ಜಿ ಎಸ್ ಟಿ ಯ ಪ್ರಭಾವ: ನೆಲೆಸಲು ಸಿದ್ಧವಾದ ಅಪಾರ್ಟ್ಮೆಂಟ್ ಗಳ ವೆಚ್ಚ ಹೆಚ್ಚು ಅಥವಾ ಕಡಿಮೆಯಾಗಲಿವೆಯಾ?


ಗೃಹ ಖರೀದಿದಾರರಿಗೆ ನೆಲೆಸಲು ಸಿದ್ಧವಾದ ಅಪಾರ್ಟ್ಮೆಂಟ್ ಗಳು ಅಗ್ಗವಾಗುತ್ತವೆಯೇ ಎಂದು ನಾವು ವಿಶ್ಲೇಷಿಸುತ್ತೇವೆ, ಏಕೆಂದರೆ ಜಿ ಎಸ್ ಟಿ (ಸರಕು ಮತ್ತು ಸೇವಾ ತೆರಿಗೆ) ಪೂರ್ಣಗೊಂಡ / ಆಕ್ಯುಪೆನ್ಸಿ ಪ್ರಮಾಣಪತ್ರವನ್ನು ಇನ್ನೂ ಪಡೆಯದ ಆಸ್ತಿಗಳ ಮೇಲೆ ಅನ್ವಯಿಸುತ್ತದೆ

ಭಾರತೀಯ ಹೂಡಿಕೆ ಮಾರುಕಟ್ಟೆಯಲ್ಲಿ ಗೂಡ್ಸ್ ಮತ್ತು ಸೇವಾ ತೆರಿಗೆ (ಜಿ ಎಸ್ ಟಿ), ನಿರ್ಮಾಣ-ಹಂತದ ಯೋಜನೆಗಳಿಗೆ ಮಾತ್ರ ಅನ್ವಯಿಸುತ್ತದೆ ಮತ್ತು ಆದ್ದರಿಂದ, ನೆಲೆಸಲು ಸಿದ್ಧವಾದ ಅಪಾರ್ಟ್ಮೆಂಟ್ ಗಳು ಜಿ ಎಸ್ ಟಿ ಯಿಂದ ವಿನಾಯಿತಿ ಪಡೆದಿವೆ ಎಂಬುದು ಅನಿಸಿಕೆಯಾಗಿದೆ. ಆದಾಗ್ಯೂ, ರಿಯಲ್ ಎಸ್ಟೇಟ್ ಮಾರುಕಟ್ಟೆಯ ಹೊಸ ಆಡಳಿತದ ಅಡಿಯಲ್ಲಿ ತೆರಿಗೆ ಲೆಕ್ಕಾಚಾರಗಳು ಅಷ್ಟು ಸುಲಭವಲ್ಲ.

ಉದಾಹರಣೆಗೆ, ಕಟ್ಟಡ ನಿರ್ಮಾಣದ ಹಂತಗಳಲ್ಲಿನ ಜಿ ಎಸ್ ಟಿ ಮಾರಾಟದ ಬೆಲೆಯಲ್ಲಿ ಮನೆ ಖರೀದಿದಾರರಿಗೆ ವಿಧಿಸಲಾಗುವುದು ಆದರೆ ನಿರ್ಮಾಣದ ವೆಚ್ಚದಲ್ಲಿ ಮಾತ್ರ ಡೆವೆಲಪರ್ ಗಳು (ಅಭಿವರ್ಧಕರು)  ಸಾಲವನ್ನು ಪಡೆದುಕೊಳ್ಳಬಹುದು. ಬಿಲ್ಡರ್ ಪೂರ್ಣ ಯೋಜನೆಯಲ್ಲಿ ಜಿ ಎಸ್ ಟಿ ಯನ್ನು ಪಾವತಿಸಬೇಕಾದರೆ ಮತ್ತು ಆದಾನ ಪಡೆದುಕೊಂಡಿರುವುದು ನಿರ್ಮಾಣ ವೆಚ್ಚಕ್ಕೆ ಮಾತ್ರ, ಬಿಲ್ಡರ್ ಪೂರ್ಣ ಯೋಜನೆಯಲ್ಲಿ ಜಿ ಎಸ್ ಟಿ ಪಾವತಿಸಬೇಕಾದರೆ ಮತ್ತು ನಿರ್ಮಾಣದ ವೆಚ್ಚದಲ್ಲಿ ಮಾತ್ರವೇ ಆದಾನ ಲಭ್ಯವಿರುತ್ತದೆ, 30 ಪ್ರತಿಶತದಷ್ಟು  ಕಡಿಮೆ ಇರುವ ಅಂತರವಿರಬಹುದು. ಪರಿಣಾಮವಾಗಿ, ನೀವು ನಿರ್ಮಾಣ ಹಂತದಲ್ಲಿಲ್ಲದ ಆಸ್ತಿ ಅಥವಾ ನೆಲೆಸಲು ಸಿದ್ಧವಾದ ಯೂನಿಟ್ ಅನ್ನು ಆರಿಸಿಕೊಳ್ಳುತ್ತೀರಾ, ಈ ಅಂತರವು ಸೇತುವೆಯಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ಡೆವೆಲಪರ್ ಆ ಪ್ರಮಾಣದಲ್ಲಿ ಬೆಲೆಗಳನ್ನು ಹೆಚ್ಚಿಸಿಕೊಳ್ಳುತ್ತಾರೆ.

 

ಡೆವೆಲಪರ್ ಗಳು ಮಾರಾಟ ಮಾಡಿದ ಅಪಾರ್ಟ್ಮೆಂಟ್ ಗಳ ಮೇಲೆ ಜಿ ಎಸ್ ಟಿ ಯ ಪ್ರಭಾವ.

  • ರೆಡಿ-ಟು-ಮೂವ್( ನೆಲೆಸಲು ಸಿದ್ಧವಾದ ಅಪಾರ್ಟ್ಮೆಂಟ್ ಗಳು ಯಾವುದೇ ಜಿ ಎಸ್ ಟಿ ಯನ್ನು ಹೊಂದಿರುವುದಿಲ್ಲ ಆದರೆ ಡೆವೆಲಪರ್ ಗಳು ನಿರ್ಮಾಣ ವೆಚ್ಚದಲ್ಲಿ ಮಾತ್ರ ಆದಾನ ಸಾಲಗಳನ್ನು ಪಡೆಯುತ್ತಾರೆ.
  • ಯೋಜನೆಯ ವೆಚ್ಚದಲ್ಲಿ ಡೆವೆಲಪರ್ ಗಳು ಜಿ ಎಸ್ ಟಿ ಯನ್ನು ಸಂಗ್ರಹಿಸಿ ಪಾವತಿಸುತ್ತಾರೆ.
  • ಜಿ ಎಸ್ ಟಿ ಯ ಅನುಸರಣೆಗಳಿಂದಾಗಿ ಅಪಾರ್ಟ್ಮೆಂಟ್ ಗಳು ಹೆಚ್ಚು ದುಬಾರಿಯಾಗಬಹುದು.
  • ಸಿದ್ಧವಾದ ಅಪಾರ್ಟ್ಮೆಂಟ್ ಗಳಿಗೆ ಪ್ರೀಮಿಯಮ್ ಶುಲ್ಕ ವಿಧಿಸಲಾಗುವುದರಿಂದ,  ಜಿ ಎಸ್ ಟಿ ಯ ಯಾವುದೇ ಪ್ರಯೋಜನಗಳನ್ನು ರದ್ದುಗೊಳಿಸುತ್ತದೆ.

ನೊಯಿಡಾದ ಮನೆ ಖರೀದಿದಾರ, ಪ್ರವೀಣ್ ಜೈನ್, ರೂ. 50 ಲಕ್ಷ ಮೌಲ್ಯದ ತನ್ನ ಮನೆಯ ಒಟ್ಟಾರೆ ವೆಚ್ಚ ಈಗ ರೂ. 1 ಲಕ್ಷ ಹೆಚ್ಚಾಗುತ್ತದೆ ಎಂದು ತನ್ನ ಡೆವೆಲಪರ್ ತಿಳಿಸಿದ್ದಾರೆ. ಜಿ ಎಸ್ ಟಿ ತೆರಿಗೆ ರಚನೆ ಸರಳಗೊಳಿಸುವ ಮತ್ತು ‘ಒಂದು ರಾಷ್ಟ್ರ, ಒಂದು ತೆರಿಗೆ’ಯ ಯುಗಕ್ಕೆ  ಆಶಿಸಿದರೆ, ಗೃಹ ಖರೀದಿದಾರನು ನಿರ್ಮಾಣ ಹಂತದ ಅವಧಿಯಲ್ಲಿ ಪಾವತಿಸಿದ ಜಿ ಎಸ್ ಟಿ ಗಿಂತಲೂ ಹೆಚ್ಚಾದ ಸ್ಟಾಂಪ್ ಸುಂಕವನ್ನು ಪಾವತಿಸುವ ನಿರೀಕ್ಷೆಯಿದೆ, ಎಂದು ಅವರು ಆಶ್ಚರ್ಯಗೊಳ್ಳುತ್ತಾರೆ.

” ನೆಲೆಸಲು ಸಿದ್ಧವಾದ ಆಸ್ತಿಗಳಗೆ ಸೇವಾ ತೆರಿಗೆ ಅನ್ವಯಿಸುವುದಿಲ್ಲವಾದರೂ, ಡೆವೆಲಪರ್ ಗಳು ಹೊ೦ದುವಿಕೆಯ ಸಮಯದಲ್ಲಿ ಬೆಲೆ ಏರಿಕೆಯನ್ನು ತರುತ್ತಿದ್ದರು. ಜಿ ಎಸ್ ಟಿ ಆಡಳಿತದೊಂದಿಗೆ, ಖರೀದಿದಾರರು ಪ್ರಯೋಜನ ಪಡೆಯುವುದಿಲ್ಲ, ನಿರ್ಮಾಣ ಹಂತದ ಸಮಯದಲ್ಲಿ ಡೆವೆಲಪರ್ ಗಳು ಜಿ ಎಸ್ ಟಿ ದೂರುಗಳ ಕಾರಣದಿಂದ ಬೆಲೆಗಳನ್ನು ಹೆಚ್ಚಿಸಿಕೊಳ್ಳುತ್ತಾರೆ,” ಎಂದು ಜೈನ್ ಹೇಳುತ್ತಾರೆ.

 

ರಿಯಲ್ ಎಸ್ಟೇಟ್ ಮಾರುಕಟ್ಟೆಯ ಮೇಲೆ ಜಿ ಎಸ್ ಟಿ ತೆರಿಗೆಯ ಪರಿಣಾಮ

ಉದ್ಯಮದ ಪಾಲುದಾರರು ಆದಾಗ್ಯೂ, ಮನೆ ಖರೀದಿದಾರರಿಗೆ ಜಿ ಎಸ್ ಟಿ ಆಡಳಿತವು ಅನೇಕ ಪ್ರಯೋಜನಗಳನ್ನು ನೀಡುತ್ತದೆ ಎಂದು ಹೇಳುತ್ತಾರೆ. ನಿರ್ಮಾಣದ ವೆಚ್ಚ ಕಡಿಮೆಯಾಗುತ್ತದೆ ಎಂದು ನಿರೀಕ್ಷಿಸಲಾಗಿದೆ. ಇದಲ್ಲದೆ, ಡೆವೆಲಪರ್ ಗಳಿಗೆ ಆದಾನ ಜಮಾ(ಇನ್ಪುಟ್ ಕ್ರೆಡಿಟ್) ಲಭ್ಯವಾಗುವಂತೆ, ಆಕ್ಯುಪೆನ್ಸಿ ಸರ್ಟಿಫಿಕೇಟ್ (ಒಸಿ) ನೀಡಲ್ಪಟ್ಟ ನಂತರ ಖರೀದಿದಾರರು, ಪ್ರಸ್ತುತ ಮಾರುಕಟ್ಟೆಯಲ್ಲಿನ ಒಪ್ಪಂದದ ಭಾಗವಾಗಿರುವ ಹೆಚ್ಚುವರಿ ತೆರಿಗೆಗಳನ್ನು ಹೊತ್ತುಕೊಳ್ಳಬೇಕಾಗಿಲ್ಲ.

ಸದ್ಯಕ್ಕೆ, ಡೆವೆಲಪರ್ ಗಳು  ಸಿಮೆಂಟ್ ಮತ್ತು ಉಕ್ಕು(ಸ್ಟೀಲ್) ನಂತಹ ಒಳಹರಿವಿನ ಕ್ರಮವಾಗಿ 27.7 ಪ್ರತಿಶತ ಮತ್ತು 18.1 ಪ್ರತಿಶತದಷ್ಟು ಎಕ್ಸೈಸ್ ತೆರಿಗೆ ಮತ್ತು ವ್ಯಾಟ್ ಅನ್ನು ಪಾವತಿಸುತ್ತಾರೆ, ಇದು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತದೆ ಎಂದು ಸಿ ಆರ್ ಐ ಎಸ್ ಐ ಎಲ್(ಕ್ರಿಸಿಲ್) ವರದಿ ತಿಳಿಸಿದೆ. ಈಗ, ಜಿ ಎಸ್ ಟಿ ಆಡಳಿತದಡಿಯಲ್ಲಿ, ಸಿಮೆಂಟ್ ಮತ್ತು ಉಕ್ಕಿಗೆ(ಸ್ಟೀಲ್) ಅನುಕ್ರಮವಾಗಿ 28 ಪ್ರತಿಶತ ಮತ್ತು 18 ಪ್ರತಿಶತ ತೆರಿಗೆ ವಿಧಿಸಲಾಗುವುದು. ಪೇಂಟ್ ಮತ್ತು ಬಿಳಿ ಸರಕುಗಳಂತಹ ಇತರ ಒಳಹರಿವು 28 ಪ್ರತಿಶತ. ಆದಾಗ್ಯೂ, ಅಂತಿಮ ಉತ್ಪನ್ನ – ವಸತಿ ಘಟಕ – ಆದಾನಗಳನ್ನು ಪಾವತಿಸಿದ ತೆರಿಗೆಗಳಿಗೆ ಜಮಾ ಜೊತೆಗೆ, 12 ಪ್ರತಿಶತ ತೆರಿಗೆಯನ್ನು ವಿಧಿಸಲಾಗುವುದು. ಭೂಮಿ ಸೇರಿದಂತೆ ಸಂಪೂರ್ಣ ಖರ್ಚಿನ ಮೇಲೆ ವಿಧಿಸಿದ ತೆರಿಗೆ 12 ಪ್ರತಿಶತ  ಇರುತ್ತದೆ, ಅಭಿವರ್ಧಕರಿಗೆ ಆದಾನ ಜಮಾಗೆ ಈ ಮೊತ್ತವು ಸಾಕಾಗುತ್ತದೆ. ಹಾಗಾಗಿ, ನೆಲೆಸಲು ಸಿದ್ಧವಾದ ಅಪಾರ್ಟ್ಮೆಂಟ್ ಗಳ ಖರೀದಿದಾರನು ತೆರಿಗೆ ಹೊರೆಯನ್ನು ಉಳಿಸಿದ್ದಾನೆ.

 

ಜಿ ಎಸ್ ಟಿ ಪಾಲುದಾರರಿಗೆ(ಷೇರುದಾರರಿಗೆ) ಹೊಸ ವ್ಯಾಪಾರ ಮಾದರಿಗಳನ್ನು ಮೌಲ್ಯಮಾಪನ ಮಾಡಲು ಒತ್ತಾಯಿಸುತ್ತದೆ

ಹೂಡಿಕೆ ಬ್ಯಾಂಕಿಂಗ್ ಸಂಸ್ಥೆಯ ಮಾಂಡರಸ್ ಪಾರ್ಟ್ನರ್ಸ್ ನ ವ್ಯವಸ್ಥಾಪಕ ಪಾಲುದಾರರಾದ, ನೌಶಾದ್ ಪಂಜ್ವಾನಿ, ಯೋಜನೆಗೆ ಒಸಿ(OC) ಸ್ವೀಕರಿಸಿದಲ್ಲಿ, ಯಾವುದೇ ಜಿ ಎಸ್ ಟಿ ಅನ್ವಯಿಸುವುದಿಲ್ಲ ಎಂದು ತಿಳಿಸುತ್ತಾರೆ. ಡೆವೆಲಪರ್ ಗಳ ವೆಚ್ಚಗಳು ಆದಾನ ಜಮಾದೊಂದಿಗೆ ಇಳಿಯುತ್ತವೆ ಆದರೆ ಸಾಕಷ್ಟು ಸ್ಪಷ್ಟತೆ ಇನ್ನೂ ಅಗತ್ಯವಾಗಿದೆ ಎಂದು ಅವರು ಭಾವಿಸುತ್ತಾರೆ.

“ಸಣ್ಣ ಸರಬರಾಜುದಾರರು, ತಮ್ಮ ವಹಿವಾಟು ರೂ. 75,000 ಕ್ಕಿಂತ ಕಡಿಮೆ ಇದ್ದರೆ ಜಿ ಎಸ್ ಟಿ ಗೆ ನೋಂದಾಯಿಸಲು ಅಗತ್ಯವಿಲ್ಲ. ಅಂತಹ ಸಂದರ್ಭಗಳಲ್ಲಿ, ಬಿಲ್ಡರ್ ಯಾವುದೇ ಪ್ರಯೋಜನವನ್ನು ಪಡೆಯುವುದಿಲ್ಲ ಮತ್ತು ಲೆಕ್ಕಪತ್ರದಲ್ಲಿ ಎಚ್ಚರಿಕೆಯಿಂದಿರಬೇಕು. ಆದ್ದರಿಂದ, ಅವರು ನೋಂದಾಯಿತ ವಿತರಕರಿಂದ ಖರೀದಿಸಲು ಬಯಸುತ್ತಾರೆ. ಆದ್ದರಿಂದ, ಸಣ್ಣ ಮಾರಾಟಗಾರರು ವ್ಯವಹಾರದ ನಷ್ಟದಿಂದ ಪ್ರಭಾವಿತರಾಗುತ್ತಾರೆ,” ಎಂದು ಪಂಜ್ವಾನಿ ವಿವರಿಸುತ್ತಾರೆ.

‘ನಿರ್ಮಾಣ ಮತ್ತು ಮಾರಾಟ’ ಮಾದರಿಯ ಪ್ರಯೋಜನಗಳನ್ನು ಡೆವೆಲಪರ್ ಗಳು ಈಗಾಗಲೇ ಮೌಲ್ಯಮಾಪನ ಮಾಡುತ್ತಿದ್ದಾರೆ ಎಂದು ಹಾವೆಲಿಯಾ ಗ್ರೂಪ್ ನ ವ್ಯವಸ್ಥಾಪಕ ನಿರ್ದೇಶಕ, ನಿಖಿಲ್ ಹವೇಲಿಯಾ ಹೇಳುತ್ತಾರೆ. ಅವರ ಪ್ರಕಾರ, ಹೊಸ ತೆರಿಗೆ ರಚನೆ ಮತ್ತು ಇತರ ನಿಯಂತ್ರಕ ಚೌಕಟ್ಟುಗಳು, ಸಿದ್ಧವಾದ ಅಪಾರ್ಟ್ಮೆಂಟ್ ಗಳನ್ನು ಒದಗಿಸುವ ಮಾರುಕಟ್ಟೆ, ಖರೀದಿದಾರರಿಗೆ ಹಾಗೂ ಬಿಲ್ಡರ್ ಗಳಿಗೆ ಹೆಚ್ಚಿನ ಅರ್ಥವನ್ನು ನೀಡುತ್ತದೆ.

“ನಿರ್ಮಾಣ ಯೋಜನೆಗಳ ಅಡಿಯಲ್ಲಿ ಬಹಳಷ್ಟು ಖರೀದಿದಾರರು, ಅವರು ತಮ್ಮ ಸಮತೋಲನ ಪಾವತಿಯನ್ನು ಮುಂದೂಡಬಹುದೆ ಎಂದು ಪ್ರಶ್ನಿಸುತ್ತಿದ್ದಾರೆ, ಮುಂದಿನ ತ್ರೈಮಾಸಿಕದಿಂದ ಅನ್ವಯವಾಗುವ 12 ಪ್ರತಿಶತ  ಜಿ ಎಸ್ ಟಿ ಉಳಿಸಲು,” ಎಂದು ಹವೇಲಿಯಾ ಹೇಳುತ್ತಾರೆ.

ಜಿ ಎಸ್ ಟಿ 18% ನಷ್ಟು ಹಣಕಾಸಿನ ಸೇವೆಗಳಲ್ಲೂ ಸಹ ಅನ್ವಯಿಸುತ್ತದೆ. ಆದ್ದರಿಂದ, ಸಾಲ ಪ್ರಕ್ರಿಯೆ ಶುಲ್ಕಗಳು ಜಿಎಸ್ಟಿ ಆಡಳಿತದಲ್ಲಿ ಹೆಚ್ಚಾಗುವ ಸಾಧ್ಯತೆಯಿದೆ. ಅಂತಹ ಶುಲ್ಕಗಳು, ಯಾವಾಗಲೂ ಖರೀದಿದಾರನ ಕೈಯಲ್ಲಿ ವೆಚ್ಚವಾಗಿ ಉಳಿದಿದೆ. ಕೈಗೆಟುಕುವ ವಸತಿ ವಿಭಾಗದಲ್ಲಿ ಇದು ಹೆಚ್ಚಿನ ಪ್ರಭಾವ ಬೀರುವುದಿಲ್ಲ, 1 ಪ್ರತಿಶತ ವ್ಯಾಪ್ತಿಯ ಸಾಲದ ಪ್ರಕ್ರಿಯೆ ಶುಲ್ಕದ ಮೇಲೆ 18 ಪ್ರತಿಶತ ರಷ್ಟಕ್ಕೆ ಹೋಲಿಸಿದರೆ ಪ್ರಾಯೋಗಿಕವಾಗಿ ನಗಣ್ಯವಾಗಿರುತ್ತದೆ. ಹೇಗಾದರೂ, ಇದು ಖಂಡಿತವಾಗಿ ಉನ್ನತ ಮಟ್ಟದ ವಿಭಾಗದಲ್ಲಿ ಖರೀದಿದಾರರ ಪಾಕೆಟ್ ಅನ್ನು ಉರಿಸುತ್ತದೆ.

(ಬರಹಗಾರ, ಟ್ರ್ಯಾಕ್ 2 ರಿಯಾಲಿಟಿ ನ ಸಿಈಓ)

 

Was this article useful?
  • 😃 (0)
  • 😐 (0)
  • 😔 (0)

Comments

comments