತಿಗೆ, ಸ್ವತ್ತಿನ ಮಾಲೀಕರ ಜಾತಕವನ್ನು ಪರಿಗಣಿಸಬೇಕು.
ಕೆಲವು ನಕ್ಷತ್ರಗಳ ವ್ಯಕ್ತಿಗಳಿಗೆ ಪೂರ್ವ ದಿಕ್ಕಿನ ಜಾಗ ಅಥವಾ ಸ್ವತ್ತು ವಾಸ್ತು ಪ್ರಕಾರ ಅನುಕೂಲಕರವಾಗಿರುತ್ತದೆ. ಈ ನಕ್ಷತ್ರಗಳೆಂದರೆ:
- ಮೇಷ
- ಸಿಂಹ
- ಧನು
ಇದನ್ನೂ ನೋಡಿ: ಗೋಡೆ ಗಡಿಯಾರಕ್ಕೆ ವಾಸ್ತು ಸಲಹೆಗಳು
ಪೂರ್ವ ದಿಕ್ಕಿನ ಮನೆಯಲ್ಲಿ ಸಾಮಾನ್ಯ ವಾಸ್ತು ದೋಷಗಳು
- ಮನ್ನಣೆ ಪಡೆಯುವಲ್ಲಿ ಸಮಸ್ಯೆ ಅಥವಾ ಆರೋಗ್ಯ ಸಮಸ್ಯೆಗಳು ಅಥವಾ ಕುಟುಂಬ ಸದಸ್ಯರ ಸಂಬಂಧಗಳಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದರೆ, ಪೂರ್ವ ದಿಕ್ಕಿನಲ್ಲಿ ಋಣಾತ್ಮಕ ಎನರ್ಜಿ ಇದ್ದಿರಬಹುದು. ಪೂರ್ವ ದಿಕ್ಕಿನಲ್ಲಿ ಮೆಟ್ಟಿಲುಗಳು, ಶೌಚಾಲಯಗಳು ಅಥವಾ ಅಡುಗೆಮನೆಗಳು ಇರುವುದರಿಂದ ಹೀಗಾಗಿರಬಹುದು.
- ಇನ್ನೊಂದು ಸಾಮಾನ್ಯ ವಾಸ್ತು ದೋಷವೆಮದರೆ, ಪೂರ್ವ ದಿಕ್ಕಿಗೆ ಇರುವ ಬಾಗಿಲು ಮತ್ತು ಪೂರ್ವದಿಕ್ಕಿಗೆ ಹೊರಮುಖವಾಗಿರುವುದು. ವಾಸ್ತು ಪ್ರಕಾರ, ಒಟ್ಟು ಬಾಗಿಲುಗಳ ಸಂಖ್ಯೆ ಬೆಸ ಸಂಖ್ಯೆಯಲ್ಲಿರಬಾರದು ಮತ್ತು ಸೊನ್ನೆಯಿಂದಲೂ ಕೊನೆಗೊಳ್ಳಬಾರದು.
- ಪೂರ್ವ ದಿಕ್ಕಿನಲ್ಲಿ ತುಂಬಾ ಸಾಮಗ್ರಿಗಳು ಇದ್ದರೆ ಅದು ಋಣಾತ್ಮಕ ಎನರ್ಜಿಯನ್ನು ತರಬಹುದು. ಪೂರ್ವ ದಿಕ್ಕಿನ ಮನೆಗಳಲ್ಲಿ ಸಾಕಷ್ಟು ವಾತಾಯನ ಇರುವಂತೆ ಮನೆ ಮಾಲೀಕರು ಖಚಿತಪಡಿಸಿಕೊಳ್ಳಬೇಕು.
ಪೂರ್ವ ದಿಕ್ಕಿನ ಮನೆಗೆ ಸಸ್ಯಗಳು
ಪೂರ್ವ ದಿಕ್ಕಿನ ಮನೆಯಲ್ಲಿ ಬೆಳೆಯುವ ಕೆಲವು ಸಸ್ಯಗಳೆಂದರೆ:
- ಹೋಲಿ ಬಸಿಲ್ ಸಸ್ಯ
- ಲಕ್ಕಿ ಬಿದಿರಿನ ಸಸ್ಯ
- ಮನಿ ಪ್ಲಾಂಟ್
- ನಿಂಬೆ ಸಸ್ಯ
- ಬಾಳೆ ಗಿಡ
- ಕ್ರೈಸೆಂಥಮಮ್
- ಪ್ಲಮ್ ಬ್ಲಾಸ್ಸಮ್ಸ್
- ಸಿಟ್ರಸ್ ಸಸ್ಯ
- ಡಫೋಡಿಲ್ಸ್
- ಕಮಲ
- ಅಲೋವೆರಾ
ಪೂರ್ವ ದಿಕ್ಕಿನ ಮನೆ ನಿರ್ಮಾಣ ಸಲಹೆಗಳು
ಪೂರ್ವ ದಿಕ್ಕಿನ ಮನೆಯ ಯೋಜನೆಯನ್ನು ಮಾಡುವಾಗ, ಮನೆ ನಿರ್ಮಾಣ ಮಾಡುವುದಕ್ಕೂ ಮೊದಲೇ ಸಾಕಷ್ಟು ತೆರೆದ ಸ್ಥಳ ಇರಲಿ. ಇದರಿಂದ ನಿವಾಸಿಗಳಿಗೆ ಸಾಕಷ್ಟು ಸಂಪತ್ತು ಮತ್ತು ಪ್ರಗತಿ ಸಾಧ್ಯವಾಗುತ್ತದೆ.
ಸೈಟ್‌ನಲ್ಲಿ, ಮುಖ್ಯ ಗೇಟ್ ಈಶಾನ್ಯ ದಿಕ್ಕಿನಲ್ಲಿ ಇರಬೇಕು. ಆದರೆ, ಪೂರ್ವ ಭಾಗದಲ್ಲಿ ಮುಂಭಾಗದ ಕಾಂಪೌಂಡ್ ಗೋಡೆಯು ಪಶ್ಚಿಮ ಭಾಗದ ಕಾಂಪೌಂಡ್ ಗೋಡೆಗಿಂತ ಕಡಿಮೆ ಎತ್ತರದಲ್ಲಿರಬೇಖು.
ಯೋಜನೆ ಮಾಡುವ ಹಂತದಲ್ಲಿ, ಪೂರ್ವ ಭಾಗದಲ್ಲಿ ವರಾಂಡ ಅಥವಾ ಪೊರ್ಟಿಕೋ ಇರುವಂತೆ ನೋಡಿಕೊಳ್ಳಿ. ಇದರಿಂದ ನಿವಾಸಿಗರಿಗೆ ಸಂಪತ್ತು ಮತ್ತು ಉತ್ತಮ ಆರೋಗ್ಯ ಸಿಗುತ್ತದೆ.
ಮುಂಭಾಗದಲ್ಲಿ ನಿರ್ಮಾಣ ಹಂತದಲ್ಲೂ ಕೂಡ ಯಾವುದೇ ಅನಗತ್ಯ ಸಾಮಗ್ರಿಯನ್ನು ಇಡಬೇಡಿ. ಮುಖ್ಯ ಪ್ರವೇಶ ದ್ವಾರದ ಮೂಲಕ ಕಾಸ್ಮಿಕ್ ಸ್ಮೇಸ್‌ನಿಂದ ಬರುವ ಪಾಸಿಟಿವ್ ಎನರ್ಜಿಯನ್ನು ಕಸ ಅಥವಾ ಸಾಮಗ್ರಿಗಳು ತಡೆಯುತ್ತವೆ.
ಪ್ರಮುಖ ಪಶ್ನೋತ್ತರಗಳು (FAQs)
ಪೂರ್ವ ದಿಕ್ಕಿನ ಮನೆ ಎಂದರೇನು?
ನಿಮ್ಮ ಮನೆಯಿಂದ ನೀವು ಹೊರಬರುವಾಗ ನಿಮ್ಮ ಕಂಪಾಸ್‌ನಲ್ಲಿ ತೋರಿಸುವ ದಿಕ್ಕು ಇದು.
ಪೂರ್ವ ದಿಕ್ಕಿನ ಮನೆಯು ವಾಸ್ತು ಪ್ರಕಾರ ಉತ್ತಮವೇ?
ಪೂರ್ವ ದಿಕ್ಕಿನಲ್ಲಿ ಸೂರ್ಯ ಉದಯಿಸುವುದರಿಂದ ಜೀವನ, ಬೆಳಕು ಮತ್ತು ಶಕ್ತಿಯನ್ನು ಪ್ರತಿಬಿಂಬಿಸುತ್ತದೆ. ಇದೇ ಕಾರಣಕ್ಕೆ ಇದನ್ನು ಅದೃಷ್ಟಕರ ಎಂದು ಪರಿಗಣಿಸಲಾಗಿದೆ.
ವಾಸ್ತು ಶಾಸ್ತ್ರದ ಪ್ರಕಾರ ಪೂರ್ವ ದಿಕ್ಕಿನ ಮನೆಗೆ ಯಾವ ಬಾಗಿಲಿನ ಸಾಮಗ್ರಿ ಉತ್ತಮವಾಗಿದೆ?
ಮರದಿಂದ ಮಾಡಿದ ಮತ್ತು ಲೋಹದ ಸಾಮಗ್ರಿಗಳಿಂದ ಅಲಂಕರಿಸಿದ ಬಾಗಿಲು ಪೂರ್ವ ದಿಕ್ಕಿಗೆ ಸೂಕ್ತವಾಗಿರುತ್ತದೆ.
ಪೂರ್ವ ದಿಕ್ಕಿನ ಮನೆ ಉತ್ತಮವೇ ಅಥವಾ ಕೆಟ್ಟದ್ದೇ?
ವಾಸ್ತು ಪ್ರಕಾರ, ಪೂರ್ವ ದಿಕ್ಕಿನ ಮನೆಯು, ಅದರಲ್ಲೂ ವಿಶೇಷವಾಗಿ ಬಹುಮಹಡಿ ಕಟ್ಟಡವು ಉತ್ತಮ ಎಂದು ಪರಿಗಣಿಸಲಾಗಿದೆ.
(ಸುರಭಿ ಗುಪ್ತಾ ಮತ್ತು ಪೂರ್ಣಿಮಾ ಗೋಸ್ವಾಮಿ ಶರ್ಮಾ ಅವರಿಂದ ಮಾಹಿತಿ ಸಹಿತ)