ಪಾರ್ಟಿಶನ್‌ ಡೀಡ್ (ಭಾಗದ ಒಪ್ಪಂದ): ಮಾದರಿ, ದಾಖಲೆಗಳು, ಸ್ಟಾಂಪ್‌ ಡ್ಯೂಟಿ, ರಿಜಿಸ್ಟ್ರೇಶನ್‌ ವಿಧಾನ

ಸಹ ಮಾಲೀಕರು ತಮ್ಮ ಪ್ರಾಪರ್ಟಿಯನ್ನು ಪಾರ್ಟಿಶನ್‌ ಡೀಡ್‌ ಬಳಸಿ ಭಾಗ ಮಾಡಿಕೊಳ್ಳಬಹುದು. ಇದು ಕಾನೂನು ಪ್ರಕಾರ ಮಾನ್ಯವಾಗಿದೆ. ಪಾರ್ಟಿಶನ್‌ ಡೀಡ್‌ ಬಗ್ಗೆ ನೀವು ತಿಳಿದಿರಬೇಕಾದ ಎಲ್ಲ ಮಾಹಿತಿ ಇಲ್ಲಿದೆ.

ಪಾರ್ಟಿಶನ್‌ ಡೀಡ್ ಎಂದರೇನು?

ಪಾರ್ಟಿಶನ್ ಡೀಡ್‌ ಎಂಬುದು ಒಂದು ಪ್ರಾಪರ್ಟಿಯನ್ನು ಭಾಗವನ್ನಾಗಿ ಮಾಡುವಾಗ ಡ್ರಾಫ್ಟ್‌ ಮಾಡಿ ಜಾರಿ ಮಾಡಿದ ಕಾನೂನು ದಾಖಲೆಯಾಗಿರುತ್ತದೆ. ಪಾರ್ಟಿಶನ್ ಡೀಡ್ ಅನ್ನು ಸಾಮಾನ್ಯವಾಗಿ ಕುಟುಂಬಗಳು ತಮ್ಮ ಕುಟುಂಬ ಸದಸ್ಯರು ತಮ್ಮ ಪ್ರಾಪರ್ಟಿಗಳನ್ನು ಭಾಗ ಮಾಡಿಕೊಳ್ಳಲು ಬಳಸುತ್ತವೆ. 

Table of Contents

ಪಾರ್ಟಿಶನ್‌ ಡೀಡ್‌ ಮೂಲಕ ಭಾಗ ಮಾಡಿಕೊಂಡ ನಂತರ, ಪ್ರಾಪರ್ಟಿಯಲ್ಲಿನ ತನ್ನ ಭಾಗಕ್ಕೆ ಪ್ರತಿ ಸದಸ್ಯರೂ ಸ್ವತಂತ್ರ ಮಾಲಕರಾಗುತ್ತಾರೆ ಮತ್ತು ಅದನ್ನು ಮಾರಾಟ ಮಾಡಲು, ಬಾಡಿಗೆಗೆ ಕೊಡಲು ಅಥವಾ ಬೇರೆಯವರಿಗೆ ಗಿಫ್ಟ್‌ ಆಗಿ ನೀಡಲು ಸ್ವತಂತ್ರವಾಗಿರುತ್ತಾರೆ.

ಇದನ್ನೂ ನೋಡಿ: ಎಚ್‌ಯುಎಫ್‌ ಸಂದರ್ಭದಲ್ಲಿ ಕೋಪರ್ಸೆನರ್‌ ಎಂದರೆ ಅರ್ಥವೇನು

ನಿಮಗೆ ಯಾವಾಗ ಪಾರ್ಟಿಶನ್‌ ಡೀಡ್ ಅಗತ್ಯವಿದೆ?

ಒಟ್ಟು ಕುಟುಂಬದ ಆಸ್ತಿಯಲ್ಲಿ ಪಾಲು ಇದ್ದಾಗ ಪಾರ್ಟಿಶನ್‌ ಡೀಡ್‌ ಅಗತ್ಯವಿರುತ್ತದೆ.

ಇದನ್ನೂ ನೋಡಿ: ಪಾರ್ಟ್ನರ್‌ಶಿಪ್‌ ಡೀಡ್‌ಗೆ ಭಾರತೀಯ ಸ್ಟಾಂಪ್‌ಗಳ ಕಾಯ್ದೆ ಪ್ರಕಾರ ಸ್ಟಾಂಪ್‌ ಹಾಕಿಸಬೇಕು

 

 ಇದನ್ನೂ ನೋಡಿ: ಗಿಫ್ಟ್‌ ಡೀಡ್ ಅನ್ನು ಹಿಂಪಡೆಯಬಹುದು

 

ಪಾರ್ಟಿಶನ್‌ ಡೀಡ್‌ನ ವಿವರಗಳು

ಪಾರ್ಟಿಶನ್‌ ಡೀಡ್‌ನಲ್ಲಿ ಈ ಮುಂದಿನ ಮಾಹಿತಿ ಇರಬೇಕು:

  • ಪಾರ್ಟಿಶನ್‌ ದಿನಾಂಕ
  • ಪಾರ್ಟಿಶನ್‌ ಹೇಳಿಕೆ
  • ಜಂಟಿ ಮಾಲೀಕರ ಹೆಸರು, ವಯಸ್ಸು ಮತ್ತು ವಿಳಾಸ
  • ಅವರ ಪಾಲಿನ ವಿವರಣೆ
  • ಜಂಟಿ ಮಾಲೀಕರ ಸಹಿಗಳು
  • ಸಾಕ್ಷಿದಾರರ ಹೆಸರು ಮತ್ತು ಸಹಿ

ಇದನ್ನೂ ಓದಿ: ಗುಜರಾತ್‌ನಲ್ಲಿ ಪ್ರಾಪರ್ಟಿ ನೋಂದಣಿ ಮೇಲೆ ಸ್ಟಾಂಪ್‌ ಡ್ಯೂಟಿ

 

ಪಾರ್ಟಿಶನ್‌ ಡೀಡ್‌ಗೆ ಅಗತ್ಯ ದಾಖಲೆಗಳು

ಪಾರ್ಟಿಶನ್‌ ಡೀಡ್‌ ಮಾಡಲು ಈ ದಾಖಲೆಗಳು ಅಗತ್ಯವಿರುತ್ತವೆ:

  • ಮೂಲ ಶೀರ್ಷಿಕೆ ದಾಖಲೆ
  • ಭೂಮಿ ದಾಖಲೆಗಳು
  • ಭೂಮಿ ನಕ್ಷೆ
  • ಪ್ರಾಪರ್ಟಿ ಮೌಲ್ಯಮಾಪನ
  • ರಿಜಿಸ್ಟ್ರೇಶನ್‌ ಫೀ
  • ಸ್ಟಾಂಪ್‌ ಡ್ಯೂಟಿ
  • ಎಲ್ಲ ಪಕ್ಷಗಳ ಐಡಿ ಕಾರ್ಡ್‌ಗಳು
  • ಎಲ್ಲ ಪಕ್ಷಗಳ ವಿಳಾಸ
  • ಪ್ಯಾನ್‌ ಕಾರ್ಡ್‌

ಇದನ್ನೂ ನೋಡಿ: ಡೀಮ್ಡ್‌ ಕನ್ವೇಯನ್ಸ್‌ ಅರ್ಥ

 

ಪಾರ್ಟಿಶನ್‌ ಡೀಡ್‌ ನೋಂದಣಿ ಮಾಡುವುದು ಹೇಗೆ?

ಪಾರ್ಟಿಶನ್‌ ಡೀಡ್‌ ನೋಂದಣಿ ಮಾಡುವ ವಿಧಾನ ಬಹುತೇಕ ಎಲ್ಲ ರಾಜ್ಯಗಳಲ್ಲೂ ಒಂದೇ ರೀತಿ ಇರುತ್ತದೆ. ನಮ್ಮ ಉದಾಹರಣೆಯಲ್ಲಿ ನಾವು ದೆಹಲಿಯಲ್ಲಿ ಪಾರ್ಟಿಶನ್‌ ಡೀಡ್ ನೋಂದಣಿ ಮಾಡುವುದು ಹೇಗೆ ಎಂದು ತೋರಿಸುತ್ತಿದ್ದೇವೆ.

ಹಂತ 1: ದೆಹಲಿ ಆನ್‌ಲೈನ್‌ ರಿಜಿಸ್ಟ್ರೇಶನ್‌ ಇನ್‌ಫಾರ್ಮೇಶನ್‌ ಸಿಸ್ಟಮ್ (ಡಿಒಆರ್‌ಐಎಸ್) ವೆಬ್‌ಸೈಟ್‌ಗೆ ಭೇಟಿ ನೀಡಿ.

partition deed

 

ಹಂತ 2: ಹೋಮ್‌ಪೇಜ್‌ನಲ್ಲಿ ನಿಮಗೆ ‘ಡೀಡ್ ರೈಟರ್’ ಆಯ್ಕೆ ಕಾಣಿಸುತ್ತದೆ. ಇದರ ಮೇಲೆ ಕ್ಲಿಕ್ ಮಾಡಿ.

 

partition deed

 

ಹಂತ 3: ಲಭ್ಯವಿರುವ ಆಯ್ಕೆಯಿಂದ ‘ಪಾರ್ಟಿಶನ್ ಡೀಡ್’ ಆಯ್ಕೆ ಆರಿಸಿಕೊಳ್ಳಿ.

 

partition deed

 

ಹಂತ 4: ಡೀಡ್ ಆಯ್ಕೆಯಿಂದ, ‘ಪಾರ್ಟಿಶನ್ ಡೀಡ್’ ಆಯ್ಕೆ ಮಾಡಿ.

 

partition deed

 

ಹಂತ 5: ಎರಡನೇ ಪಾರ್ಟಿ ಮೊಬೈಲ್‌ ಸಂಖ್ಯೆ ಮತ್ತು ಪ್ರಾಪರ್ಟಿ ವ್ಯಾಲ್ಯೂಯೇಶನ್‌ ನೀಡುವಂತೆ ನಿಮಗೆ ಕೇಳಲಾಗುತ್ತದೆ.

 

partition deed

 

ಹಂತ 6: ಮೊದಲ ಪಕ್ಷ, ಎರಡನೇ ಪಕ್ಷ ಮತ್ತು ಸಾಕ್ಷಿ ವಿವರಗಳನ್ನು ಒದಗಿಸಲು ಹಂತಗಳನ್ನು ಅನುಸರಿಸಿ, ಪಾರ್ಟಿಶನ್‌ ಡೀಡ್ ನೋಂದಣಿ ಪ್ರಕ್ರಿಯೆಯನ್ನು ಆರಂಭಿಸಬೇಕು.

 

partition deed

 

ಅದು ಮುಗಿದ ಮೇಲೆ, ಸ್ಟಾಕ್‌ಹೋಲ್ಡಿಂಗ್‌ ಕಾರ್ಪೊರೇಶನ್‌ ಆಫ್‌ ಇಂಡಿಯಾ ವೆಬ್‌ಸೈಟ್‌ನಲ್ಲಿ ಇ-ಸ್ಟಾಂಪ್ ಡ್ಯೂಟಿಯನ್ನು ನೀವು ಪಾವತಿ ಮಾಡಬೇಕು. ಸ್ಟಾಂಪ್‌ ಡ್ಯೂಟಿ ಮತ್ತು ರಿಜಿಸ್ಟ್ರೇಶನ್‌ ಚಾರ್ಜ್‌ಗಳನ್ನು ಪಾವತಿ ಮಾಡಿದ ನಂತರ, ಸಬ್‌ ರಿಜಿಸ್ಟ್ರಾರ್ ಕಚೇರಿಯಲ್ಲಿ ಪಾರ್ಟಿಶನ್‌ ಡೀಡ್‌ ನೋಂದಣಿ ಮಾಡಲು ನೀವು ಆನ್‌ಲೈನ್‌ ಅಪಾಯಿಂಟ್‌ಮೆಂಟ್‌ ಬುಕ್‌ ಮಾಡಬಹುದು.

ಪ್ರೊಬೇಟ್‌ನ ಅರ್ಥ, ಬಳಕೆ ಮತ್ತು ಅದಕ್ಕೆ ಅರ್ಜಿ ಸಲ್ಲಿಸುವುದು ಹೇಗೆ ಎಂದೂ ಓದಿ

 

ಪಾರ್ಟಿಶನ್‌ ಡೀಡ್‌ಗೆ ಸ್ಟಾಂಪ್‌ ಡ್ಯೂಟಿ

ಪಾರ್ಟಿಶನ್‌ ಡೀಡ್‌ ಕಾನೂನು ಮಾನ್ಯತೆಯನ್ನು ಪಡೆಯಲು, ಸ್ಥಿರಾಸ್ಥಿ ಇರುವ ಸ್ಥಳದ ವ್ಯಾಪ್ತಿಯ ಸಬ್‌ ರಿಜಿಸ್ಟ್ರಾರ್ ಕಚೇರಿಯಲ್ಲಿ ರಿಜಿಸ್ಟರ್ ಮಾಡಬೇಕು. ಭಾರತೀಯ ನೋಂದಣಿ ಕಾಯ್ದೆ 1908 ವಿಭಾಗ 17 ರ ಪ್ರಕಾರ ಇದು ಕಡ್ಡಾಯವಾಗಿದೆ. ಅಂದರೆ, ಪಾರ್ಟಿಶನ್‌ನಲ್ಲಿ ತೊಡಗಿಸಿಕೊಂಡಿರುವ ಪಕ್ಷಗಳು ಪಾರ್ಟಿಶನ್ ಡೀಡ್ ನೋಂದಣಿ ಮಾಡಲು ಸ್ಟಾಂಪ್ ಡ್ಯೂಟಿ ಶುಲ್ಕಗಳು (ಭಾರತೀಯ ಸ್ಟಾಂಪ್‌ ಕಾಯ್ದೆ 1899 ರ ಅನುಬಂಧಗಳ ಅಡಿಯಲ್ಲಿ) ಮತ್ತು ನೋಂದಣಿ ಶುಲ್ಕವನ್ನು ಪಾವತಿ ಮಾಡಬೇಕು.

ಪಾರ್ಟಿಶನ್ ಡೀಡ್‌ಗೆ ಸ್ಟಾಂಪ್‌ ಡ್ಯೂಟಿ ರಾಜ್ಯದಿಂದ ರಾಜ್ಯಕ್ಕೆ ವಿಭಿನ್ನವಾಗಿರುತ್ತದೆ. ಉದಾಹರಣೆಗೆ, ದೆಹಲಿಯಲ್ಲಿ ಪ್ರಾಪರ್ಟಿಯನ್ನು ಭಾಗ ಮಾಡಿದ ಮೌಲ್ಯದ ಮೇಲೆ 2% ಅನ್ನು ಪಾರ್ಟಿಶನ್‌ ಡೀಡ್‌ನ ಸ್ಟಾಂಪ್‌ ಡ್ಯೂಟಿಯಾಗಿ ಪಾವತಿ ಮಾಡಬೇಕು. ಮಹಾರಾಷ್ಟ್ರದಲ್ಲಿ ಪಾರ್ಟಿಶನ್‌ ಡೀಡ್‌ಗಳ ನೋಂದಣಿಗೂ ಇದೇ ದರ ಅನ್ವಯಿಸುತ್ತದೆ. ಇದರ ಜೊತೆಗೆ 1% ರಿಜಿಸ್ಟ್ರೇಶನ್‌ ಚಾರ್ಜ್‌ ಕೂಡ ಇರುತ್ತದೆ. (ಆದರೆ, ರಾಜ್ಯದಲ್ಲಿ ಪಾರ್ಟಿಶನ್‌ ಡೀಡ್‌ ಅನ್ನು ರಿಜಿಸ್ಟರ್ ಮಾಡುವುದು ಸಹ ಮಾಲೀಕರಿಗೆ ಕಡ್ಡಾಯವಲ್ಲ).

 

ಪಾರ್ಟಿಶನ್‌ ಡೀಡ್‌ ಮೇಲೆ ಆದಾಯ ತೆರಿಗೆ

ಪಾರ್ಟಿಶನ್‌ನಲ್ಲಿ ಯಾವುದೇ ವರ್ಗಾವಣೆ ನಡೆಯದೇ ಇರುವುದರಿಂದ, ವಿಭಜನೆಯ ನಂತರ ಯಾವುದೇ ಕ್ಯಾಪಿಟಲ್ ಗೇನ್ಸ್‌ ತೆರಿಗೆ (ಬಂಡವಾಳದ ಮೇಲೆ ಗಳಿಕೆಯ ತೆರಿಗೆ) ಪಾವತಿಯನ್ನು ಫಲಾನುಭವಿಗಳು ಮಾಡಬೇಕಿಲ್ಲ.

ಇದನ್ನೂ ಓದಿ: ಟೈಟಲ್‌ ಡೀಡ್ ಎಂದರೇನು?

 

ಪಾರ್ಟಿಶನ್‌ ಡೀಡ್‌: ಕಾನೂನಾತ್ಮಕ ವಿವರಗಳು

ಪಾರ್ಟಿಶನ್‌ ಡೀಡ್‌ ಮೂಲಕ ಪ್ರಾಪರ್ಟಿಯನ್ನು ಹೇಗೆ ವಿಭಜಿಸಲಾಗುತ್ತದೆ?

ಖರೀದಿಯಲ್ಲಿ ಹೂಡಿಕೆ ಮಾಡಿದ ಇಬ್ಬರು ವ್ಯಕ್ತಿಗಳ ಮಧ್ಯೆ ಪ್ರಾಪರ್ಟಿಯನ್ನು ಭಾಗ ಮಾಡುತ್ತಿದ್ದರೆ, ಭಾಗ ಮಾಡುವಿಕೆಯು ಅವರ ಕೊಡುಗೆಯನ್ನು ಆಧರಿಸಿರುತ್ತದೆ. ಇಬ್ಬರು ಸೋದರರು 1 ಕೋಟಿ ರೂ. ಗೆ ಪ್ರಾಪರ್ಟಿ ಖರೀದಿ ಮಾಡಿದ್ದು, ಒಬ್ಬೊಬ್ಬರೂ 50 ಲಕ್ಷ ರೂ. ಪಾವತಿ ಮಾಡಿದ್ದರೆ, ಎರಡೂ ಪಕ್ಷಗಳ ಮಧ್ಯೆ ಪಾರ್ಟಿಶನ್‌ ಡೀಡ್‌ ಮೂಲಕ ಸಮಾನ ಎರಡು ಭಾಗಗಳನ್ನಾಗಿ ಭಾಗ ಮಾಡಲಾಗುತ್ತದೆ. ಅವರ ಕೊಡುಗೆಯ ಪ್ರಮಾಣವು 60:40 ಆಗಿದ್ದರೆ, ಆಗ ಭೂಮಿಯ ಭಾಗವೂ ಅದೇ ರೀತಿ ಇರುತ್ತದೆ. ಆದರೆ, ಇಬ್ಬರು ವ್ಯಕ್ತಿಗಳ ಭಾಗದ ಪ್ರಮಾಣವನ್ನು ದಾಖಲೆಯಲ್ಲಿ ವಿವರಿಸಿಲ್ಲದೇ ಇದ್ದರೆ, ಭಾಗ ಮಾಡಿಲ್ಲದ ಪ್ರಾಪರ್ಟಿಯಲ್ಲಿ ಇಬ್ಬರು ವ್ಯಕ್ತಿಗಳು ಸಮಾನ ಭಾಗವನ್ನು ಹೊಂದಿರುತ್ತಾರೆ ಎಂದು ಕಾನೂನು ಊಹಿಸುತ್ತದೆ.

ಒಂದು ವೇಳೆ ಪ್ರಾಪರ್ಟಿ ಅನುವಂಶೀಯವಾಗಿ ಬಂದಿದ್ದರೆ, ಅವರ ಧರ್ಮಕ್ಕೆ ಸಂಬಂಧಿಸಿದ ಅನುವಂಶೀಯತೆ ಕಾನೂನಿಗೆ ಅನುಗುಣವಾಗಿ ಪ್ರಾಪರ್ಟಯಲ್ಲಿ ಅವರಿಗೆ ಪಾಲು ಸಿಗುತ್ತದೆ.

ಇದನ್ನೂ ಓದಿ: ಪ್ರಾಪರ್ಟಿಯ ಜಂಟಿ ಮಾಲೀಕತ್ವದ ವಿಧಗಳು

 

ಕುಟುಂಬ ಸದಸ್ಯರ ಮಧ್ಯೆ ಪಾರ್ಟಿಶನ್‌ ಡೀಡ್‌ ಮಾಡುವಾಗ ಆನುವಂಶೀಯತೆ ಕಾನೂನುಗಳ ಅನ್ವಯ

ಯಾವುದೇ ಪ್ರಾಪರ್ಟಿಯ ಪಾರ್ಟಿಶನ್‌ನಲ್ಲಿ ಆನುವಂಶೀಯತೆ ಕಾನೂನು ಅನ್ವಯಿಸುತ್ತದೆ. ಹಿಂದೂಗಳು, ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರಲ್ಲಿ ಪ್ರಾಪರ್ಟಿ ವಿಭಜನೆಗೆ ಸಂಬಂಧಿಸಿದ ಆನುವಂಶೀಯತೆ ಕಾನೂನುಗಳು ಇದರಲ್ಲಿ ಮುಖ್ಯವಾಗುತ್ತವೆ. ಪಾರ್ಟಿಶನ್‌ ಸಮಯದಲ್ಲಿ, ಪ್ರತಿ ಸದಸ್ಯರ ಪಾಲನ್ನು ಅನ್ವಯಿಸುವ ಆನುವಂಶೀಯ ಕಾನೂನುಗಳ ಅಡಿಯಲ್ಲಿ ನಿರ್ಧರಿಸಲಾಗುತ್ತದೆ.

ಇದನ್ನೂ ನೋಡಿ: 1989 ಕ್ಕೂ ಮೊದಲು ವಿವಾಹವಾದ ಹೆಣ್ಣುಮಕ್ಕಳ ಪ್ರಾಪರ್ಟಿ ಹಕ್ಕುಗಳು

 

ಹಿಂದು ಕಾನೂನು ಅಡಿಯಲ್ಲಿ ಪ್ರಾಪರ್ಟಿ ಪಾರ್ಟಿಶನ್‌

ಹಿಂದು ಉತ್ತರಾಧಿಕಾರ ಕಾಯ್ದೆ 1956 ರ ಪ್ರಕಾರ, ಮೃತ ಹಿಂದು ವ್ಯಕ್ತಿಯ ಸ್ವತ್ತುಗಳನ್ನು ಅತನ ಕಾನೂನಾತ್ಮಕ ಉತ್ತರಾಧಿಕಾರಿಗಳಿಗೆ ಭಾಗ ಮಾಡಿಕೊಡಲಾಗುತ್ತದೆ. ಇದು ಆ ವ್ಯಕ್ತಿಯ ವಿಲ್‌ ಆಧರಿಸಿರುತ್ತದೆ ಅಥವಾ ವಿಲ್‌ ಮಾಡದೇ ವ್ಯಕ್ತಿಯು ಮೃತನಾದರೆ ಕಾಯ್ದೆಯಲ್ಲಿ ಸೂಚಿಸಿದ ನಿಯಮಗಳಿಗೆ ಅನುಗುಣವಾಗಿ ವಿತರಿಸಲಾಗುತ್ತದೆ. ಹಿಂದು ಉತ್ತರಾಧಿಕಾರ ಕಾಯ್ದೆ 1956 ಹಿಂದು ಜಂಟಿ ಕುಟುಂಬದಲ್ಲಿನ ಭಾಗದ ಮೇಲೆ ಅನ್ವಯಿಸುತ್ತದೆಯಾದರೂ, ಹಿಂದು ಸ್ವತ್ತು ವಿಭಜನೆ ಕಾಯ್ದೆ 1892 ಇದು ಜಂಟಿಯಾಗಿ ಮಾಲೀಕತ್ವ ಹೊಂದಿರುವ ಸ್ವತ್ತಿನ ವಿಭಜನೆಗೆ ಅನ್ವಯಿಸುತ್ತದೆ.

ಇದನ್ನೂ ಓದಿ: ಮಾಲೀಕರಣ ಮರಣದ ನಂತರ ಸ್ವತ್ತುಗಳ ಆನುವಂಶೀಯತೆ

 

ಪಾರ್ಟಿಶನ್‌ ಡೀಡ್‌ ಜಾರಿ ಮಾಡಿದ ನಂತರ ಪ್ರಾಪರ್ಟಿಗೆ ಏನಾಗುತ್ತದೆ?

ಪಾರ್ಟಿಶನ್‌ ಡೀಡ್‌ ಜಾರಿಗೆ ಬಂದಾಗ, ಪ್ರಾಪರ್ಟಿಯಲ್ಲಿ ಪ್ರತಿ ಭಾಗವೂ ಸ್ವತಂತ್ರ ಭಾಗವಾಗುತ್ತದೆ. ವಿಭಾಗ ಮಾಡಿದ ಪ್ರತಿ ಸ್ವತ್ತಿಗೆ ಹೊಸ ಶೀರ್ಷಿಕೆ ಲಭ್ಯವಾಗುತ್ತದೆ. ಇತರ ಸದಸ್ಯರಿಗೆ ನಿಯೋಜಿಸಿದ ಪಾಲಿನಲ್ಲಿ ಇವರಿಗೆ ಇರುವ ಹಕ್ಕುಗಳು ವಜಾಗೊಳ್ಳುತ್ತವೆ. 

ಉದಾಹರಣೆಗೆ, ರಾಮ್‌, ಶ್ಯಾಮ್‌ ಮತ್ತು ಮೋಹನ್‌ ಪಾರ್ಟಿಶನ್‌ ಡೀಡ್‌ ಮೂಲಕ ಪ್ರಾಪರ್ಟಿಯನ್ನು ವಿಭಾಗ ಮಾಡಿಕೊಮಡರೆ, ಆಗ ಮೋಹನ್‌ಗೆ ಕೊಟ್ಟ ಭಾಗದಲ್ಲಿ ರಾಮ ಮತ್ತು ಶ್ಯಾಮ ತಮ್ಮ ಹಕ್ಕನ್ನು ತ್ಯಜಿಸುತ್ತಾರೆ. ಇದೇ ರೀತಿ ಮೋಹನ್‌ ಕೂಡಾ, ರಾಮ್‌ ಮತ್ತು ಶ್ಯಾಮ್‌ಗೆ ನೀಡಿದ ಭಾಗದಲ್ಲಿ ತನ್ನ ಹಕ್ಕನ್ನು ಬಿಟ್ಟುಕೊಡುತ್ತಾರೆ. ಪಾರ್ಟಿಶನ್‌ ಮಾಡಿದ ನಂತರ ಅನುಕೂಲದ ಉದ್ದೇಶಕ್ಕಾಗಿ ಇರುವ ಸ್ಥಳವನ್ನು ಹೊರತುಪಡಿಸಿ ಒಂದು ಎಸ್ಟೇಟ್‌ನಲ್ಲಿ ತಮ್ಮ ಭಾಗಕ್ಕೆ ಸ್ವತಂತ್ರ ಮಾಲೀಕರಾಗಿರುತ್ತಾರೆ. ಇದನ್ನು ಅವರು ತಮಗೆ ಇಷ್ಟ ಬಂದ ರೀತಿಯಲ್ಲಿ ನಿರ್ವಹಣೆ ಮಾಡಲು ಅವರು ಹಕ್ಕು ಹೊಂದಿರುತ್ತಾರೆ.

ಪಾರ್ಟಿಶನ್‌ ಮಾಡಿದ ನಂತರ, ಬದಲಾವಣೆ ಕಾನೂನಾತ್ಮಕವಾಗಿ ಮಾನ್ಯವಾಗುವುದಕ್ಕಾಗಿ ಪ್ರಾಪರ್ಟಿ ಮ್ಯುಟೇಶನ್‌ ಪ್ರಕ್ರಿಯೆಯನ್ನು ಪ್ರತಿ ಪಕ್ಷವೂ ಪೂರ್ಣಗೊಳಿಸಬೇಕು.

ಇದನ್ನೂ ನೋಡಿ: ಪ್ರಾಪರ್ಟಿಯ ಮ್ಯುಟೇಶನ್‌ ಎಂದರೇನು ಮತ್ತು ಇದು ಏಕೆ ಪ್ರಮುಖವಾಗಿದೆ?

 

ಪಾರ್ಟಿಶನ್‌ ಡೀಡ್‌ ನೋಂದಣಿ ಮಾಡುವುದು ಕಡ್ಡಾಯವೇ?

2018 ರಲ್ಲಿ, ಹಿಂದು ಅವಿಭಜಿತ ಕುಟುಂಬಕ್ಕೆ (ಎಚ್‌ಯುಎಫ್‌) ಸಂಬಂಧಿಸಿದ ಸ್ವತ್ತುಗಳ ಭಾಗ ಮಾಡುವ ಪ್ರಕ್ರಿಯೆ ಮತ್ತು ಹಿಸೆದಾರರು ಸ್ವೀಕರಿಸಿದ ಭಾಗವು ‘ವರ್ಗಾವಣೆ’ ಎಂಬ ವ್ಯಾಖ್ಯಾನಕ್ಕೆ ಒಳಪಡುವುದಿಲ್ಲ. ಇದೇ ರೀತಿ, ಇಂತಹ ಪಾರ್ಟಿಶನ್ ಡೀಡ್‌ಗಳ ನೋಂದಣಿಯು ಕಡ್ಡಾಯವಲ್ಲ. ನೋಂದಣಿ ಮಾಡಿಲ್ಲದ ಪಾರ್ಟಿಶನ್‌ ಡೀಡ್‌ ಮೂಲಕ ಪಾರ್ಟಿಶನ್ ಮಾಡಿದ್ದಲ್ಲಿ, ನ್ಯಾಯಾಲಯದಲ್ಲಿ ಸಾಕ್ಷಿ ಎಂದು ಒಪ್ಪಂದವನ್ನು ಪರಿಗಣಿಸಲಾಗುವುದಿಲ್ಲ.

 

ಪಾರ್ಟಿಶನ್‌ ಡೀಡ್‌ ನೋಂದಣಿ ಮಾಡಿಲ್ಲದಿದ್ದರೆ ಏನು ಮಾಡುವುದು?

ಅನ್ವಯಿಸುವ ಸ್ಟಾಂಪ್‌ ಡ್ಯೂಟಿ ಮತ್ತು ನೋಂದಣಿ ಶುಲ್ಕಗಳನ್ನು ಪಾವತಿ ಮಾಡಿ ಪಾರ್ಟಿಶನ್‌ ಡೀಡ್ ನೋಂದಣಿ ಮಾಡಿಲ್ಲದಿದ್ದರೆ, ಅದಕ್ಕೆ ಕಾನೂನು ಮಾನ್ಯತೆ ಇರುವುದಿಲ್ಲ. ಇದೇ ರೀತಿ, ನೋಂದಣಿ ಮಾಡಿಲ್ಲದ ಪಾರ್ಟಿಶನ್‌ ಡೀಡ್‌ ನೋಂದಣಿ ಕಾಯ್ದೆ 1908 ರ ವಿಭಾಗ 49 ರ ಅಡಿಯಲ್ಲಿ ಸಾಕ್ಷಿಯಾಗಿರುವುದಿಲ್ಲ.

ಇದನ್ನೂ ಓದಿ: ಭಾರತದಲ್ಲಿ ಪ್ರಾಪರ್ಟಿ ನೋಂದಣಿ ಕಾನೂನುಗಳ ಬಗ್ಗೆ ವಿವರ

 

ಪಾರ್ಟಿಶನ್‌ ಡೀಡ್ ಮತ್ತು ಪಾರ್ಟಿಶನ್‌ ದಾವೆ ಮಧ್ಯದ ವ್ಯತ್ಯಾಸ

ಕಾನೂನಿನ ಅನುಬಂಧಗಳ ಅಡಿಯಲ್ಲಿ, ಪಾರ್ಟಿಶನ್‌ ಡೀಡ್‌ ಅಥವಾ ಪಾರ್ಟಿಶನ್‌ ದಾವೆ ಮೂಲಕ ಒಂದು ಸ್ವತ್ತನ್ನು ಭಾಗ ಮಾಡಬೇಕು. ವಿವಾದ ಇದ್ದಲ್ಲಿ ಅಥವಾ ಭಾಗ ಮಾಡಲು ಸಹ ಮಾಲೀಕರ ಪರಸ್ಪರ ಒಪ್ಪದಿದ್ದರೆ ಎರಡನೇ ಆಯ್ಕೆಯನ್ನು ಮಾಡಬೇಕು. ಇಂತಹ ಸಂದರ್ಭದಲ್ಲಿ, ಸೂಕ್ತ ನ್ಯಾಯಾಲಯದಲ್ಲಿ ಪಾರ್ಟಿಶನ್‌ ದಾವೆಯನ್ನು ದಾಖಲಿಸಬೇಕು.

ದಾವೆ ಸಲ್ಲಿಸುವುದಕ್ಕೂ ಮೊದಲು, ಭಾಗ ಮಾಡಲು ವಿನಂತಿ ಮಾಡುವ ಮೂಲಕ ಎಲ್ಲ ಸಹ ಮಾಲೀಕರಿಗೂ ವಿನಂತಿಯನ್ನು ಸಲ್ಲಿಸಬೇಕಾಗುತ್ತದೆ. ನಿಮ್ಮ ವಿನಂತಿಯನ್ನು ಸಮ್ಮತಿಸಲು ಪಕ್ಷಗಳು ನಿರಾಕರಿಸಿದರೆ, ಈ ವಿಷಯಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹೋಗಲು ನೀವು ಎಲ್ಲ ಕಾನೂನಾತ್ಮಕ ಹಕ್ಕುಗಳನ್ನೂ ಹೊಂದಿರುತ್ತೀರಿ.

ಭಾರತೀಯ ಕಾನೂನುಗಳ ಅಡಿಯಲ್ಲಿ, ಭಾಗ ಮಾಡುವುದಕ್ಕೆ ಸಂಬಂಧಿಸಿದ ದಾವೆ ಸಲ್ಲಿಸಿದ ದಿನಾಂಕದಿಂದ ಮೂರು ವರ್ಷಗಳ ಒಳಗೆ ಸಂತ್ರಸ್ತ ಪಕ್ಷವು ನ್ಯಾಯಾಲಯಕ್ಕೆ ಹೋಗಬೇಕು.

ಎರಡೂ ಸಲಕರನೆಗಳು ಒಂದೇ ಉದ್ದೇಶವನ್ನು ಪೂರೈಸುತ್ತವೆ. ಜಂಟಿ ಮಾಲೀಕತ್ವದ ಸ್ವತ್ತಿನಲ್ಲಿ ಸಹ ಮಾಲೀಕರ ಹಕ್ಕುಗಳನ್ನು ಇವು ರಚಿಸಿ, ಜಾರಿಗೊಳಿಸುತ್ತವೆ.

ಇದನ್ನೂ ಓದಿ: ಕಾರ್ಪೆಟ್‌ ಏರಿಯಾ ಬಗ್ಗೆ ಎಲ್ಲ ಮಾಹಿತಿ

 

ಸ್ವತ್ತನ್ನು ಮೌಖಿಕವಾಗಿ ಭಾಗ ಮಾಡುವುದು ಅಥವಾ ಕಾನೂನು ಅಡಿಯಲ್ಲಿ ಕುಟುಂಬವು ಇತ್ಯರ್ಥ ಮಾಡಿಕೊಳ್ಳುವುದು

ಹಿಂದುಗಳು, ಜೈನರು, ಬುದ್ಧರು ಮತ್ತು ಸಿಖ್ಖರ ಆನುವಂಶೀಯತೆ ಕುರಿತ ಕಾನೂನು ಅಡಿಯಲ್ಲಿ ಸ್ವತ್ತಿನ 1ನೇ ವರ್ಗದ ಉತ್ತರಾಧಿಕಾರಿಗಳು ಕುಟುಂಬದ ಇತ್ಯರ್ಥವನ್ನು ಮೌಖಿಕವಾಗಿ ಮಾಡಿಕೊಂಡು, ಪರಸ್ಪರ ಸಮ್ಮತಿಸಬಹುದಾದ ನಿಯಮದ ಅಡಿಯಲ್ಲಿ ಸ್ವತ್ತನ್ನು ಭಾಗ ಮಾಡಿಕೊಳ್ಳಬಹುದು. ಮೌಖಿಕ ಒಪ್ಪಂದವನ್ನು ಪಾರ್ಟಿಶನ್ ಡೀಡ್‌ ಬಳಸದೇ ಮಾಡಿರುವುದರಿಂದ, ಈ ವಹಿವಾಟನ್ನು ನೋಂದಣಿ ಮಾಡುವ ಅಗತ್ಯ ಇರುವುದಿಲ್ಲ.

ನಿತಿನ್ ಜೈನ್ ವರ್ಸಸ್‌ ಅಂಜು ಜೈನ್‌ ಹಾಗೂ ಇತರರ ಪ್ರಕರಣದಲ್ಲಿ ಆದೇಶ ನೀಡುವ ಸಂದರ್ಭದಲ್ಲಿ 2007ರ ಲ್ಲಿ ದೆಹಲಿ ಉಚ್ಛ ನ್ಯಾಯಾಲಯದ ವಿಭಾಗೀಯ ಪೀಠವು ಸ್ವತ್ತನ್ನು ಮೌಖಿಕವಾಗಿ ಭಾಗ ಮಾಡುವ ಸಂದರ್ಭದಲ್ಲಿ ಯಾವುದೇ ಸ್ಟಾಂಪ್ ಡ್ಯೂಟಿ ಪಾವತಿ ಮಾಡುವ ಅಗತ್ಯವಿಲ್ಲ.

“ಸ್ವತ್ತನ್ನು ಭಾಗ ಮಾಡುವುದು/ಪಾರ್ಟಿಶನ್‌ ಮಾಡಿಕೊಂಡು ಕುಟುಂಬವು ಮೌಖಿಕವಾಗಿ ಇತ್ಯರ್ಥ ಮಾಡಿಕೊಳ್ಳುವುದು ಕಾನೂನು ಪ್ರಕಾರ ಸಮ್ಮತವಾಗಿದೆ. ನಂತರ, ಅದನ್ನು ಲಿಖಿತವಾಗಿ ದಾಖಲಿಸಿ ಪ್ರಸ್ತುತ ಜಂಟಿ ಮಾಲೀಕರು ತಮ್ಮ ಅನುಕೂಲಕ್ಕೆ ಈಗಾಗಲೇ ಭಾಗ  ಮಾಡಿಕೊಂಡಿದ್ದೇವೆ ಅಥವಾ ವಿಭಜಿಸಿಕೊಂಡಿದ್ದೇವೆ ಎಂದು ದಾಖಲಿಸಿಕೊಳ್ಳಬಹುದು” ಎಂದು ಪೀಠವು ಅಭಿಪ್ರಾಯ ಪಟ್ಟಿದೆ.

ಜಂಟಿ ಕುಟುಂಬಗಳ ಪ್ರಕರಣದಲ್ಲಿ ಮೌಖಿಕ ಭಾಗ ಮಾಡುವಿಕೆಯನ್ನು ನ್ಯಾಯಾಲಯಗಳು ಮನ್ನಿಸಿವೆ. ಸ್ಟಾಂಪ್‌ ಕಾಯ್ದೆ ವಿಭಾಗ 2(15) ಅಡಿಯಲ್ಲಿ ಮೌಖಿಕ ಪಾರ್ಟಿಶನ್ ಎಂಬುದು ಪಾರ್ಟಿಶನ್‌ನ ಒಂದು ಸಲಕರಣೆಯಲ್ಲ. ಹೀಗಾಗಿ, ಇದು ಒಂದು ಸಲಕರಣೆಯಲ್ಲದೇ ಇರುವುದರಿಂದ, ಮೌಖಿಕ ಪಾರ್ಟಿಶನ್ ಆಗಿ ಯಾವುದೇ ಸ್ಟಾಂಪ್‌ ಡ್ಯೂಟಿಯನ್ನು ಪಾವತಿ ಮಾಡಲಾಗುವುದಿಲ್ಲ” ಎಂದು ಉಚ್ಛ ನ್ಯಾಯಾಲಯವು ಹೇಳಿದೆ.

ಆದಾಗ್ಯೂ, ಪಾರ್ಟಿಶನ್ ಡೀಡ್‌ ಇಲ್ಲದಿದ್ದಾಗ ಸಹ ಮಾಲೀಕರ ಪಾಲು ಈ ರೀತಿಯ ವ್ಯವಸ್ಥೆಯಲ್ಲಿ ಭಾಗವಾಗದೇ ಉಳಿಯುತ್ತದೆ. ಅಂದರೆ, ಅವರು ಮಾರಾಟ ಮಾಡಲಾಗದು, ಉಡುಗೊರೆ ನೀಡಲಾಗದು ಅಥವಾ ತಮ್ಮ ಪಾಲನ್ನು ವರ್ಗಾವಣೆ ಮಾಡಲು ಸಾಧ್ಯವಾಗುವುದಿಲ್ಲ.

ಇದನ್ನೂ ನೋಡಿ: ಇ-ಸ್ಟಾಂಪಿಂಗ್‌ ಬಗ್ಗೆ ಎಲ್ಲ ಮಾಹಿತಿ 

 

ಪಾರ್ಟಿಶನ್ ಡೀಡ್ ಮಾದರಿ

ಈ ಕೆಳಗಿನದು ಸಾಮಾನ್ಯ ಪಾರ್ಟಿಶನ್ ಡೀಡ್‌ ಮಾದರಿಯಾಗಿದೆ. ಈ ಪಾರ್ಟಿಶನ್‌ ಡೀಡ್‌ ಮಾದರಿಯನ್ನು ಓದುಗರಿಗೆ ಒಂದು ಸಾಮಾನ್ಯ ದೃಷ್ಟಿಕೋನವನ್ನು ನೀಡುವುದಕ್ಕಾಗಿ ಒದಗಿಸಲಾಗಿದೆ ಎಂಬುದನ್ನು ಗಮನಿಸಿ.

 

ಈ ಪಾರ್ಟಿಶನ್‌ ಒಪ್ಪಂದವನ್ನು _____ ರಂದು ಶ್ರೀ_________ ಅವರ ಪುತ್ರ/ಪುತ್ರಿ ___________, ವಯಸ್ಸು _____ ವರ್ಷಗಳು, ವಿದ್ಯಾರ್ಹತೆ ________, ವಿಳಾಸ ________ ಇವರು ಮಾಡಿದ್ದಾರೆ. ಇದರಲ್ಲಿ ಇವರು ಪ್ರಥಮ ಪಕ್ಷವಾಗಿರುತ್ತಾರೆ.

 

(2) ಶ್ರೀ_____ ಅವರ ಪುತ್ರಿ/ಪುತ್ರಿಯಾದ __________ ವಯಸ್ಸು ________ ವರ್ಷಗಳು, ವಿದ್ಯಾರ್ಹತೆ ________ ವಿಳಾಸ ________. ಇನ್ನು ಮುಂದೆ ಎರಡನೇ ಪಕ್ಷ ಎಂದು ಕರೆಯಲಾಗುತ್ತದೆ.

 

 (3) ಶ್ರೀಮತಿ _________ ಅವರ ಪುತ್ರಿಯಾದ _________ ವಯಸ್ಸು ____ ವರ್ಷಗಳು, ವಿದ್ಯಾರ್ಹತೆ _____ ವಿಳಾಸ ____. ಇನ್ನು ಮುಂದೆ ಇವರನ್ನು ಮೂರನೇ ಪಕ್ಷ ಎಂದು ಕರೆಯಲಾಗುತ್ತದೆ.

 

ಈ ಮೂಲಕ;

1. ಪಕ್ಷಗಳು ತಮ್ಮ ಜಂಟಿ ಮತ್ತು ಅವಿಭಜಿತ ಹಿಂದು ಕುಟುಂಬದ ಸದಸ್ಯರು ಮತ್ತು ಹಿಸೆದಾರರಾಗಿದ್ದಾರೆ ಮತ್ತು ____ ನಲ್ಲಿ ಸ್ವತ್ತು ಇದೆ. ಇದರ ವಿವರಗಳನ್ನು ಶೆಡ್ಯೂಲ್‌ ‘ಎ’ ಯಲ್ಲಿ ನೀಡಲಾಗಿದೆ. ಇಲ್ಲಿನ ಪ್ರತಿ ಪಕ್ಷವು ಹೇಳಲಾದ ಸ್ವತ್ತಿನಲ್ಲಿ ಪಾಲಿಗೆ ಅರ್ಹವಾಗಿದೆ.

2. ತಮ್ಮ ಜಂಟಿ ಕುಟುಂಬದ ಸ್ವತ್ತಿನ ಸದಸ್ಯರು ಮತ್ತು ಹಿಸೆದಾರರಾಗಿ ಮುಂದುವರಿಯದಿರಲು ಇನ್ನು ಬಯಸದೇ ಇರುವುದರಿಂದ ಈ ಮೇಲೆ ಹೇಳಲಾದ ಸ್ವತ್ತಿನ ಭಾಗವನ್ನು ಅನುಷ್ಠಾನಗೊಳಿಸಲು ಪಕ್ಷಗಳು ಬಯಸುತ್ತವೆ.

3. ಈ ಮೇಲೆ ಹೇಳಲಾದ ಸ್ವತ್ತನ್ನು ಈ ರೀತಿಯಲ್ಲಿ ವಿಭಜನೆ ಮಾಡುವಂತೆ ಪಕ್ಷಗಳು ಸಮ್ಮತಿಸಿವೆ:

(ಎ) ಮೊದಲ ಶೆಡ್ಯೂಲ್‌ನಲ್ಲಿ ವಿವರಿಸಿದ ಸ್ವತ್ತನ್ನು ಮೊದಲ ಪಕ್ಷಕ್ಕೆ ನಿಯೋಜಿಸಲಾಗುತ್ತದೆ.

(ಬಿ) ಎರಡನೇ ಶೆಡ್ಯೂಲ್‌ನಲ್ಲಿ ವಿವರಿಸಿದ ಸ್ವತ್ತು ಎರಡನೇ ಪಕ್ಷಕ್ಕೆ ನಿಯೋಜಿಸಲಾಗುತ್ತದೆ.

(ಸಿ) ಈ ಮೇಲೆ ಹೇಳಲಾದ ಸ್ವತ್ತಿನಲ್ಲಿ ಮೂರನೇ ಶೆಡ್ಯೂಲ್ ಅನ್ನು ಮೂರನೇ ಪಕ್ಷಕ್ಕೆ ನಿಯೋಜಿಸಲಾಗುತ್ತದೆ.

4. ಈ ಮುಂದಿನ ರೀತಿಯಲ್ಲಿ ಈ ಮೇಲೆ ಹೇಳಲಾದ ಭಾಗವನ್ನು ಜಾರಿಗೊಳಿಸಲು ಮತ್ತು ದಾಖಲಿಸಲು ಪಕ್ಷಗಳು ಪ್ರಸ್ತಾಪ ಮಂಡಿಸಿವೆ:

 

ಈಗ ಈ ಒಪ್ಪಂದವು ಸಾಕ್ಷೀಭೂತವಾಗಿರುವುದೇನೆಂದರೆ

  1. ವಿಭಜನೆಯಾಗದ ಸ್ವತ್ತಿನಲ್ಲಿ ಇನ್ನೊಂದು ಪಕ್ಷಕ್ಕೆ ನಿಯೋಜಿಸಿರುವ ಭಾಗದ ಸಂಪೂರ್ಣ ಹಕ್ಕು, ಶೀರ್ಷಿಕೆ ಮತ್ತು ಹಿತಾಸಕ್ತಿಯನ್ನು ಪ್ರತಿ ಪಕ್ಷವೂ ಬಿಟ್ಟುಕೊಡಬೇಕು ಮತ್ತು ತನಗೆ ನಿಯೋಜಿಸಿದ ಸ್ವತ್ತಿನ ನಿಖರ ಮತ್ತು ಸ್ಪಷ್ಟ ಮಾಲೀಕತ್ವವನ್ನು ಪ್ರತಿ ಪಕ್ಷವೂ ಹೊಂದಿರಬೇಕು.
  2. ಪ್ರತಿ ಪಕ್ಷವು ತಮ್ಮ ಒಪ್ಪಂದವನ್ನು ಜಾರಿಗೊಳಿಸಬೇಕು ಮತ್ತು ನೋಂದಣಿ ಮಾಡಬೇಕು ಎಂಬುದನ್ನು ಸಮ್ಮತಿಸಬೇಕು ಮತ್ತು ಪ್ರಕ್ರಿಯೆಯಲ್ಲಿ ತೊಡಗಿರುವ ವೆಚ್ಚಗಳನ್ನು ಸಮಾನವಾಗಿ ಹಂಚಿಕೊಳ್ಳಬೇಕು.
  3. ಈ ಪಾರ್ಟಿಶನ್ ಒಪ್ಪಂದದ ಮೂಲಕ ಬಿಟ್ಟುಕೊಡಲು ಸಮ್ಮತಿಸಿದ ಭಾಗದಲ್ಲಿ ಪ್ರತಿ ಪಕ್ಷವೂ ಯಾವುದೇ ಅಡ್ಡಿಯನ್ನು ಉಂಟು ಮಾಡಬಾರದು ಅಥವಾ ಕ್ಲೇಮ್ ಮಾಡಬಾರದು ಮತ್ತು ಹಕ್ಕು ಹೊಂದಿರಬಾರದು ಎಂಬುದನ್ನು ಸಮ್ಮತಿಸುತ್ತಾರೆ.

 

ಶೆಡ್ಯೂಲ್ ಎ

(ಜಂಟಿ ಕುಟುಂಬಕ್ಕೆ ಸಂಬಂಧಿಸಿದ ಅವಿಭಜಿತ ಸ್ವತ್ತಿನ ವಿವರಗಳು)

ಅ.

ಸಂ.

ಸ್ವತ್ತಿನ ವಿವರ

1

2

3

4

ಮೊದಲ ಶೆಡ್ಯೂಲ್‌

(ಶ್ರೀ ________ ಪ್ರಥಮ ಪಕ್ಷಕ್ಕೆ ನಿಯೋಜಿಸಿದ ಸ್ವತ್ತಿನ ಭಾಗ)

ಎರಡನೇ ಶೆಡ್ಯೂಲ್‌

(ಶ್ರೀ ________ ಎರಡನೇ ಪಕ್ಷಕ್ಕೆ ನಿಯೋಜಿಸಿದ ಸ್ವತ್ತಿನ ಭಾಗ) 

ಮೂರನೇ ಶೆಡ್ಯೂಲ್‌

(ಶ್ರೀ ________ ಮೂರನೇ ಪಕ್ಷಕ್ಕೆ ನಿಯೋಜಿಸಿದ ಸ್ವತ್ತಿನ ಭಾಗ)

ಸಾಕ್ಷಿ:

  1. ಮೊದಲ ಪಕ್ಷ
  2. ಎರಡನೇ ಪಕ್ಷ
  3. ಮೂರನೇ ಪಕ್ಷ

ಇದನ್ನೂ ಓದಿ: ಫ್ಲಾಟ್‌ನಲ್ಲಿ ಜಿಎಸ್‌ಟಿ ಬಗ್ಗೆ ವಿವರ

 

ಹಿಂದಿಯಲ್ಲಿ ಪಾರ್ಟಿಶನ್‌ ಡೀಡ್‌ ಮಾದರಿ

ಪಿಡಿಎಫ್‌ ಫಾರ್ಮ್ಯಾಟ್‌ನಲ್ಲಿ ಡೌನ್‌ಲೋಡ್‌ ಮಾಡಲು, ಇಲ್ಲಿ ಕ್ಲಿಕ್ ಮಾಡಿ.

 

ಪ್ರಶ್ನಾವಳಿಗಳು (FAQs)

ಪಾರ್ಟಿಶನ್‌ ಡೀಡ್ ವಿರುದ್ಧ ದಾವೆ ಸಲ್ಲಿಸಬಹುದೇ?

ಹೌದು. ಪಾರ್ಟಿಶನ್ ಡೀಡ್‌ ವಿರುದ್ಧ ದೂರು ದಾಖಲಿಸಬಹುದು.

ಮನೆಯಲ್ಲಿ ಪಾರ್ಟಿಶನ್ ಎಂದರೇನು?

ಸಹ ಮಾಲೀಕರ ಮಧ್ಯೆ ಪ್ರಾಪರ್ಟಿಯನ್ನು ಭಾಗ ಮಾಡುವುದಕ್ಕಾಗಿ ಪಾರ್ಟಿಶನ್ ಡೀಡ್ ಅನ್ನು ಕಾನೂನು ಸಲಕರಣೆಯನ್ನಾಗಿ ಬಳಸಬಹುದು.

ಸ್ವತ್ತನ್ನು ಮೌಖಿಕವಾಗಿ ಭಾಗ ಮಾಡಿಕೊಳ್ಳುವಿಕೆಯು ಕಾನೂನಾತ್ಮಕವಾಗಿ ಮಾನ್ಯವಾಗಿದೆಯೇ?

ಭಾಗಕ್ಕೆ ಸಂಬಂಧಿಸಿದಂತೆ ಕುಟುಂಬದ ಸದಸ್ಯರು ಸಹಿ ಮಾಡಿದ ಒಪ್ಪಂದವನ್ನು ಮಾಡಿಕೊಂಡಿದ್ದಲ್ಲಿ ಭಾಗವು ಮಾನ್ಯವಾಗಿರುತ್ತದೆ. ಈ ದಾಖಲೆಯನ್ನು ನೋಂದಣಿ ಮಾಡುವ ಅಗತ್ಯವಿಲ್ಲ.

Was this article useful?
  • 😃 (1)
  • 😐 (0)
  • 😔 (0)

Recent Podcasts

  • ಆಂಟಿಬ್ಯಾಕ್ಟೀರಿಯಲ್ ಪೇಂಟ್ ಎಂದರೇನು ಮತ್ತು ಅದು ಹೇಗೆ ಪ್ರಯೋಜನಕಾರಿಯಾಗಿದೆ?
  • ನಿಮ್ಮ ಲಿವಿಂಗ್ ರೂಮ್‌ಗಾಗಿ ಟಾಪ್ 31 ಪ್ರದರ್ಶನ ವಿನ್ಯಾಸಗಳು
  • 2024 ರಲ್ಲಿ ಮನೆಗಳಿಗೆ ಟಾಪ್ 10 ಗಾಜಿನ ಗೋಡೆಯ ವಿನ್ಯಾಸಗಳು
  • KRERA ಶ್ರೀರಾಮ್ ಪ್ರಾಪರ್ಟೀಸ್‌ಗೆ ಬುಕಿಂಗ್ ಮೊತ್ತವನ್ನು ಮನೆ ಖರೀದಿದಾರರಿಗೆ ಮರುಪಾವತಿಸಲು ಆದೇಶಿಸುತ್ತದೆ
  • ಸ್ಥಳೀಯ ಏಜೆಂಟ್ ಮೂಲಕ ನಾನ್-ಪರ್ಫಾರ್ಮಿಂಗ್ ಅಸೆಟ್ (NPA) ಆಸ್ತಿಯನ್ನು ಹೇಗೆ ಖರೀದಿಸುವುದು?
  • ಬಜೆಟ್ನಲ್ಲಿ ನಿಮ್ಮ ಬಾತ್ರೂಮ್ ಅನ್ನು ಹೇಗೆ ನವೀಕರಿಸುವುದು?