ಭಾರತದಲ್ಲಿ ಅಳವಡಿಸಿಕೊಂಡಿರುವ ನೀರು ಸಂರಕ್ಷಣೆ ಯೋಜನೆಗಳು ಮತ್ತು ವಿಧಾನಗಳು: ಮನೆಯಲ್ಲಿ ನೀರು ಸಂರಕ್ಷಣೆಯ ಸಲಹೆಗಳು

ನಾವು ಭಾರತದಲ್ಲಿ ನೀರಿನ ಸಮಸ್ಯೆಯ ಸನ್ನಿವೇಶವನ್ನು ಪರಿಶೀಲನೆ ಮಾಡೋಣ ಮತ್ತು ನೀರು ಉಳಿಸಲು ಸಾಮಾನ್ಯ ಮನೆ ಮಾಲೀಕರು ಬಳಸಬಹುದಾದ ಸಲಹೆಗಳೊಂದಿಗೆ ಭಾರತದಲ್ಲಿ ಅಳವಡಿಸಿರುವ ನೀರು ಸಂರಕ್ಷಣೆಯ ವಿಧಾನಗಳು ಮತ್ತು ನೀರು ಸಂರಕ್ಷಣೆ ಯೋಜನೆಗಳ ಚರ್ಚೆ ಮಾಡೋಣ

ವಿಶ್ವಾದ್ಯಂತ ದೇಶಗಳಿಗೆ ನೀರಿನ ಕೊರತೆ ಎಂಬುದು ಗಂಭಿರ ಸಮಸ್ಯೆಯಾಗಿದೆ. 2019 ರಲ್ಲಿ, ನೀರು ಮುಗಿದು ಹೋದಾಗ ಮತ್ತು ಎಲ್ಲ ಕೆರೆಗಳೂ ಬತ್ತಿ ಹೋದಾಗ ‘ಶೂನ್ಯ ದಿನ’ ಎಂದು ಸ್ಥಳೀಯ ಆಡಳಿತವು ಘೋಷಣೆ ಮಾಡಿದಾಘ ಚೆನ್ನೈ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು. ಸರ್ಕಾರದ ಚಿಂತನಾ ಸಮಿತಿ ನೀತಿ ಆಯೋಗದ ವರದಿಯ ಪ್ರಕಾರ, ಭಾರತದಲ್ಲಿ ನೀರು ಸಂರಕ್ಷಣೆ ವಿಧಾನಗಳನ್ನು ಅಳವಡಿಸಿಕೊಳ್ಳದೇ ಇದ್ದರೆ, ಬೆಂಗಳೂರು, ದೆಹಲಿ ಮತ್ತು ಹೈದರಾಬಾದ್ ಸೇರಿದಂತೆ ಇನ್ನೊಂದು 20 ನಗರಗಳು ಮುಂದಿನ ಕೆಲವು ವರ್ಷಗಳಲ್ಲಿ ಅಂತರ್ಜಲ ಖಾಲಿಯಾಗಲಿದೆ. ಈ ಸನ್ನಿವೇಶವನ್ನು ದೂರವಿಡುವುದಕ್ಕೆ ಇರುವ ಏಕೈಕ ಪರಿಹಾರವೆಂದರೆ, ನೀರು ಸಂರಕ್ಷಣೆಯ ವಿಧಾನಗಳನ್ನು ಅಳವಡಿಸಿಕೊಳ್ಳುವುದು. ಇದರಿಂದ ಪ್ರತಿ ಮನೆಗಳಲ್ಲೂ ಅಳವಡಿಸಬೇಕು. ನೀರು ಸಂರಕ್ಷಣೆಯನ್ನು ಅರ್ಥ ಮಾಡಿಕೊಳ್ಳುವದು ಮತ್ತು ವೈಯಕ್ತಿಕ ಮಟ್ಟದಲ್ಲಿ ಏನು ಮಾಡಬಹುದು ಎಂಬ ಬಗ್ಗೆ ವಿವರವಾದ ಮಾರ್ಗದರ್ಶಿ ಇಲ್ಲಿದೆ.

Table of Contents

 

ಭಾರತದಲ್ಲಿ ನೀರು ಸಂರಕ್ಷಣೆ ಯೋಜನೆಗಳು ಮತ್ತು ಉಪಕ್ರಮಗಳು

ಭಾರತ ಸರ್ಕಾರ ಜಲ ಶಕ್ತಿ ಸಚಿವಾಲಯದ ಅಡಿಯಲ್ಲಿ 2019 ರಲ್ಲಿ ಜಲ ಶಕ್ತಿ ಅಭಿಯಾನವನ್ನು ಆರಂಭಿಸಲಾಗಿದೆ. ಇದು ದೇಶದೆಲ್ಲೆಡೆ ನಡೆಯುವ ನೀರು ಸಂರಕ್ಷಣೆ ಅಭಿಯಾನವಾಗಿದ್ದು, ಬೇರು ಮಟ್ಟದಲ್ಲಿ ನೀರು ರಕ್ಷಣೆಯನ್ನು ಪ್ರೋತ್ಸಾಹಿಸುವುದಕ್ಕೆ ನಾಗರಿಕರ ಭಾಗಿದಾರಿಕೆಯನ್ನು ಪ್ರೋತ್ಸಾಹಿಸುವ ಗುರಿಯನ್ನು ಹೊಂದಿದೆ. ನೀರು ಸಂರಕ್ಷಣೆ ಯೋಜನೆಯನ್ನು ಎರಡು ಹಂತಗಳಲ್ಲಿ ಆರಂಭಿಸಲಾಗಿದ್ದು, ಮೊದಲನೆಯದು 2019 ಜುಲೈ ಇಂದ 2019 ಸೆಪ್ಟೆಂಬರ್ 30 ರ ವರೆಗೆ ಮತ್ತು 2019 ಅಕ್ಟೋಬರ್‌ 1 ರಿಂದ 2019 ನವೆಂಬರ್ 30 ರ ವರೆಗೆ ನಡೆದಿದೆ.

2021 ಮಾರ್ಚ್‌ 22 ರಂದು ವಿಶ್ವ ಜಲ ದಿನದಂದು, ‘ಜಲ ಶಕ್ತಿ ಅಭಿಯಾನ: ಮಳೆ ಕೊಯ್ಲು’ ಅನ್ನು ‘ಮಳೆಕೊಯ್ಲು: ಮಳೆ ಬಿದ್ದಲ್ಲೇ ಇರುತ್ತದೆ’ ಎಂಬ ಥೀಮ್ ಅಡಿಯಲ್ಲಿ ಸರ್ಕಾರ ಆರಂಭಿಸಿದೆ.  2021 ನವೆಂಬರ್ 30 ರ ವರೆಗೆ ಮಳೆಗಾಲಕ್ಕೂ ಮೊದಲು ಮತ್ತು ಮಳೆಗಾಲದ ಅವಧಿಯಲ್ಲಿ ಭಾರತದಲ್ಲಿ ಎಲ್ಲ ಜಿಲ್ಲೆಗಳ ಗ್ರಾಮೀಣ ಮತ್ತು ನಗರ ಪ್ರದೇಶಗಳನ್ನು ಇದು ಒಳಗೊಳ್ಳುತ್ತದೆ.

2021 ಮಾರ್ಚ್‌ 22 ರಂದು ವಿಶ್ವ ಜಲ ದಿನದಂದು, ‘ಜಲ ಶಕ್ತಿ ಅಭಿಯಾನ: ಮಳೆ ಕೊಯ್ಲು’ ಅನ್ನು ‘ಮಳೆಕೊಯ್ಲು: ಮಳೆ ಬಿದ್ದಲ್ಲೇ ಇರುತ್ತದೆ’ ಎಂಬ ಥೀಮ್ ಅಡಿಯಲ್ಲಿ ಸರ್ಕಾರ ಆರಂಭಿಸಿದೆ.  2021 ನವೆಂಬರ್ 30 ರ ವರೆಗೆ ಮಳೆಗಾಲಕ್ಕೂ ಮೊದಲು ಮತ್ತು ಮಳೆಗಾಲದ ಅವಧಿಯಲ್ಲಿ ಭಾರತದಲ್ಲಿ ಎಲ್ಲ ಜಿಲ್ಲೆಗಳ ಗ್ರಾಮೀಣ ಮತ್ತು ನಗರ ಪ್ರದೇಶಗಳನ್ನು ಇದು ಒಳಗೊಳ್ಳುತ್ತದೆ.

ಇದನ್ನೂ ಓದಿ: ಮನೆಗೆ ವಾಟರ್ ಟ್ಯಾಂಕ್‌ ಖರೀದಿ ಮಾಡಲು ಮಾರ್ಗದರ್ಶಿ

 

ಜಲ ಸಂಚಯ

ಜಲ ಸಂಚಯ ಪ್ರಾಜೆಕ್ಟ್‌ ನೀರು ಸಂರಕ್ಷಣೆ ಉಪಕ್ರಮವಾಗಿದ್ದು, ಬಿಹಾರದ ನಳಂದ ಜಿಲ್ಲೆಯಲ್ಲಿ ಆರಂಭಿಸಲಾಗಿತ್ತು. ಚೆಕ್ ಡ್ಯಾಮ್‌ಗಳನ್ನು ನಿರ್ಮಾಣ ಮಾಡುವುದು ಮತ್ತು ನೀರಾವರಿ ವ್ಯವಸ್ಥೆ ಮತ್ತು ಸಾಂಪ್ರದಾಯಿಕ ಜಲ ಮೂಲದ ಹೂಳೆತ್ತುವುದು ಮತ್ತು ಪುನಶ್ಚೇತನ ಮಾಡುವುದರ ಮೇಲೆ ಇದು ಗಮನ ಕೇಂದ್ರೀಕರಿಸಿದೆ. ಜಲ ಮಟ್ಟಗಳನ್ನು ನಿರ್ವಹಿಸುವ ಉದ್ದೇಶದಿಂದ ಸಾಂಪ್ರದಾಯಿಕ ನೀರು ಸಂರಕ್ಷಣೆ ಮತ್ತು ಮಳೆ ನೀರು ಕೊಯ್ಲು ವಿಧಾನಗಳ ಬಗ್ಗೆ ಜಾಗೃತಿ ಮೂಡಿಸುವುದನ್ನೂ ಇದು ಒಳಗೊಂಡಿದೆ. ಸ್ಥಳೀಯ ರೈತರ ಬೆಂಬಲದಿಂದ ಮತ್ತು ಅಭಿಯಾನಗಳ ಮೂಲಕ ಈ ಯೋಜನೆಯನ್ನು ನಡೆಸಲಾಗಿದೆ.

2017 ರಲ್ಲಿ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾರ್ಯಕ್ರಮ (ಎಂಜಿಎನ್‌ಆರ್‌ಇಜಿಪಿ) ಅಡಿಯಲ್ಲಿ ಪರಿಣಿತಿಗಾಗಿ ರಾಷ್ಟ್ರೀಯ ಪುರಸ್ಕಾರಕ್ಕೆ ಈ ಯೋಜನೆ ಆಯ್ಕೆಯಾಗಿತ್ತು.

ಇದನ್ನೂ ಓದಿ: ಎಂಸಿಜಿಎಂ ವಾಟರ್ ಬಿಲ್‌ ಬಗ್ಗೆ ವಿವರ

 

 

ನೀರು ಸಂರಕ್ಷಣೆ ವಿಧಾನಗಳು

ನೀರು ಸಂರಕ್ಷಣೆ ಯೋಜನೆಗಳನ್ನು ಯಾವುದೇ ಸ್ಥಳದಲ್ಲಿ ಮತ್ತು ಯಾವುದೇ ರೀತಿಯ ರಚನೆಯಲ್ಲಿ ಮಾಡಬಹುದಾಗಿದೆ. ತುಂಬಾ ಶ್ರಮ ಇಲ್ಲದೇ ಅಪಾರ ಪ್ರಮಾಣದ ನೀರು ಉಳಿಸಬಹುದಾದ ನೀರು ಉಳಿಸುವ ವಿವಿಧ ವಿಧಾನಗಳು ಇಲ್ಲಿವೆ:

 

ಮಳೆನೀರು ಕೊಯ್ಲು

Rainwater harvesting

 

ಮಳೆನೀರು ಕೊಯ್ಲು ಎಂಬುದು ನೈಸರ್ಗಿಕ ನೀರನ್ನು ಸಂರಕ್ಷಿಸುವ ಮತ್ತು ಅಂತರ್ಜಲ ನೀರಿನ ಮಟ್ಟವನ್ನು ಸಂರಕ್ಷಿಸುವ ಅತ್ಯಂತ ಪರಿಣಾಮಕಾರಿ ವಿಧಾನವಾಗಿದೆ. ಈ ವಿಧಾನದಲ್ಲಿ, ಮಳೆನೀರನ್ನು ಸಂಗ್ರಹಿಸಲಾಗುತ್ತದೆ ಮತ್ತು ಹೊಂಡ ಅಥವಾ ಕೆರೆಯ ಮೂಲಕ ನೀರು ಇಂಗುವಂತೆ ಮಾಡಲಾಗುತ್ತದೆ. ಆಗ ಇದು ಆಳಕ್ಕೆ ನೀರು ಇಂಗುತ್ತದೆ ಮತ್ತು ಅಂತರ್ಜಲ ನೀರಿನ ಮಟ್ಟವನ್ನು ಸುಧಾರಿಸುತ್ತದೆ.

ರೈತರು ಡ್ರಿಪ್ ನೀರಾವರಿ ವಿಧಾನವನ್ನು ಬಳಸಿಕೊಂಡು ನೀರು ನಿರ್ವಹಣೆ ಪ್ರಯತ್ನಗಳಿಗೆ ಕೊಡುಗೆ ನೀಡಬಹುದು. ಇದರಲ್ಲಿ ಸಣ್ಣ ನಳಿಕೆಯ ಸಹಾಯದಿಂದ ನೀರನ್ನು ಒದಗಿಸಲಾಗುತ್ತದೆ. ಈ ನೀರನ್ನು ಸಸ್ಯದ ಬುಡಕ್ಕೆ ನೇರವಾಗಿ ಡೆಲಿವರಿ ಮಾಡಲಾಗುತ್ತದೆ. ಈ ಮೂಲಕ ನೀರು ಸಂರಕ್ಷಣೆಯಾಗುತ್ತದೆ.

ಇದನ್ನೂ ಓದಿ:  ನೀರಿನ ಕೊರತೆಯನ್ನು ಕಡಿಮೆ ಮಾಡಲು ಯಾಕೆ ಮಳೆಕೊಯ್ಲು ಅತ್ಯಂತ ಉತ್ತಮ ವಿಧಾನವಾಗಿದೆ

 

ನೀರು ಮೀಟರ್

Water meter

 

ನೀರಿನ ತ್ಯಾಜ್ಯವನ್ನು ಕಡಿಮೆ ಮಾಡುವ ಇನ್ನೊಂದು ಪರಿಣಾಮಕಾರಿ ವಿಧಾನವೆಂದರೆ ನೀರಿನ ಮೀಟರುಗಳನ್ನು ಸ್ಥಾಪಿಸುವುದು ಮತ್ತು ಮನೆ ಮತ್ತು ವಾಣಿಜ್ಯ ಕಟ್ಟಡಗಳಲ್ಲಿ ಬಳಸಿದ ನೀರಿನ ಪ್ರಮಾಣವನ್ನು ಅಳೆಯುವುದಾಗಿದೆ. ಬಳಸಿದ ನೀರಿನ ಪ್ರಮಾಣವನ್ನು ಲೆಕ್ಕ ಮಾಡಲಾಗುತ್ತದೆ ಮತ್ತು ನೀರಿನ ಬೆಲೆಗೆ ಅನುಗುಣವಾಗಿ ಶುಲ್ಕ ವಿಧಿಸಲಾಗುತ್ತದೆ. ಅಸಹಜವಾಗಿ ಅತಿಯಾಗಿ ಬಳಕೆ ಮಾಡುವ ಬಗ್ಗೆ ನೀರಿನ ಬಿಲ್‌ಗಳನ್ನು ಮೇಲ್ವಿಚಾರಣೆ ಮಾಡಿ. ಇದು ಯಾವುದೇ ಸೋರಿಕೆಯನ್ನು ಪತ್ತೆ ಮಾಡಲು ಸಹಾಯ ಮಾಡಬಹುದು.

ಇದರ ಬಗ್ಗೆಯೂ ವಿವರ ಓದಿಡಿಜೆಬಿ ಬಿಲ್‌ ನೋಟ: ದೆಹಲಿ ಜಲ ಮಂಡಳಿ ನೀರಿನ ಬಿಲ್‌ಗಳನ್ನು ಆನ್‌ಲೈನ್‌ನಲ್ಲಿ ಪಾವತಿ ಮಾಡುವುದು ಹೇಗೆ?

 

ಬೂದು ನೀರು ಮರುಬಳಕೆ

Greywater recycling

 

ಬೂದು ನೀರು ಮರುಬಳಕೆ ವಿಧಾನವೆಂದರೆ, ಅಡುಗೆ ಮನೆ ಸಿಂಕ್‌ಗಳು, ವಾಶಿಂಗ್‌ ಮಶಿನ್‌ಗಳು, ಶೋವರ್‌ಗಳಿಂದ ಹೊರಬಂದ ತ್ಯಾಜ್ಯ ನೀರನ್ನು ಉಳಿಸಿಕೊಂಡು ಅದನ್ನು ಶೌಚಾಲಯ, ಸಸ್ಯಗಳಿಗೆ ನೀರು ಹಾಕುವುದು ಇತ್ಯಾದಿಗೆ ಬಳಸುವುದಾಗಿದೆ. ಮಳೆ ನೀರಿನ ಮೇಲೆ ಅವಲಂಬಿಸಿರುವ ಮಳೆನೀರು ಕೊಯ್ಲಿಗಿಂತ ವಿಭಿನ್ನವಾಗಿ ಈ ನೀರು ಹೆಚ್ಚಿನ ಪ್ರಮಾಣದಲ್ಲಿ ಲಭ್ಯವಿರುತ್ತದೆ. ಈ ರೀತಿಯ ಮರುಬಳಕೆ ವ್ಯವಸ್ಥೆಯನ್ನು ಬಳಸುವುದರಿಂದ 70% ಕೌಟುಂಬಿಕ ನೀರಿನ ಬಳಕೆ ಕಡಿಮೆಯಾಗಿದೆ ಎಂದು ಪರಿಸರ ತಜ್ಞರು ಪ್ರದರ್ಶಿಸಿದ್ದಾರೆ.

ಇದನ್ನೂ ಓದಿ: ಸುಸ್ಥಿರ ಜೀವನಕ್ಕಾಗಿ ಬಿದಿರಿನ ಮನೆ ವಿನ್ಯಾಸ ಮತ್ತು ನಿರ್ಮಾಣ ಪರಿಕಲ್ಪನೆಗಳು

 

ಒತ್ತಡ ಕಡಿಮೆ ಮಾಡುವ ವಾಲ್ವ್‌ಗಳು

Water conservation

 

ಒತ್ತಡ ಕಡಿಮೆ ಮಾಡುವ ವಾಲ್ವ್‌ಗಳು ಹೈಡ್ರಾಲಿಕ್‌ ಸಿಸ್ಟಮ್‌ನಲ್ಲಿ ಒತ್ತಡದ ಪ್ರಮಾಣವನ್ನು ನಿಯಂತ್ರಿಸುತ್ತವೆ. ಈ ವಾಲ್ವ್‌ಗಳು ಬಳಸುವ ನೀರಿನ ಪೂರ್ವ ನಿಗದಿತ ಮಟ್ಟವನ್ನು ಖಚಿತಪಡಿಸುತ್ತವೆ. ಈ ಮೂಲಕ, ನೀರಿನ ಸಿಸ್ಟಮ್‌ನ ಕೆಳಭಾಗದಲ್ಲಿ ನೀರು ಹೆಚ್ಚು ಕಾಲ ಇರುತ್ತದೆ ಮತ್ತು ನೀರಿನ ಬಳಕೆಯೂ ಕಡಿಮೆಯಾಗುತ್ತದೆ. ಔದ್ಯಮಿಕ, ವಸತಿ, ವಾಣಿಜ್ಯ ಮತ್ತು ಸಾಂಸ್ಥಿಕ ಕಟ್ಟಡಗಳಲ್ಲಿ ಇದು ನೀರು ಸಂರಕ್ಷಣೆಯ ಅತ್ಯಂತ ದಕ್ಷ ವಿಧಾನವಾಗಿದೆ.

ಇದನ್ನೂ ಓದಿ: ಬಿಡಬ್ಲ್ಯೂಎಸ್‌ಎಸ್‌ಬಿ ಬಗ್ಗೆ ವಿವರ

 

ದಕ್ಷವಾಗಿ ನೀರು ಬಳಸುವ ಬಾತ್‌ರೂಮ್‌ ಸಲಕರಣೆಗಳWater conservation methods

 

ಪ್ರಸ್ತುತ, ದಕ್ಷವಾಗಿ ನೀರು ಬಳಕೆ ಮಾಡುವ ಶೌಚಾಲಯ ಟ್ಯಾಂಕ್‌ಗಳು, ನಲ್ಲಿಗಳು ಮತ್ತು ಶೋವರ್‌ ಹೆಡ್‌ಗಳು ಮಾರುಕಟ್ಟೆಯಲ್ಲಿ ಸಾಕಷ್ಟಿವೆ. ಇವು 60% ವರೆಗೆ ನೀರು ಬಳಕೆಯನ್ನು ಕಡಿಮೆ ಮಾಡುತ್ತವೆ. ನಲ್ಲಿಗಳು ಮತ್ತು ಶೋವರ್‌ಗಳಲ್ಲಿ ಸಿಂಪಡಣೆ ವಿಧಾನಗಳಲ್ಲಿ ಬದಲಾವಣೆ ಮತ್ತು ಟಾಯ್ಲೆಟ್‌ಗಳಲ್ಲಿ ಫ್ಲಶಿಂಗ್‌ಗೆ ಒತ್ತಡ ಹೆಚ್ಚಳ ಮಾಡುವಂತಹ ಸಂಶೋಧನೆಗಳು ಬಳಕೆಯ ಹವ್ಯಾಸಗಳಲ್ಲಿ ಯಾವುದೇ ರಾಜಿ ಇಲ್ಲದೇ ನೀರಿನ ಸಂರಕ್ಷಣೆಯ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸಿವೆ.

ಇದನ್ನೂ ಓದಿ: ನಾಗರಿಕರು ಮತ್ತು ವಸತಿ ಸಮುದಾಯಗಳು ನೀರು ಉಳಿಸಬಹುದಾದ ವಿಧಾನಗಳು

 

ಭಾರತದಲ್ಲಿ ನೀರು ಸಂರಕ್ಷಣೆಯ ವಿಭಿನ್ನ ಸಾಂಪ್ರದಾಯಿಕ ವಿಧಾನಗಳು

ತ್ವರಿತ ನಗರೀಕರಣ ಮತ್ತು ಜಲ ಮಾಲಿನ್ಯವು ಭಾರತದ ಹಲವು ಭಾಗಗಳಲ್ಲಿ ಮೇಲ್ಮೈ ಮತ್ತು ಅಂತರ್ಜಲ ನೀರಿನ ಪ್ರಮಾಣ ಮತ್ತು ಗುಣಮಟ್ಟದ ಮೇಲೆ ಅಪಾರವಾದ ಪರಿಣಾಮ ಬೀರಿದೆ. ದೇಶದ ಕೃಷಿ ವ್ಯವಸ್ಥೆಯು ಮಳೆನೀರಿನ ಮೇಲೆ ದೊಡ್ಡ ಮಟ್ಟದಲ್ಲಿ ಅವಲಂಬಿಸಿದೆ. ಮಳೆ ಬೀಳುವ ವಿಧಾನಗಳನ್ನು ಬದಲಾವಣೆ ಮಾಡುವ ಮೂಲಕ, ಸಾಂಪ್ರದಾಯಿಕ ನೀರು ಸಂರಕ್ಷಣೆ ವಿಧಾನಗಳ ಪುನಶ್ಚೇತನ ಮಾಡುವಿಕೆಯನ್ನು ಸರ್ಕಾರ ಪರಿಗಣಿಸುತ್ತಿದೆ.

ಈ ಕೆಳಗೆ ಕೆಲವು ಅಂಶಗಳನ್ನು ಪಟ್ಟಿ ಮಾಡಲಾಗಿದೆ:

ಕೊಳ

ಕೊಳಗಳು ಅಥವಾ ಕಲ್ಯಾಣಿಗಳು ಮನೆ ಬಳಕೆಗೆ ಮತ್ತು ಕುಡಿಯುವ ಉದ್ದೇಶಕ್ಕೆ ನೀರು ಸಂಗ್ರಹ ಮಾಡುವುದಕ್ಕಾಗಿವೆ. ಈ ಕೊಳಗಳು ನೈಸರ್ಗಿಕ ಅಥವಾ ಮಾನವನಿರ್ಮಿತವಾಗಿರುತ್ತವೆ. ಐದು ಎಕರೆಗಿಂತ ಕಡಿಮೆ ಪ್ರದೇಶದಲ್ಲಿ ಇದು ಇದ್ದರೆ ಇದನ್ನು ಕೊಳ ಎಂದು ಕರೆಯಲಾಗುತ್ತದೆ. ಮಧ್ಯಮ ಗಾತ್ರದ ಕೆರೆಯನ್ನು ಬಂಧಿ ಎಂದು ಕರೆಯಲಾಗುತ್ತದೆ.

 

A guide to water conservation methods and its importance

 

ಕಲ್ಯಾಣಿ

ಸಾಮಾನ್ಯ ಬಳಕೆ, ಧಾರ್ಮಿಕ ಸಂಪ್ರದಾಯಗಳು ಮತ್ತು ಅರಮನೆಯ ಉದ್ದೇಶಗಳಿಗೆ ಸಾಮಾನ್ಯ ನೀರು ಪೂರೈಕೆಗಾಗಿ ಕಲ್ಯಾಣಿಯನ್ನು ನಿರ್ಮಾಣ ಮಾಡಲಾಗುತ್ತಿತ್ತು. ಇವು ಆಯತಾಕಾರದ ಮೆಟ್ಟಿಲುಗಳಿರುವ ಕೆರೆಗಳಾಗಿದ್ದು, ಮೂರು ಅಥವಾ ನಾಲ್ಕು ಕಡೆಗಳಲ್ಲೂ ಮೆಟ್ಟಿಲುಗಳು ಇರುತ್ತಿದ್ದವು. ಕೆರೆಯಿಂದ ಅಥವಾ ನದಿಯಿಂದ ನೀರು ಒರತೆಗಳ ಮೂಲಕ ಈ ಕಲ್ಯಾಣಿಯಲ್ಲಿ ಸಂಗ್ರಹವಾಗುತ್ತಿತ್ತು.

 

A guide to water conservation methods and its importance

 

ಬವೋಲಿ

ಬವೋಲಿಗಳಲ್ಲಿ ಆಡಳಿತ ವರ್ಗವು ವ್ಯೂಹಾತ್ಮಕ, ನಾಗರಿಕ ಅಥವಾ ದತ್ತಿ ಉದ್ದೇಶಗಳಿಗೆ ನಿರ್ಮಾಣ ಮಾಡುತ್ತಿತ್ತು. ಇದು ಸಮಾಜದ ಎಲ್ಲ ಸಮುದಾಯದ ಜನರಿಗೂ ಮುಕ್ತವಾಗಿರುತ್ತಿತ್ತು. ಬವೋಲಿಗಳು ಮೆಟ್ಟಿಲುಗಳು ಇರುವ ಕೆರೆಗಳಾಗಿದ್ದು, ಕಮಾನುಗಳು ಮತ್ತು ಅಲಂಕಾರಗಳು ಇರುತ್ತಿದ್ದವು. ಈ ಬವೋಲಿಗಳು ಇರುವ ಸ್ಥಳವನ್ನು ಸಾಮಾನ್ಯವಾಗಿ ಅವುಗಳ ಉದ್ದೇಶವನ್ನು ಆಧರಿಸಿ ಉಲ್ಲೇಖಿಸಲಾಗುತ್ತಿತ್ತು. ಉದಾಹರಣೆಗೆ, ವ್ಯಾಪಾರಿ ಮಾರ್ಗದಲ್ಲಿ ಇರುವ ಬವೋಲಿಗಳು ವಿಶ್ರಾಂತಿ ಧಾಮಗಳಾಗಿರುತ್ತಿದ್ದವು. ಗ್ರಾಮಗಳ ಒಳಗೆ ಇರುವ ಬವೋಲಿಗಳನ್ನು ಸಾಮಾನ್ಯವಾಗಿ ಕೌಟುಂಬಿಕ ಬಳಕೆಗೆ ಮತ್ತು ಸಾಮಾಜಿಕ ಸಭೆ ಸಮಾರಂಭಗಳಿಗೆ ಬಳಸಲಾಗುತ್ತಿತ್ತು.

 

A guide to water conservation methods and its importance

 

ಕುಂಡ

ಕುಂಡಗಳನ್ನು ಮುಖ್ಯವಾಗಿ ಗುಜರಾತ್‌ ಮತ್ತು ರಾಜಸ್ಥಾನದಲ್ಲಿ ನೀರಿನ ಸಂರಕ್ಷಣೆ ಮತ್ತು ಮಳೆನೀರು ಕೊಯ್ಲಿಗಾಗಿ ನಿರ್ಮಿಸಲಾಗುತ್ತಿತ್ತು. ಇದು ಸಾಮಾನ್ಯವಾಗಿ ಸಾಸರ್ ಆಕಾರದಲ್ಲಿ ಇರುತ್ತದೆ. ವೃತ್ತಾಕಾರದಲ್ಲಿದ್ದು, ಮಧ್ಯದಲ್ಲಿ ಆಳವಾಗಿರುತ್ತಿತ್ತು. ಆಧುನಿಕ ಕುಂಡಗಳನ್ನು ಸಿಮೆಂಟ್‌ನಿಂದ ನಿರ್ಮಿಸಲಾಗುತ್ತಿದೆ. ಹಿಂದಿನ ಕಾಲದಲ್ಲಿ, ಅವುಗಳನ್ನು ಸುಣ್ಣ ಮತ್ತು ನಿಂಬೆ ಮಿಶ್ರಣವನ್ನು ಬಳಸಿ ಮಾಡಲಾಗುತ್ತಿತ್ತು.

 

A guide to water conservation methods and its importance

 

ಬವಾರಿ

ಭಾರತದಲ್ಲಿ ಸಾಂಪ್ರದಾಯಿಕ ನೀರು ಸಂರಕ್ಷಣೆ ವಿಧಾನಕ್ಕೆ ಒಂದು ಉದಾಹರಣೆ ಇದಾಗಿದ್ದು, ರಾಜಸ್ಥಾನದಲ್ಲಿ ಅತ್ಯಂತ ಪುರಾತನ ಕಾಲದ ನೀರು ಸಂಗ್ರಹ ಜಾಲದ ಭಾಗವಾಗಿ ಬವಾರಿಗಳು ಇರುತ್ತಿದ್ದವು. ಈ ಪ್ರದೇಶದಲ್ಲಿ ಬೀಳುವ ಕಡಿಮೆ ಪ್ರಮಾಣದ ಮಳೆ ನೀರನ್ನು ವಿಶಿಷ್ಟವಾಗಿ ವಿಭಜಿಸುವ ಉದ್ದೇಶವನ್ನು ಹೊಂದಿರುತ್ತಿದ್ದವು. ನಗರದ ಹೊರಭಾಗದಲ್ಲಿರುವ ಗುಡ್ಡದ ಮೇಲಿನಿಂದ ಇದಕ್ಕಾಗಿ ನಾಲೆಗಳನ್ನು ನಿರ್ಮಾಣ ಮಾಡಿ, ಕೃತಕ ಕೆರೆಗಳಿಗೆ ಇದನ್ನು ತಂದುಬಿಡಲಾಗುತ್ತಿತ್ತು.

 

A guide to water conservation methods and its importance

 

ಟಾಂಕಾ

ರಾಜಸ್ಥಾನದ ಥಾರ್‌ ಮರುಭೂಮಿಯಲ್ಲಿ ನಿರ್ದಿಷ್ಟವಾಗಿ ಮಳೆನೀರು ಕೊಯ್ಲು ತಂತ್ರವನ್ನು ಒಳಗೊಂಡಿರುವ ನೀರು ಸಂಕರ್ಷಣೆಯ ಸಾಂಪ್ರದಾಯಿಕ ವಿಧಾನಗಳಲ್ಲಿ ಒಂದಾಗಿದೆ. ಟಾಂಕಾ ಸಿಲಿಂಡರ್ ಆಕೃತಿಯಲ್ಲಿದ್ದು, ನೆಲದಡಿಯಲ್ಲಿ ಹೊಂಡವನ್ನು ತೆಗೆಯಲಾಗುತ್ತಿತ್ತು. ಇದರಲ್ಲಿ ಛಾವಣಿ ಹಾಗೂ ಇತರ ಭಾಗದ ಮಳೆನೀರು ಹೋಗುತ್ತಿತ್ತು.

ನಾಡಿ

ನಾಡಿ ಎಂಬುದು ಹಳ್ಳಿಯ ಕೊಳವಾಗಿದ್ದು, ಸುತ್ತಲಿನ ಪ್ರದೇಶಗಳಲ್ಲಿ ಬಿದ್ದ ಮಳೆ ನೀರು ಇದರಲ್ಲಿ ಸಂಗ್ರಹವಾಗುತ್ತದೆ. ಈ ಮೂಲಕ್ಕೆ ನಿರಂತರವಾಗಿ ನೀರು ಬರುವುದಿಲ್ಲವಾದ್ದರಿಂದ, ಇದರಲ್ಲಿ ಬೇಗ ಹೂಳು ತುಂಬುತ್ತದೆ.

ಬಿದಿರು ಡ್ರಿಪ್ ನೀರಾವರಿ ವ್ಯವಸ್ಥೆ

ಭಾರತದಲ್ಲಿ ನೀರು ಸಂರಕ್ಷಣೆಯ ವಿವಿಧ ವಿಧಾನಗಳ ಪೈಕಿ, ಬಿದಿರಿನ ಡ್ರಿಪ್ ನೀರಾವರಿ ವ್ಯವಸ್ಥೆಯನ್ನು ದೇಶದ ಈಶಾನ್ಯ ಭಾಗಗಳಲ್ಲಿ ಬಳಸಲಾಗುತ್ತದೆ. ಇದು 200 ಕ್ಕೂ ಹೆಚ್ಚು ವರ್ಷಗಳ ಹಿಂದಿನ ತಂತ್ರವಾಗಿದ್ದು, ಎತ್ತರದ ಭಾಗದಲ್ಲಿರುವ ಜಮೀನುಗಳಿಗೆ ನೀರು ನೀಡಲು ಬುಡಕಟ್ಟು ಜನರು ಬಳಸುತ್ತಿದ್ದರು. ಈ ಸಿಸ್ಟಮ್‌ನಲ್ಲಿ, ನೀರನ್ನು ಬಿದಿರಿನ ಪೈಪ್‌ಗಳನ್ನು ಬಳಸಿ ಸಾಗಿಸಲಾಗುತ್ತದೆ.

 

Water conservation projects and methods adopted in India: Useful tips for conservation of water at home

 

ಝಿಂಗ್‌ಗಳು

ಝಿಂಗ್‌ ಎಂಬ ನೀರು ಕೊಯ್ಲು ರಚನೆಗಳು ಲಡಾಖ್‌ನಲ್ಲಿ ಕಂಡುಬಂದಿವೆ. ಕರಗುವ ಹಿಮ ನೀರನ್ನು ಸಂಗ್ರಹಿಸಲು ಈ ಸಣ್ಣ ಕೆರೆಗಳನ್ನು ನಿರ್ಮಿಸಲಾಗಿರುತ್ತದೆ. ಇಂತಹ ಪರ್ವತ ಪ್ರದೇಶಗಳಲ್ಲಿ ಇವು ಅತ್ಯಂತ ಸುಲಭದ ನೀರು ಸಂಗ್ರಹ ಮತ್ತು ನಿರ್ವಹಣೆ ವಿಧಾನಗಳಾಗಿವೆ. ನಾಲೆಗಳ ಜಾಲದ ಮೂಲಕ ಕೆರೆಗೆ ಹಿಮ ನೀರನ್ನು ಹರಿಸಲಾಗುತ್ತದೆ.

ಕುಹ್ಲ್‌ಗಳು

ನದಿಗಳು ಮತ್ತು ತೊರೆಗಳಿಂದ ಬರುವ ನೀರನ್ನು ಮೇಲ್ಮೈ ನೀರಿನ ಕಾಲುವೆಗಳ ಮೂಲಕ ಸಾಗಿಸುವುದು ಹಿಮಾಚಲ ಪ್ರದೇಶದ ಗುಡ್ಡಗಾಡು ಪ್ರದೇಶಗಳಲ್ಲಿ ನೀರು ಸಂರಕ್ಷಣೆಗೆ ಅತ್ಯಂತ ಹಳೆಯ ವಿಧಾನವಾಗಿದೆ. ಈ ನಾಲೆಗಳನ್ನು ಕುಹ್ಲ್‌ಗಳು ಎಂದು ಕರೆಯಲಾಗುತ್ತದೆ. ಈ ಪ್ರದೇಶದ 30,000 ಕ್ಕೂ ಹೆಚ್ಚು ಹೆಕ್ಟೇರ್‌ ಪ್ರದೇಶಗಳಿಗೆ ನೀರಾವರಿಗೆ ಇದನ್ನು ಬಳಸಲಾಗುತ್ತದೆ. ಈ ಪ್ರದೇಶದಲ್ಲಿ ನೂರಕ್ಕೂ ಹೆಚ್ಚು ಕುಹ್ಲ್‌ಗಳಿವೆ.

 

Water conservation projects and methods adopted in India: Useful tips for conservation of water at home

 

ಜಾಕ್‌ವೆಲ್‌ಗಳು

ಭಾರತದಲ್ಲಿ ಇದು ಅತ್ಯಂತ ಹಳೆಯ ಮಳೆ ನೀರು ಸಂಗ್ರಹಣೆ ವಿಧಾನವಾಗಿದೆ. ಮಳೆನೀರು ಕೊಯ್ಲು ಮಾಡುವುದಕ್ಕೆ ಬಳಸುವ ಅತ್ಯಂತ ಸಣ್ಣ ಹೊಂಡಗಳೇ ಜಾಕ್‌ವೆಲ್‌ಗಳು. ಹಿಂದಿನ ಕಾಲದಲ್ಲಿ, ಗ್ರೇಟರ್ ನಿಕೋಬಾರ್ ದ್ವೀಪಗಳ ಕೆಳ ಪ್ರದೇಶದಲ್ಲಿ ವಾಸಿಸುತ್ತಿರವ ಜನರು ಬಿದಿರು ಮತ್ತು ಮರದ ತುಂಡುಗಳನ್ನು ಬಳಸಿ ಇಂತಹ ರಚನೆಯನ್ನು ನಿರ್ಮಿಸುತ್ತಿದ್ದರು.

 

Water conservation projects and methods adopted in India: Useful tips for conservation of water at home

 

ರಾಮ್‌ಟೆಕ್‌ನ ನೀರು ಕೊಯ್ಲು ರಚನೆಗಳು

ಮಹಾರಾಷ್ಟ್ರದ ರಾಮ್‌ಟೆಕ್‌ ಮಾದರಿಯ ನೀರು ಉಳಿತಾಯ ಯೋಜನೆಗಳು ಮತ್ತು ತಂತ್ರಗಳು ಅತ್ಯಂತ ಸಾಂಪ್ರದಾಯಿಕವಾದದ್ದಾಗಿವೆ. ಈ ವ್ಯವಸ್ಥೆಯು ಅಂತರ್ಜಲ ಮತ್ತು ಮೇಲ್ಮೈ ನೀರಿನ ಮೂಲಗಳನ್ನು ಬಳಸುತ್ತದೆ. ಗುಡ್ಡ ಪ್ರದೇಶಗಳಲ್ಲಿರುವ ಸಮತಟ್ಟು ಪ್ರದೇಶಗಳಿಂದ ಭೂಮಿ ಅಡಿಯಿಂದ ಮತ್ತು ಮೇಲ್ಮೈ ನಾಲೆಗಳಿಂದ ಈ ಕೆರೆಗಳಿಗೆ ಸಂಪರ್ಕ ಸಾಧಿಸಲಾಗುತ್ತದೆ. ಗುಡ್ಡ ಪ್ರದೇಶದಲ್ಲಿನ ಕೆರೆಯಲ್ಲಿ ನೀರು ಭರ್ತಿಯಾದಾಗ ಅದು ಮುಂದಿನ ಕೆರೆಗಳಿಗೆ ಹರಿಯುತ್ತದೆ.

 

Water conservation projects and methods adopted in India: Useful tips for conservation of water at home

 

ಭಾರತದ ಇತರ ಭಾಗಗಳಲ್ಲಿ ನೀರು ರಕ್ಷಣೆ

ಮಧ್ಯಪ್ರದೇಶದ ಬುರ್ಹಾನ್‌ಪುರವು ಉತ್ತಮ ಸಂಪರ್ಕ ಹೊಂದಿರುವ ನೀರಿನ ಡ್ರೈನೇಜ್ ಮತ್ತು ಸಂಗ್ರಹ ವ್ಯವಸ್ಥೆಯನ್ನು ಹೊಂದಿದೆ. ಈ ಪ್ರದೇಶದಲ್ಲಿನ ಪ್ರತಿ ಮನೆಗಳೂ ನೀರು ಸಂರಕ್ಷಣೆಗೆ ಉತ್ತಮವಾಗಿ ಆಯೋಜನೆ ಮಾಡಿದ ಸಂಗ್ರಹ ವ್ಯವಸ್ಥೆ ಇದೆ. ಇಲ್ಲಿನ ಕೋಟೆಗಳು ಯುದ್ಧದ ಸಮಯದಲ್ಲಿ ಸಾಮಗ್ರಿಗಳನ್ನು ಒದಗಿಸಲು ಸ್ಥಳಾವಕಾಶವಾಗಿ ಕೆಲಸ ಮಾಡುತ್ತದೆ. ಈ ಮೂಲಕ, ನೀರು ಸಂಗ್ರಹಕ್ಕೆ ಈ ರಚನೆಗಳು ಸಹಾಯ ಮಾಡಿವೆ.

ಗುಜರಾತ್‌ನಲ್ಲಿನ ಧೊಲಾವಿರಾ ಸಿಂಧೂ ಕಣಿವೆಯ ನಾಗರಿಕತೆಯ ಐತಿಹಾಸಿಕ ತಾಣವಾಗಿದೆ. ಇಲ್ಲಿ ಹಲವು ಕೆರೆ ಆಕಾರದ ನೀರು ಸಂಗ್ರಹ ವ್ಯವಸ್ಥೆ ಇದೆ. ಇದರಲ್ಲಿ ಮಳೆಗಾಲದ ಸಮಯದಲ್ಲಿ ನೀರು ಸಂಗ್ರಹವಾಗುತ್ತದೆ.

 

ನೀರು ಸಂರಕ್ಷಣೆ ಎಂದರೇನು?

ಸರಳವಾಗಿ ಹೇಳುವುದಾದರೆ, ನೀರು ಸಂರಕ್ಷಣೆ ಎಂಬುದು ನೀರನ್ನು ದಕ್ಷವಾಗಿ ಬಳಸಿಕೊಳ್ಳುವುದು ಮತ್ತು ನೀರು ಪೋಲಾಗುವುದು ಅಥವಾ ಅನಗತ್ಯ ಬಳಕೆಯನ್ನು ಕಡಿಮೆ ಮಾಡುವ ತಂತ್ರವಾಗಿದೆ. ಈಗಿನ ಕಾಲದಲ್ಲಿ ತಾಜಾ, ಶುದ್ಧ ನೀರಿನ ಮೂಲ ಸೀಮಿತವಾಗಿರುವುದರಿಂದ, ನೀರು ಸಂರಕ್ಷಣೆ ಅತ್ಯಂತ ಪ್ರಮುಖ ಮತ್ತು ಅತ್ಯಗತ್ಯದ್ದಾಗಿದೆ.

ಇದನ್ನೂ ಓದಿ: ಪೆಂಟ್‌ಹೌಸ್‌ ಬಗ್ಗೆ ವಿವರ

 

ನೀರು ಸಂರಕ್ಷಣೆ: ಏಕೆ ಪ್ರಮುಖ?

ನೀರು ಸಂರಕ್ಷಣೆ ಹಲವು ಕಾರಣಗಳಿಗೆ ಪ್ರಮುಖವಾಗಿದೆ:

  1. ನೀರಿನ ವಿತರಣೆಯು ಅಸಮಾನವಾಗಿದೆ. ಹೀಗಾಗಿ, ಭಾರತದ ಹೆಚ್ಚಿನ ಭಾಗದಲ್ಲಿ ಮಳೆ ಹಾಗೂ ಅಂತರ್ಜಲ ನೀರಿನ ಕೊರತೆ ಇದೆ.
  2. ದೇಶಾದ್ಯಂತ ಈ ಅಸಮಾನ ನೀರಿನ ವಿತರಣೆಯಿಂದಾಗಿ ಬಹುತೇಕ ಜನರು ನೀರಿನ ಕೊರತೆ ಎದುರಿಸುತ್ತಿದ್ದಾರೆ.
  3. ನಗರ ಪ್ರದೇಶಗಳಲ್ಲಿ ನೀರಿನ ಅಗತ್ಯವು ಲಭ್ಯತೆಗಿಂತ ಹೆಚ್ಚಿನದಾಗಿದೆ. ಆದಾಗ್ಯೂ, ನೀರಿನ ಸಂರಕ್ಷಣೆಯು ಭವಿಷ್ಯದ ತಲೆಮಾರುಗಳಿಗೆ ಶುದ್ಧ ನೀರಿನ ಲಭ್ಯತೆಯನ್ನು ಖಚಿತಪಡಿಸುತ್ತದೆ. ತಾಜಾ ನೀರಿನ ಬಳಕೆಯು ನವೀಕರಿಸಬಹುದಾದ ನೈಸರ್ಗಿಕ ದರವನ್ನು ಮೀರದ ಹಾಗೆ ತಡೆಯುವ ಮೂಲಕ ಇದನ್ನು ಖಚಿತಪಡಿಸಿಕೊಳ್ಳಬಹುದು.
  4. ಭಾರತದಲ್ಲಿ ನಿರ್ದಿಷ್ಟ ಕಾಲದಲ್ಲಿ ಮಾತ್ರ ಮಳೆ ಬೀಳುವುದರಿಂದ ಬೆಳೆಗಳಿಗೆ ನೀರುಣಿಸಲು ನೀರು ಅಗತ್ಯವಿದ್ದೇ ಇರುತ್ತದೆ. ನೀರು ಪರಿಸರ ವ್ಯವಸ್ಥೆಯನ್ನು ಮತ್ತು ಕಾಡುಪ್ರಾಣಿಗಳನ್ನು ರಕ್ಷಿಸುತ್ತದೆ.
  5. ಆದಾಗ್ಯೂ, ನೀರು ಸಂರಕ್ಷಣೆ ಮಾಡುವುದರಿಂದ ಇಂಧನವೂ ಉಳಿತಾಯವಾಗುತ್ತದೆ. ಹೀಗಾಗಿ, ನೀರು ಮತ್ತು ಇಂಧನ ದಕ್ಷವಾಗಿರುವ ಸ್ಮಾರ್ಟ್‌ ಸಲಕರಣೆಗಳನ್ನು ಬಳಸುವ ಮೂಲಕ ನಾವು ನೀರು ಬಳಕೆಯನ್ನು ಕಡಿಮೆ ಮಾಡಬಹುದು ಮತ್ತು ಇಂಧನವನ್ನೂ ಉಳಿತಾಯ ಮಾಡಬಹುದು.
  6. ನೀರು ಕಡಿಮೆ ಬಳಕೆ ಮಾಡಿದರೆ, ಪರಿಸರದಲ್ಲಿ ಹೆಚ್ಚಿನ ನೀರು ಇರುತ್ತದೆ ಮತ್ತು ಸಸ್ಯಗಳು, ಕಾಡು ಪ್ರಾಣಿಗಳು ಮತ್ತು ಜಲಚರ ಜೀವಿಗಳ ಜೀವನಚಕ್ರಕ್ಕೆ ನೆರವಾಗುತ್ತದೆ. ಇದು ವಿಶೇಷವಾಗಿ ಬೇಸಿಗೆ ಸಮಯದಲ್ಲಿ ಅತ್ಯಂತ ಮಹತ್ವದ್ದಾಗಿರುತ್ತದೆ.
  7. ಐಸ್‌ಬರ್ಗ್‌ನಿಂದ ತಾಜಾ ನೀರು ತೆಗೆಯುವಿಕೆಯು ಇತ್ತೀಚಿನ ವರ್ಷಗಳಲ್ಲಿ ಗಮನಾರ್ಹವಾಗಿ ಹೆಚ್ಚಳ ಕಂಡಿದೆ. ಜಲವಿದ್ಯುತ್ ಉತ್ಪಾದನೆಗೆ ನೀರು ಅಗತ್ಯವಿರುವುದೂ ಸೇರಿದಂತೆ ನೀರಿನ ಬೇಡಿಕೆ ಕೂಡಾ ಅಪಾರ ಪ್ರಮಾಣದಲ್ಲಿ ಹೆಚ್ಚಳವಾಗಿದೆ.

 

ನೀರು ಸಂರಕ್ಷಣೆ ವಿಧಾನಗಳು: ಮನೆಯಲ್ಲಿ ನೀರು ಸಂರಕ್ಷಣೆಯ ಸರಳ ಸಲಹೆಗಳು

ಅಡುಗೆಮನೆಯಲ್ಲಿ ನೀರು ಸಂರಕ್ಷಣೆಯ ವಿಧಾನಗಳು

ಆಹಾರ ಸಾಮಗ್ರಿಗಳನ್ನು ಸ್ವಚ್ಛಗೊಳಿಸಲು ಹರಿಯುತ್ತಿರುವ ನೀರನ್ನು ಬಳಸಬೇಡಿ

ತರಕಾರಿಗಳನ್ನು ಸ್ವಚ್ಛಗೊಳಿಸಲು ಹರಿಯುತ್ತಿರುವ ನೀರು ಬಳಸಬೇಡಿ. ಬದಲಿಗೆ, ನೀರಿನ ಬೌಲ್‌ನಲ್ಲಿ ತರಕಾರಿಗಳನ್ನು ಸ್ವಲ್ಪ ಸಮಯದವರೆಗೆ ನೆನೆಸಿಡಿ ಮತ್ತು ನಂತರ ತೊಳೆಯಿರಿ. ಫ್ರೋಜನ್ ಆಹಾರವನ್ನು ಹರಿಯುವ ನೀರಿನಲ್ಲಿ ಡೀಫ್ರೋಸ್ಟ್‌ ಮಾಡಬೇಡಿ. ಡಿಫ್ರೋಸ್ಟ್‌ ಮಾಡಲು ಆಹಾರವನ್ನು ಹೊರತೆಗೆದು ರಾತ್ರಿ ಬೆಳಗಾಗುವವರೆಗೆ ಇಡಬಹುದು.

ಮನೆ ಮತ್ತು ಕಚೇರಿಯಲ್ಲಿ ನೀರನ್ನು ದಕ್ಷವಾಗಿ ಬಳಸುವ ಸಲಕರಣೆಗಳಿಗೆ ಬದಲಿಸಿಕೊಳ್ಳಿ

ಡಿಶ್‌ವಾಶರ್ ಅನ್ನು ಖರೀದಿ ಮಾಡುವಾಗ, ಲೈಟ್ ವಾಶ್‌ ಆಯ್ಕೆಯನ್ನು ಬಳಸಿ. ಸಂಪೂರ್ಣ ಲೋಡ್‌ಗಳು ಮತ್ತು ಸಣ್ಣ ಆವರ್ತನಕ್ಕೆ ಎಲೆಕ್ಟ್ರಿಡ್‌ ಡಿಶ್‌ವಾಶರ್ ಬಳಸಿ.

ತ್ಯಾಜ್ಯ ನೀರನ್ನು ಮರುಬಳಕೆ ಮಾಡಿ

ಕಾರುಗಳನ್ನು ತೊಳೆಯಲು ಅಥವಾ ಸಸ್ಯಗಳಿಗೆ ನೀರು ಹಾಕಲು ಆರ್‌ಒ ವಾಟರ್ ಪ್ಯೂರಿಫೈಯರ್‌ಗಳಿಂದ ಬಂದ ತ್ಯಾಜ್ಯ ನೀರನ್ನು ಮರುಬಳಕೆ ಮಾಡಿ. ನೆಲ ಒರೆಸಲು ಅಥವಾ ಲಾಂಡ್ರಿ ಬಟ್ಟೆಯನ್ನು ಒದ್ದೆ ಮಾಡಲು ಕೂಡ ಈ ನೀರನ್ನು ನೀವು ಬಳಕೆ ಮಾಡಬಹುದು. ನೀರಿನ ಬಾಟಲ್‌ಗಳಲ್ಲಿ ಉಳಿದಿರುವ ನೀರನ್ನು ಚೆಲ್ಲಬೇಡಿ. ಇದನ್ನು ಸಸ್ಯಗಳಿಗೆ ನೀರುಣಿಸಲು ಅಥವಾ ಹಕ್ಕಿಗಳಿಗೆ ನೀಡಲು ಬಳಕೆ ಮಾಡಬಹುದು.

ಪಾತ್ರೆಗಳನ್ನು ತೊಳೆಯುವಾಗ ನೀರು ಆಫ್‌ ಮಾಡಿ

ಕೈಯಿಂದ ಕೆಲವು ಪಾತ್ರೆಗಳನ್ನು ತೊಳೆಯಬೇಕಾದಾಗ, ನೆನೆಸುತ್ತಿಲ್ಲದ ಸಂದರ್ಭದಲ್ಲಿ ನೀರು ಆಫ್‌ ಮಾಡಿ.

ಶೌಚಾಲಯದಲ್ಲಿ ನೀರು ಸಂರಕ್ಷಣೆಗೆ ವಿಧಾನಗಳು

ಕಡಿಮೆ ಅವಧಿಗೆ ಸ್ನಾನ ಮಾಡಿ

ನಾಲ್ಕು ನಿಮಿಷದ ಶೋವರ್‌ನಲ್ಲಿ 20 ರಿಂದ 40 ಗ್ಯಾಲನ್‌ ನೀರು ಬಳಕೆಯಾಗುತ್ತದೆ. ಕಡಿಮೆ ಅವಧಿಗೆ ಶೋವರ್ ಬಳಸಿ. ಭಾಗಶಃ ತುಂಬಿದ ಟಬ್‌ ಕಡಿಮೆ ನೀರನ್ನು ಬಳಸುತ್ತದೆ. ನೀರು ಉಳಿತಾಯ ಮಾಡುವ ಶೋವರ್‌ಹೆಡ್‌ಗಳು ಮತ್ತು ಶೋವರ್ ಟೈಮರ್‌ಗಳನ್ನೂ ಬಳಸಬಹುದು.

ಬಳಕೆ ಮಾಡದಿದ್ದಾಗ ನಲ್ಲಿ ಆಫ್‌ ಮಾಡಿ

ಹಲ್ಲುಜ್ಜುವಾಗ ಅಥವಾ ಶೇವ್ ಮಾಡುವಾಗ ನೀರು ಆಫ್‌ ಮಾಡಿರಿ. ಬ್ರಶ್ ಮಾಡುವುದಕ್ಕೂ ಮೊದಲು ಗ್ಲಾಸ್‌ನಲ್ಲಿ ನೀರು ಹಾಕಿಕೊಳ್ಳಬಹುದು ಮತ್ತು ಬಾಯಿಯಲ್ಲಿ ನೀರು ಹಾಕಿ ಮುಕ್ಕಳಿಸಬಹುದು. ಶೇವ್ ಮಾಡುವಾಗ ರೇಜರ್‌ ಸ್ವಚ್ಛಗೊಳಿಸಲು ಬಿರುಸಿನಿಂದ ಬರುವ ನೀರನ್ನು ಬಳಸಬಹುದು.

ಶೌಚಾಲಯದಲ್ಲಿ ಸೋರಿಕೆ ಆಗುತ್ತಿದೆಯೇ ಎಂದು ಪರಿಶೀಲಿಸಿ

ಬಳಕೆ ಮಾಡಿದ ನಂತರ ನಲ್ಲಿಯನ್ನು ಬಿಗಿಯಾಗಿ ಆಫ್‌ ಮಾಡಿ. ನಲ್ಲಿಯಿಂದ ನೀರು ಸುರಿಯುತ್ತಿದ್ದಲ್ಲಿ ದಿನದಲ್ಲಿ 50 ಗ್ಯಾಲನ್‌ಗಳು ಅಥವಾ ಹೆಚ್ಚು ನೀರು ಪೋಲಾಗುತ್ತದೆ. ಯಾವುದೇ ನಲ್ಲಿ ಸೋರುತ್ತಿದ್ದರೆ ತಕ್ಷಣವೇ ಅದನ್ನು ರಿಪೇರಿ ಮಾಡಿ.

ಟಾಯ್ಲೆಟ್‌ ಫ್ಲಶಿಂಗ್‌ ಸಿಸ್ಟಮ್‌ಗಳಲ್ಲಿ ಯಾವುದೇ ಸೋರಿಕೆ ಆಗುತ್ತಿದೆಯೇ ಎಂದು ಆಗಾಗ್ಗೆ ಪರಿಶೀಲಿಸುತ್ತಿರಿ. ಡೈ ಟ್ಯಾಬ್ಲೆಟ್‌ಗಳು ಅಥವಾ ಟ್ಯಾಂಕ್‌ಗೆ ಆಹಾರ ಬಣ್ಣವನ್ನು ಹಾಕುವ ಮೂಲಕ ಇದನ್ನು ಮಾಡಬಹುದು ಮತ್ತು ಒಂದು ಗಂಟೆಯ ನಂತರ ನಿಮ್ಮ ಬೌಲ್‌ ಬಣ್ಣ ಬದಲಾದರೆ ಟಾಯ್ಲೆಟ್ ಸೋರುತ್ತಿದೆ ಎಂದು ಅರ್ಥವಾಗುತ್ತದೆ.

ಕಡಿಮೆ ಫ್ಲಶ್ ಮಾಡುವ ಟಾಯ್ಲೆಟ್‌ಗಳನ್ನು ಬಳಸಿ

50% ವರೆಗೆ ನೀರಿನ ಬಳಕೆಯನ್ನು ಕಡಿಮೆ ಮಾಡುವ ಕಡಿಮೆ ಫ್ಲಶ್ ಟಾಯ್ಲೆಟ್‌ಗಳನ್ನು ಅಳವಡಿಸಿಕೊಳ್ಳಿ

ಫುಲ್‌ ಲೋಡ್‌ಗಳಿಗೆ ಮಾತ್ರ ಅಟೊಮ್ಯಾಟಿಕ್ ವಾಶಿಂಗ್ ಮಶಿನ್ ಬಳಸಿ

ಆಟೊಮ್ಯಾಟಿಕ್ ವಾಶರ್ ಪ್ರತಿ ಆವರ್ತನಕ್ಕೆ 35 ಗ್ಯಾಲನ್‌ಗಳಷ್ಟು ನೀರನ್ನು ಬಳಸುತ್ತದೆ.

ದಕ್ಷವಾಗಿ ನೀರನ್ನು ಬಳಸುವ ಫಿಟಿಂಗ್‌ಗಳನ್ನು ಸ್ಥಾಪಿಸಿ

ನೀರಿನ ಬಳಕೆಯನ್ನು ಕಡಿಮೆ ಮಾಡಲು ದಕ್ಷವಾಗಿ ನೀರು ಬಳಕೆ ಮಾಡುವ ಶೋವರ್‌ಗಳು ಮತ್ತು ನಲ್ಲಿಗಳನ್ನು ಅಳವಡಿಸಿ. ನೀರು ಉಳಿತಾಯ ಮಾಡುವ ಶೋವರ್‌ ಹೆಡ್‌ಗಳು ಅಥವಾ ಹರಿವು ನಿರ್ಬಂಧಕಗಳು ಪ್ರತಿ ನಿಮಿಷಕ್ಕೆ ಐದರಿಂದ ಹತ್ತು ಗ್ಯಾಲನ್‌ಗಳಿಂದ ಪ್ರತಿ ನಿಮಿಷಕ್ಕೆ ಮೂರು ಗ್ಯಾಲನ್‌ಗಳಿಗೆ ಶೋವರ್ ನೀರಿನ ಹರಿವನ್ನು ಇಳಿಕೆ ಮಾಡಬಹುದು.

ಮನೆಯಲ್ಲಿ ಡ್ಯೂಯೆಲ್‌ ಫ್ಲಶ್ ಟಾಯ್ಲೆಟ್ ಸಿಸ್ಟಮ್‌ಗಳನ್ನು ಅಳವಡಿಸಿ. ಬೇರೆ ಬೇರೆ ಪ್ರಮಾಣದ ನೀರನ್ನು ಇವು ಫ್ಲಶ್ ಮಾಡುವ ವಿಧಾನವನ್ನು ಹೊಂದಿರಬೇಕು.

ಉದ್ಯಾನ ಮತ್ತು ಹೊರಾಂಗಣದಲ್ಲಿ ನೀರು ಸಂರಕ್ಷಣೆಗೆ ವಿಧಾನಗಳು

ಕಡಿಮೆ ನೀರನ್ನು ಬಳಸುವ ಸಸ್ಯಗಳನ್ನು ಬೆಳೆಸಿ

ಕಡಿಮೆ ನೀರನ್ನು ಬಳಸುವ ಬರ ಪ್ರತಿರೋಧಕ ಸಸ್ಯಗಳು ಮತ್ತು ಮರಗಳನ್ನು ನಿಮ್ಮ ಮನೆ ಉದ್ಯಾನದಲ್ಲಿ ಬೆಳೆಸಿ.

ಉದ್ಯಾನ ನೀರನ್ನು ಆಳವಾಗಿ ನೀಡಿ

ನಿಮ್ಮ ಉದ್ಯಾನಕ್ಕೆ ನೀರು ಹಾಕುವ ದಕ್ಷ ವಿಧಾನವೆಂದರೆ ನೀರು ಹೆಚ್ಚಿನ ಕಾಲದವರೆಗೆ ಇರುವುದಕ್ಕೆ ಬಿಟ್ಟು ಬೇರುಗಳವರೆಗೆ ನೀರು ಹೋಗುವುದಕ್ಕೆ ಅನುವು ಮಾಡುವುದಾಗಿದೆ. ಆದಾಗ್ಯೂ, ಇಡೀ ದಿನ ಸ್ಪ್ರಿಂಕ್ಲರ್‌ಗಳನ್ನು ಆನ್‌ ಮಾಡಿ ಬಿಡಬೇಡಿ. ಸ್ವಲ್ಪ ಪ್ರಮಾಣದಲ್ಲಿ ನೀರು ಸಿಂಪಡಣೆಯಾಗುತ್ತಿರುವುದರಿಂದ ಮೇಲ್ಮೈಯಲ್ಲೇ ನೀರು ಉಳಿದು, ಆವಿಯಾಗಿ ಹೋಗಬಹುದು. ಇದರಿಂದ ನೀರು ನಷ್ಟವಾಗುತ್ತದೆ.

ಮಣ್ಣಿಗೆ ನೀವು ವಿಪರೀತ ನೀರು ನೀಡುವುದಿಲ್ಲ ಎಂದು ಖಚಿತಪಡಿಸಿಕೊಳ್ಳಿ. ಏಕೆಂದರೆ, ಮಣ್ಣು ಹೆಚ್ಚಿನ ನೀರನ್ನು ಇಟ್ಟುಕೊಳ್ಳುವುದಿಲ್ಲ. ಪ್ರತಿ ದಿನ ಕಡಿಮೆ ಅವಧಿಗೆ ಉದ್ಯಾನಕ್ಕೆ ನೀರು ಹಾಕುತ್ತಿರಬೇಡಿ. ಬದಲಿಗೆ, ಪ್ರತಿ ಮೂರರಿಂದ ಐದು ದಿನಗಳಿಗೊಮ್ಮೆ ನೀರು ಹಾಕಬಹುದು. ಉದ್ಯಾನಗಳು ಅಥವಾ ಲಾನ್‌ಗಳಿಗೆ ಬೇಸಿಗೆ ಸಮಯದಲ್ಲಿ ದಿನಕ್ಕೆ ಕೇವಲ 5 ಮಿಲಿಮೀಟರ್ ನೀರು ಸಾಕು.

ಕಾರು ತೊಳೆಯುವಾಗ ನೀರು ಉಳಿತಾಯ ಮಾಡಿ

ಸೋಪ್ ನೀರನ್ನು ತೆಗೆಯಲು ಹೋಸ್ ಮಾತ್ರ ಬಳಸಿ ಅಥವಾ ನಿರಂತರ ನೀರಿನ ಹರಿವನ್ನು ಬಳಸುವುದರ ಬದಲಿಗೆ ಬಕೆಟ್‌ನಲ್ಲಿ ನೀರನ್ನು ಹಾಕಿಕೊಳ್ಳಿ.

ಹೋಸ್‌ ಮತ್ತು ಸ್ಪ್ರಿಂಕ್ಲರ್‌ಗಳ ಜೊತೆ ಮಕ್ಕಳು ಆಟವಾಡದಂತೆ ನೋಡಿಕೊಳ್ಳಿ

ಬೇಸಿಗೆ ಸಮಯದಲ್ಲಿ ಹೋಸ್ ಅಥವಾ ಸ್ಪ್ರಿಂಕ್ಲರ್‌ ಅಡಿಯಲ್ಲಿ ಉದ್ಯಾನದಲ್ಲಿ ಆಟವಾಡುವುದಕ್ಕೆ ಮಕ್ಕಳಿಗೆ ಇಷ್ಟವಾಗುತ್ತದೆ. ಆದರೆ, ಇದರಿಂದ ನೀರು ಪೋಲಾಗಬಹುದು.

 

ನೀರು ಸಂರಕ್ಷಣೆ: ನೀರು ಸಂಬಂಧಿತ ಸಮಸ್ಯೆಗಳಿಗೆ ಪರಿಹಾರ

ಹಲವು ದೇಶಗಳು ತೀವ್ರ ನೀರಿನ ಕೊರತೆ ಸಮಸ್ಯೆಯನ್ನು ಎದುರಿಸುತ್ತಿವೆ. ಇದಕ್ಕೆ ಮುಖ್ಯ ಕಾರಣವೇ ಅತಿಯಾದ ಜನಸಂಖ್ಯೆ. ಅರಣ್ಯ ಪ್ರಮಾಣ ಕಡಿಮೆಯಾಗುತ್ತಿರುವುದರಿಂದ ನೀರಿನ ಮಟ್ಟ ಕುಸಿಯುತ್ತಿರುವುದು ಕೂಡಾ ಗಂಭೀರ ಕಳವಳಕ್ಕೆ ಕಾರಣವಾಗಿದೆ.

ಕೆಲವು ಸ್ಥಳಗಳಲ್ಲಿ ನೀರಿನ ಕೊರತೆಯನ್ನು ಉಂಟು ಮಾಡುವ ಮೂಲಕ ಜಾಗತಿಕ ತಾಪಮಾನ ಏರಿಕೆಯ ಮೇಲೂ ಪರಿಣಾಮ ಬೀರಿದೆ ಮತ್ತು ಇತರ ಸ್ಥಳಗಳಲ್ಲಿ ಈಗಾಗಲೇ ಇರುವ ಸಮಸ್ಯೆ ಇನ್ನಷ್ಟು ಹೆಚ್ಚಳವಾಗಿದೆ.

ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ಹೋಲಿಸಿದರೆ, ತ್ಯಾಜ್ಯ ನೀರನ್ನು ಮರುಬಳಕೆ ಮಾಡುವುದು, ಸಮುದ್ರ ನೀರಿನ ಲವಣಾಂಶ ತೆಗೆಯುವಿಕೆ, ಆಣೆಕಟ್ಟೆಗಳನ್ನು ನಿರ್ಮಾಣ ಮಾಡುವುದು, ಆಹಾರ ಆಮದು ಮಾಡುವುದು, ನೀರಿನ ಒರತೆಗಳನ್ನು ಬಳಸಿಕೊಳ್ಳುವುದರಂತಹ ವಿವಿಧ ವಿಧಾನಗಳ ಮೂಲಕ ಸಮಸ್ಯೆಯನ್ನು ಎದುರಿಸುವುದು ಮತ್ತು ನೀರನ್ನು ರಕ್ಷಿಸಲು ಅಭಿವೃದ್ಧಿ ಹೊಂದಿರುವ ದೇಶಗಳು ಹೆಚ್ಚು ಸಶಕ್ತವಾಗಿವೆ.

ನೀರನ್ನು ಮರುಬಳಕೆ ಮಾಡುವುದು ಮತ್ತು ಸಂಸ್ಕರಿಸುವ ಮೂಲಕ ನೀರಿನ ಸಂರಕ್ಷಣೆಯು ಸಮಸ್ಯೆಗೆ ಪರಿಣಾಮಕಾರಿಯಾದ ಪರಿಹಾರವಾಗಿರಬಹುದು. ಇಂತಹ ವಿಧಾನಗಳ ಮೂಲಕ ನಗರದ ಐದನೇ ಒಂದರಷ್ಟು ನೀರಿನ ಅಗತ್ಯವನ್ನು ಪೂರೈಸಬಹುದು. ಭಾರತ ಸೇರಿದಂತೆ ಹಲವು ದೇಶಗಳು ಸಾಂಪ್ರದಾಯಿಕ ನೀರು ಸಂರಕ್ಷಣೆ ಅಭ್ಯಾಸಗಳನ್ನು ಮರುರೂಪಿಸುತ್ತಿವೆ.

 

ನೀರು ಸಂರಕ್ಷಣೆ: ಆಸಕ್ತಿಕರ ಸಂಗತಿಗಳು

ನೀರು ನೈಸರ್ಗಿಕ ಸಂಪನ್ಮೂಲವಾಗಿದ್ದು, ಭೂಮಿಯ ಮೇಲೆ ಜೀವ ಉಳಿಯುವುದಕ್ಕೆ ಅತ್ಯಂತ ಪ್ರಮುಖವಾಗಿದೆ. ಆದಾಗ್ಯೂ, ನೀರಿನ ದುರ್ಬಳಕೆ ಮತ್ತು ತ್ಯಾಜ್ಯದಿಂದಾಗಿ ನೀರಿನ ಕೊರತೆ ಉಂಟಾಗಿದೆ. ಇದು ವಿಶ್ವದ ಹಲವು ಭಾಗಗಳಿಗೆ ಬಾಧಿಸಿದೆ.

 

  • ಭಾರತದಲ್ಲಿ ನೀರಿನ ಲಭ್ಯತೆಯ ಸುಮಾರು 85% ರಷ್ಟು ಮಳೆನೀರಿನಿಂದಲೇ ಸಿಗುತ್ತದೆ. ಉಳಿದ 15% ನೀರು ಹಿಮ ಕರಗುವುದರಿಂದ ಸಿಗುತ್ತದೆ.
  • ಮಹತ್ವದ ನೀರು ಪುನಶ್ಚೇತನ ಯೋಜನೆಯ ಭಾಗವಾಗಿ ಗಂಗಾ ನದಿ ತಟದಲ್ಲಿ ನಮಾಮಿ ಗಂಗೆ ಕಾರ್ಯಕ್ರಮವನ್ನು ಭಾರತ ಸರ್ಕಾರ ಆರಂಭಿಸಿದೆ.
  • ಭಾರತದ ನೀರು ಅಗತ್ಯವು ಪ್ರತಿ ವರ್ಷ 1100 ಬಿಲಿಯನ್‌ ಕ್ಯೂಬಿನ್ ಮೀಟರುಗಳಾಗಿವೆ.
  • ದೇಶದಲ್ಲಿ ಒಟ್ಟಾರೆ ನೀರು ಬಳಕೆಯ 85% ರಷ್ಟನ್ನು ಕೃಷಿ ಉದ್ಯಮ ಬಳಸುತ್ತದೆ.
  • ನೀರಿನ ಕೊರತೆಯಿಂದಾಗಿ ಆದಾಯ ನಷ್ಟವೂ ಉಂಟಾಗುತ್ತದೆ. ಏಕೆಂದರೆ, ನೀರನ್ನು ಹೊತ್ತೊಯಯ್ಯುವುದು ಮತ್ತು ಪಡೆಯುವಲ್ಲಿ ಸುಮಾರು 150 ಮಿಲಿಯನ್‌ ಕೆಲಸದ ದಿನಗಳನ್ನು ವೆಚ್ಚ ಮಾಡುತ್ತಾರೆ.
  • ಸುಮಾರು 10 ಕೋಟಿ ಜನರು ಹೆಚ್ಚುವರಿ ಫ್ಲೋರೈಡ್‌ ಮಟ್ಟಗಳನ್ನು ಹೊಂದಿರುವ ನೀರನ್ನು ಬಳಸುತ್ತಾರೆ.

ನೀರಿನ ಬಗ್ಗೆ ನೀವು ತಿಳಿದಿರಬೇಕಾದ ಕೆಲವು ಸಂಗತಿಗಳು ಇಲ್ಲಿವೆ:

  • ಭೂಮಿಯ ಮೇಲೆ ನೀರು ಸೀಮಿತ ಪ್ರಮಾಣದಲ್ಲಿದೆ. ನೀರಿನ ಆವರ್ತನವನ್ನು ಆಧರಿಸಿ, ಸದ್ಯ ಈಗ ಲಭ್ಯವಾಗುತ್ತಿರುವ ನೀರು ಪುನರಾವರ್ತಿತವಾಗಿ ರೀಸೈಕಲ್‌ ಆಗುತ್ತಿರುವುದೇ ಆಗಿದೆ.
  • ಭೂಮಿಯ ಮೇಲೆ ಇರುವ ನೀರಿನ ಪೈಕಿ 97 ರಷ್ಟು ಉಪ್ಪುನೀರಾಗಿದೆ. ಇದು ಕುಡಿಯಲು ಸೂಕ್ತವಲ್ಲ. ಸುಮಾರು ಮೂರು ಶೇಕಡಾ ನೀರು ಸಿಹಿನೀರಾಗಿದೆ. ಈ ಪೈಕಿ 0.5% ರಷ್ಟು ಮಾತ್ರ ಕುಡಿಯಲು ಸೂಕ್ತವಾಗಿದೆ. ಉಳಿದ ನೀರು ಹಿಮದಲ್ಲಿದೆ, ವಾತಾವರಣದಲ್ಲಿದೆ ಮತ್ತು ಮಣ್ಣಿನಲ್ಲಿದೆ. ಇವುಗಳನ್ನು ನಾವು ಬಳಸಲಾಗದು.
  • ಪರಿಸರ ವ್ಯವಸ್ಥೆಯನ್ನು ಕಾಯ್ದುಕೊಳ್ಳಲು ಸಸ್ಯಗಳು ಅತ್ಯಂತ ಪ್ರಮುಖವಾಗಿವೆ. ಇವು ಬದುಕುಳಿಯಲು ನೀರು ಅಗತ್ಯವಿದೆ.
  • ವಯಸ್ಕ ವ್ಯಕ್ತಿಯ ದೇಹದಲ್ಲಿ 50 ರಿಂದ 60 ಶೇಕಡಾ ನೀರು ಇರುತ್ತದೆ. ಮಕ್ಕಳಲ್ಲಿ ಈ ಪ್ರಮಾಣ ಇನ್ನೂ ಹೆಚ್ಚಿದೆ.

 

ನೀರಿನ ಮೂಲಗಳು

ಭೂಮಿಯಲ್ಲಿನ 97% ನೀರು ಸಮುದ್ರದಲ್ಲಿದೆ. ಉಳಿದ 3% ನೀರು ನೀರಿನ ಮೂಲಗಳಾದ ಕೆರೆಗಳು, ನದಿಗಳು, ಕೊಳಗಳು ಇತ್ಯಾದಿ ಇವೆ. ಇದರ ಬದಲಿಗೆ, ಸ್ವಲ್ಪ ಪ್ರಮಾಣದ ನೀರು ಗಾಳಿಯಲ್ಲೂ ಇದೆ.

 

ಭಾರತದಲ್ಲಿ ನೀರು ಸಂರಕ್ಷಣೆಯ ಕುರಿತು ಕೆಲಸ ಮಾಡುತ್ತಿರುವ ಎನ್‌ಜಿಒಗಳು

ಭಾರತದಲ್ಲಿ ಸರ್ಕಾರವು ನೀರನ್ನು ಉಳಿಸಲು ಹಲವಾರು ಕ್ರಮಗಳನ್ನು ಕೈಗೊಂಡಿದೆ ಮತ್ತು ಜಲ ಸಂರಕ್ಷಣೆ ಯೋಜನೆಗಳನ್ನು ಜಾರಿಗೆ ತಂದಿದೆ. ಇದರ ಜೊತೆಗೆ, ಲಾಭೋದ್ದೇಶವಿಲ್ಲದ ಸಂಸ್ಥೆಗಳು ಭಾರತದಲ್ಲಿ ನೀರಿನ ಸಂರಕ್ಷಣೆಗೆ ಗಮನಾರ್ಹ ಕೊಡುಗೆಗಳನ್ನು ನೀಡುತ್ತಿವೆ. ಸುಸ್ಥಿರ ಜಲ ಸಂರಕ್ಷಣಾ ಅಭ್ಯಾಸಗಳನ್ನು ಉತ್ತೇಜಿಸುತ್ತಿರುವ ಕೆಲವು ಎನ್‌ಜಿಒಗಳನ್ನು ಕೆಳಗೆ ಉಲ್ಲೇಖಿಸಲಾಗಿದೆ:

ತರುಣ್ ಭಾರತ್ ಸಂಘ

ತರುಣ್ ಭಾರತ್ ಸಂಘವು ಲಾಭೋದ್ದೇಶ ರಹಿತ ಪರಿಸರ ಎನ್‌ಜಿಒ ಆಗಿದ್ದು, ಅಭಿವೃದ್ಧಿ ಕಾರ್ಯದ ಪ್ರತಿಯೊಂದು ಹಂತದಲ್ಲೂ ಸಮುದಾಯವನ್ನು ಒಳಗೊಳ್ಳುವ ಮೂಲಕ ಮತ್ತು ಸ್ಥಳೀಯ ನೀರು ಕೊಯ್ಲು ವಿಧಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ನೀರಿನ ಸಂರಕ್ಷಣೆ ಉದ್ದೇಶಗಳನ್ನು ಸಾಧಿಸುವ ಗುರಿಯನ್ನು ಹೊಂದಿದೆ. ಎನ್‌ಜಿಒ ಹತ್ತು ನದಿಗಳನ್ನು ಪುನರುಜ್ಜೀವನಗೊಳಿಸಿದೆ ಮತ್ತು ಭಾರತದಲ್ಲಿ ಹೆಚ್ಚು ನೀರಿನ ಕೊರತೆಯಿರುವ ರಾಜ್ಯಗಳಲ್ಲಿ ಒಂದಾಗಿರುವ ರಾಜಸ್ಥಾನದಲ್ಲಿ 10,000 ಚದರ ಕಿ.ಮೀ ವ್ಯಾಪ್ತಿಯ ಬರಪೀಡಿತ ಪ್ರದೇಶಗಳನ್ನು ಪರಿವರ್ತಿಸಿದೆ.

ಸಾರಾ (ಸಸ್ಟೇನಬಲ್ ಅಲ್ಟರ್ನೇಟಿವ್ಸ್‌ ಫಾರ್ ರೂರಲ್ ಅಕಾರ್ಡ್‌)

ಸಂಸ್ಥೆಯು ಸ್ವಗ್ರಾಮ ಕಾರ್ಯಕ್ರಮದ ನೇತೃತ್ವ ವಹಿಸಿದೆ ಮತ್ತು ಸುಸ್ಥಿರ ಮಾದರಿಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಕಾರ್ಯಗತಗೊಳಿಸಲು ವಿವಿಧ ಹಂತಗಳಲ್ಲಿ ಮೇಲೆ ಕೆಲಸ ಮಾಡಿದೆ. ಜಲ ಸಂರಕ್ಷಣೆಯ ಯೋಜನೆಯು ಮಹಾತ್ಮ ಗಾಂಧಿಯವರ ಕನಸಿನ ಯೋಜನೆಯಾದಗ್ರಾಮ ಸ್ವರಾಜ್ನಿಂದ ಪ್ರೇರಿತವಾಗಿದೆ ಮತ್ತು ಸ್ವಾವಲಂಬಿ ಗ್ರಾಮೀಣ ಅಭಿವೃದ್ಧಿಯನ್ನು ಸಾಧಿಸುವ ಗುರಿಯನ್ನು ಹೊಂದಿದೆ.

ಎನ್ವಿರಾನ್ಮೆಂಟಲಿಸ್ಟ್ ಫೌಂಡೇಶನ್ ಆಫ್ ಇಂಡಿಯಾ

ಇದು ಪರಿಸರ ಸಂರಕ್ಷಣಾ ಗುಂಪಾಗಿದ್ದು, ವನ್ಯಜೀವಿ ಸಂರಕ್ಷಣೆ ಮತ್ತು ವೈಜ್ಞಾನಿಕ ವಿಧಾನಗಳ ಮೂಲಕ ಸರೋವರಗಳು ಮತ್ತು ಕೊಳಗಳಂತಹ ಸಿಹಿನೀರಿನ ಮೂಲಗಳ ಪುನಃಸ್ಥಾಪನೆಯ ಕೆಲಸ ಮಾಡುತ್ತದೆ. ಸಂಸ್ಥೆಯು ಕೈಗೊಂಡ ಕೆಲವು ಜಲಸಂರಕ್ಷಣಾ ಯೋಜನೆಗಳಲ್ಲಿ ಮಹಾರಾಷ್ಟ್ರದ ಕಿನ್ಹಿಗಡೇಗಾಂವ್ ಜಲಾಶಯ, ತಮಿಳುನಾಡಿನ ತಿರುನೆಲ್ವೇಲಿಕೀಜ್ ಅಂಬೂರು ಕೆರೆ ಮತ್ತು ಕರ್ನಾಟಕದ ಶಿವಮೊಗ್ಗದ ನವುಲೆ ಕೆರೆಯ ಪುನಃಸ್ಥಾಪನೆ ಸೇರಿವೆ.

ಜಲ ಭಾಗೀರಥಿ ಫೌಂಡೇಶನ್

ವಿಶ್ವದ ಅತ್ಯಂತ ಜನನಿಬಿಡ ಶುಷ್ಕ ವಲಯಗಳಲ್ಲಿ ಒಂದಾಗಿರುವ ರಾಜಸ್ಥಾನದ ಮಾರ್ವಾರ್ ಪ್ರದೇಶದಲ್ಲಿ ನೀರಿನ ಕೊರತೆಯನ್ನು ನಿಭಾಯಿಸಲು ಎನ್‌ಜಿಒ ಪ್ರಯತ್ನಗಳನ್ನು ನಡೆಸುತ್ತಿದೆ. ಅಂತರ್ಜಲವನ್ನು ಮರುಪೂರಣಗೊಳಿಸಲು ಮಳೆನೀರು ಕೊಯ್ಲು ರಚನೆಗಳನ್ನು ಪುನರುಜ್ಜೀವನಗೊಳಿಸಲು ಮತ್ತು ನಿರ್ಮಿಸಲು ಎನ್‌ಜಿಒ ನೆರವು ನೀಡುತ್ತದೆ. ಇದು ಮಳೆನೀರು ಕೊಯ್ಲು ತೊಟ್ಟಿಗಳು ಅಥವಾ ಕೊಳಗಳನ್ನು ನಿರ್ಮಿಸುವಲ್ಲಿ ಸಮುದಾಯಗಳನ್ನು ಬೆಂಬಲಿಸುತ್ತಿದೆ.

 

ಪ್ರಮುಖ ಪಶ್ನೋತ್ತರಗಳು (FAQs)

ನೀರು ಸಂರಕ್ಷಣೆ ಏಕೆ ಪ್ರಮುಖ?

ತಾಜಾ ಸಿಹಿನೀರಿನ ಲಭ್ಯತೆಯನ್ನು ಮುಂದಿನ ತಲೆಮಾರು ಹೊಂದಿರಬೇಕು ಎಂದು ಖಚಿತಪಡಿಸುವುದಕ್ಕೆ ನೀರು ಸಂರಕ್ಷಣೆ ಪ್ರಮುಖವಾಗಿದೆ.

ನೀರು ಸಂರಕ್ಷಣೆ ಎಂದರೇನು?

ನೀರು ಸಂರಕ್ಷಣೆ ಎಂದರೆ ನೀರನ್ನು ಉಳಿಸುವುದು ಮತ್ತು ಅನಗತ್ಯವಾಗಿ ನಷ್ಟವಾಗುವುದನ್ನು ಕಡಿಮೆ ಮಾಡುವುದಾಗಿದೆ.

(ಸುರಭಿ ಗುಪ್ತಾ ಅವರಿಂದ ಹೆಚ್ಚಿನ ಮಾಹಿತಿಯೊಂದಿಗೆ)

 

Was this article useful?
  • 😃 (12)
  • 😐 (1)
  • 😔 (4)

Recent Podcasts

  • 2025 ರ ವೇಳೆಗೆ ಭಾರತದ ನೀರಿನ ಮೂಲೋದ್ಯಮವು $ 2.8 ಬಿಲಿಯನ್ ತಲುಪುವ ಸಾಧ್ಯತೆಯಿದೆ: ವರದಿ
  • ದೆಹಲಿ ವಿಮಾನ ನಿಲ್ದಾಣದ ಸಮೀಪವಿರುವ ಏರೋಸಿಟಿ 2027 ರ ವೇಳೆಗೆ ಭಾರತದ ಅತಿದೊಡ್ಡ ಮಾಲ್ ಆಗಲಿದೆ
  • ಬಿಡುಗಡೆಯಾದ 3 ದಿನಗಳಲ್ಲಿ ಗುರ್ಗಾಂವ್‌ನಲ್ಲಿ ಡಿಎಲ್‌ಎಫ್ ಎಲ್ಲಾ 795 ಫ್ಲಾಟ್‌ಗಳನ್ನು 5,590 ಕೋಟಿ ರೂ.ಗೆ ಮಾರಾಟ ಮಾಡಿದೆ.
  • ಭಾರತೀಯ ಅಡಿಗೆಮನೆಗಳಿಗೆ ಚಿಮಣಿಗಳು ಮತ್ತು ಹಾಬ್ಗಳನ್ನು ಆಯ್ಕೆ ಮಾಡಲು ಮಾರ್ಗದರ್ಶಿ
  • ಗಾಜಿಯಾಬಾದ್ ಆಸ್ತಿ ತೆರಿಗೆ ದರಗಳನ್ನು ಪರಿಷ್ಕರಿಸುತ್ತದೆ, ನಿವಾಸಿಗಳು 5 ಸಾವಿರ ರೂ
  • ರಿಯಲ್ ಎಸ್ಟೇಟ್ ವಿಭಾಗದ ಮೇಲೆ ಅಕ್ಷಯ ತೃತೀಯ 2024 ರ ಪರಿಣಾಮ