ಮನೆಯಲ್ಲಿ ದೇವಾಲಯ ಇರಿಸಿಕೊಳ್ಳಲು ವಾಸ್ತು ಶಾಸ್ತ್ರದ ಸಲಹೆಗಳು


ಒಂದು ಮನೆಯಲ್ಲಿ ದೇವಸ್ಥಾನ ಅಥವಾ ಪ್ರಾರ್ಥನೆ ಮಾಡುವ ಪ್ರದೇಶಕ್ಕೆ ಬಂದಾಗ, ಮನೆ ನಿವಾಸಿಗಳಿಗೆ ಗರಿಷ್ಠ ಧನಾತ್ಮಕ ಪರಿಣಾಮಗಳನ್ನು ಉಂಟುಮಾಡಲು ಹಲವಾರು ವಾಸ್ತು ಶಾಸ್ತ್ರ ಮಾರ್ಗಸೂಚಿಗಳನ್ನು ಅನುಸರಿಸಬೇಕು. ನಾವು ಮಾಡಬೇಕಾದ ಮತ್ತು ಮಾಡಬಾರದಾದವುಗಳನ್ನು ಪರೀಕ್ಷಿಸುತ್ತೇವೆ

ಮನೆಯಲ್ಲಿ ದೇವಸ್ಥಾನ, ನಾವು ದೇವರನ್ನು ಪೂಜಿಸುವ ಪವಿತ್ರ ಸ್ಥಳವಾಗಿದೆ. ಆದ್ದರಿಂದ, ನೈಸರ್ಗಿಕವಾಗಿ ಇದು ಧನಾತ್ಮಕ ಮತ್ತು ಶಾಂತಿಯುತ ಸ್ಥಳವಾಗಿರಬೇಕು. ದೇವಾಲಯದ ಪ್ರದೇಶ, ವಾಸ್ತು ಶಾಸ್ತ್ರದ ಪ್ರಕಾರ ಇರಿಸಿದಾಗ, ಮನೆ ಮತ್ತು ಅದರ ನಿವಾಸಿಗಳಿಗೆ ಆರೋಗ್ಯ, ಸಮೃದ್ಧಿ ಮತ್ತು ಸಂತೋಷವನ್ನು ತರಬಹುದು. ಒಂದು ಪ್ರತ್ಯೇಕ ಪೂಜೆಯ ಕೊಠಡಿಯು ಆದರ್ಶವಾಗಿದ್ದರೂ ಕೂಡ, ಮೆಟ್ರೋಪಾಲಿಟನ್ ನಗರಗಳಲ್ಲಿ ಸ್ಥಳಾವಕಾಶದ ಕೊರತೆ ಇರುವುದರಿಂದ ಇದು ಯಾವಾಗಲೂ ಸಾಧ್ಯವಾಗುವುದಿಲ್ಲ.

ದೇವಸ್ಥಾನದ ಪ್ರದೇಶವು ದೈವಿಕ ಶಕ್ತಿಯಿಂದ ತುಂಬಿರುವ ಶಾಂತಿಯುತ ಪ್ರದೇಶವಾಗಬೇಕು, ಎಂದು ಮುಂಬೈ ಮೂಲದ ವಾಸ್ತುಪ್ಲಸ್ ನ ನಿತಿನ್ ಪರ್ಮಾರ್  ಹೇಳುತ್ತಾರೆ. “ಇದು ದೇವರಿಗೆ ಶರಣಾಗುವ ಮತ್ತು ಶಕ್ತಿಯನ್ನು

ಪಡೆಯುವ ಜಾಗವಾಗಿದೆ. ದೇವಾಲಯದ ಸಂಪೂರ್ಣ ಕೋಣೆಯನ್ನು ನಿಯೋಜಿಸಲು ಸ್ಥಳಾವಕಾಶವಿಲ್ಲದಿದ್ದರೆ, ಮನೆಯ ಈಶಾನ್ಯ ವಲಯಕ್ಕೆ , ಪೂರ್ವ ಗೋಡೆಯ ಮೇಲೆ ಒಂದು ಸಣ್ಣ ಪೂಜಾವೇದಿಕೆಯನ್ನು  ಹೊಂದಿಸಬಹುದು. ಮನೆಯ ದಕ್ಷಿಣ, ನೈಋತ್ಯ ಅಥವಾ ಆಗ್ನೇಯ ವಲಯಗಳಲ್ಲಿ ದೇವಸ್ಥಾನವನ್ನು ಇರಿಸುವುದನ್ನು ತಪ್ಪಿಸಿ,” ಪರ್ಮಾರ್ ಸೇರಿಸುತ್ತಾರೆ.

 

ಮನೆ ದೇವಸ್ಥಾನಕ್ಕೆ ವಾಸ್ತುವಿನ ಪ್ರಕಾರ ಸೂಕ್ತ ದಿಕ್ಕುಗಳು

ಗುರು ಈಶಾನ್ಯ ದಿಕ್ಕಿನ ಅಧಿಪತಿಯಾಗಿದ್ದು, ಅದನ್ನು ‘‘ಈಶಾನ್ ಕೋಣ’’ ಎಂದು ಕೂಡ ಕರೆಯಲಾಗುತ್ತದೆ, ಜಯಶ್ರೀ ಧಮನಿ, ವಾಸ್ತು ಶಾಸ್ತ್ರ ಮತ್ತು ಜ್ಯೋತಿಷ್ಯ ತಜ್ಞರು ವಿವರಿಸುತ್ತಾರೆ. ಈಶಾನ್ ಎಂದರೆ ಈಶ್ವರ ಅಥವಾ ದೇವರು. ಅದು ದೇವರು / ಗುರುಗ್ರಹದ ದಿಕ್ಕಾಗಿದೆ. ಹಾಗಾಗಿ, ದೇವಸ್ಥಾನವನ್ನು ಅಲ್ಲಿ ಇಟ್ಟುಕೊಳ್ಳುವುದು ಸೂಕ್ತವಾಗಿದೆ. ಇದಲ್ಲದೆ, ಭೂಮಿಯ ಓರೆ ಕೂಡಾ ಈಶಾನ್ಯ ದಿಕ್ಕಿನಲ್ಲಿದೆ ಮತ್ತು ಇದು ಈಶಾನ್ಯದ ಪ್ರಾರಂಭದ ಹಂತದೊಂದಿಗೆ ಚಲಿಸುತ್ತದೆ. ಆದ್ದರಿಂದ, ಈ ಮೂಲೆಯು ರೈಲುಗಳ ಎಂಜಿನಂತೆಯೇ ಇರುತ್ತದೆ, ಇದು ಸಂಪೂರ್ಣ ರೈಲನ್ನು ಎಳೆಯುತ್ತದೆ. ಮನೆಯ ಈ ಭಾಗದಲ್ಲಿ ದೇವಾಲಯದ ನಿಯೋಜನೆ ಕೂಡ ಹಾಗೆಯೇ ಇದೆ – ಅದು ಇಡೀ ಮನೆಯ ಶಕ್ತಿಯನ್ನು ಎಳೆಯುತ್ತದೆ ಮತ್ತು ನಂತರ ಅದನ್ನು ಮುಂದಕ್ಕೆ ತೆಗೆದುಕೊಳ್ಳುತ್ತದೆ, ” ಎಂದು ಧಮನಿ ಹೇಳುತ್ತಾರೆ. ಬ್ರಹ್ಮಸ್ಥಾನ್ ಎಂದು ಕರೆಯಲ್ಪಡುವ ಪ್ರದೇಶವನ್ನು – ಮನೆಯ ಮಧ್ಯಭಾಗದಲ್ಲಿ ಇರಿಸಲಾಗಿರುವ ದೇವಸ್ಥಾನವು ಮಂಗಳಕರವಾದದ್ದು – ಎಂದು ಹೇಳಲಾಗುತ್ತದೆ ಮತ್ತು ನಿವಾಸಿಗಳಿಗೆ ಸಮೃದ್ಧಿ ಮತ್ತು ಉತ್ತಮ ಆರೋಗ್ಯವನ್ನು ತರಬಹುದು, ಧಮನಿ ಸೇರಿಸುತ್ತಾರೆ.

 

ವಾಸ್ತುವಿನ ಪ್ರಕಾರ ಮನೆಯಲ್ಲಿ ಒಂದು ದೇವಾಲಯವನ್ನು ಹೇಗೆ ನಿರ್ಮಿಸಬೇಕು

ದೇವಾಲಯದ ನಿರ್ಮಾಣಕ್ಕೆ ಬಂದಾಗ, ಅದನ್ನು ನೇರವಾಗಿ ನೆಲದ ಮೇಲೆ ಇಡಬೇಡಿ. ಬದಲಾಗಿ, ಇದನ್ನು ಎತ್ತರಿಸಿದ ವೇದಿಕೆ ಅಥವಾ ಪೀಠದ ಮೇಲೆ ಇರಿಸಿ, ಎಂದು ಪರ್ಮಾರ್ ಸಲಹೆ ನೀಡುತ್ತಾರೆ. “ದೇವಸ್ಥಾನವನ್ನು ಅಮೃತಶಿಲೆ ಅಥವಾ ಮರದಿಂದ ಮಾಡಬೇಕು. ಗಾಜಿನಿಂದ ಅಥವಾ ಅಕ್ರಿಲಿಕ್‌ನಿಂದ ಮಾಡಿದ ದೇವಾಲಯಗಳನ್ನು ತಪ್ಪಿಸಿ. ದೇವಸ್ಥಾನವನ್ನು ಅಸ್ತವ್ಯಸ್ತಗೊಳಿಸಬೇಡಿ. ದೇವಾಲಯದಲ್ಲಿ  ಆಸನ ಅಥವಾ ನಿಂತಿರುವ ಸ್ಥಾನದಲ್ಲಿ ನೀವು ಒಂದೇ ದೇವತೆ ಅಥವಾ ದೇವಿಯ ಅನೇಕ ವಿಗ್ರಹಗಳನ್ನು ಹೊಂದಿಲ್ಲ ಎಂದು ಖಚಿತಪಡಿಸಿಕೊಳ್ಳಿ. ದೇವಸ್ಥಾನದಲ್ಲಿ ಇರಿಸಲಾಗಿರುವ ವಿಗ್ರಹ ಅಥವಾ ಫೋಟೋಗಳು ಬಿರುಕುಗೊಂಡಿರಬಾರದು ಅಥವಾ ಹಾನಿಗೊಂಡಿರಬಾರದು, ಅದನ್ನು ಪರಿಗಣಿಸಲ್ಪಟ್ಟಂತೆ ಇದು ಅಮಂಗಳಕರವಾಗಿದೆ, ” ಎಂದು ಪರ್ಮಾರ್ ಸೂಚಿಸುತ್ತಾರೆ.

ದೇವಸ್ಥಾನವನ್ನು ಎಲ್ಲಿ ಇರಿಸಲಾಗುತ್ತದೆಯೊ ಅಲ್ಲಿ ಪೂಜೆಯನ್ನು ನಿರ್ವಹಿಸಲು ಸಾಧ್ಯಗಬೇಕು. ವಿಶೇಷ ಪೂಜೆಗಳ ಸಮಯದಲ್ಲಿ, ಇಡೀ ಕುಟುಂಬದವರು ಒಟ್ಟಿಗೆ ಪ್ರಾರ್ಥನೆ ಮಾಡುತ್ತಾರೆ. ಆದ್ದರಿಂದ, ಕುಳಿತುಕೊಳ್ಳಲು ಮತ್ತು ಪ್ರಾರ್ಥಿಸಲು ಕುಟುಂಬಕ್ಕೆ ಸಾಕಷ್ಟು ಸ್ಥಳವಿದೆ ಎಂದು ಖಚಿತಪಡಿಸಿಕೊಳ್ಳಿ. ದೇವಾಲಯದ ಪ್ರದೇಶವು ಶಕ್ತಿಯ ಉತ್ತಮ ಮತ್ತು ಆರೋಗ್ಯಕರ ಹರಿವನ್ನು ಹೊಂದಿರಬೇಕು. ಆದ್ದರಿಂದ, ಧೂಳು ಅಥವಾ ಜೇಡರಬಲೆ ಇಲ್ಲದೆ ಅದನ್ನು ಅಚ್ಚುಕಟ್ಟಾಗಿ ಮತ್ತು ಶುದ್ಧವಾಗಿಡಿ ಮತ್ತು ಹಲವಾರು ಬಿಡಿಭಾಗಗಳೊಂದಿಗೆ ಜಾಗವನ್ನು ತುಂಬಿಸುವುದನ್ನು ತಪ್ಪಿಸಿ. ಎಲ್ಲಕ್ಕಿಂತ ಹೆಚ್ಚಾಗಿ, ದೇವಾಲಯವು ನಿಮಗೆ ಪ್ರಶಾಂತತೆ ಮತ್ತು ಶಾಂತತೆಯ ಭಾವನೆಯನ್ನು ಕೊಡಬೇಕು.

 

ಮನೆಯಲ್ಲಿ ದೇವಾಲಯವನ್ನು ಅಲಂಕರಿಸಲು ಮಾಡಬಹುದಾದ ಮತ್ತು ಮಾಡಬಾರದವುಗಳು

 • ಬೆಳಕನ್ನು ಅಥವಾ ದೀಪವನ್ನು, ಪೂಜೆ ಮಾಡುವ ವ್ಯಕ್ತಿಯ ಬಲ ಭಾಗದಲ್ಲಿ ಇಡಬೇಕು.
 • ತಾಜಾ ಹೂವುಗಳೊಂದಿಗೆ ದೇವಸ್ಥಾನವನ್ನು ಅಲಂಕರಿಸಿ. ಪ್ರದೇಶವನ್ನು ಶುಚಿಗೊಳಿಸಲು ಮತ್ತು ದೈವಿಕ ವಾತಾವರಣವನ್ನು ಸೃಷ್ಟಿಸಲು, ಕೆಲವು ಪರಿಮಳದ ಮೇಣದ ಬತ್ತಿಗಳನ್ನು ಹಚ್ಚಿ ಮತ್ತು ಧೂಪ ಅಥವಾ ಊದುಬತ್ತಿಗಳನ್ನು ಹಚ್ಚಿ.
 • ಸತ್ತ / ಪೂರ್ವಜರ ಛಾಯಾಚಿತ್ರಗಳನ್ನು ದೇವಸ್ಥಾನದಲ್ಲಿ ಇರಿಸಬಾರದು.
 • ಧೂಪದ್ರವ್ಯ, ಪೂಜೆ ವಸ್ತುಗಳು ಮತ್ತು ಪವಿತ್ರ ಪುಸ್ತಕಗಳನ್ನು ಇರಿಸಲು ದೇವಾಲಯದ ಬಳಿ ಸಣ್ಣ ಶೆಲ್ಫ್(ಕಪಾಟು) ರಚಿಸಿ.
 • ದೇವಾಲಯದ ಬಳಿ ವಿದ್ಯುತ್ ಬಿಂದುಗಳಿವೆ ಎಂದು ಖಚಿತಪಡಿಸಿಕೊಳ್ಳಿ, ಇದರಿಂದಾಗಿ ಹಬ್ಬದ ದಿನಗಳಲ್ಲಿ ದೇವಸ್ಥಾನವನ್ನು ಬೆಳಗಿಸಬಹುದು.
 • ದೇವಾಲಯದ ಕೆಳಗೆ ಅನಗತ್ಯ ವಸ್ತುಗಳನ್ನು ಅಥವಾ ಈ ಪ್ರದೇಶದಲ್ಲಿ ಕಸದ ಬುಟ್ಟಿಗಳನ್ನು ಇಟ್ಟುಕೊಳ್ಳುವುದನ್ನು ತಪ್ಪಿಸಿ.
 • ಕೆಲವರು ದೇವಾಲಯವನ್ನು ಮಲಗುವ ಕೋಣೆ ಅಥವಾ ಅಡುಗೆಮನೆಯಲ್ಲಿ ಇರಿಸುತ್ತಾರೆ. ಅಂತಹ ಸಂದರ್ಭಗಳಲ್ಲಿ, ದೇವಸ್ಥಾನವನ್ನು ಬಳಸುತ್ತಿಲ್ಲವೆಂದರೆ  ದೇವಾಲಯದ ಎದುರಿನಲ್ಲಿ ಒಂದು ಪರದೆ ತೂಗುಹಾಕಿ.
 • ದೇವಾಲಯವು  ಒಂದು ಟಾಯ್ಲೆಟ್ ಹೊಂದಿರುವ ಗೋಡೆಯ ವಿರುದ್ಧ ಇರಬಾರದು. ಅದನ್ನು ಮೇಲಿನ ಮಹಡಿಯಲ್ಲಿರುವ ಟಾಯ್ಲೆಟ್ ಕೆಳಗೆ ಇರಿಸಬಾರದು.
 • ದೇವಾಲಯದ ಸ್ಥಳಕ್ಕಾಗಿ, ಬಿಳಿ, ತೆಳುವಾದ ಕಂದು (ಬೇಜ್), ಲ್ಯಾವೆಂಡರ್ ಅಥವಾ ಹಳದಿ ಬಣ್ಣಗಳನ್ನು ಬಳಸಿ.

 

Was this article useful?
 • 😃 (1)
 • 😐 (0)
 • 😔 (0)

Comments

comments